ಎಚ್.ಆರ್‌ನಲ್ಲಿ ಹೆಚ್ಚೆಚ್ಚು ಕೆಲಸ
Team Udayavani, Feb 4, 2020, 5:26 AM IST
ಮಾನವ ಸಂಪನ್ಮೂಲ ವಿಭಾಗ ಅಥವಾ ಎಚ್‌ಆರ್, ಪ್ರತಿ ಕಂಪೆನಿಯ ಹೃದಯ ಇದ್ದ ಹಾಗೆ. ಇದರ ಮಿಡಿತ ಸರಿಯಾಗಿ ಇದೆ ಅಂತಾದರೆ, ಕಂಪೆನಿಯ ಉತ್ಪಾದನೆ ಸಮತೋಲನವಾಗಿದ್ದು, ಲಾಭ ದಾಯಕ ಸ್ಥಿತಿಯಲ್ಲಿದೆ ಅಂತ ಅರ್ಥ. ಇಂಥ ಹಿನ್ನೆಲೆಯ ಎಚ್‌ಆರ್‌ನಲ್ಲಿ ಅನೇಕ ಹುದ್ದೆಗಳು ಇವೆ. ಇಲ್ಲಿ ಉದ್ಯೋಗ ಪಡೆಯಲು ಅವಕಾಶ ಮಾಡಿಕೊಡಲು ಅನೇಕ ಕೋರ್ಸ್‌ಗಳೂ ಇವೆ.
ಯಾವುದೇ ಸಂಸ್ಥೆ ಅಥವಾ ಕಂಪೆನಿ ಸುಗಮವಾಗಿ ನಡೆಯುತ್ತಿದೆ ಅಂದರೆ ಅಲ್ಲಿ ಮಾನವ ಸಂಪನ್ಮೂಲ ವಿಭಾಗ (ಎಚ್.ಆರ್) ಚೆನ್ನಾಗಿದೆ ಅಂತಲೇ ಅರ್ಥ. ಇದೊಂಥರಾ ಕಂಪೆನಿಗಳ ಹೃದಯ ಇದ್ದ ಹಾಗೆ. ಏಕೆಂದರೆ, ಕಂಪೆನಿ ಚಿಕ್ಕದಿರಲಿ ದೊಡ್ಡದಾಗಿರಲಿ; ಅಲ್ಲಿನ ಉದ್ಯೋಗಿಗಳ ಪುರೋಭಿವೃದ್ಧಿ ಮೇಲುಸ್ತುವಾರಿ ನೋಡಿಕೊಳ್ಳುವುದು ಈ ಎಚ್.ಆರ್. ಕಾಲಕಾಲಕ್ಕೆ ಉದ್ಯೋಗಿಗಳ ರಜೆ, ಆರೋಗ್ಯ ಸೌಲಭ್ಯಗಳು, ಪಿಎಫ್, ಪ್ರಮೋಷನ್, ಬೋನಸ್ ನೀಡುವುದು, ತರಬೇತಿಗಳನ್ನು ಕೊಡುವುದು ಹೀಗೆ… ಉದ್ಯೋಗಿಗಳನ್ನು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ಈ ವಿಭಾಗದ ಕೆಲಸ. ಈ ರೀತಿ ಕಾಲಕಾಲಕ್ಕೆ ಉದ್ಯೋಗಿಗಳ ಕ್ರಿಯಾಶೀಲತೆ ಹೆಚ್ಚಿಸುವ ಕಾರ್ಯಕ್ರಮಗಳನ್ನು ಮಾಡುವುದರಿಂದ ಉತ್ಪನ್ನದ ಗುಣಮಟ್ಟ ಕೂಡ ಹೆಚ್ಚುತ್ತದೆ. ಹೀಗಾಗಿ, ಮಾನವ ಸಂಪನ್ಮೂಲ ವಿಭಾಗ ಅನ್ನೋದು, ಪ್ರತಿ ಕಂಪೆನಿಯ ನಾಡಿಮಿಡಿತವೇ ಆಗಿದೆ.
ಇದು ಯಾವಮಟ್ಟಕ್ಕೆ ಎಂದರೆ, ಒಬ್ಬ ಉದ್ಯೋಗಿಯನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವುದರಿಂದ ಆತ ಕಂಪೆನಿ ಬಿಟ್ಟು ಹೋಗುವ ತನಕ ಅವನ ಎಲ್ಲ ಹೊಣೆಗಾರಿಕೆ ಎಚ್.ಆರ್ ವಿಭಾಗದ್ದೇ ಆಗಿರುತ್ತದೆ. ಹೀಗೆ ಪ್ರತಿ ಉದ್ಯೋಗಿಯನ್ನೂ ಗಮನಿಸಬೇಕಾಗುವುದರಿಂದ ಪ್ರತಿ ಕಂಪೆನಿಗಳಲ್ಲಿ ಇದಕ್ಕೆ ಪ್ರತ್ಯೇಕ ಸ್ಥಾನ ಇರುತ್ತದೆ. ಕಂಪೆನಿ ಪ್ರಾರಂಭ ಆಗುತ್ತಿದೆ ಅಂದರೆ, ಎಚ್.ಆರ್ ವಿಭಾಗ ಇರಲೇಬೇಕು. ಇಂಥವೇ ಕಾರಣಗಳಿಂದ, ಎಚ್.ಆರ್ ಕೋರ್ಸ್‌ಗಳು, ಪದವಿಗಳಿವೆ. ಇವುಗಳನ್ನು ಪೂರೈಸಿದ್ದೇ ಆದರೆ ಕೆಲಸ ಗ್ಯಾರಂಟಿ. ಎಚ್‌ಆರ್ ಪದವಿಯಲ್ಲಿ ಸ್ಪೆಷಲೈಸೇಷನ್ ಅನ್ನೋದು ಇರುತ್ತದೆ. ಉದಾಹರಣೆಗೆ-ನೇಮಕಾತಿಯಲ್ಲೇ ಸ್ಪೆಷಲೈಸೇಷನ್ ಇದೆ. ಹಾಗೆಯೇ, ಸಂಬಳ, ಭತ್ಯೆ, ಏರಿಕೆ, ಉದ್ಯೋಗಿಗಳು ಮತ್ತು ಮ್ಯಾನೇಜ್‌ಮೆಂಟ್ ನಡುವಿನ ಸಂಬಂಧ ಮಧುರ ಗೊಳಿಸುವುದು ಹೀಗೆ, ಪ್ರತಿ ವಿಚಾರದಲ್ಲಿ ಪ್ರಮುಖ ಅಧ್ಯಯನ ಇದೆ. ಮಾರ್ಕೆಟ್‌ನಲ್ಲಿ ಯಾವ ಸ್ಪೆಷಲೈಸೇಷನ್‌ಗೆ ಹೆಚ್ಚಿನ ಬೇಡಿಕೆ ಇದೆ ಅನ್ನೋದರ ಮೇಲೆ, ಉದ್ಯೋಗಗಳು ಲಭ್ಯವಾಗುತ್ತವೆ. ಪ್ರಸ್ತುತ ಎಚ್.ಆರ್. ನೇಮಕಾತಿಗೆ ಬೇಡಿಕೆ ಇದೆ.
ಪದವಿಗಳು
ಎಚ್.ಆರ್.ನಲ್ಲಿ ಡಿಪ್ಲೊಮೊದಿಂದ ಪದವಿ, ಪಿಎಚ್.ಡಿ ಕೂಡ ಮಾಡುವ ಅವಕಾಶವಿದೆ. ಇವುಗಳಲ್ಲಿ ಯಾವ ಕೋರ್ಸ್ ಮಾಡುತ್ತೇವೆಯೋ ಅದರ ಆಧಾರದ ಮೇಲೆ ಉದ್ಯೋಗಗಳು ದೊರೆಯುತ್ತವೆ. ಒಂದು ವರ್ಷದ ಡಿಪ್ಲೊಮೊ ಇನ್ ಎಚ್.ಆರ್ ಮಾಡುವುದಾದರೆ ಇದಕ್ಕೆ ವಿದ್ಯಾರ್ಹತೆ ಪಿಯುಸಿ ಪಾಸಾಗಿರಬೇಕು. ಎಸ್.ಎಸ್.ಎಲ್‌ಸಿ ಮೂಲಕ ಯಾವುದೇ ಕೋರ್ಸ್ ಮಾಡಲು ಆಗದು. ದ್ವಿತೀಯ ಪಿಯುಸಿಯಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದಿರುವುದು ಕಡ್ಡಾಯ. ಪೋಸ್ಟ್ ಗ್ರಾಜುಯೇಟ್ ಕೋರ್ಸ್‌ಗಳನ್ನು ಮಾಡಲು ಪದವಿಯ ಕೊನೆ ವರ್ಷ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ. ಎಚ್.ಆರ್‌ನಲ್ಲಿ ಡಾಕ್ಟರೇಟ್ ಕೂಡ ಪಡೆಯಬಹುದು. ಇದಕ್ಕೆ ಡಿಗ್ರಿಯಲ್ಲಿ ಪ್ರಮುಖವಾಗಿ ಎಚ್.ಆರ್. ವಿಷಯವನ್ನು ಅಧ್ಯಯನ ಮಾಡಿರಬೇಕು. ಕೊನೆಯ ವರ್ಷದಲ್ಲಿ ಶೇ. 50ರಷ್ಟು ಅಂಕಗಳಿಸಿರಬೇಕು. ಡಿಗ್ರಿಯಲ್ಲಿ ಬಿಬಿಎ ಇನ್ ಎಚ್‌ಆರ್, ಬಿಎ ಇನ್ ಎಚ್‌ಆರ್ ಅಂತಿದ್ದು, ಇದರ ಅವಧಿ ಮೂರು ವರ್ಷಗಳದ್ದಾಗಿರುತ್ತದೆ. ಪಿಎಚ್‌ಡಿ ನಾಲ್ಕುವರ್ಷಗಳ ಪದವಿಯಾಗಿದೆ. ಹೀಗೆ, ಎಚ್.ಆರ್. ಆಗಬೇಕಾದರೆ ಪದವಿಗಳನ್ನು ಗಳಿಸಬೇಕು. ಪದವಿಗಳಿಸುವುದೇನು ಸುಮ್ಮನೆ ಅಲ್ಲ. ಇದಕ್ಕೂ ಮೊದಲು ನೀವು ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಅದರಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅಡ್ಮಿಷನ್ ನಡೆಯುತ್ತದೆ.
ಉದಾಹರಣೆಗೆ- ಪದವಿ ತತ್ಸಮಾನಕ್ಕೆ- ಸಿಎಟಿ (ಕಾಮನ್ ಅಡ್ಮಿಷನ್ ಟೆಸ್ಟ್), ಎಐಎಮ್‌ಎ ಅಂದರೆ ಮ್ಯಾನೇಜ್‌ಮೆಂಟ್ ಆ್ಯಪ್ಟಿಟ್ಯೂಡ್ ಟೆಸ್ಟ್, ಐಎಫ್ಎಫ್ಟಿ, ಸ್ಯಾನಪ್, ಎನ್‌ಎಮ್‌ಎಟಿ ಮುಂತಾದ ಪ್ರೇಶವ ಪರೀಕ್ಷೆಗಳಿವೆ. ಡಾಕ್ಟರೇಟ್ ಮಾಡಲು, ಆರ್. ಎಂ.ಎ.ಟಿ, ಯುಜಿಸಿ ನೆಟ್, ಡೆಲ್ಲಿ ಐಐಟಿ ಪ್ರವೇಶ ಪರೀಕ್ಷೆ, ಡೆಲ್ಲಿ ವಿವಿ ಪ್ರವೇಶ ಪರೀಕ್ಷೆ, ಇಗ್ನೋ ಮುಂತಾದ ಪ್ರೇವಶ ಪರೀಕ್ಷೆಗಳು ಇವೆ. ಎಚ್.ಆರ್. ಕೋರ್ಸ್‌ಗಳು ಎಲ್ಲ ವಿವಿಗಳಲ್ಲೂ ಇವೆ. ಇದರ ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲೂ ಪದವಿ ಪೂರೈಸಬಹುದು.
ಕೆಲಸ ಎಲ್ಲೆಲ್ಲಿ?
ಎಚ್.ಆರ್ ಕೋಸ್ ಪೂರೈಸಿದ ಮೇಲೆ ನಾಲ್ಕೈದು ವರ್ಷ ಅನುಭವ ಜೊತೆಗಿದ್ದರೆ, ಎಚ್.ಆರ್. ಜೆನರಲಿಸ್ಟ್, ಎಚ್.ಆರ್. ರಿಕ್ವಿರ್ಟರ್, ಎಚ್.ಆರ್ ಸ್ಪೆಷಲಿಸ್ಟ್. ಎಂಪ್ಲಾಯ್ ರಿಲೇಷನ್ ಮ್ಯಾನೇಜರ್, ಟ್ರೈನಿಂಗ್ ಅಂಡ್ ಡೆವಲಪ್‌ಮೆಂಟ್ ಮ್ಯಾನೇಜರ್ ಹೀಗೆ, ಅನೇಕ ಹುದ್ದೆಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಪ್ರತಿಯೊಂದು ಕಂಪನಿ, ಫ್ಯಾಕ್ಟರಿಗಳಲ್ಲೂ ಎಚ್.ಆರ್‌ವಿಭಾಗ ಇರಲೇಬೇಕು. ಹೀಗಾಗಿ, ಕೆಲ್ಲಿ ಸರ್ವೀಸ್, ಅಡೆಕೋ ಇಂಡಿಯಾ,ಎಬಿಸಿ ಕನ್ಸಲ್ಟೆಂಟ್ಸ್, ಮ್ಯಾನ್‌ಪವರ್ ಗ್ರೂಪ್, ಆರ್.ಎಚ್‌ಫ್ಯಾಕ್ಟರ್, ಎಚ್.ಆರ್. ಫುಟ್‌ಪ್ರಿಂಟ್ಸ್‌ನಂಥ ಕಂಪೆನಿಗಳಲ್ಲಿ ಉದ್ಯೋಗ ದೊರಕುತ್ತದೆ.
ಕೆ.ಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.