ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…


Team Udayavani, Mar 23, 2021, 4:42 PM IST

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…

ಹರಪನಹಳ್ಳಿಯ ನಾಗರಿಕರೇ, ಸುತ್ತಮುತ್ತಲಿನ ಹಳ್ಳಿಯ ರೈತ ಬಾಂಧವರೇ,ಇದು ನಿಮ್ಮ ನೆಚ್ಚಿನ ಬಸವರಾಜ ಚಿತ್ರಮಂದಿರದ ಪ್ರಚಾರ. ಇಂದಿನಿಂದ ರಾಜ್‌ಕುಮಾರ್‌, ಲೀಲಾವತಿ, ಉದಯ ಕುಮಾರ್‌ ನಟಿಸಿರುವ ವೀರ ಕೇಸರಿಸಿನಿಮಾ. ನೋಡಲು ಮರೆಯದಿರಿ, ಮರೆತು ಮರುಗದಿರಿ..

ಹೀಗೆ ಹೇಳುತ್ತಾ ಒಂಟೆತ್ತಿನ ಗಾಡಿಯಲ್ಲಿಮೈಕ್‌ ಹಿಡಿದು ಖಾಸಿಂ ಅಲಿ ಪ್ರಚಾರಕ್ಕೆಬಂದರೆ ನಮಗೇನೋ ಪುಳಕ. ಅವನುಪುರ್ರೆಂದು ತೂರುವ ಹ್ಯಾಂಡ್‌ಬಿಲ್‌ಸಂಗ್ರಹಿಸುವ ತವಕ, ಯಾವಾಗ ವೀರಕೇಸರಿ ನೋಡುವೆವೆಂಬ ತಹತಹ ಆರಂಭ.

ನಾನಾಗ 3ನೇ ತರಗತಿಯಲ್ಲಿದ್ದೆ. ಬಸವರಾಜ ಟಾಕೀಸಿನ ಹೆಗ್ಗಳಿಕೆಯೆಂದರೆ ಇತ್ತೀಚಿನವರೆಗೂ ಶೇ.95ರಷ್ಟು ಕನ್ನಡಚಿತ್ರಗಳನ್ನೇ ಪ್ರದರ್ಶಿಸಿದ್ದು! ಕಾರಣಮಾಲೀಕ ವರ್ಗದವರ ಕನ್ನಡ ಪ್ರೀತಿ. ಆದಿನಗಳಲ್ಲಿ ನಾವು ಸಿನೆಮಾ ನೋಡುತ್ತಿದ್ದುದಾದರೂ ಹೇಗೆ ಗೊತ್ತೆ? ನಾಲ್ಕಾಣೆ, ಎಂಟಾಣೆ, ಹನ್ನೆರಡಾಣೆಯ ಕ್ಲಾಸ್‌ಗಳಲ್ಲಿ ಮನೆಯವರೆಲ್ಲ ವಿರಾಜಮಾನರಾಗುತ್ತಿದ್ದೆವು. ನಮೋ ವೆಂಕಟೇಶ…ಘಂಟ ಸಾಲರ ಗೀತೆ ಮೊಳಗಿದೊಡನೆ ಸಿನೆಮಾ ಆರಂಭದ ಸೂಚನೆ.

ಅಬ್ಬಾ! ರಾಜ್‌ ಕುಮಾರ್‌ ಸ್ವಾಭಿಮಾನದ ನಲ್ಲೇ ಎಂದು ಹಾಡುತ್ತಾ ಲೀಲಾವತಿಯನ್ನು ಕುದುರೆಯ ಮೇಲೆ ಕೂರಿಸಿಕೊಂಡು ಹೋಗುವುದು, ಉದಯ್‌ಕುಮಾರ್‌ ಅವರೊಂದಿಗೆ ಕತ್ತಿವರಸೆ… ಇದೆಲ್ಲವೂ ನಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಮನೆಗೆಬಂದು ಮಲಗಿದ ಮೇಲೂ ಅದೇ ದೃಶ್ಯಗಳ ಯಾದೋಂಕಿ ಬಾರಾತ್‌ ಕಣ್ಣೆದುರು.ಅವರೆಲ್ಲ ರಾತ್ರಿ ಪರದೆಯ ಹಿಂದೆ ಇರುತ್ತಾರಾ? ಎಂದು ಬೆಳಿಗ್ಗೆ ನಾವು ನಾಲ್ಕಾರುಜನ ಪರದೆಯ ಹಿಂದಿನ ಮೋಟುಗೋಡೆನೋಡಿ ಬಂದಿದ್ದೂ ಉಂಟು!ಕಸ್ತೂರಿ ನಿವಾಸ, ಭಕ್ತ ಸಿರಿಯಾಳ, ಜನ್ಮರಹಸ್ಯ, ಪ್ರತಿಧ್ವನಿ, ಮಾವನ ಮಗಳು,ಅದೆಷ್ಟೋ ಚಿತ್ರಗಳೊಂದಿಗೆ ಬಸವರಾಜ ಚಿತ್ರ ಮಂದಿರದ ಕುರ್ಚಿಗಳು ತಳಕು ಹಾಕಿಕೊಂಡಿವೆ. ಕೋವಿಡ್‌ ನಂತರದಲಾಕ್‌ಡೌನ್‌ಗೆ ನಲುಗಿ ಬಸವರಾಜಚಿತ್ರಮಂದಿರ ನೆಲಸಮವಾದರೂ ಆಚಿತ್ರಮಂದಿರದೊಂದಿಗಿನ ಸವಿ ನೆನಪುಗಳು ಇಂದಿಗೂ ನಮ್ಮೊಂದಿಗಿದೆ.

 

– ಕೆ. ಶ್ರೀನಿವಾಸ್‌ ರಾವ್‌

ಟಾಪ್ ನ್ಯೂಸ್

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Minister-Madhu

Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

13

Kollywood: ಯೂಟ್ಯೂಬ್‌ ವಿಮರ್ಶೆ ಬ್ಯಾನ್‌ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

17-panaji

Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Minister-Madhu

Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ

15

Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ… ‌

Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್‌ ಎಫ್ಎಕ್ಸ್‌ ಆರಂಭ

Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್‌ ಎಫ್ಎಕ್ಸ್‌ ಆರಂಭ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.