ಕೂಗಿ ಕೂಗಿ ನನ್ನೆದೆ ನೀನೆ ಬೇಕು ಅನ್ನುತಿದೆ… 


Team Udayavani, Sep 19, 2017, 3:05 PM IST

19-JOSH-7.jpg

ನಿನ್ನನ್ನು ನೆನಪಿಸಿಕೊಳ್ಳುತ್ತಾ, ಅಮವಾಸ್ಯೆ ರಾತ್ರಿಯಲ್ಲೂ ಚಂದ್ರ ಬರ್ತಾನೆ ಅಂತ ಕಾಯ್ತಾ ಇರೋ ಹುಚ್ಚಿ ಕಣೊ ನಾನು. 

ಹಾಯ್ ಹ್ಯಾಂಡ್ಸಂ…
ನಿನಗೆ ಇಪ್ಪತ್ತಾಗ್ಲಿ, ಎಪ್ಪತ್ತಾಗ್ಲಿ, ತೊಂಬತ್ತೇ ಆಗಿಬಿಡ್ಲಿ… ಆಗ ಕೂಡ ನೀನು ನನಗೆ ಯಾವಾಗಲೂ ಹೊಸದಾಗಿಯೇ ಕಾಣಿಸ್ತೀಯಾ ಕಣೊ… ನಿನ್ನ ಆಗಮನ, ನಿರ್ಗಮನ ವಿಧಿ ಲಿಖೀತ.ಆದರೆ ನನ್ನಲ್ಲಿರುವ ನೀನು ಮತ್ತು ನಿನ್ನ ನೆನಪುಗಳು ಶಾಶ್ವತ. ಯಾರೋ ಕೊಟ್ಟ ನೋವನ್ನು ಎರಡು ದಿನದಲ್ಲಿ ಮರೆಯಬಹುದು. ಆದರೆ ನಾವು ಯಾರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೋ ಅವರು ಕೊಟ್ಟ ನೋವನ್ನಾಗಲಿ, ಖುಷಿಯನ್ನಾಗಲಿ ಜೀವನ ಪೂರ್ತಿ ಮರೆಯೋಕಾಗಲ್ವಂತೆ. ನಾನು ನಿನ್ನನ್ನು ತುಂಬಾ ಪ್ರೀತಿಸ್ತೀನಿ ಅಲ್ವ, ಸೋ ನೀನು ಕೊಡೋ ಪ್ರತಿಯೊಂದು ನೋವು, ನಲಿವನ್ನು ಜೀವನ ಪೂರ್ತಿ ಮರೆಯೋಕಾಗಲ್ಲ ಗೆಳೆಯ. ಹೃದಯದಲ್ಲಿ ನೀನಿದ್ದರೆ ಮರೆಯಬಹುದಿತ್ತೇನೊ, ಆದರೆ ಹೃದಯಾನೇ ನೀನಾದರೆ ಹೇಗೆ ತಾನೆ ಮರೆಯಲಿ? ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದರೆ ಹೃದಯಾನೆ ಕಣೊ ಪೆದ್ದು. ಯಾಕೆ ಗೊತ್ತಾ? ಅದನ್ನು ಯಾರೂ ನೋಡೋಕಾಗಲ್ಲ, ಮುಟ್ಟೋಕಾಗಲ್ಲ!  

ನೋಡಿದ ಮುಖಗಳು ಕಣ್ಮುಂದೆ ಬರದೆ ಇರಬಹುದು. ಆದರೆ, ಜೊತೆಯಾಗಿ ಕಳೆದ ನೆನಪುಗಳು ಮಾತ್ರ ಮನಸ್ಸನ್ನು ಬಿಟ್ಟು ಯಾವತ್ತೂ ಹೋಗುವುದಿಲ್ಲ. ಸಾವಿರ ಕನಸು ಸಾಲಾಗಿ ಬಂದರೂ ಮಾಸಿ ಹೋಗದು ನಿನ್ನ ನೆನಪು. ನನ್ನಿಂದ ಕಣ್ಮರೆಯಾಗಿ ನೀನು ದೂರವಿದ್ದರೂ ಮರೆತು ಬಾಳದು ಈ ಮುಗ್ಧ ಮನಸ್ಸು. ನೆನಪಿರಲಿ, ಇದು ಈ ಪುಟ್ಟ ಹೃದಯದ ಪಿಸುಮಾತು. ಇರುಳೆv ಕಳೆದೋಯ್ತು ನಿನದೇ ಕನಸಲಿ, ಹಗಲೆಲ್ಲ ಕಳೆದೊಯ್ತು  ಕನಸಿನ ನೆನಪಲಿ, ಮನಸ್ಸೆಲ್ಲೊ ಹೊರಟೋಯ್ತು ನಿನ ಸೇರುವ ನೆಪದಲಿ… 

ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ  ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು?  ಕೂಗಿ ಕೂಗಿ ನನ್ನೆದೆ ನೀನೆ ಬೇಕು ಅನ್ನುತಿದೆ.  ನಿನ್ನ ನೋಡಲು ತುಂಬಾ ಆಸೆ. ಆದರೆ ಕಣ್ಣಂಚಿನಿಂದ ತುಂಬಾ ದೂರವಿರುವೆ ನೀನು. ಅಷ್ಟಕ್ಕೇ ಸುಮ್ನಾಗ್ತಿàನಾ ನಾನು? ಅದು ಹೇಗೋ ಜಾಗ ಮಾಡ್ಕೊಂಡು ನಿನ್ನ ಮನಸ್ಸಿಗೆ ಲಗ್ಗೆ ಹಾಕಲು ದಾರಿ ಹುಡುಕ್ತಾ ಇರ್ತೇನೆ. ನಿತ್ಯ ನಿರಂತರ ನಿನ್ನ ನೆನಪು ಎದೆಯಲಿ, ಮರೆತರೂ ಮತ್ತೆ ಬರುವೆ ಮಳೆಬಿಲ್ಲಂತೆ ನನ್ನ ಮನದಲಿ. ನಿನ್ನನ್ನು ನೆನಪಿಸಿಕೊಳ್ಳುತ್ತಾ, ಅಮವಾಸ್ಯೆ ರಾತ್ರಿಯಲ್ಲೂ ಚಂದ್ರ ಬರ್ತಾನೆ ಅಂತ ಕಾಯ್ತಾ ಇರೋ ಹುಚ್ಚಿ ಕಣೊ ನಾನು. ಈಗ, ಸಂಕಟಗಳ ಮಧ್ಯೆಯೇ ಬದುಕ್ತಾ ಇದೀನಿ ನಾನು. ಸಮಾಧಾನ ಮಾಡುವ ನೆಪದಲ್ಲಾದ್ರೂ ಒಂದ್ಸಲ ದೇವ್ರು ಪ್ರತ್ಯಕ್ಷವಾದಂತೆ ನನ್ನೆದುರು ನಿಲ್ತಿàಯಾ?

ಇಂತಿ ನಿನ್ನ ಹೃದಯವಾಸಿ 
ಉಮ್ಮೆ ಅಸ್ಮ ಕೆ.ಎಸ್ 

ಟಾಪ್ ನ್ಯೂಸ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

3-aranthodu

Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.