ನನ್ನ ಚಿತ್ತ ನಿನ್ನತ್ತಲೇ ಸುತ್ತುತ್ತಿತ್ತು!

Team Udayavani, Dec 24, 2019, 4:18 AM IST

sd-12

ನಿನ್ನ ಒಲವಿನ ಮಾಯಜಾಲದ ಸೆಳೆತದ ಸುಳಿಯೊಳಗೆ ಸಿಲುಕಿ, ಹೊಸತದೊಂದು ಖುಷಿಯೊಳಗೆ ಮುಳುಗಿ ಹೋಗಿದ್ದೇನೆ. ನಿನ್ನದೊಂದು ನೋಟ, ಒಲವಿನ ದೀಪ ಹಚ್ಚಿ ಬರಿದಾಗದ ನನ್ನ ಹೃದಯದಲ್ಲಿ ಪ್ರಜ್ವಲಿಸುವ ಚೇತನವನ್ನು ತುಂಬಿದೆ. ಇಷ್ಟೇ ಸಾಕು ನನಗೆ !

ಡಿಗ್ರಿ ಮುಗಿಸಿ ಎಂಬಿಎಗೆ ಸೇರಿದ್ದೆ. ಆಗ ಬೆಂಗಳೂರೇ ಹೊಸದು. ಜನದಟ್ಟಣೆ , ವಾಹನಗಳ ಭರಾಟೆ ಎರಡೇ ದಿನಕ್ಕೆ ಬೇಸರ ತರಿಸಿತ್ತು. ಕೊಂಚ ಮುಜುಗರದಿಂದಲೇ ಮೊದಲ ದಿನದ ಅಕೌಂಟ್ಸ್‌ ಕ್ಲಾಸ್‌ಗೆ ಹಾಜರಾಗಿದ್ದೆ. ಸೀನಿಯರ್, ಹೊಸದಾಗಿ ಸೇರಿದ ನಮಗೆ ವೆಲ್‌ಕಮ್‌ ಪಾರ್ಟಿ ಅರೆಂಜ್‌ ಮಾಡಿದ್ದರು. ಅಂದು, ಕೈಯಲ್ಲಿ ಹೂಗುತ್ಛಗಳನ್ನು ಹಿಡಿದು ಸಾಗುತ್ತಿದ್ದ ನೀನು ಅಚಾನಕ್ಕಾಗಿ ಡಿಕ್ಕಿ ಹೊಡೆದು, ಸಾರಿ ಹೇಳಿ, ನನ್ನನ್ನು ನೋಡದೆ ಮುಂದೆ ಸಾಗಿದ್ದೆ. ಅದಾದ ಬಳಿಕ ಅದೆಷ್ಟು ಸಲ ನಿನ್ನೊಟ್ಟಿಗೆ ಮಾತನಾಡಬೇಕೆಂದುಕೊಂಡರೂ, ನೀನು ಎದುರಾಗುತ್ತಲೇ ಅದ್ಯಾವುದೋ ಅವ್ಯಕ್ತ ಭಯ ಆವರಿಸಿ ಹೃದಯದ ಬಡಿತದ ಹಿಡಿತ ತಪ್ಪುತ್ತಿತ್ತು. ಕೈಕಾಲುಗಳು ಕಂಪಿಸುತ್ತಿದ್ದವು. ನಿನ್ನನ್ನು ನೋಡಬೇಕೆಂಬ ಏಕೈಕ ಆಸೆಯಿಂದ, ನಮ್ಮ ಕ್ಲಾಸ್‌ ರೂಮ್‌ ನಿಂದ ನಿನ್ನ ಕ್ಲಾಸ್‌ ಮುಂದೆಯೇ ಇಟ್ಟಿದ್ದ ನೀರು ಕುಡಿಯಲೆಂದು ಪದೇ ಪದೇ ಬಂದು ನಿನ್ನ ಬಿಂಬವನ್ನೇ ಕಣ್ತುಂಬಿಕೊಳ್ಳುತ್ತಿದ್ದೆ. ನಿನ್ನನ್ನೇ ನೋಡುತ್ತಾ ಇಹದ ಪರಿವೆಯೇ ಇಲ್ಲದೆ ನಿಂತಲ್ಲೇ ನಿಂತವಳನ್ನು, ಬೆರಗುಗಣ್ಣಿನಿಂದ ನೋಡುತ್ತಿದ್ದವರು ಎಚ್ಚರಿಸಿ ಹೋಗುತ್ತಿದ್ದರು. ಅತಿರೇಕದ ಉನ್ಮಾದಕ್ಕೆ ನಾಚಿ ಕೆನ್ನೆಗಳು ರಂಗೇರಿ, ಹುಚ್ಚಿಯಂತೆ ಒಬ್ಬಳೇ ನಗುತ್ತಾ ಮತ್ತೆ ನಿನ್ನ ಕನವರಿಕೆಯಲ್ಲೇ ಕಳೆದು ಹೋಗುತ್ತಿದ್ದೆ.

ಪ್ರತಿಕ್ಷಣ ನನ್ನ ಚಿತ್ತ ನಿನ್ನತ್ತಲೇ ಸುತ್ತುತ್ತಿತ್ತು. ನೀನು ನನ್ನತ್ತ ಅರೆಕ್ಷಣ ದೃಷ್ಟಿ ಹರಿಸಿದರೂ ನನ್ನನ್ನೇ ನೋಡುತ್ತಿರುವೆ ಎಂಬ ಹುಚ್ಚು ಭ್ರಮೆಯಲಿ ಮನಸ್ಸು ಕುಣಿಯುತ್ತಿತ್ತು.

ಮತ್ತ್ಯಾರನ್ನೋ ನೋಡಿ ನಕ್ಕು ಮಾತನಾಡಿದಾಗ ನನ್ನ ಬ್ರಾಂತಿಗೆ ಬೇಸರಿಸಿಕೊಳ್ಳುತ್ತಿದ್ದೆ. ಪ್ರತಿ ನಿನ್ನ ಹಾವಭಾವಗಳನ್ನು ಮನಸು ನೋಡಿ ಸಂಭ್ರಮಿಸುತ್ತಿತ್ತು. ನೀನು ನಕ್ಕರೆ ನನ್ನ ಮೊಗದಲ್ಲೂ ನನಗರಿವಿಲ್ಲದೆ ನಗುವೊಂದು ತೇಲಿ ಹೋಗುತ್ತಿತ್ತು. ಕಣ್ಣುಗಳು ರೆಪ್ಪೆಯನ್ನು ಮುಚ್ಚದೆ ನನ್ನನ್ನು ನಿನ್ನ ಕಣ್ಣುಗಳಲ್ಲಿ ನೋಡಲು ತವಕಿಸುತ್ತಿದ್ದವು. ಎಲ್ಲರೂ ಒಟ್ಟಾಗಿ ಕ್ಲಿಕಿಸಿಕೊಂಡ ಫೋಟೋವನ್ನು ಡಿಪಿಗೆ ಹಾಕಿದ್ದೆ. ನೀನ್ನೊಮ್ಮೆ ಅದನ್ನು ನೋಡಬೇಕೆಂದು ಅದೆಷ್ಟು ಹಂಬಲಿಸಿದ್ದೆ. ನಾನ್ಯಾರೆಂದು ಅರಿಯದ ನೀನಾದರೂ ಅದ್ಹೇಗೆ ನೋಡಲು ಸಾಧ್ಯ!

ನಿನ್ನೊಟ್ಟಿಗೆ ಮಾತನಾಡುವ ಹಂಬಲ ವಿಪರೀತವಾದಾಗ ಮನದಾಳದ ಒಲವನ್ನೆಲ್ಲಾ ಟೈಪಿಸಿ ಅಳಿಸಿ ಹಾಕುತ್ತಿದ್ದೆ. ನಿನ್ನ ಒಲವಿನ ಮಾಯಜಾಲದ ಸೆಳೆತದ ಸುಳಿಯೊಳಗೆ ಸಿಲುಕಿ ಹೊಸತದೊಂದು ಖುಷಿಯೊಳಗೆ ಮುಳುಗಿ ಹೋಗಿದ್ದೇನೆ. ನಿನ್ನದೊಂದು ನೋಟ ಒಲವಿನ ದೀಪ ಹಚ್ಚಿ ಬರಿದಾಗದ ನನ್ನ ಹೃದಯದಲ್ಲಿ ಪ್ರಜ್ವಲಿಸುವ ಚೇತನವನ್ನು ತುಂಬಿದೆ. ಇದುವೆ ಸಾಕೆನಗೆ!

ಸೌಮ್ಯಶ್ರೀ ಎ.ಎಸ್‌.

ಟಾಪ್ ನ್ಯೂಸ್

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.