ಸ್ಟೇಟಸ್‌ಗೆ ರೆಕ್ಕೆ ಬಂತು
ಮೈ ಸ್ಟೇಟಸ್ ಎಂಬ ವೃತ್ತ ನಿರೀಕ್ಷಕ
Team Udayavani, May 14, 2019, 6:00 AM IST
ವಾಟ್ಸಾಪ್‌ನೋರು ಈ ಸ್ಟೇಟಸ್ ಅಂತ ಸುರು ಮಾಡಿ ಭಾಳ ಚಲೋ ಮಾಡ್ಯಾರ ನೋಡ್ರೀ. ಮೊದಲೆಲ್ಲಾ ವಾಟ್ಸಾಪಿನ ಡಿಪಿನಾಗ್ ಒಂದಾ ಒಂದು ಫೋಟೋ ಮಾತ್ರ ಹಾಕೊದಿತ್ತು. ಹಂಗಾಗಿ ಭಾಳ ಫೋಟೋ ಹಾಕ್ಬೇಕು ಅಂದ್ರಾ ಒಂದು ನಾಲ್ಕೈದು ಫೋಟೋನ ಕೊಲಾಜ್ ಮಾಡಿ ಹಾಕ್ಬೇಕಾಗಿತ್ತು. ನಾವು
ಡಿಪಿ ಬದಲಾಯಿಸಿದ್ರೂ ಯಾರಿಗೂ ಗೊತ್ತಾಗ್ತಿರ್ಲಿಲ್ಲ. ನಾವೇ ಏನಾದ್ರೂ ಒಂದು ಮೆಸೇಜ್ ಕಳ್ಸಿದಾಗ ಮಾತ್ರ ಅದನ್ನ ನೋಡೂ ಛಾನ್ಸ್ ಇತ್ತು. ಮತ್ತ ಅದೂ ಝೂಮ್ ಮಾಡಿ ನೋಡೂಕ್ ಸೈತ್ ಆಗ್ತಿರ್ಲಿಲ್ಲ. ಈಗ ಹಂಗೇನಿಲ್ಲ, ಡಿಪಿ ಝೂಮೂ ಮಾಡೊದು, ಹಂಗಾ ಸ್ಟೇಟಸ್‌ಗೆ ಎಷ್ಟು ಫೋಟೋನಾದ್ರೂ ಹಾಕೊದು. ಸ್ಟೇಟಸ್ ಅಪ್ರೋ ಮಾಡ್ತಿದ್ದಂಗ್ ನಮ್ಮ ಹೆಸ್ರು ಸೇವ್ ಮಾಡ್ಕೊಂಡಿರೋರ್ ಸ್ಟೇಟಸ್ ಮುಂದೆ
ಒಂದು ಚುಕ್ಕೀ ಮೂಡಿ, ಯಾರೋ ಸ್ಟೇಟಸ್ ಹಾಕ್ಯಾರಾ ಅಂತಾ ಕುತೂಹಲ ಮೂಡೂ ಹಂಗ್ ಮಾಡ್ತದ.
ಮೈ ಸ್ಟೇಟಸ್ ಅನ್ನೂ ವೃತ್ತ, ನಾವ್ ಎಷ್ಟು ಫೋಟೋ ಅಪ್‌ಲೋಡ್ ಮಾಡ್ತೇವೋ ಅಷ್ಟು ಭಾಗ ಆಗಿ
ತುಂಡಾಕ್ತೇತಿ. ಕೆಲವ್ರು ಅದೆಷ್ಟೊಂದು ಫೋಟೋ ಹಾಕ್ತಾರ ಅಂದ್ರ ತುಂಡಾಗಿರೋದು ಸೈತ ಗೊತ್ತಾಗಂಗಿಲ್ಲ, ಹಂಗಾ ಗುಂಡಕೇ ಕಾಣಕತ್ತಿರ್ತದ. ನಮಗಾಗಿರೋ ಸಂತೋಷ, ದುಃಖ, ನೋವು, ನಲಿವು ಎಲ್ಲದರ ಫೋಟೋ, ವಿಡಿಯೋ ಎಲ್ಲ ಹಂಚ್ಕೋಬೋದು. ತಮ್ಮ ಮನದ ಭಾವನೆಗಳನ್ನ ಕೊಟೇಶನ್ನುಗಳ ಮೂಲಕ ಸ್ಟೇಟಸ್ಸಿನಲ್ಲಿ ಹರಿಯ ಬಿಡುವವರು ಎಷ್ಟೋ ಮಂದಿ. ತಲುಪುವವರಿಗೆ ತಲುಪಿಯೇ ತೀರ್ತದೆ ಅನ್ನೂ ವಿಶ್ವಾಸ. ಅವರು ನೋಡಿದ್ದಾರೋ ಇಲ್ಲವೋ ಅನ್ನೂದಕ್ಕ ಅದ್ರಾಗ್ ನೋಡಿದೋರ ಹೆಸ್ರುಗಳು ಕಣ್ಣಾಗಿ ಮೂಡೋದನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯೋದು, ಅವ್ರ ಹೆಸರು ನೋಡಿದ್ ಮ್ಯಾಗೆ ಏನೋ ನಿರಾಳತೆ. ಒಬ್ಬೊಬ್ರು ತಾವು ಏನಾ ನೋಡಿದ್ರೂ ತಮ್ಮ ಹೆಸ್ರು ಸೈತ ಆ ಕಣ್ಣಾಗ್ ಕಾಣಾರªಂಗ್ ಸೆಟ್ಟಿಂಗೂ ಮಾಡ್ಕೊಂಡಿರ್ತಾರಾ ಮತ್ತ. ಆದ್ರೂ ಯಾರಾರ ಅದ್ರಾಗಿಂದ್
ಒಂದು ಫೋಟೋ ಒತ್ತಿ ಅದಕ್ಕ ರಿಪ್ಲೆ„ ಮಾಡಿದ್ರಂತೂ ಇನ್ನೂ ಖುಷಿ. ಕೆಲವ್ರು ಪ್ರತಿದಿನ ಹೊಸ ಹೊಸ ಸ್ಟೇಟಸ್ ಅನ್ನು ಹುರುಪ್ಲೆ ಚೇಂಜ್ ಮಾಡ್ತಾರ. ಯಾಕಂದ್ರ ಒಮ್ಮೆ ಹಾಕಿದ್ ಸ್ಟೇಟಸ್‌ಗ ಇಪ್ಪತ್ನಾಲ್ಕು ಗಂಟೆ ಮಾತ್ರ ಜೀವ ಇರ್ತೇತಿ. ಹ್ಯಾಂಗಿದ್ರೂ ತಾವು ಚಂದ್ ಬಂದಿರೋ ಫೋಟೋ ಮಾತ್ರ ಹಾಕೂದು ಅಂತ ಎಲ್ರಿಗೂ ಗೊತ್ತೇ ಗೊತ್ತೇತಿ. ಅದಾ ಅವ್ರು ಯಾವಾಗ್ಲಾದ್ರೂ ಎದ್ರಿಗ್ ಬಂದ್ರೂ ಗುರುತು ಹಿಡಿಯಕ್ಕಾಗಂಗಿಲ್ಲ. ಮೊನ್ನೀ ಹೀಂಗಾ ಆತು ನೋಡ್ರೀ. ನಮ್ ಧಾರವಾಡ ನಾಡ್ದ ಸಾಹಿತ್ಯ ಸಮ್ಮೇಳನಕ್ಕ ಹೋಗಿದ್ವಿ. ಎಷ್ಟೋ ಮಂದಿ ಫೇಸ್‌ಬುಕ್ಕಿನ ಸಾಹಿತ್ಯಾಸಕ್ತ ಫ್ರೆಂಡುಗಳು, ಒಬ್ಬರಿಗೊಬ್ರು ನಂಬರು ತೊಗೊಂಡು ವಾಟ್ಸಾಪಿನ ಮೂಲಕಾನೂ ಸಂಪರ್ಕದಲ್ಲಿದ್ರು. ಹಂಗಾಗಿ ಮಾತಾಡ್ಸೋಣೂ ಅಂತಾ ಹೋದ್ರೆ ಒಬ್ರಿಗಿಂತ ಒಬ್ರು ಬ್ಯಾರೆನೇ ಕಾಣಾಕತ್ತಿದ್ರು ಬಿಡ್ರೀ. ಅದ್ರಾಗೂ ನಮ್ಮ ಗಣೇಶ್ ಕೋಡೂರ ಸರ್ ಅವರನ್ನು ಅವ್ರ ಪುಸ್ತಕ ಮಳಿಗ್ಯಾಗೆ ಭೆಟ್ಟಿಯಾಗಿ ಪರಿಚಯ ಮಾಡ್ಕೊಂಡ್ರೇ, ಅವ್ರೇನು ಕೇಳ್ಬೇಕು, “ನೀವಾ ಏನ್ರೀ ನಳಿನಿ ಭೀಮಪ್ಪಾ ಅಂದ್ರ, ವಾಟ್ಸಾಪಿನ್ ಫೋಟೋಗಳಾಗ್ ಬ್ಯಾರೇನೇ ಕಾಣ್ತಿರಿ ನೋಡ್ರೀ, ಹಂಗಾಗಿ ಗುರ್ತು ಹಿಡೀಲಿಲ್ಲ’ ಅನ್ಬೇಕೆ? ಅದರರ್ಥ, ಫೋಟೋಗಿಂತ ಚಂದ ಕಾಣಿ¤ದೊ°à, ಇಲ್ಲಾ ಚಂದ ಕಾಣಿ¤ರ್ಲಿಲ್ಲೋ ಅಂತಾ ಅವತ್ತಿಂದ ಯೋಚಿ° ಮಾಡಾಕತ್ತೇನಿ.
– ನಳಿನಿ. ಟಿ. ಭೀಮಪ್ಪ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.