ನಮ್‌ ತಪ್ನ ಹೊಟ್ಟೆಗಾಕಳಿ ಸಾರ್‌…


Team Udayavani, May 2, 2017, 1:05 PM IST

02-JOSH-4.jpg

ಮಾನಸಿಕವಾಗಿ ಪೈಲ್ವಾನ್‌ ಆಗದ ಹೊರತು ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗದು’ ಎನ್ನುತ್ತಾರೆ ಸಲ್ಮಾನ್‌ ರಶಿªà. ಆದರೆ, ಎಷ್ಟೋ ಸಲ ಆ ಗಟ್ಟಿತನ ಕೆಲವು ಉಪನ್ಯಾಸಕರಿಗೆ ಇರುವುದೇ ಇಲ್ಲ. ನಾನು ಕುಳ್ಳಗಿದ್ದೇನೆ, ಕಪ್ಪಗಿದ್ದೇನೆ, ತಲೆಕೂದ್ಲು
ಕಮ್ಮಿ, ನನ್ನ ವಾಯ್ಸಲ್ಲಿ ಏನೋ ಯಡವಟ್ಟಿದೆ- ಎನ್ನುವ ಸಂಗತಿಯನ್ನೇ ನೆನೆದೂ ನೆನೆದು ಸಣ್ಣಗಾಗುತ್ತಾರೆ.

ಕನ್ನಡ ಕ್ಲಾಸಿನಲ್ಲಿ ಪಾಠ ಮಾಡಲು ಮೊಟ್ಟೆ ಬಂದಿದೆ! ರನ್ನನ “ಗದಾಯುದ್ಧ’, ಪಂಪನ “ವಿಕ್ರಮಾರ್ಜುನ ವಿಜಯ’ವನ್ನು
ಬಾಯ್ತುದಿಯಿಂದ ತೇಲಿಬಿಡುವ ಮೊಟ್ಟೆಗೆ ಚಂಪೂ ಕಾವ್ಯ ಒಂಥರಾ ಪೆಪ್ಪರ್‌ಮಿಂಟು ಇದ್ದಹಾಗೆ. ಛಂದಸ್ಸನ್ನು ಅದು ಶ್ರದ್ಧೆಯಿಂದ
ಬಿಡಿಸುವಾಗ ವಿದ್ಯಾರ್ಥಿಗಳಿಗೆ ನಿದ್ದೆ ಬಂದಿರುತ್ತೆ. ದುರ್ಯೋದನ ತೊಡೆ ಮುರಿದು ಬೀಳುವಾಗಿನ ಪ್ರಸಂಗದ “ಕುರುಕುಲಾರ್ಕನರ್ಕನ ಸ್ತಮಯ್ದಿದರ್‌…’ ಎನ್ನುವ ಸಾಲನ್ನು ಕನಿಷ್ಠ ಒಬ್ಬರಿಂದ ಹೇಳಿಸಿದರೆ “ಉಪನ್ಯಾಸಕ ಹುದ್ದೆ ಸಾರ್ಥಕ’ ಎನ್ನುವ ಅದರ “ಭಯಂಕರ’ ಆಸೆ ಈಡೇರುವುದೇ ಅನುಮಾನ. ಮಾತ್ರಾ ಗಣ ಪ್ರಸ್ತಾರದಲ್ಲಿ ಮೊಟ್ಟೆ ಪಾಠ ಮುಗಿಸುವಾಗ, ಕೊನೆಯ ಬೆಂಚಿನ ಕಿಲಾಡಿಗಳು ಡೆಸ್ಕಿನ ಮೇಲೆ ಆ ಮೊಟ್ಟೆಯ ಚಿತ್ರ ಛಕ್‌ ಅಂತ ಅರಳಿಸ್ತಾರೆ!

ಆಮ್ಲೆಟನ್ನು ಎಡಗೈಯಲ್ಲೂ ಮುಟ್ಟದ, ಶುದ್ಧ ಬ್ರಾಹ್ಮಣ ಕನ್ನಡ ಲೆಕ್ಚರರು. ತಲೆಕೂದಲು ಕಮ್ಮಿಯೆಂಬ ಕಾರಣಕ್ಕೆ ಆತನಿಗೆ “ಮೊಟ್ಟೆ’ಯೆಂಬ ಅಡ್ಡಹೆಸರು. ಕ್ಲಾಸಲ್ಲಿ, ಕಾರಿಡಾರಲ್ಲಿ, ಟಾಯ್ಲೆಟ್ಟಲ್ಲಿ, ಬಸ್ಸಲ್ಲಿ, ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ರೂ ಅಣಕಿಸೋದು “ಮೊಟ್ಟೆ, ಮೊಟ್ಟೆ, ಮೊಟ್ಟೆ’! ಪಂಚಾಂಗ, ಘಳಿಗೆ ನೋಡಿ ಇಟ್ಟಿದ್ದ “ಜನಾರ್ದನ’ ಎಂಬ ಒಳ್ಳೇ ಹೆಸರಿಗೆ ಈ “ಮೊಟ್ಟೆ’ ಗಂಟುಮೂಟೆ ಕಟ್ಟಿದ್ದು ಅವರಿಗೆ ಗೊತ್ತಾಗಲೇ ಇಲ್ಲ. ಆದ್ರೂ ಮೊಟ್ಟೆ ಅಲಿಯಾಸ್‌ ಜನಾರ್ದನ ಅವರ ಜೋಶ್‌ಗೆ ಕೆಲವು ಕಾರಣಗಳುಂಟು… ಎಲ್ಲರ ಕೂದಲು ಉದುರಲಿ ಅಂತ ದಿವಸಕ್ಕೆರಡು ಸಲ ಅವರು ದೇವರಿಗೆ ಕೈ ಮುಗೀತಾರೆ. ಎಲ್ಲರಿಗಿಂತ ಚೆಂದದ ಹುಡುಗಿ ಅವರಿಗೇ ಸಿಕ್ಕಹಾಗೆ ಪ್ರತಿರಾತ್ರಿ ಸಿಹಿಕನಸು ಕಾಣ್ತಾರೆ. ಸದ್ಯದಲ್ಲೇ ಮದ್ವೆ ಅಂತ ಜಿಮ್ಮಿಗೆ ಹೋಗಿ ರೆಡಿ ಆಗ್ತಿದ್ದಾರೆ.
“ಒಂದಿನ ಚೆಸ್ಟು, ಆಮೇಲೊಂದು ಲ್ಯಾಟ್ಸ್‌, ಅದಾದ್ಮೇಲೆ ಶೋಲ್ಡರು, ಬೈಸೆ…, ಆರ್ಮ್, ಆಮೇಲೆ ಬೇಕಾದ್ರೆ ಆ್ಯಬ್ಸ…, ಫೈನಲೀ ಲೆಗ್ಸ್‌…’ ಹಂತಹಂತದ ಈ ಜಿಮ… ಪಾಠ ಅವರಿಗೆ ಬೇಡ. ಸೊಂಟದ ಮೇಲ್ಭಾಗ ಮಾತ್ರ ದಪ್ಪಗೆ ಕಂಡರೆ ಸಾಕು ಎನ್ನುವ ಜನಾರ್ದನ ಅವರ ಅಲ್ಪ ಆಸೆಗೆ ಭಗವಂತ ಆದಷ್ಟು ಬೇಗ ವರ ಸ್ಯಾಂಕ್ಷನ್‌ ಮಾಡಲಿ!.

“ಒಂದು ಮೊಟ್ಟೆಯ ಕತೆ’ ಚಿತ್ರ, ಇಂಥದ್ದೊಂದು ಕತೆ ಇಟ್ಟುಕೊಂಡು ತೆರೆಯ ಮೇಲೆ ಬರುತ್ತಿದೆ. ಇದೊಂದು ಸ್ವೀಟ… ಸಿನಿಮಾ ಎಂದು ಚಪ್ಪರಿಸಿ ಸುಮ್ಮನಾಗುವ ಮುನ್ನ ಒಮ್ಮೆ ಕಾಲೇಜಿನಲ್ಲಿ ಅಕ್ಕಪಕ್ಕ ನೋಡಿ… “ಜನಾರ್ದನ’ರು ರಿಯಲ್ಲಾಗಿಯೇ ಕಾಣಿಸುತ್ತಾರೆ. ಅಡ್ಡಹೆಸರಿನಿಂದ ಮುಜುಗರಕ್ಕೆ ಒಳಗಾಗುವ ಲೆಕ್ಚರರುಗಳು ಲೆಕ್ಕವಿಲ್ಲದಷ್ಟು ಸಿಗುತ್ತಾರೆ. ಅವರ ಧ್ವನಿಯನ್ನು ಮಿಮಿಕ್ರಿ ಮಾಡಿ, ನಡಿಗೆಯನ್ನು ಅನುಕರಿಸುವ, ಹಾವಭಾವವನ್ನು ಹಾಸ್ಯ ಮಾಡುವ ವಿದ್ಯಾರ್ಥಿಗಳಿಗೆ ಅದು ಕೇವಲ ಮನರಂಜನೆ. ಆದರೆ, ಆ ಗುರುಗಳ ಎದೆಗೂಡಿನಲ್ಲಿ ನಿಂತು ನೋಡಿದಾಗ, ಅಲ್ಲಿ ಕವಿದ ನೋವಿನ ದಟ್ಟ ಮೋಡ ಯಾರಿಗೂ ಒಮ್ಮೆ  ಉಸಿರುಗಟ್ಟಿಸೀತು. ಈ ಮೊಟ್ಟೆಯ ಕತೆ ಪ್ರಸ್ತಾಪಿಸುವಾಗ, ಬೆಂಗ್ಳೂರಿನ ಮನಃಶಾÏಸ್ತ್ರಜ್ಞ ಡಾ. ವಿವೇಕ್‌ ಹೇಳಿದ ಘಟನೆ ಕಣ್ಮುಂದೆ ಬರುತ್ತೆ. ಅವರ ಬಳಿ ಒಬ್ಬರು ಗೃಹಿಣಿ ಕೌನ್ಸೆಲಿಂಗಿಗೆ ಬಂದಿದ್ದರಂತೆ. “ನನ್ನ ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲ ಡಾಕ್ಟ್ರೇ’ ಎಂಬುದು ಗೃಹಿಣಿಯ ಗೋಳು. ವೈದ್ಯರು ಅವರ
ಗಂಡನನ್ನು ಕರೆಸಿದಾಗಲೇ ಗೊತ್ತಾಗಿದ್ದು, ಅವರು ತನ್ನ ಮಗನ ಕಾಲೇಜಿನ ಲೆಕ್ಚರರ್‌ ಎಂದು! ಮೊದಲ ದಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಮನೆಗೆ ಬಂದು ಮಗನ ಬಳಿ “ಆ ಲೆಕ್ಚರರ್‌ ಹೇಗೋ?’ ಎಂದು ಕೇಳಿದಾಗ ಅಲ್ಲೊಂದು ಆಘಾತದ ಸುದ್ದಿಯಿತ್ತು.  

“ಸ್ಟೂಡೆಂಟೆಲ್ಲ ಅವರ ಕಾಲೆಳೀತಾರೆ ಪಪ್ಪಾ… ಪಾಠ ಮಾಡೋದಿಕ್ಕೇ ಬಿಡೋಲ್ಲ. ಜೋರು ಗಲಾಟೆ ಮಾಡ್ತಾರೆ. ಎಷ್ಟೋ ಸಲ ಕ್ಲಾಸಲ್ಲೇ ಆ ಲೆಕ್ಚರರು ಅತ್ತಿದ್ದಾರೆ’ ಎಂದ ಮಗ. ಈ ಚಿಂತೆಯಲ್ಲಿಯೇ ಆ ಲೆಕ್ಚರರು ಕೊರಗೀ ಕೊರಗಿ, ಸಂಸಾರದಲ್ಲೂ ನಿರಾಸಕ್ತಿ 
ತೋರಿಸುತ್ತಿದ್ದರು! ಕೌನ್ಸೆಲಿಂಗ್‌ ಮಾಡಿಸಿದ ಮೇಲೆ ಅವರು ಮೊದಲಿನ ಲವಲವಿಕೆಗೆ ಬಂದಿದ್ದರು! “ಮಾನಸಿಕವಾಗಿ ಪೈಲ್ವಾನ್‌ ಆಗದ ಹೊರತು ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗದು’ ಎನ್ನುತ್ತಾರೆ ಸಲ್ಮಾನ್‌ ರಶಿ. ಆದರೆ, ಎಷ್ಟೋ ಸಲ ಆ ಗಟ್ಟಿತನ ಕೆಲವು
ಉಪನ್ಯಾಸಕರಿಗೆ ಇರುವುದೇ ಇಲ್ಲ. ನಾನು ಕುಳ್ಳಗಿದ್ದೇನೆ, ಕಪ್ಪಗಿದ್ದೇನೆ, ತಲೆಕೂದ್ಲು ಕಮ್ಮಿ, ನನ್ನ ವಾಯ್ಸಲ್ಲಿ ಏನೋ ಯಡವಟ್ಟಿದೆ- ಎನ್ನುವ ಸಂಗತಿಯನ್ನೇ ನೆನೆದೂ ನೆನೆದು ಸಣ್ಣಗಾಗುತ್ತಾರೆ. ಉಪನ್ಯಾಸಕರು ಹೀಗೆ ಕುಗ್ಗಿದಷ್ಟೂ, ವಿದ್ಯಾರ್ಥಿ ಬಾಹುಬಲಿಯಂತೆ ಎತ್ತರದಲ್ಲಿದ್ದಾನೆ ಅಂತನ್ನಿಸಲು ಶುರುವಾಗುತ್ತೆ. ಧ್ವನಿ ಕಂಪಿಸುತ್ತೆ. ವಿದ್ಯಾರ್ಥಿಗಳ ಅಪಹಾಸ್ಯಗಳ ಮುಂದೆ ಇಷ್ಟು ದಿನ ನೂರಾರು ಪುಸ್ತಕ ಓದಿ, ತಲೆಯಲ್ಲಿಟ್ಟುಕೊಂಡ ಜ್ಞಾನವೆಲ್ಲ ಗಾಳಿಗೆ ತೂರಿ ಹೋಯೆನೋ ಎಂಬಂತೆ ಜೊಳ್ಳಾಗಿರುವ ಭಾವ ಉಪನ್ಯಾಸಕನಲ್ಲಿ ಹುಟ್ಟುತ್ತೆ. ಅಧ್ಯಾಪಕ ವರ್ಗದವರು ಈ ಹಂತ ತಲುಪಿದಿರಿ ಅಂತಾದ್ರೆ ಕತೆ ಮುಗೀತು; ಹುಡುಗರ ಕಂಟ್ರೋಲಲ್ಲಿ ನೀವಿರುತ್ತೀರಿ.

ಇಂಥ ವೇಳೆ “ವರಕವಿ’ ಬೇಂದ್ರೆ ಅವರನ್ನು ಕಣ್ಮುಂದೆ ತಂದುಕೊಂಡ್ರೂ ಸಮಸ್ಯೆಗೆ ಪರಿಹಾರ ಸಿಗುತ್ತೆ. ಬೇಂದ್ರೆಯವರು ಸೊಲ್ಲಾಪುರದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಂದರ್ಭ. ಕುರುಚಲು ಗಡ್ಡ, ಧೋತರ, ನೆಹರು ಶರ್ಟು ಹಾಕಿಕೊಂಡ ಬೇಂದ್ರೆಗೆ ಅಲ್ಲಿನ ವಿದ್ಯಾರ್ಥಿಗಳು ಕ್ಷೌರದ ರೇಜರ್‌, ಶೇವಿಂಗ್‌ ಸೋಪು, ಬ್ರಶುÏಗಳಿದ್ದ ಬಾಕ್ಸ್‌ ಅನ್ನು ಗಿಫಾrಗಿ ಕೊಟ್ಟರು. ಬೇಂದ್ರೆಯವರು ಈ ಹಜಾಮತಿ ಸೆಟ್‌ ಅನ್ನು ಸ್ವೀಕರಿಸುತ್ತಿದ್ದಂತೆ ಗರಿ ಗರಿ ಬಟ್ಟೆ ತೊಟ್ಟಿದ್ದ ವಿದ್ಯಾರ್ಥಿಗಳೆಲ್ಲ ಒಂದೇಸಮನೆ ನಕ್ಕರು. ಆಗ ಬೇಂದ್ರೆ ಹೇಳಿದ್ದಿಷ್ಟು; “ನನ್ನ ಕುರುಚಲು ಗಡ್ಡ ನೋಡಿ ಯಾರೋ ಈ ಹಜಾಮತಿ ಸೆಟ್‌ ಕೊಟ್ಟಾರ. ನಾ ದಿನಾ ಗಡ್ಡ ಕೆರಕೋಬೇಕಂತ ಇವರ ಇಚ್ಛಾ ಇದ್ದಂಗ ಕಾಣಿಸ್ತದ. ಇದನ್ನು ಕೊಟ್ಟವರು ದಿನಾ ನನ್‌ ಮನೆಗ್‌ ಬಂದು ಕ್ಷೌರ ಮಾಡಿದ್ರೆ, ಚೊಲೋ ಇರ್ತಿತ್ತು…’! ನಗುತ್ತಿದ್ದ ಎಲ್ಲರೂ ಒಮ್ಮೆಲೇ ಗಪ್‌ ಚುಪ್‌!

ಏನೇ ಅನ್ನಿ… ಗುರುವಿಗೆ ಸಂಯಮ ಬಲ ಹೆಚ್ಚು. ಎಲ್ಲರೂ “3 ಈಡಿಯಟ್ಸ್‌’ನ ವೈರಸ್‌ ಮೇಷ್ಟ್ರು ಆಗಲಾರರು. ಆದರೆ, ಪ್ರತಿ ಉಪನ್ಯಾಸಕನಲ್ಲೂ ಒಬ್ಬ ಚಾಮಯ್ಯ ಮೇಷ್ಟ್ರು ಇದ್ದೇ ಇರುತ್ತಾನೆ. “ನೀನು ನನ್ನನ್ನು ಮೇಷ್ಟ್ರು ಅಂತ ಒಪ್ತಿಯೋ ಇಲ್ವೋ, ಆದ್ರೆ ನಾನು ನಿನ್ನನ್ನು ಶಿಷ್ಯ ಅಂತ ಹೆಮ್ಮೆಯಿಂದ ಒಪ್ಕೋತೀನಿ ಕಣೋ ರಾಮಾಚಾರಿ…’ ಎನ್ನುವ ಹಾಗೆ, ಉಪನ್ಯಾಸಕರ ಕಣ್ಣಲ್ಲೊಂದು ಪ್ರೀತಿ ಇರುತ್ತೆ. ಆ ಪ್ರೀತಿಯನ್ನು ಕಂಡುಕೊಳ್ಳುವವನೇ ನಿಜವಾದ ಶಿಷ್ಯ. ಆ ಸ್ಟೂಡೆಂಟು ನೀವೇ ಆದ್ರೆ ಅದೇ ನಿಮ್ಮ ಗುರುವಿಗೆ ಕಾಣಿಕೆ!

ಒಳ್ಳೆಯ ಪಾಠಗಳಿಂದ ಟೀಕೆಗಳನ್ನು ದಾಟಿ

ಮೇಷ್ಟ್ರು ಕೆಲ್ಸದಲ್ಲಿ ಈ ರಿಸ್ಕ್ ಫ್ಯಾಕ್ಟರ್‌ ಇದ್ದೇ ಇರುತ್ತೆ. ಆ ವೃತ್ತಿಯನ್ನು ಆರಿಸಿಕೊಂಡಾಗ ಅದರ ಪ್ಲಸ್ಸು, ಮೈನಸ್ಸನ್ನೂ ಒಟ್ಟಿಗೆ ತಗೋಬೇಕು. ಶಿಕ್ಷಕನಾದವನು ಆಂತರಿಕವಾಗಿ ಶಕ್ತಿಶಾಲಿ ಆಗಿರಬೇಕು. ಆತನ ವಿದ್ವತ್ತು, ತೋರುವ ಪ್ರೀತಿ, ಪಾಠ ಕಲಿಸುವ ರೀತಿ, ಮಂತ್ರಮುಗ್ಧಗೊಳಿಸುವ ಚಾಕಚಕ್ಯತೆ ಇದ್ದರೆ ಅಣಕುಗಳೆಲ್ಲ ಗೌರವವಾಗಿ ಮಾರ್ಪಡುತ್ತವೆ. ಅಪಹಾಸ್ಯಕ್ಕೆ ಗುರಿಯಾಗುವ ಉಪನ್ಯಾಸಕರು ಹಾಸ್ಯಪ್ರಜ್ಞೆ ಬೆಳೆಸಿಕೊಳ್ಬೇಕು. ವಿದ್ಯಾರ್ಥಿಗಳು ಟೀಕಿಸಿದ್ರೆ ಮನಸ್ಸಿಗೆ ಹಚೊಬಾರ್ದು. ಒಳ್ಳೆಯ ಪಾಠಗಳಿಂದ ಅವನ್ನು ದಾಟುವ ಪ್ರಯತ್ನ ಮಾಡಬೇಕು.

ನಾಗತಿಹಳ್ಳಿ ಚಂದ್ರಶೇಖರ್‌, ಸಾಹಿತಿ/ ಉಪನ್ಯಾಸಕ

ಕುಂವೀಗೆ ಬಂದಿದ್ದ ಭಯಾನಕ ಲೆಟರ್‌!
ನಾನು ಗೂಳ್ಯಂನಲ್ಲಿದ್ದಾಗ 18-20 ವರ್ಷದವರು 10ನೇ ತರಗತಿ ಓದ್ತಾ ಇದ್ರು. ನಾನು ಸ್ವಲ್ಪ ಉಗ್ರಗಾಮಿ ಟೀಚರ್‌. ತಪ್ಪು
ಮಾಡಿದಾಗ ಸ್ವಲ್ಪ ಹೊಡೀತಾ ಇದ್ದೆ. ಒಂದಿನ ನಂಗೆ ಲೆಟರ್‌ ಬಂತು. ಅದಕ್ಕೆ ವಿಳಾಸ ಇರಲಿಲ್ಲ. ಅದೇ ಊರಿನಿಂದ ಪೋಸ್ಟ್‌ ಆಗಿತ್ತು.
“ಹುಡುರನ್ನ ಹೊಡೀತೀಯಲ್ಲ, ಹೊಟ್ಟೆಗೆ ಏನ್‌ ತಿಂತೀಯಾ?’ ಎಂಬ ಪ್ರಶ್ನೆ ಆ ಪತ್ರದಲ್ಲಿತ್ತು. “ವಾಣಿ ವಿಲಾಸ ಸಾಗರದಲ್ಲಿ 30 ಅಡಿ ನೀರೈತೆ, ಗೊತ್ತಾ?’ ಎಂಬ ಬೆದರಿಕೆಯೂ ಅಲ್ಲಿತ್ತು! ಕೆಲವು ದಿನ ಬಿಟ್ಟು ಕ್ಲಾಸಿನಲ್ಲಿ ಕೇಳಿದೆ, “ಮೊನ್ನೆಯ ರಜೆಯಲ್ಲಿ ಯಾರ್ಯಾರು ಎಲ್ಲೆಲ್ಲಿಗೆ ಹೋಗಿದ್ರಿ?’ ಅಂತ ಕೇಳಿದೆ. ಅದರಲ್ಲೊಬ್ಬ “ವಾಣಿ ವಿಲಾಸ ಸಾಗರ ನೋಡೆª ಸಾರ್‌’ ಎಂದ. ನಾನು ಪಾಯ್ಡ  ಎಂದು ಕಪಾಳಕ್ಕೆ ಬಾರಿಸಿದ್ದೆ! ಅವನು ತಪ್ಪೊಪ್ಪಿಕೊಂತ

ಕುಂ. ವೀರಭದ್ರಪ್ಪ, ಸಾಹಿತಿ/ ನಿವೃತ್ತ ಶಿಕ್ಷ

ಹೈಪರ್‌ ಆ್ಯಕ್ಟಿವ್‌ ಮಕ್ಕಳು ಹೀಗೆ ಮಾಡ್ತಾರಾ?
ಹೈಪರ್‌ ಆ್ಯಕ್ಟಿವ್‌ ಇರುವ ಕೆಲವು ಮಕ್ಕಳು ಹದಿಹರೆಯದಲ್ಲಿ “ಎಡಿಎಚ್‌ಡಿ’ (Attention Defi cit Hyperactivity Disorde) ಹಂತಕ್ಕೆ ತಲುಪುತ್ತಾರೆ. ಇಂಥವರಿಂದ ಕ್ಲಾಸ್‌ರೂಮಿನಲ್ಲಿ ಕೀಟಲೆ ಹೆಚ್ಚಾಗಬಹುದು. ಅವರಿಗೆ ಎಲ್ಲ ವಿಚಾರಗಳೂ
ಬೋರ್‌ ಅಂತನ್ನಿಸುತ್ತವೆ. ಆದರೆ, ಆಕರ್ಷಕವಾಗಿ ಪಾಠ ಮಾಡಿದರೆ ಅವರನ್ನೂ ಗೆಲ್ಲುವುದು ಕಷ್ಟವಲ್ಲ. ತುಂಬಾ ಚೆನ್ನಾಗಿ ಪಾಠ ಮಾಡಿದ್ರೆ ಯಾವ ಸ್ಟೂಡೆಂಟೂ ಹೀಗೆ ಮಾಡು ವುದಿಲ್ಲ. ಕೂದಲು ಉದುರೋದು, ದಢೂತಿ ಆಗಿರೋದು ಮ್ಯಾಟ್ರೇ ಆಗೋದಿಲ್ಲ. ಬಾಹ್ಯನೋಟ ಒಂದು ವಿಚಾರವೇ ಆಗಬಾರದು. ಉಪನ್ಯಾಸಕ ಯಾವತ್ತೂ ಕಾನ್ಫಿಡೆಂಟಾಗಿ ಇರಬೇಕು. ಐ ಕಾಂಟ್ಯಾಕುr ಬಹಳ ಮುಖ್ಯ. ಆಡುವ ಮಾತು ಸುಟವಾಗಿರಬೇಕು. ಗಟ್ಟಿಯಾಗಿ ಹೇಳಬೇಕು. 

ಡಾ. ಕೆ.ಎಸ್‌. ಶುಭ್ರತಾ, ಮನೋರೋಗ ತಜ್ಞೆ

ಕಿರಿಕ್‌ ಇರುತ್ತೆ, ತಮಾಷೆಯಿಂದ ಸ್ವೀಕರಿಸಿ… 
ಪ್ರತಿ ಉಪನ್ಯಾಸಕನಿಗೂ ಕ್ಲಾಸ್‌ರೂಮ್‌ನಲ್ಲಿ ಕೀಟಲೆಯ ತಲೆನೋವು ಎದುರಾಗುತ್ತೆ. ಇಂಥ ಪ್ರಸಂಗಗಳನ್ನು ಉಪನ್ಯಾಸಕರು
ಸೀರಿಯಸ್ಸಾಗಿ ತೆಗೆದೊಬಾರ್ದು. ತಮಾಷೆಯಿಂದಲೇ ಸ್ವೀಕರಿಸಬೇಕು. ಕೆಲವರು ಪರ್ಸನಲ್ಲಾಗಿ ಸ್ವೀಕರಿಸೋರು ಇದ್ದಾರೆ. ಮತ್ತೆ ಕೆಲವರು ತಮ್ಮಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ತಾರೆ. ನಿಧಾನವಾಗಿ ಸುಧಾರಿಸ್ತಾರೆ. ಇನ್ನೂ ಕೆಲವರು ಕೆಲವರು ತಮ್ಮನ್ನು ಟೀಸ್‌ ಮಾಡುವವರನ್ನು ಅಭಿಮಾನಿಗಳೆಂದು ಬಗೆಯುವ ಉಪನ್ಯಾಸಕರೂ ಇದ್ದಾರೆ! ಇಡೀ ಕ್ಲಾಸಿಗೆ ಕ್ಲಾಸೇ ಟೀಸ್‌ ಮಾಡೋದಿಲ್ಲ.
ಒಳ್ಳೆಯ ವಿದ್ಯಾರ್ಥಿಗಳೂ ಇದ್ದಾರೆ.

ಎಲ್ಲ ಕಾಲೇಜಲ್ಲೂ ಲೆಕ್ಚರರ್‌ಗೆ ಅಡ್ಡ ಹೆಸರು ಇಡೋದು, ವ್ಯಂಗ್ಯ ಆಡೋದು ಇದ್ದಿದ್ದೆ. ಅವರ ಧ್ವನಿಯನ್ನು ಮಿಮಿಕ್ರಿ ಮಾಡಿ,
ನಡಿಗೆಯನ್ನು ಅನುಕರಿಸುವ, ಹಾವಭಾವವನ್ನು ಹಾಸ್ಯ ಮಾಡುವ ವಿದ್ಯಾರ್ಥಿಗಳಿಗೆ ಅದು ಕೇವಲ ಮನರಂಜನೆ. ಆದರೆ, ಆ 
ಗುರುಗಳ ಎದೆಗೂಡಿನಲ್ಲಿ ನಿಂತು ನೋಡಿದಾಗ, ಅಲ್ಲಿ ಕವಿದ ನೋವಿನ ದಟ್ಟ ಮೋಡ ಯಾರಿಗೂ ಒಮ್ಮೆ ಉಸಿರುಗಟ್ಟಿಸೀತು…

ಸಿಬಂತಿ ಪದ್ಮನಾಭ, ಉಪನ್ಯಾಸಕ

ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.