ಉಸಿರೇ ನೀನಾಗಿರುವಾಗ ಬೇರೇನನ್ನೂ ನೆನೆಯಲಾರೆ!


Team Udayavani, Feb 7, 2017, 3:45 AM IST

page2-bottom-image.jpg

ಪ್ರೀತಿಯ ಮನದೊಡೆಯ, 
ಏನಯ್ಯ ನಿನ್ನ ಲೀಲೆ? ಹೀಗ್ಯಾಕೆ ಅನುಕ್ಷಣ ಎಡೆಬಿಡದೆ, ನಿದ್ದೆಯ ಕನವರಿಕೆಯಲ್ಲೂ, ಹಗಲಿನ ಜೋಂಪಿನಲ್ಲೂ, ಸಂತಸದಲ್ಲಿ, ಕೋಪದಲ್ಲಿ, ವೇದನೆಯಲ್ಲಿ ಅಷ್ಟೆಲ್ಲಾ ಯಾಕೆ ಎಕ್ಸಾಮ್‌ ಹಾಲ್‌ನಲ್ಲೂ ಕಾಡುವುದೇನೋ ಹುಡುಗ? ಹೊರಗಡೆ ಮೈ ಕೊರೆವ ಚಳಿ ಒಳಗಡೆ ಧಗಧಗಿಸುವ ನಿನ್ನ ನೆನಪು. ಯಾಕಿಷ್ಟು ಕೋಪ, ತಿರಸ್ಕಾರ ನನ್ನ ಮೇಲೆ? ಯಾಕೋ ಕಣ್ಣೀರಾದೆ ಇಂದು ನಿನ್ನ ನೆನೆದು. ಹರೆಯದಲ್ಲಿ ಈ ಅನುರಾಗ ಚೆಲ್ಲಾಟಗಳು ಇನಿಯನ ದನಿಗಾಗಿ ಹಾತೊರೆಯುವುದು ಸಹಜ ಬಿಡು. ಆದರೆ ಮುಪ್ಪಿನಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ, ಮುಪ್ಪಿನ ಭಯ, ಆತಂಕಗಳು, ಜಿಗುಪ್ಸೆ ಕಾಡದಂತೆ ನಿನ್ನ ಆದರಿಸಿ ಜೊತೆಯಾಗಿರಬೇಕು. ಬರುವ ಸವಾಲುಗಳಿಗೆ ಎದೆಯೊಡ್ಡಿ ನಿನ್ನ ಜತನದಿಂದ ಕಾಪಿಟ್ಟುಕೊಳ್ಳಬೇಕು ಎನಿಸುತ್ತದೆ. 

ಆ ಕಾಲವು ನಿರ್ಧರಿಸುತ್ತದೆ ನನ್ನ ಒಲವ ಬಲವು ಎಷ್ಟಿದೆಯೆಂದು. ಒಂದೊಮ್ಮೆ ನಿನ್ನನ್ನು ವರ್ಣಿಸಿ ಕವನವನ್ನೋ ಲೇಖನವನ್ನೋ ಬರೆಯೋಣ ಎಂದುಕೊಳ್ಳುತ್ತೇನೆ. ಪದಗಳು ಸಾಕೆನಿಸುವುದಿಲ್ಲ, ಮುಗಿಯದಷ್ಟು ರಾಶಿ ರಾಶಿ ಭಾವಗಳು. ಏನಿದೆಯೋ ಅಷ್ಟು ನಿನ್ನಲ್ಲಿ? ಈ ತರಹ ಒಬ್ಬ ಹುಡುಗಿಗೆ ನಿನ್ನ ಹುಚ್ಚು ಹಿಡಿಸುವ ಪರಿಯೇನು ಹುಡುಗ? ಮನಸ್ಸು ನಿನ್ನಲ್ಲಿ ಸೋತಾಯಿತು. ಅದೆಂತಹ ಮನೋಹರವಾದ ಮೋಹ ನಿನ್ನಲ್ಲಿ ತಳೆದಿದೆ. ಸದಾ ಹಠ ಹಿಡಿವ ಕಣ್ಣ ಬಿಂದುಗಳು ನಿನ್ನ ನೆನೆದಾಗ ಮಾತ್ರ ಸರಾಗವಾಗಿ ಹರಿಯುತ್ತವೆ. ಹೀಗೇಕೆ ನೀ ಮೌನದಿ ದೂರ ಸರಿದೆ ಜೀವ ಚೇತನವೆ? ಸುಖವಿರಲಿ ದುಃಖವಿರಲಿ, ನಿನ್ನ ನೆನಪಿರಲಿ ಕಣೋ. ಜೀವ ಜೀವದ ಕಣವೂ ನೀನಾಗಿರುವಾಗ ಬೇರೇನನ್ನೂ ನೆನೆಯದಾದೆ ಗೆಳೆಯ. ಒಲವಿನ ಭಾವ ತರಂಗಿಣಿಯನ್ನು ಹರಿಸುವ ಸವಿಜೇನ ಪನ್ನೀರು ನೀನು. ಇಷ್ಟು ದಿನದ ನಿನ್ನ ಸಾಂಗತ್ಯದಲ್ಲಿ ಒಂದು ದಿನವೂ ಒಂಟಿಯೆನಿಸಿರಲಿಲ್ಲ. ದೂರವಿದ್ದರೂ, ನೀ ನನಗೆ ಸಿಗುವುದಿಲ್ಲ ಎಂದು ತಿಳಿದಿದ್ದರೂ ನಿನ್ನ ನೆನಪಲ್ಲಿ ಬದುಕಬಲ್ಲೆ ಎಂದು ಪಣ ತೊಟ್ಟವಳು. ಆದರೂ ನನ್ನ ಪ್ರೀತಿಯಲ್ಲಿ ನಿನಗ್ಯಾಕೆ ಅಪಶ್ರುತಿ ಹೊಮ್ಮಿತು? ಕಾರಣ ತಿಳಿಯುತ್ತಿಲ್ಲ.

ಒಮ್ಮೊಮ್ಮೆ ಕನಸಿನಿಂದ ಎಚ್ಚರವಾದರೆ ಇದ್ದಕ್ಕಿದ್ದ ಹಾಗೆ ಮದುವಣಗಿತ್ತಿ ಆಗ್ತೀನೆ. ಪಚ್ಚೆ ಹಸಿರ ಸೀರೆಯುಟ್ಟು, ನನ್ನ ಬಾಳಿನ ಭಾಗ್ಯದ ಸಿಂಧೂರವನ್ನಿಟ್ಟು ಹಣೆಗೆ, ಹೂ ಮುಡಿದು ನನ್ನ ಸೆರಗಿಗೆ ನಿನ್ನ ಸಾಮೀಪ್ಯದ ಶಲ್ಯಕ್ಕೆ ಒಲವ ಗಂಟು ಹಾಕಿ, ನಿನ್ನ ಕಿರು ಬೆರಳಿಗೆ ನನ್ನ ಬೆರಳು ಬೆರೆಸಿ ನಿಂತೆನೆಂದರೆ ನಾನೇ ಸೌಭಾಗ್ಯವತಿ ಅಲ್ಲವೆ? ಕಂಡ ಕನಸುಗಳೆಲ್ಲ ನಿಜವಾಗಿದ್ದರೆ ಬದುಕಿಗೆ ಅರ್ಥವೇನಿರುತ್ತಿತ್ತು ಅಲ್ಲವಾ? ನನಗೂ ತಿಳಿದಿದೆ ನಿನ್ನ ಕೈ ಹಿಡಿದು ನಡೆಯುವಷ್ಟು ಅದೃಷ್ಟ ನನಗಿಲ್ಲ, ಸಂಗಾತಿಯಾಗಿ ಬಾಳುವ ಸುದಿನವೂ ಮುಂದಿಲ್ಲ. ಯಾವುದೋ ಖಾಲಿ ಎದೆಯಲ್ಲಿ ನಿನ್ನ ಪ್ರತಿಬಿಂಬವನ್ನೇ ಮುಂದಿಟ್ಟು ಇದೇ ಪ್ರೀತಿ, ಇದು ನನ್ನೆದೆಯ ಜೀವಾಳ ಎಂದು ಬದುಕಿನ ಬಂಡಿಯನ್ನು ನಡೆಸುತ್ತಿರುವವಳು ನಾನು. 

ನೀನು ನನ್ನ ಜೀವಮಾನದ ಅಫಿಡೆವಿಟ್ಟಿನ ಪ್ರೀತಿಯನ್ನು ನೀಡುತ್ತೀ ಎಂಬ ಸ್ವಾರ್ಥದಿಂದ, ನನಗೆ ಮಾತ್ರ ಸೀಮಿತ ಪ್ರೀತಿ ನೀಡುತ್ತೀಯ ಎಂದು ಪ್ರೀತಿ ಕೊನರಲಿಲ್ಲಯ್ಯ. ನಿನ್ನ ಅನುರಾಗ ದೊರೆಯದಾದರೂ ನೀನೆಂದೂ ನನ್ನವನೇ. ಕನಸಿನಲ್ಲಿ ಮಾತ್ರ ದಕ್ಕಿದವನು. ಬೆಚ್ಚನೆಯ ಹೃದಯದಲ್ಲಿ ನಿನ್ನ ಒಡನಾಟಕ್ಕಾಗಿ ಕಾದವಳು. ಅಂಥವಳಿಗೆ ನಿನ್ನ ಮೇಲಿನ ಒಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. 
– ಇಂತಿ ನಿನ್ನ ಅಭಿಸಾರಿಕೆ

– ಪಲ್ಲವಿ ಎಡೆಯೂರು

ಟಾಪ್ ನ್ಯೂಸ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

156

Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.