ಬೇಡಿಕೆಯ ಹೊಸ ಕೋರ್ಸ್‌


Team Udayavani, Dec 3, 2019, 11:07 AM IST

JOSH-TDY-4

ನೀವು ಎಂಜಿನಿಯರಿಂಗ್‌ ಪೂರೈಸಿದ್ದೀರ? ಹಾಗಾದರೆ, ಈ ಮಿಷನ್‌ ಲರ್ನಿಂಗ್‌ ಕೋರ್ಸ್‌ ಮುಗಿಸಿಬಿಡಿ. ಇವತ್ತು ಬಹು ಬೇಡಿಕೆಇರುವ ಕೋರ್ಸ್‌ ಇದು. ಎಲ್ಲವೂ ಆನ್‌ಲೈನ್‌ಮಯ ಆಗಿರುವ ಈ ಕಾಲದಲ್ಲಿ, ಮಿಷನ್‌ ಲರ್ನಿಂಗ್‌ ಬಹಳ ಮುಖ್ಯ ಅನ್ನುವಂತಾಗಿದೆ.

ಇದೇನಪ್ಪಾ? ಮಿಷನ್‌ ಲರ್ನಿಂಗ್‌ ಕೋರ್ಸ್‌ ಅನ್ನಬೇಡಿ. ಸರಳ ಉದಾಹರಣೆ ಕೇಳಿ; ನೀವು ಇಂಟರ್‌ನೆಟ್‌ನಲ್ಲಿ ಕೆಮ್ಮಿಗೆ ಔಷಧ ಯಾವುದೆಂದು ಹುಡುಕಾಡುತ್ತಿದ್ದರೆ, ವಿವಿಧ ಕಂಪೆನಿಗಳ ರಾಶಿರಾಶಿ ಮೆಡಿಸನ್‌ ನಿಮ್ಮ ಮುಂದೆ ಮಾರ್ಚ್‌ಫಾಸ್ಟ್‌ ಮಾಡುತ್ತಿರುತ್ತದೆ. ಹಾಗೆಯೇ, ನಿಮ್ಮ ಮನೆಗೆಅದ್ಬುತವಾದ ಟಿ.ವಿಬೇಕು ಅಂತ ತಡಕಾಡುತ್ತಿದ್ದರೆ. ಸಾವಿರದಿಂದ ಒಂದು ಲಕ್ಷದವರೆಗಿನ ಟಿ.ವಿಗಳು, ಅದರ ಹೋಲಿಕೆಗಳು ಎಲ್ಲವೂ ಕ್ಷಣಾರ್ಧದಲ್ಲಿ ನಿಮ್ಮ ಇಮೇಲ್‌ಗೆ ಬರುತ್ತದೆ. ಹಾಗೆಯೇ, ನೀವು ಫೇಸ್‌ಬಕ್‌ ತೆರೆದರೆ, ಅಲ್ಲಿ ಟಿ.ವಿಯಲ್ಲಿ ಜಾಹೀರಾತುಕಾಣುತ್ತದೆ. ನಿಮ್ಮ ಟಿ.ವಿ ಕೊಳ್ಳುವ ಆಸೆ ಮುಗಿದಿದ್ದರೂ ಈ ಜಾಹೀರಾತುಗಳು ಮತ್ತೆ ಆಸೆ ಹುಟ್ಟಿಸುವುದಂತೂ ಖರೆ. ಈ ರೀತಿ ನಿಮಗೆ ಬೇಕಾದ ವಸ್ತುಗಳನ್ನು ನಿಮ್ಮ ಮುಂದೆ ತಂದಿರಿಸುವುದೇ ಮಿಷನ್‌ಲರ್ನಿಂಗ್‌ ಎಂಜಿನಿಯರ್‌ಗಳ ಕೆಲಸ.

ಊಹಿಸುವುದು ಹೇಗೆ? : ಯಂತ್ರಕ್ಕೆ ಪ್ರೋಗ್ರಾಮಿಂಗ್‌ (ಅಲ್ಗಾರಿದಂ) ಮಾಡುವುದನ್ನು ಹೇಳಿ ಕೊಡುವುದು ಮಿಷನ್‌ ಲರ್ನಿಂಗ್‌ ಕೋರ್ಸ್‌ನ ಮೂಲ ಉದ್ದೇಶ. ಇದನ್ನುಆಯಾ ಕಾಲೇಜುಗಳು, ಮಾರುಕಟ್ಟೆಯ ಅಗತ್ಯಗಳನ ಆಧರಿಸಿ ಹೇಳಿಕೊಡುತ್ತವೆ. ನಿಮ್ಮ ಅಭಿರುಚಿ, ಜೇಬಿನ ಸಾಮರ್ಥ್ಯ ಹೀಗೆ, ಎಲ್ಲವನ್ನೂ ಅಳೆದು ತೂಗುತ್ತವೆ. ಕೆಲ ಸಂಸ್ಥೆಗಳಿಗೆ ನಿಮ್ಮ ಖರೀದಿ ಚಹರೆಯನ್ನು ಬೇರೆಯವರಿಗೆ ರವಾನಿಸುತ್ತವೆ. ನೀವು ಗಮನಿಸಿರಬಹುದು. ಪ್ರತಿನಿತ್ಯ ನಿಮ್ಮ ಇ –ಮೇಲ್‌ ಇನ್‌ಬಾಕ್ಸ್‌ಗೆ, ನೀವು ಇಷ್ಟ ಪಟ್ಟ ವಸ್ತುಗಳ ಬಗೆಗೆ ಮಾಹಿತಿಗಳು, ನಾನಾ ಸೇವೆಗಳ ಸೇವಾದಾತರ ವಿವರಗಳು ಬಂದಿರುತ್ತವೆ. ನೀವುಕೇಳದೆ ಇವೆಲ್ಲ ಹೇಗೆ ಬಂತು? ಎನ್ನುವ ನಿಮ್ಮ ಅನುಮಾನಕ್ಕೆ ಉತ್ತರ ಈ ಮಿಷನ್‌ಲರ್ನಿಂಗ್‌ ಕೋರ್ಸ್‌. ಅದೆಲ್ಲವೂ ನೀವು ಜಾಲಾಡಿದ್ದರ ಫ‌ಲ.

ನಿಮ್ಮ ಕಂಪ್ಯೂಟರ್‌ ಮೌಸ್‌ನ ಪ್ರತಿಯೊಂದು ಚಲನೆ, ನಿಲುಗಡೆಯ ಮೇಲೆ ಹದ್ದಿನ ಕಣ್ಣಿರುತ್ತದೆ. ಲಿಂಕ್ಡ್ ಇನ್‌ ಸಮೀಕ್ಷೆ ಪ್ರಕಾರ, ನಂ.1 ಉದ್ಯೋಗ ಮಷಿನ್‌ ಲರ್ನಿಂಗ್‌ ಇಂಜಿನಿಯರ್‌. ಕಂಪ್ಯೂಟರ್‌ ಪ್ರೋಗ್ರಾಮ್ ಗಳನ್ನು ಅಧ್ಯಯನನಡೆಸುವ ಬುದ್ಧಿಶಾಲಿ ಕೆಲಸವಿದು. ನಮ್ಮ ಬ್ಯಾಂಕ್‌ಗಳಿಗೆ ಆನ್‌ಲೈನ್‌ ವಂಚನೆ ಅಥವಾ ಮನಿ ಲಾಂಡರಿಂಗ್‌ ಬಗ್ಗೆ ತಕ್ಷಣ ಹೇಗೆ ಗೊತ್ತಾಗುತ್ತದೆ ಎಂದು ನೀವು ಕೇಳಿದರೆ ಇದರ ಹಿಂದೆ ಮಿಷಿನ್‌ ಲರ್ನಿಂಗ್‌ ಇಂಜಿನಿಯರ್‌ಗಳ ಚಾಕಚಕ್ಯತೆಯಿರುತ್ತದೆ ಎಂದೇ ಹೇಳಬಹುದು.

ದಿನಕ್ಕೆ 350 ಕೋಟಿ : 2018 ಆಗಸ್ಟ್‌ ರಿಂದ 2019ರ ಆಗಸ್ಟ್‌ವರೆಗೆ ಇಂಟರ್‌ನೆಟ್‌ ಬಳಸಿ ಶೋಧಕಾರ್ಯಚರಣೆ ಮಾಡುವವರ ಸಂಖ್ಯೆ 450 ಕೋಟಿ. ಪ್ರತಿ ಸೆಕೆಂಡ್‌ಗೆ ಏನಿಲ್ಲವೆಂದರೂ 35 ಸಾವಿರ ಸರ್ಚ್‌ಗಳ ಸಂಸ್ಕರಣೆನಡೆಯುತ್ತಿರುತ್ತದೆ. ದಿನವೊಂದಕ್ಕೆ 350 ಕೋಟಿ. ವರ್ಷಕ್ಕೆ 1.2 ಲಕ್ಷ ಕೋಟಿ. ಪ್ರತಿವರ್ಷ ಮನುಷ್ಯ ಸಂಕುಲ ಆನ್‌ಲೈನ್‌ನಲ್ಲಿ ವ್ಯಯಿಸುವ ಕಾಲವನ್ನು ಒಟ್ಟುಮಾಡಿದರೆ ಒಂದು ಶತಕೋಟಿ ವರ್ಷವಾಗುತ್ತದೆ! ಇದರ ಅರ್ಥ ಪ್ರತಿಯೊಬ್ಬರ ಹುಡುಕಾಟದ ಜಾಡು ಹಿಡಿದು ಅವರು ಹೀಗೆ ಎಂದು ಕಣಿ ಹೇಳುವುದಕ್ಕೆಎಷ್ಟೊಂದು ಕಷ್ಟ ಎಂಬುದನ್ನು ಊಹೆ ಮಾಡಿ. ಮೆಷಿನ್‌ ಲರ್ನಿಂಗ್‌ ಬಳಕೆ ಮತ್ತು ಅನ್ವಯದ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಇದು ಭವಿಷ್ಯದ ಬಹು ದೊಡ್ಡ ಉದ್ಯೋಗದಾತ ಎಂಬುದರಲ್ಲಿ ಎರಡು ಮಾತಿಲ್ಲ.

ಅಮೆರಿಕದ ಒಂದು ಸಂಸ್ಥೆಯ ಹೇಳಿಕೆಯಂತೆ, ಮುಂದಿನ 10 ವರ್ಷಗಳಲ್ಲಿ ಈ ಕ್ಷೇತ್ರದವಹಿವಾಟು15 ಶತಕೋಟಿ ಡಾಲರ್‌ ತಲುಪುವ ನಿರೀಕ್ಷೆಇದೆ. ಮೆಷಿನ್‌ ಲರ್ನಿಂಗ್‌ ಮತ್ತು ಕೃತಕ ಬುದ್ಧಿಮತ್ತೆ ಒಂದೇ ನಾಣ್ಯದ ಎರಡು ಮುಖಗಳು. ಸದ್ಯದ ಮಟ್ಟಿಗೆವಿಶ್ವಮಟ್ಟದಲ್ಲಿ ಗ್ರಾಹಕ ಸೇವಾ (ಕಸ್ಟಮರ್‌ ಸರ್ವಿಸ್‌) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಒಳಗಡೆ ಇವೆರಡರ ಬಳಕೆ ಹೆಚ್ಚಾಗಿದೆ. ಮುಂದಿನ ವರ್ಷದಾಂತ್ಯದೊಳಗೆ ಶೇಕಡ 90% ರಷ್ಟು ಗ್ರಾಹಕ ಸೇವೆಗಳು ಮೆಷಿನ್‌ ಲರ್ನಿಂಗ್‌ ಎಂಜಿನಿಯರ್‌ಗಳ ಮೇಲೆಯೇ ಅವಲಂಬಿಸಲಿವೆ ಎಂದು ಅಂದಾಜು ಮಾಡಲಾಗಿದೆ.

ಜೆ.ಪಿ.ಮೊರ್ಗನ್‌, ನೆಟ್ ಫ್ಲೀಕ್ಸ್ ಫ್ಲಿಪ್ ಕಾರ್ಟ್, ಅಮೆಜಾನ್‌ , ಗೂಗಲ್ ಮೈಕ್ರೋ ಸಾಫ್ಟ್ ನಂಥ ಬಹುದೊಡ್ಡ ಕಂಪನಿಗಳು ಸುಮಾರು ಎರಡುವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಮುಖ್ಯವಾಗಿ, ಮೆಷಿನ್‌ ಲರ್ನಿಂಗ್‌ ಸ್ಟಾಟರ್ಜಿ , ಕ್ಲೌಡ್‌ ಮೆಷಿನ್‌ ಲರ್ನಿಂಗ್‌ ಇಂಜಿನಿಯರಿಂಗ್‌, ಮೆಷಿನ್‌ ಲರ್ನಿಂಗ್‌ ಸ್ಟುಡಿಯೋ ಮೊದಲಾದವುಗಳನ್ನು ಆರಂಭಿಸಿ ಬಹಳಷ್ಟು ಉದ್ಯೋಗ ಅವಕಾಶಗಳನ್ನು ಒದಗಿಸಿವೆ.

ಅರ್ಹತೆ ಏನು? : ಮೆಷಿನ್‌ ಲರ್ನಿಂಗ್‌ನಲ್ಲಿ ಈ ಎಲ್ಲಾ ವಿಚಾರಗಳು ಇರುತ್ತವೆ. ಬೇಸಿಕ್ಸ್‌ ಆಫ್ಪೈ ತಾನ್‌, ಸ್ಪಾರ್ಕ್‌ ಮತ್ತು ಸ್ಟ್ಯಾಟಿಸ್ಟಿಕ್ಸ್‌, ಡೀಪ್‌ ಲರ್ನಿಂಗ್‌ ಆಲ್ಗರಿದಮ್ಸ್ ಡಾಟಾ ಮಾಡೇಲಿಂಗ್‌ ವಿತ್‌ ಪೈತಾನ್‌, ಫೀಚರ್ಸ್‌ ಎಂಜಿನಿಯರಿಂಗ್‌ ಅಪ್ಲೆ„ಡ್‌ ಮಶೀನ್‌ ಲರ್ನಿಂಗ್‌, ಬಿಲ್ಡ್ ಫೌಂಡೇಶನಲ್‌ ಎಂ ಎಲ್‌ ಮಾಡೆಲ್ಸ್ ಇನ್‌ ಪೈತಾನ್‌ ಸ್ಟ್ಯಾಟಿಸ್ಟಿಕ್ಸ್‌, ಪ್ರೋಗ್ರಾಮಿಂಗ್‌ ಅಂಡ್‌ ಆಲ್ಗರಿದಮ್ಸ್ ಸೂಪರ್ವೆಸ್ಡ್ ಲರ್ನಿಂಗ್‌, ಅಪ್ಲಿಕೇಶನ್ಸ್‌ ಆಫ್ ಮಶೀನ್‌ ಲರ್ನಿಂಗ್‌ ಲೈಕ್‌ ಫೇಸ್‌ ಡಿಟೆಕನ್‌, ಸ್ಪೀಚ್‌ ರೆಕಗ್ನಿಶನ್‌ ಡಿಸ್ಕ್ರಿಪ್ಟಿವ್‌ ಅನಲೈಟಿಕ್ಸ್‌ ಹೀಗೆ ಮುಂತಾದವು ಇರುತ್ತದೆ. ಹೀಗಾಗಿ, ಕನಿಷ್ಠ ಎಂಜಿನಿಯರಿಂಗ್‌ನಲ್ಲಿ (ಯಾವುದೇ ವಿಭಾಗದಲ್ಲಿ) ಪದವಿ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದರೆ ಮೆಷಿನ್‌ ಲರ್ನಿಂಗ್‌ ಕೋರ್ಸ್‌ ಸುಲಭ ವಾಗುತ್ತದೆ.

ಸರ್ಟಿಫಿಕೇಟ್‌ ಕೋರ್ಸ್‌ ಕಲಿಸುವ ಸರ್ಕಾರಿ ವಿದ್ಯಾಸಂಸ್ಥೆಗಳು ಹೀಗಿವೆಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌, ಬೆಂಗಳೂರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಬೆಂಗಳೂರು ಇಂಟರ್‌ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್ಇ ನ್‌ಫ‌ರ್‌ವೆುಷನ್‌ ಟೆಕ್ನಾಲಜಿ ಬೆಂಗಳೂರು ಮೆಷಿನ್‌ ಲರ್ನಿಂಗ್‌ ಸರ್ಟಿಫಿಕೇಟ್‌ ಕೋರ್ಸ್‌ ಕಲಿಸುವ ಖಾಸಗಿ ವಿದ್ಯಾಸಂಸ್ಥೆಗಳು ಬೆಂಗಳೂರಿನ ಮಣಿಪಾಲ್‌ ಪ್ರೋ ಲರ್ನ್, ಮೈ ಟೆಕ್ಟ್ರ , ಇಟೇಂಜ್‌, ಸ್ಪ್ರಿಂಗ್‌ ಪೀಪಲ್ ಸಿಂಪ್ಲಿ ಲರ್ನ್, ಲರ್ನ್ ಬೇ ಗಳಲ್ಲಿ ಹೇಳಿ ಕೊಡಲಾಗುತ್ತದೆ.

 

ವಿಜಯ್‌ ಕುಮಾರ್‌ ಎಚ್‌.ಕೆ

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.