ಹಳೆಯ ಹೊಸದಿನಗಳ ಬ್ಯಾಲೆನ್ಸ್ ಶೀಟ್‌! : ಹೊಸ ವರ್ಷಕ್ಕೆ ಈಗಲೇ ಪ್ಲಾನ್‌ ಮಾಡ್ಕೊಳ್ಳಿ…


Team Udayavani, Dec 22, 2020, 7:31 PM IST

ಹಳೆಯ ಹೊಸದಿನಗಳ ಬ್ಯಾಲೆನ್ಸ್  ಶೀಟ್‌! :  ಹೊಸ ವರ್ಷಕ್ಕೆ ಈಗಲೇ ಪ್ಲಾನ್‌ ಮಾಡ್ಕೊಳ್ಳಿ…

ನೀನೊಬ್ಬ ಒಳ್ಳೆಯ ಡ್ರೈವರ್‌ ಅನ್ನಿಸಿಕೊಳ್ಳಬೇಕಾದರೆ, ಗಾಡಿಯನ್ನು ಮುಂದಕ್ಕೆ ಓಡಿಸುವಷ್ಟೇ ಚುರುಕಾಗಿ ರಿವರ್ಸ್‌ ತೆಗೆದುಕೊಳ್ಳಲೂ ಬರಬೇಕಾಗುತ್ತದೆ. ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವಾಗಿನ ಒಂದು ಒಳ್ಳೆಯ ಬ್ಯಾಲೆನ್ಸೇ ಅದ್ಭುತ ಡ್ರೈವಿಂಗ್‌!

ಸಿಂಹಕೂಡ ತಾನು ನಡೆದುಬಂದ ದಾರಿಯನ್ನು ಆಗಾಗ್ಗೆ ತಿರುಗಿ ನೋಡುತ್ತದೆ. ನಾನು ಎಷ್ಟು ದೂರ ನಡೆದೆ? ಈ ದಾರಿಯುದ್ದಕ್ಕೂ ಏನಿತ್ತು? ಏನಿರಲಿಲ್ಲ? ಎಂಬುದನ್ನು ತಿಳಿಯಲು ಮಾಡಿಕೊಳ್ಳುವ ಒಂದು ಸಣ್ಣ ಟೆಸ್ಟ್ ಅದು. ನಮ್ಮಪ್ಪ- “ಯಾವ ವಸ್ತುವೇ ಆಗಿರಲಿ, ಅದನ್ನು ತಿಪ್ಪೆಗೆ ಹಾಕಿದ್ರೂ ಲೆಕ್ಕ ಇಡಬೇಕು’ ಅಂತ ಹೇಳ್ತಿದ್ರು. ವಚನಕಾರರು- “ಹಿಂದಣ ಹೆಜ್ಜೆಯನ್ನರಿತಲ್ಲದೆ ಮುಂದಣ ಹೆಜ್ಜೆಯನ್ನು ಇಡಲಾಗದು’ ಎಂದಿದ್ದ ಮಾತು ಈ ಸಂದರ್ಭದಲ್ಲಿ ಬಿಟ್ಟೂಬಿಡದೆ ನೆನಪಾಗುತ್ತದೆ.

ಇದನ್ನೆಲ್ಲಾ ಯಾಕೆ ಹೇಳ್ತೀದೀನಿ ಅಂದರೆ- ಮತ್ತೂಂದು ಹೊಸ ವರ್ಷ ಒಂದೊಂದೇ ಹೆಜ್ಜೆ ಇಡುತ್ತಾ ಹತ್ತಿರಾಗುತ್ತಿದೆ. ಇಂಥ ಸಂದರ್ಭದಲ್ಲಿ, ಕಳೆದು ಹೋಗುತ್ತಿರುವ ವರ್ಷದ ಹೊಸ್ತಿಲ ಮೇಲೆ ಕೂತು, ಹೊರಟು ಹೋದ ದಿನಗಳನ್ನುಕೆದಕುತ್ತಾ, ಸುಮ್ಮನೇಕಳೆದು ಹೋದದ್ದೆಷ್ಟು? ನಮಗೆ ದಕ್ಕಿದ್ದೆಷ್ಟು? ಅಂತ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ.

ಮುಂದೆ ನಡೆಯುವವನಿಗೆ ಆ ದಿನಗಳು ಕೊಡುವ ಅನುಭವ ಬೇಕಾಗುತ್ತದೆ. ಹಿಂದೆ ನೋಡಿಕೊಳ್ಳುವವನಿಗೆ ಮುಂದಿನ ದಿನಗಳಲ್ಲಿ ಇಡಬೇಕಿರುವ ಹೆಜ್ಜೆಗಳಕುರಿತು ಒಂದು ಪ್ಲಾನ್‌ ಇರಬೇಕಾಗುತ್ತದೆ. ಬಿಡು, ನಾನು ಹೇಗೋ ಬದುಕಿಕೊಳ್ತೀನಿ ಅನ್ನುವವರ ಬಗ್ಗೆ ಚಿಂತಿಸಬೇಕಿಲ್ಲ. ಆದರೆ, ಹೀಗೆಯೇ ಬದುಕಬೇಕು ಅಂದುಕೊಳ್ಳುವವರು, ನಮ್ಮ ಭವಿಷ್ಯದ ದಿನಗಳಲ್ಲಿ ಇರಬೇಕಾದದ್ದು ಯಾವುದು? ಇರಬಾರದ್ದು ಯಾವುದು? ಎಂಬುದೊಂದು ಪಟ್ಟಿ ತಯಾರಿಸಿ ಇಟ್ಟುಕೊಳ್ಳಬೇಕು.

ದಿನವೇ ಶುಭದಿನವು… :

ಹಾಗೆ ನೋಡಿದರೆ, ಪ್ರತಿದಿನವೂ ಹೊಸದೇ! ಪ್ರತಿಕ್ಷಣವೂ ಒಳ್ಳೆಯದೇ.ಕೆಲವರು ಈ ದಿನವೇ ಶುಭದಿನವು ಅನ್ನುತ್ತಾಕೆಲಸ ಆರಂಭಿಸಿ ಯಶಕಾಣುತ್ತಾರೆ. ಅದು ಟೂ ಗುಡ್‌! ಇನ್ನು ಕೆಲವರು ಒಂದುಕೆಲಸವನ್ನು ಇಂಥದೇ ದಿನದಲ್ಲಿ, ಇಷ್ಟೇ ಸಮಯದಲ್ಲಿ ಆರಂಭಿಸಬೇಕು ಎಂದು ಕಾಯುತ್ತಾರೆ. ಅದನ್ನು ಕೂಡ ತಪ್ಪೆನ್ನಲು ಸಾಧ್ಯವಿಲ್ಲ.ಕಾರಣ, ಅವರವರ ನಂಬಿಕೆ ಅವರಿಗೆ ದೊಡ್ಡದು. ಗಮನಾರ್ಹ ಸಂಗತಿ ಎಂದರೆ- ಹೀಗೆ ಕಾದು ಕಾದು ಶುರುವಿಟ್ಟುಕೊಂಡ ಹಲವು ಕೆಲಸಗಳಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿದೆ. ಹಾಗೊಂದು ವೇಳೆ ನೀವು “ಒಂದು ಶುಭ ದಿನಕ್ಕಾಗಿ’ ಹುಡುಕುತ್ತಿದ್ದರೆ ಹೀಗೆ ಮಾಡಿ. ಕ್ಯಾಲೆಂಡರ್‌ ಬದಲಾವಣೆಯ ಮೊದಲ ದಿನವನ್ನು ಆಯ್ದುಕೊಳ್ಳಿ. ಮುನ್ನೂರ ಅರವತ್ತೈದು ದಿನಗಳ ಒಂದು ಪ್ಯಾಕನ್ನುಕೈಯಲ್ಲಿಟ್ಟುಕೊಂಡು ಪ್ರತಿಯೊಂದನ್ನೂ ಸಾರ್ಥಕವಾಗಿ ಬಳಸಿಕೊಳ್ಳುತ್ತಾ ಹೊರಡಿ.

ಉಳಿದಿದ್ದೆಷ್ಟು? ಜಾರಿದ್ದೆಷ್ಟು? :

ಮಳೆ, ಗಾಳಿ, ಬಿಸಿಲು, ಚಳಿ ಈ ಯಾವುದರಲ್ಲಿ ಏನೇ ವ್ಯತ್ಯಾಸವಾದರೂ,ಕಾಲ ನಿಲ್ಲುವುದಿಲ್ಲ. ಅದುಕೊಟ್ಟು ಹೋಗುವ ಉಡುಗೊರೆಗಳು ಮತ್ತುಕಲೆಗಳು ಮಾತ್ರ ಉಳಿಯುತ್ತವೆ.ಕಾಲದ ಹರಿವಿನಿಂದ ತುಂಬಿಕೊಂಡಬೊಗಸೆಯಲ್ಲಿ ಉಳಿದಿದ್ದುಮತ್ತು ಜಾರಿದ್ದನ್ನು ಲೆಕ್ಕ ಹಾಕಿಕೊಳ್ಳಬೇಕು. ಜಾರಿ ಹೋಗಿದ್ದರಲ್ಲಿ ಬೇಕಾದ್ದೆಷ್ಟು? ಉಳಿದಿದ್ದರಲ್ಲಿ ಬೇಡವಾದದ್ದೆಷ್ಟು? ನೋಡಿಕೊಳ್ಳಿ. ಒಂದು ಸಣ್ಣ ಅವಲೋಕನ, ನಾಳೆಯ ದಿನಗಳಿಗೆ ಒಂದು ಗೈಡ್‌ ಆಗುತ್ತದೆ. ಕಳೆದ ವರ್ಷ ಮೊದಲ ದಿನ ತೂಕ ಇಳಿಸಬೇಕು ಅಂದುಕೊಂಡಿದ್ದೆ. ಅದುಸಾಧ್ಯವಾಯಿತಾ? ಅವಳನ್ನು ಮರೆಯುವ ನಿರ್ಧಾರ ಮಾಎಇದ್ದೆ. ಅದರಲ್ಲಿ ಯಶ ಸಿಕ್ಕಿತಾ? ಸಣ್ಣ ಉಳಿತಾಯ ಮಾಡಬೇಕೆಂದಿದ್ದೆ, ಅದು ಸಾಧ್ಯವಾಯಿತಾ?… ಹೀಗೆ ನೂರಾರು ಇರುತ್ತವೆ. ಬೇಡವಾದ್ದನ್ನು ಡಿಲೀಟ್‌ ಮಾಡಿ. ಬೇಕಾದ್ದನ್ನು ಜತನ ಮಾಡಿಕೊಳ್ಳಿ.

ಹೊಸ ದಿನ- ಹೊಸ ನಿರ್ಧಾರ :

ಬಹುತೇಕರ ಮನಸ್ಸಿನಲ್ಲಿ ಈ ವರ್ಷ ನಾನು ಏನೆಲ್ಲಾ ಮಾಡಬೇಕು ಅನ್ನುವುದರ ಬಗ್ಗೆ ಪ್ರತಿವರ್ಷವೂ ಒಂದು ಪ್ಲಾನ್‌ ಸಿದ್ಧವಾಗಿರುತ್ತದೆ. ಅಷ್ಟೇ ಏಕೆ, ಮೊದಲ ದಿನ ಅದು ಯಶಸ್ವಿಯಾಗಿಜಾರಿಯಾಗುತ್ತದೆ. ಎರಡನೇ ಮತ್ತು ಮೂರನೇ ದಿನವೂಕೂಡ ಯಶಸ್ವಿ ಆಟವೇ. ಆದರೆ ನಾಲ್ಕನೇ ದಿನ ಸ್ವಲ್ಪಕುಂಟುತ್ತದೆ.ಐದನೇ ದಿನ ಸ್ವಘೋಷಿತ ರಜಾ. ಆರನೇ ದಿನ ಮತ್ತೆ ಪ್ರಯತ್ನ ಶುರುವಾಗುತ್ತದೆ. ಆದರೆ ಪೂರ್ತಿಯಶಸ್ಸಾಗುವುದಿಲ್ಲ! ಹದಿನೈದು ದಿನಕಳೆಯುವ ಹೊತ್ತಿಗೆ ಹೊಸ ವರ್ಷದ ಮೊದಲದಿನ ಮಾಡಿಕೊಂಡಿದ್ದ ಸಂಕಲ್ಪಗಳು ಮರೆತೇ ಹೋಗಿರುತ್ತವೆ. ಇದನ್ನು ಆರಂಭ ಶೂರತ್ವ ಅನ್ನುತ್ತಾರೆ.

ನಮ್ಮಲ್ಲಿ ಹೆಚ್ಚಿನವರು ಆರಂಭಶೂರರು. ಮೊದಲ ದಿನದ ನಿರ್ಧಾರವೇ ವರ್ಷವಿಡೀ ಉಳಿಯಬೇಕು. ಹಾಗೆ ಬದುಕುವುದು ಸುಲಭವಲ್ಲ. ಹಾಗಂತಕಷ್ಟಕೂಡ ಅಲ್ಲ. ಈ ವರ್ಷ ಖಂಡಿತ ಈ ಬಾರಿ ನನಗೊಂದು ರ್‍ಯಾಂಕ್‌ ದಕ್ಕುತ್ತದೆ. ಅಪ್ಪ- ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಸಂಸಾರಕ್ಕೆ ಇನ್ನಷ್ಟು ಸಮಯಕೊಡ್ತೀನಿ. ಈ ವರ್ಷದಲ್ಲಿ ಇಷ್ಟೆಲ್ಲವನ್ನುಓದಿ ಮುಗಿಸಬೇಕು. ಇನ್ಮೆàಲೆ ಖಂಡಿತ ಬೆಳಗ್ಗೆ ಐದಕ್ಕೇ ಎದ್ದು ವಾಕ್‌ ಹೊರಡಬೇಕು, ಸಿಗರೇಟ್‌ ಬಿಡಬೇಕು, ಮನೆಯ ಜವಾಬ್ದಾರಿ ತಗೋಬೇಕು… ಈ ತರಹದ ಪ್ಲಾನ್‌ಗಳು ಎಲ್ಲರ ಮನಸ್ಸಿನಲ್ಲಿರುತ್ತವೆ. ಅವನ್ನೆಲ್ಲಾ ಜಾರಿಗೆ ತರುವ ಗಟ್ಟಿ ಮನಸ್ಸು ಜೊತೆಗಿರಬೇಕು. ಹೊಸ ಸಂಕಲ್ಪಗಳನ್ನು ಈಡೇರಿಸುವಂಥ ಮನಸ್ಥಿತಿಯನ್ನು ನಿಮ್ಮದಾಗಿಸಿಕೊಳ್ಳಲು, ಮಾನಸಿಕವಾಗಿ ಈ ಕ್ಷಣದಿಂದಲೇ ಸಿದ್ಧರಾಗಿ. ಇಷ್ಟರೆಲ್ಲಾ ಜೊತೆಯಾಗುವ ಹೊಸ ವರ್ಷ ನಿಮಗೆ ಶುಭವನ್ನು ತರಲಿ, ಹೆಜ್ಜೆಹೆಜ್ಜೆಗೂ ಗೆಲುವನ್ನು ಕೊಡಲಿ

 

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.