ಅಜ್ಜಿ ಇಲ್ವಾ? 4ಜಿ ಇದ್ಯಾ?


Team Udayavani, Apr 10, 2018, 4:26 PM IST

ajji-ilva.jpg

ಇನ್ನೇನು ಬೇಸಿಗೆ ರಜೆ ಶುರುವಾಗೋ ಸಮಯ. ರಜೆಗಾಗಿ ಈಗಿಂದಲೇ ಯೋಜನೆ ಹಾಕಿಕೊಂಡಿರುವ ಪಾಲಕರು ಮಕ್ಕಳ ಬೇಸಿಗೆ ರಜೆಯ ಸದುಪಯೋಗತೆಗಾಗಿ ಹಾತೊರೆಯುತ್ತಿರುತ್ತಾರೆ. ಸಮ್ಮರ್‌ ಕ್ಯಾಂಪ್‌, ಸಂಗೀತ-ನೃತ್ಯ ತರಗತಿ ಇನ್ನೂ ಕಂಡು ಕೇಳರಿಯದ ತರಗತಿಗಳಿಗೆಲ್ಲಾ ಸೇರಿಸಿರುತ್ತಾರೆ. ಇವೆಲ್ಲವುದರ ನಡುವೆ ಅಜ್ಜಿ ಮನೆ ಎಂಬ ಸಾರ್ವಕಾಲಿಕ ಸಮ್ಮರ್‌ ಕ್ಯಾಂಪ್‌ ಮರೆತುಹೋಗುತ್ತಿದೆ!

ಎಲ್ಲೋ ಒಂದು ಮೂಲೆಯಲ್ಲಿ ಅಜ್ಜಿ- ತಾತನ ನೋಡುವ, ಊರಿಗೆ ತೆರಳುವ ಶೆಡ್ನೂಲ್‌ ಸಿದ್ಧವಾಗಿರುತ್ತದಷ್ಟೆ. ನಮಗೆಲ್ಲ ಅಜ್ಜಿಮನೆಗೆ ತೆರಳ್ಳೋದಂದ್ರೆ ಅಮಿತಾನಂದ! ಅದೂ ಅಜ್ಜಿಮನೆ ಬಹಳಷ್ಟು ದೂರದಲ್ಲಿ ಇದ್ದರಂತೂ ನಮ್ಮ ಪ್ರಯಾಣಕ್ಕೆ ಮತ್ತಷ್ಟು ಹುರುಪು- ಉತ್ಸಾಹ ತಂದಿರುತ್ತದೆ. ಸುದೀರ್ಘ‌ ಬಸ್‌ ಪರ್ಯಟನೆಯಲ್ಲಿ ಸಿಗೋ ಹತ್ತಾರು ಊರುಗಳು, ಹಸಿರ ಸಿರಿ, ಎಲ್ಲವೂ ತನ್ಮಯತೆಯ ಧನ್ಯತಾಭಾವ ಮೂಡಿಸುತ್ತಿತ್ತು.

ಬೇಸಿಗೆ ರಜೆ ಬಂತೆಂದರೆ ನಮ್ಮ ಮೊದಲ ಆಯ್ಕೆ ಅಜ್ಜಿಮನೆಯೇ ಆಗಿತ್ತು. ಅದಕ್ಕಾಗಿ ಮನೆಯಲ್ಲಿ ವಸ್ತು- ವಸ್ತ್ರಾದಿಗಳ ಜೋಡಿಸಿ ಒಂದು ಪ್ಲಾಸ್ಟಿಕ್‌ ಚೀಲ ಉಬ್ಬುವಷ್ಟು ಸರಂಜಾಮು ತುಂಬಿ ಊರಿಗೆ ಒಂದು ತಿಂಗಳ ಮಟ್ಟಿಗೆ ಟಾಟಾ ಹೇಳುತ್ತಿದ್ದೆವು. ದಾರಿಯಲ್ಲಿ ರಾಜಗಾಂಭೀರ್ಯದಿಂದ ಹೋಗೋವಾಗ ಅಕ್ಕಪಕ್ಕದ ಮನೆಯವರಿಗೂ ಗೊತ್ತಾಗಿಬಿಡುತ್ತಿತ್ತು.

ಅಜ್ಜಿ ಎನ್ನುವ ಸಕಲ ತಜ್ಞೆ: ತುಳುವಿನಲ್ಲಿ ಒಂದು ಗಾದೆ ಇದೆ. “ಇಲ್ಲಗೊಂಜಿ ಅಜ್ಜಿ, ತೆಲ್ಲವುಗೊಂಜಿ ಬಜ್ಜಿ’ (ಮನೆಗೊಂದು ಅಜ್ಜಿ, ದೋಸೆಗೊಂದು ಚಟ್ನಿ) ಅಂತ. ಅಜ್ಜಿಯ ಮುಗ್ಧತೆ, ಅಪಾರ ಅನುಭವದ ಜ್ಞಾನ, ಪದೇಪದೇ ಕಾಡೋ ಮರೆವು, ಮೊಮ್ಮಕ್ಕಳ ಮೇಲಿರೋ ಅದಮ್ಯ ವಾತ್ಸಲ್ಯ ಅಜ್ಜಿಯ ಪ್ರಾಮುಖ್ಯ ಏರಿಸಿಬಿಟ್ಟಿರುತ್ತದೆ. ತಿಂಗಳ ಪುಟ್ಟ ಮಗುವನ್ನು ಕೂಡ ನಾಜೂಕಾಗಿ ಎತ್ತಿಕೊಂಡು,

ಸ್ನಾನ- ಪಾನ ಮಾಡಿಸಿ, ಜೋಕಾಲಿಯಲ್ಲಿ ಜೋಗುಳ ಹಾಡಿಸುವ ಅಪೂರ್ವ ಚೈತನ್ಯ ಅಜ್ಜಿಗೆ ಕರತಲಾಮಲಕ ಎಂದರೆ ತಪ್ಪಾಗದು. ತಾಯಿ ಎಷ್ಟೇ ಶಾಸ್ತ್ರೀಯ ಧಾಟಿಯಲ್ಲಿ ಜೋಗುಳ ಹಾಡಿದರೂ ಮಲಗದ ಮಗು ಅಜ್ಜಿಯ ಬರೀ, ಜೋಯಿ -ಜೋಯಿ’ ಎನ್ನುವ ಆಲಾಪನೆಗೆ ಪವಡಿಸೋದು ಅಚ್ಚರಿಯೇ. ಅಜ್ಜಿಯ ಪ್ರೀತಿಯ ಮಡಿಲಲ್ಲಿ ಬೆಳೆದ ಮಕ್ಕಳು, ಅಜ್ಜಿಯ ಒಂಟಿತನದ ವ್ಯಾಕುಲತೆಯನ್ನು ತಮಗರಿವಿಲ್ಲದೆ ಓಡಿಸಿರುತ್ತಾರೆ.

ಅಜ್ಜಿಮನೆ ದಾರಿಯಲ್ಲಿ: ಅಂಕು ಡೊಂಕು ರಸ್ತೆಯಲ್ಲಿ, ಗುಡ್ಡ ದಿಬ್ಬಗಳ ಮೇಲೆ ಬಳುಕುತ್ತ ಬಾಗುತ್ತ ಒಂಚೂರು ಬಸವಳಿಯದೆ ತೆರಳುವ ಬಸ್‌ ಯಾನ ಅವಿಸ್ಮರಣೀಯ. ಅಲ್ಲಲ್ಲಿ ಸಿಗುವ ದೇಗುಲಗಳು, ಅದರ ದ್ವಾರಗಳು, ಮೈಲುಗಲ್ಲುಗಳು ಬಸ್ಸಿಗೆ ಅಭಿಮುಖವಾಗಿ ಬೀಸೋ ಗಾಳಿಯೊಡನೆ ಮಾತಾಡುತ್ತಿರುವಂತೆ ಭಾಸವಾಗುತ್ತಿತ್ತು. ವಿಟ್ಲ ಸ್ಟಾಪ್‌ ತಲುಪಿದಾಗ ಬಸ್ಸಿನ ಒಳಗಿದ್ದವರಿಗೆ ಲಾಲಿ, ಬಾದಾಮ್‌ ಎಂಬ ಕೂಗು. ಬಿಸಿಲಿನ ಬೇಗೆ ತಂಪೆರೆಯಲು ಶೀತಲ ಐಸ್‌ ಸ್ಟಿಕ್ಸ್!

ಬಸ್‌ ಸದಾ ರಶ್‌ ಇರೋ ಕಾರಣ ನಮ್ಮಂಥ ಚಿಳ್ಳೆ- ಪಿಳ್ಳೆಗಳಿಗೆ ಡ್ರೈವರ್‌ ಅಣ್ಣನ ಹತ್ತಿರದ ಗೇರ್‌ ಬಾಕ್ಸ್ ಹತ್ತಿರ ಕೂರುವ ಭಾಗ್ಯ. ಆಗಾಗ್ಗೆ ಬಿಸಿ ಅನುಭವ ಕೊಡುತ್ತಿದ್ದರೂ ಏಳುವಂತಿಲ್ಲ, ಹೇಳುವಂತಿಲ್ಲ !   ಭೀಮ ಗಾತ್ರದ ಬಸ್‌ ಆಳಕ್ಕಿಳಿದು, ಏರಿದಾಗ ನಮ್ಮ ಸ್ಟಾಪ್‌ ಬಂತೆಂದು ಅರ್ಥವಾಗುತ್ತಿತ್ತು. ಮನೆಗೆ ಬಂದಾಗ ಅಜ್ಜಿ “ನೀವು ಯಾವ ಬಸ್ಸಲ್ಲಿ ಬಂದಿದ್ದು? ರಶ್‌ ಇತ್ತಾ? ಇವನೇನು ಸಣಕಲಾಗಿದ್ದಾನೆ?’ ಎಂದೆಲ್ಲ ಹೇಳಿ ಶರಬತ್‌ ಕೈಗಿಡುವಾಗ ಅದಕ್ಕೊಂದು ವಿಶಿಷ್ಟ ರುಚಿ ಬಂದಿರುತ್ತದೆ.

ನಮ್ದೇ ಹಾವಳಿ: ಇನ್ನೇನು, ಅಜ್ಜಿಮನೆಗೆ ಬಂದಾಯ್ತಲ್ಲ ನಮ್ಮದೇ ಜಗತ್ತು ಇದು ಎನ್ನುವ ಭಾವನೆ. ಬೆಳಗ್ಗೆ ಪಕ್ಕದ ಗುಡ್ಡಕ್ಕೆ ಸವಾರಿ. ಅಲ್ಲಿದ್ದ ಕರಂಡೆಕಾಯಿ, ಮುಳ್ಳುಕಾಯಿ, ಪುನರ್ಪುಳಿ, ಪುಚ್ಚೆಕಾಯಿ, ಅಬುಕ, ನೇರಳೆ ಹೀಗೆ ಕಾಡುಹಣ್ಣುಗಳ ಆಪೋಷನಕ್ಕೆ ನಮ್ಮ (ವಾ)ನರ ಸೈನ್ಯ ದಾಂಗುಡಿ ಇಡುತ್ತಿತ್ತು. ಗೇರು ಬೀಜ ಸಿಕ್ಕಿದರೆ ಸ್ವಲ್ಪ ಸುಟ್ಟು ತಿಂದರೆ ಉಳಿದಿದ್ದು ದುಗ್ಗಣ್ಣನ ಅಂಗಡಿಯ ದುಗ್ಗಾಣಿಗೆ ಸೀಮಿತ!

ಇನ್ನು ಹುಣಸೆ ಸಿಕ್ಕಿದರೆ ಅದನ್ನು ತಿಂದು ಬೀಜ ಸುಟ್ಟು ಪುಳಿಕಟ್ಟೆ ಅಂತ ಹೆಸರಿಟ್ಟು ಕಟ-ಚಟ್‌ ಜಗಿಯುವಾಗ ಹಲ್ಲಿಲ್ಲದ ಅಜ್ಜಿಗೆ ಎಲ್ಲಿಲ್ಲದ ಮತ್ಸರ!  “ಬಿಸಿಲಿಗೆ ಹೊರಹೋಗ್ಬೇಡ್ರೋ, ಏನಾದ್ರೂ ಗಾಳಿ-ಗೀಳಿ ಸೋಕಿದ್ರೆ ಕಷ್ಟ’ ಅನ್ನುವ ಮಾತು ಒಂದೆರಡು ದಿನಕ್ಕಷ್ಟೇ ವೇದವಾಕ್ಯವಾಗಿರುತ್ತಿತ್ತು. ಮನೆಯ ಹಿತ್ತಲಲ್ಲಿ ಕಟ್ಟಿದ ಉಯ್ನಾಲೆಯಲ್ಲಿ ಜೋರಾಗಿ ಜೀಕಾಡುವಾಗಲೂ ಅಷ್ಟೆ.

ಬಾಲ್ಯ ಅತಿಮಧುರ ಎನ್ನುವ ಪರಿಕಲ್ಪನೆ ಮೂಡಿರಲಿಕ್ಕಿಲ್ಲ. ಇನ್ನು ಊರಿನಲ್ಲಿ ಏನಾದರೂ ಕಾರ್ಯಕ್ರಮ ಇದ್ದರಂತೂ ಈ ಮಕ್ಕಳ ಸೈನ್ಯ, ಊಟಕ್ಕೆ ಹಾಜರ್‌. ಅಜ್ಜಿಮನೆಯಿಂದ ತೆರಳುವಾಗ ಅಳುವಿನ ಜತೆ, ಅಜ್ಜಿ ತಲೆ ನೇವರಿಸಿ ತಮ್ಮ ಕೈಯ ಗಂಟಲ್ಲಿದ್ದ ನಾಲ್ಕು ಚಿಲ್ಲರೆ ಕಾಸು ಕೈಗಿತ್ತಾಗ ನಮಗಾಗೋ ಭಾವಪರವಶತೆಗೆ ಎಣೆಯಿಲ್ಲ. 

4ಜಿ ದುನಿಯಾದಲ್ಲಿ ಅಜ್ಜಿ: ಈಗ ಅಜ್ಜಿಮನೆ ಎನ್ನುವ ವಿಚಾರ ಸ್ವಲ್ಪ ಮಟ್ಟಿಗೆ outdated. ಅಜ್ಜಿಮನೆಯಲ್ಲಿ ಅಜ್ಜಿ ಇಲ್ಲದಿದ್ದರೂ ಪರವಾಗಿಲ್ಲ , 4ಜಿ ನೆಟ್‌ವರ್ಕ್‌ ಇರಲೇಬೇಕು ಎನ್ನುವ ಠರಾವು ಈಗಿನ ಜನಾಂಗದ್ದು. ಅಜ್ಜಿಮನೆಯಲ್ಲಿ ವರ್ಷಕೊಮ್ಮೆ ನಡೆಯುವ ಯಾವುದೇ ಸಮಾರಂಭಕ್ಕೆ ತೆರಳುವುದೂ ಒಂದು ಹೊರೆಯಂತೆ ಕಾಣಿಸುತ್ತಿರುವುದು ವಿಷಾದನೀಯ.

ಅದಲ್ಲದೆ ತಂದೆ- ತಾಯಿ ಕೂಡ ಯಾಂತ್ರಿಕ ಬದುಕಿನಲ್ಲಿ ಮುದುಡಿ, ಮಕ್ಕಳನ್ನೂ ಅದೇ ವಾತಾವರಣದಲ್ಲಿ ಬೆಳೆಸಿದಾಗ ಅವರಲ್ಲೂ ಜಡತ್ವ ಅಂಟಿಕೊಂಡಿರುತ್ತದೆ. ಆಧುನಿಕತೆಯ ಕಾಲದ ಅಲೆಯಲ್ಲಿ ಅಜ್ಜಿಯ ಪ್ರೀತಿ ತುಂಬಿದ ಮಾತುಗಳ ಸಂಚಿ ಸದ್ದಿಲ್ಲದೆ ಕೊಚ್ಚಿಹೋಗುತ್ತಿರುವುದು ಖೇದ ಸಂಗತಿ. ಯೋಚಿಸಬೇಕಾದ್ದು ಬಹಳಷ್ಟಿದೆ ಅಲ್ವಾ?

* ಸುಭಾಶ್‌ ಮಂಗಳೂರು

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.