ಒಮ್ಮೆ ಆ ನಗುವಾ ಬಿಸಾಕು… ವಿರಹದ ಹಾಳೆ ಮೇಲೆ ಗೀಚಿದ ಪತ್ರ


Team Udayavani, Aug 1, 2017, 2:20 PM IST

01-JOSH-8.jpg

ನಿನ್ನನ್ನು ನೋಡಲು ಎಷ್ಟೆಲ್ಲಾ ಕಷ್ಟಪಡುತ್ತೀನಿ ಗೊತ್ತಾ? ನೀನು ಮನೆಯಿಂದ ಹೊರಗೆ ಬರೋದೇ ಕಡಿಮೆ. ವಾರದಲ್ಲಿ ಎರಡೇ ದಿನ: ಸೋಮವಾರ ಸಂತೆಗೆ, ಶನಿವಾರ ದೇವಸ್ಥಾನಕ್ಕೆ ಅಂತ ಬರುತ್ತೀಯಾ, ಆವಾಗ ನನಗೆ ಏನೇ ಕೆಲಸವಿದ್ದರೂ ಬಿಟ್ಟು ಓಡಿ ಬರುತ್ತೇನೆ…

ಪೂರ್ಣಿ……. 
ತಪ್ಪು ತಿಳಿದುಕೊಬೇಡ, ನಾನು ನಿನ್ನನ್ನು  ಪ್ರೀತಿಯಿಂದ “ಪೂ’, “ಪೂರ್ಣಾ’, “ಪೂರ್ಣಿ’ ಅಂತ ಕರೆಯುತ್ತೇನೆ; ಪ್ಲೀಸ್‌ ಇದು ಪ್ರೇಮಪತ್ರವಲ್ಲ, ನನ್ನ ಮನದ ಭಾವನೆಗಳ ಕಿರುಹೊತ್ತಿಗೆ.  ಇವತ್ತಿನವರೆಗೂ ನಿನ್ನನ್ನು ಮಾತಾಡಿಸೋಕೆ ತುಂಬಾ ಯತ್ನಿಸಿದ್ದೇನೆ, ನೀನೇನೋ ಯಾವಾಗಲೂ ನಿನ್ನ ಒಬ್ಬಳೇ ಗೆಳತಿಯ ಜೊತೆಗೆ ಇರುತ್ತೀಯಾ. ಎಷ್ಟು ಧೈರ್ಯಮಾಡಿ ಮಾತಾಡಿಸಬೇಕೆಂದರೂ ನೀನು ಹತ್ತಿರ ಬಂದ ತಕ್ಷಣ ಏನ್‌ ಆಗುತ್ತೋ ಸುಮ್ಮನೆ ನೋಡುತ್ತಾ ನನ್ನನ್ನೇ ನಾನು ಮರೆತುಬಿಡ್ತೀನಿ. ಮನಸಲ್ಲಿ ಇರೋದನ್ನು ಹೇಳಲೇಬೇಕು ಅನಿಸಿದ್ದರಿಂದ ಅದಕ್ಕೆ ಇವತ್ತು ಪತ್ರ ಬರೀತಿದ್ದೀನಿ. ನಾನು ಎರಡು ದಿನ ಕಾಲೇಜಿಗೆ ಬರಲ್ಲ, ನಿನ್ನ ನಿರ್ಧಾರವನ್ನು ನಾಡಿದ್ದು ತಿಳಿಸು. ದಯವಿಟ್ಟು ಮರೆಯಬೇಡ. ನಿನ್ನ ಮಾತು ಏನೇ ಆಗಿದ್ದರೂ ನಾನು ಒಪ್ಪಿಕೊಳ್ತೀನಿ, ಪ್ಲೀಸ್‌ ಮಾತಾಡಿಸೋಕೆ ಮರೀಬೇಡ.

ನಿನ್ನ ನೆನಪು ಪುಟ್ಟ ಮಗುವಿನಂಥದ್ದು, ತನಗೆ ಇಷ್ಟಬಂದಂತೆ ಗೀಚುತ್ತದೆ. ಮರಳಿನಲ್ಲಿ ತನಗಿಷ್ಟ ಬಂದಂತೆ ಮನೆ ಕಟ್ಟುತ್ತದೆ. ತನ್ನಿಷ್ಟದಂತೆ ನಡೆಯುತ್ತದೆ. ನಾನಂತೂ ನಿನ್ನ ಮುಗ್ಧತೆ ಕಂಡೇ ನಿನಗೆ ಸೋತಿದ್ದೇನೆ. ಅಷ್ಟೇ ಮುಗ್ಧವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಆದರೆ, ನಿನ್ನನ್ನೇ ಯಾಕೆ ಇಷ್ಟೊಂದು ಪ್ರೀತಿಸ್ತಿದೀನೋ ಗೊತ್ತಿಲ್ಲ.

ನಿನ್ನನ್ನು ನೋಡಲು ಎಷ್ಟೆಲ್ಲಾ ಕಷ್ಟಪಡುತ್ತೀನಿ ಗೊತ್ತಾ? ನೀನು ಮನೆಯಿಂದ ಹೊರಗೆ ಬರೋದೇ ಕಡಿಮೆ. ವಾರದಲ್ಲಿ ಎರಡೇ ದಿನ: ಸೋಮವಾರ ಸಂತೆಗೆ, ಶನಿವಾರ ದೇವಸ್ಥಾನಕ್ಕೆ ಅಂತ ಬರುತ್ತಿಯಾ, ಆವಾಗ ನನಗೆ ಏನೇ ಕೆಲಸವಿದ್ದರೂ ಬಿಟ್ಟು ಓಡಿ ಬರುತ್ತೇನೆ. ನೀನು ನನ್ನ ನೋಡಿ ಒಮ್ಮೆಯಾದರೂ ನಗುತ್ತೀಯಾ ಎಂದು ಕಾದಿರುತ್ತೇನೆ. ನೀನು ನನ್ನ ನೋಡಿ ನಕ್ಕಾಗಲಂತೂ ನನ್ನೊಳಗೆ ನವಿಲೊಂದು ಕುಣಿದಾಡಿದ ಅನುಭವ. ಅದೇ ಖುಷಿಯಲ್ಲಿ ಹೇಗೋ ಮತ್ತೆ ಒಂದು ವಾರ ಕಳೆದು ಬಿಡುತ್ತೇನೆ.

ಇತ್ತೀಚೆಗೆ ಗುಡಿಗೆ ಹೋಗುವಾಗ, ಸಂತೆಗೆ ಬರುವಾಗಲೆಲ್ಲಾ ನನ್ನ ನೋಡಿ ನಿನ್ನ ಗೆಳತಿಗೆ ಏನೋ ಹೇಳುತ್ತಿಯಾ… ಒಂದು ದಿನ ನಾನು ಸಂತೆಗೆ ಬರದೇ ಇದ್ದಾಗ, ಅದನ್ನು ತಕ್ಷಣ ಗಮನಿಸಿ- “ಇವತ್ತು ಅವನು ಏಕೆ ಬಂದಿಲ್ಲ?’ ಎಂದು ಕೇಳಿದೆಯಂತೆ. ನಿಜ ಹೇಳಲಾ, ನಾನು ನಿನ್ನಷ್ಟು ಜಾಣನಲ್ಲ, ನಮ್ಮ ಕ್ಲಾಸ್‌ಗೆ ಹೊಸದಾಗಿ ಬಂದ ಗಣಿತ ಮೇಡಂಗೆ ನನ್ನ ಮೇಲೆ ಏನ್‌ ಕೋಪಾನೋ ಏನೋ, ಅವರು ನನಗೆ ಹೊಡೆದಾಗಲೆಲ್ಲಾ ನಿನ್ನ ಮುಖದಲ್ಲಿ ಅಸಮಾಧಾನ, ನೋವು ಎದ್ದು ಕಾಣುತ್ತಿತ್ತು.

ನೀನು ನಾಲ್ಕು ದಿನದಿಂದ ಕಾಲೇಜಿಗೆ ಬಂದಿಲ್ಲ ಎಂದು ಗೊತ್ತಾದಾಗ ಆ ಬಗ್ಗೆ ನಿನ್ನ ಗೆಳತಿಯನ್ನು ಕೇಳಿದೆ. ಪಾಪ ಕಣೋ, ಅವಳಿಗೆ ಹುಷಾರಿಲ್ಲ ಎಂದು ಹೇಳಿದಳು, ಅದಕ್ಕೇ ಮನಸ್ಸು ತಡೆಯದೇ ನಿಮ್ಮ ಮನೆಯ ಸುತ್ತಮುತ್ತ ಅಡ್ಡಾಡುತ್ತಿದ್ದೇ. ನಿಮ್ಮ ಅಣ್ಣ ನನ್ನನ್ನು ನೋಡಿ, “ಇಲ್ಲಿಗೆ ಯಾಕೆ ಬಂದೆಯೋ? ಯಾರನ್ನು ನೋಡಬೇಕಿತ್ತು?’ ಎಂದು ಕೇಳಿದ, ಏನು ಮಾಡಲೂ ತಿಳಿಯದೇ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಬಂದೆ. ಆದರೆ ಈಗ, ಹೇಳದೇ ಇರೋಕೆ ಆಗುತ್ತಿಲ್ಲ, ಒಂದು ವಾರದಿಂದ ಯೋಚಿಸಿ ಈ ಪತ್ರ ಬರೆದಿದ್ದೇನೆ. ನಿನ್ನ ಉತ್ತರ ಏನು ಹೇಳು… 

ಇಂತಿ ನಿನ್ನವನು
ಕಿರಣ ಪ ನಾಯ್ಕನೂರ

ಟಾಪ್ ನ್ಯೂಸ್

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.