ನಿರ್ಜನ ದ್ವೀಪದಲ್ಲಿ ಒಬ್ಬಂಟಿಯ ಪಾಡು
Team Udayavani, Mar 5, 2019, 12:30 AM IST
ಕೊರಿಯರ್ ಕಂಪನಿಯೊಂದರ ಉದ್ಯೋಗಿಯಾಗಿದ್ದ ಚಕ್ ನೋಲ್ಯಾಂಡ್ ಸದಾ ಕೆಲಸದ ನಿಮಿತ್ತ ಊರೂರು ಸುತ್ತುವ ವ್ಯಕ್ತಿ. ಒಮ್ಮೆ ಆತನಿದ್ದ ವಿಮಾನ ಅಪಘಾತಕ್ಕೊಳಗಾಗಿ ಪೆಸಿಫಿಕ್ ಸಮುದ್ರದಲ್ಲಿ ಜಲ ಸಮಾಧಿಯಾಗುತ್ತದೆ. ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗುತ್ತಾರೆ. ಆದರೆ, ಸಮುದ್ರಕ್ಕೆ ಬಿದ್ದ ಚುಕ್‌ನಿಗೆ ಅದೃಷ್ಟವಶಾತ್ ಗಾಳಿ ತುಂಬಿದ ಲೈಫ್ ರ್ಯಾಫ್ಟ್ ಒಂದು ಸಿಕ್ಕಿ, ಆತ ಅದನ್ನು ಅಪ್ಪಿಕೊಂಡು ತೇಲುತ್ತಾ ಮುಂದೆ ಹೋಗುತ್ತಾನೆ. ಒಂದಿಡೀ ರಾತ್ರಿ ಸಮುದ್ರದಲ್ಲಿ ತೇಲುತ್ತಾ ಸಾಗಿ, ಹಾಗೇ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಎಚ್ಚರವಾದಾಗ ಆತ ನಿರ್ಜನ ದ್ವೀಪವೊಂದರಲ್ಲಿ ಬಿದ್ದಿರುತ್ತಾನೆ.
ಬದುಕಿಗಾಗಿ ಅವನು ನಡೆಸುವ ತೀವ್ರ ಹೋರಾಟ ಅಲ್ಲಿಂದ ಶುರು. ಆತನಿಗೆ ವಿಮಾನದ ಅವಶೇಷಗಳು, ಸಹಯಾತ್ರಿಗಳ ಹೆಣಗಳು ಸಿಗುತ್ತವೆ. ಹೆಣಗಳನ್ನು ಆತನೇ ಮಣ್ಣು ಮಾಡುತ್ತಾನೆ. ಹಾಗೆ ಸಿಕ್ಕಿದ ವಸ್ತುಗಳು ಆತನನ್ನು ಕಂಗೆಡಿಸುತ್ತವೆ. ಒಂಟಿತನದಿಂದ ಹುಚ್ಚನಾದ ಆತ, ರಕ್ತದ ಕೈ ಅಚ್ಚಿನಿಂದ ಮನುಷ್ಯನ ಮುಖವೊಂದನ್ನು ಬಿಡಿಸಿ, ಅದಕ್ಕೆ “ವಿಲ್ಸನ್’ ಎಂದು ಹೆಸರಿಟ್ಟು, ಅದರೊಂದಿಗೆ ಮಾತಾಡಲು ತೊಡಗುತ್ತಾನೆ. ಹಸಿವು, ನೀರಡಿಕೆ, ಗಾಯ, ಒಂಟಿತನದಿಂದ ಜರ್ಜರಿತನಾದ ಚಕ್, ಆ ದ್ವೀಪದಿಂದ ಹೊರಗೆ ಬರಲು ಏನೇನು ಸಾಹಸ ಮಾಡುತ್ತಾನೆ ಎಂಬುದೇ “ಕಾಸ್ಟ್ ಅವೇ’ ಸಿನಿಮಾದ ಕತೆ. ಸಂಘ ಜೀವನ ಎಂಬುದು ಮಾನವನಿಗೆ ಎಷ್ಟು ಮುಖ್ಯ ಮತ್ತು ಒಂಟಿಯಾಗಿದ್ದಾಗ ಮನಸ್ಸಿನಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.
ಕಾಸ್ಟ್ ಅವೇ (2000)
ನಿರ್ದೇಶನ: ರಾಬರ್ಟ್ ಝೆಮೆಕಿಸ್
ಅವಧಿ: 143 ನಿಮಿಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆ ಸೆರೆ
Bengaluru: ಅನಧಿಕೃತ ಕಾಲ್‌ಸೆಂಟರ್ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ
Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.