ಸುಮ್ನಿರು ಅಂತಿದೀನಿ, ಹೃದಯ ಕೇಳ್ತಿಲ್ಲ….


Team Udayavani, Nov 20, 2018, 6:00 AM IST

shutterstock123493636.jpg

ನೀನು ಪೋಸ್ಟ್  ಮಾಡಿದ ಫೋಟೊಗಳಿಗೆಲ್ಲಾ  ಚಾಚೂ ತಪ್ಪದೆ ಲೈಕ್‌, ಕಮೆಂಟ್‌ ಮಾಡುತ್ತೇನೆ. ನನ್ನ ಲೈಕ್‌, ಕಮೆಂಟ್‌ ಇರದ ಒಂದಾದರೂ ಫೋಟೊ ನಿನ್‌ ಫೇಸ್‌ಬುಕ್‌ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು. 

ನಿನ್ನ ನೆನಪುಗಳು ಇಷ್ಟು ನೋವುಂಟು ಮಾಡುತ್ತವೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ನಿನ್ನೊಂದಿಗೆ ಕಳೆದ ನೆನಪುಗಳು ಬಿಟ್ಟೂ ಬಿಡದೆ ಕಾಡುತ್ತಿವೆ. ಹಳೆಯ ದಿನಗಳನ್ನು ನೆನೆದರೆ ಮನಸ್ಸು ಭಾರವಾಗುತ್ತದೆ. 

ನಮ್ಮಿಬ್ಬರ ಭೇಟಿಯಾಗಿದ್ದು ಆಕಸ್ಮಿಕ ಘಳಿಗೆಯೊಂದರಲ್ಲಿ. ಅಂದು ಕಾಲೇಜು ಅಡ್ಮಿಶನ್‌ಗೆ ಅಂತ ಬಂದಿದ್ದಾಗ ನಿನ್ನನ್ನು ಮೊದಲ ಬಾರಿಗೆ ನೋಡಿದ್ದು. ಪೆನ್ನು ಮರೆತು ಬಂದಿದ್ದ ನಾನು, ನಿನ್ನನ್ನು ಮಾತನಾಡಿಸಲು ಅದೇ ಸರಿಯಾದ ನೆಪವೆಂದು ನಿನ್ನ ಬಳಿ ಪೆನ್ನು ಕೇಳಿದ್ದೆ . ನೀನು ಅದರ ಕ್ಯಾಪ್‌ ತೆಗೆದು, ಬರೀ ಪೆನ್ನನ್ನು ಮಾತ್ರ ನನ್ನ ಕೈಗಿಟ್ಟಿದ್ದು ಈಗಲೂ ನೆನಪಿದೆ. ನಾನು ಪೆನ್ನನ್ನು ಕಿಸೆಗೆ ಹಾಕಿಕೊಂಡು ಹೋಗಿಬಿಟ್ಟರೆ ಅಂತ ನಿನಗೆ ಅನುಮಾನವಾಗಿತ್ತಾ?

ನಿನ್ನ ಮುದ್ದು ಮುಖ ನೋಡಿದ ತಕ್ಷಣವೇ ನಾನು ನಿನಗೆ ಸೋತಿದ್ದೆ . ಬಾಳಸಂಗಾತಿ ನೀನೇ ಆಗಬೇಕು ಅಂತ, ಹೃದಯವು ಜೋಗುಳ ಹಾಡಿದರೆ ತೂಗುವ ಕೈ ನಿನದಾಗಿರಲಿ ಅಂತ ಮನಸ್ಸು ಬೇಡಿತು. ನಾನೊಬ್ಬ ಹುಚ್ಚು ಹುಡುಗ, ನಿನ್ನ ಮುಖ ಕಂಡಾಗ ಆಗುವ ಖುಷಿಯನ್ನು ಅಳೆಯುವ ಯಾವ ಮಾಪನವೂ ಇದುವರೆಗೆ ಸೃಷ್ಟಿಯಾಗಿಲ್ಲ. ಅಂದಿನಿಂದ ಚಂದಕ್ಕಿಂತ ಚಂದದ ನಿನ್ನ ನಗು ಮೊಗವ ನೋಡುತ್ತಾ ಕಲಿತಿದ್ದು ಪ್ರೇಮಪಾಠವೇ ಹೊರತು ಮತ್ತೇನನ್ನೂ ಅಲ್ಲ. 

ನಿನಗಾಗಿ ಪ್ರತಿದಿನವೂ ಕಾಲೇಜು ಗೇಟಿನಲ್ಲಿ ನಿಂತು ಕಾಯುವುದು, ಕ್ಲಾಸಿನಲ್ಲಿ ಕದ್ದು ಮುಚ್ಚಿ ನಿನ್ನನ್ನು ನೋಡುವುದೇ ಪೂರ್ಣ ಕೆಲಸವಾಗಿತ್ತು ನನಗೆ. ನಿನ್ನನ್ನು ಮಾತನಾಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫ‌ಲವಾದವು. ನಿನ್ನ ಬಗ್ಗೆ ಅಷ್ಟಾಗಿ ಗೊತ್ತಿರದ ನನಗೆ ನಿನ್ನನ್ನು ಮತ್ತೆ ಪರಿಚಯಿಸಿದ್ದು ಫೇಸುºಕ್‌ ಎಂಬ ಮಾಯಾಜಾಲ. 

ಫೇಸ್‌ಬುಕ್‌ನಲ್ಲಿ ನಿನ್ನನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ. ನೀನು ಪೋಸ್ಟ್  ಮಾಡಿದ ಫೋಟೊಗಳಿಗೆಲ್ಲಾ  ಚಾಚೂ ತಪ್ಪದೆ ಲೈಕ್‌, ಕಮೆಂಟ್‌ ಮಾಡುತ್ತೇನೆ. ನನ್ನ ಲೈಕ್‌, ಕಮೆಂಟ್‌ ಇರದ ಒಂದಾದರೂ ಫೋಟೊ ನಿನ್‌ ಫೇಸ್‌ಬುಕ್‌ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು. ಆದರೆ, ಇವನ್ನೆಲ್ಲ ನೀನು ನಿರ್ಲಕ್ಷಿಸುತ್ತಿರುವುದು ಅತೀವ ನೋವುಂಟು ಮಾಡುತ್ತಿದೆ. ಮನಸಿನ ಭಾವನೆಗಳನ್ನೆಲ್ಲ ನಿನ್ನೆದುರಿಗೆ ಬಿಚ್ಚಿ ಹೇಳಿ, ಪ್ರೇಮ ನಿವೇದಿಸಿಕೊಂಡಾಗ ನೀನು ಅದನ್ನು ನಯವಾಗಿ ತಿರಸ್ಕರಿಸಿದೆ. ಬದುಕಿನ ಬಗ್ಗೆ ಪಾಠವನ್ನೂ ಮಾಡಿದೆ. ಪ್ರೀತಿ-ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳಬೇಡ ಅಂತ ಬುದ್ಧಿವಾದ ಹೇಳಿದೆ.

ನೀನು ಹೇಳಿದ್ದೆಲ್ಲವೂ ಸರಿ ಇದೆ. ಅದು ನನಗೂ ಅರ್ಥವಾಗುತ್ತದೆ. ಆದರೆ, ಹೃದಯ ಕೇಳಬೇಕಲ್ಲ. ದಿನವೂ ನಿನ್ನನ್ನು ಧ್ಯಾನಿಸಿ ಪರಿತಪಿಸುತ್ತಿದೆ. ನಿನ್ನ ಪುಟ್ಟ ಹೃದಯದಲ್ಲಿ ನನಗೊಂದು ಜಾಗ ಬೇಕು. ಇದುವರೆಗೂ ಒಮ್ಮೆಯೂ ಸೋತಿಲ್ಲ ನಾನು. ಈಗ ನಿನಗೆ ಸೋತಿದ್ದೇನೆ, ನಿನ್ನಿಂದ ಸೋತಿದ್ದೇನೆ. ಪ್ಲೀಸ್‌, ನನ್ನ ಪ್ರೀತಿಯನ್ನು ಗೆಲ್ಲಿಸು. 

– ಅಂಬಿ 

ಟಾಪ್ ನ್ಯೂಸ್

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.