ಆಪರೇಷನ್‌ ಮಿಯಾಂವ್‌!


Team Udayavani, Oct 3, 2017, 1:10 PM IST

jo1.jpg

ಇಬ್ಬರು ಹೊಂಚು ಹಾಕಿ ಎನ್‌.ಸಿ.ಸಿ. ಸರ್‌ ಟಾಯ್ಲೆಟ್‌ಗೆ ಹೋಗುವುದನ್ನೇ ಕಾದು ಕುಳಿತಿದ್ದರು. ಸರ್‌ ಒಳಗೆ ಹೋಗಿದ್ದನ್ನು ನೋಡಿ ಹೊರಬದಿಯ ವೆಂಟಿಲೇಷನ್‌ನಿಂದ ಬೆಕ್ಕನ್ನೆತ್ತಿ ಟಾಯ್ಲೆಟ್‌ ಒಳಗೆಸೆದಿದ್ದರು…

ಆಗ ನಾನು ಬೆಂಗಳೂರಿನ ಎಂ.ಇ.ಎಸ್‌. ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದೆ. ಪ್ರಿನ್ಸಿಪಾಲ್‌ ಎಂ.ಪಿ.ಎಲ್‌ ಶಾಸ್ತ್ರಿಯವರ ದಕ್ಷ ಆಡಳಿತ, ಪ್ರೊಫೆಸರ್‌ಗಳ ಮಾರ್ಗದರ್ಶನ, ಸೂಕ್ತ ಪ್ರವಚನ, ಸುಸಜ್ಜಿತ ಲ್ಯಾಬ್‌, ಶಿಸ್ತಿನ ವಾತಾವರಣವಿದ್ದುದರಿಂದ ನಮ್ಮ ಕಾಲೇಜು ಬೆಂಗಳೂರಿನಲ್ಲಿ 2ನೇ ಸ್ಥಾನ ಗಳಿಸಿತ್ತು. ನಮ್ಮದೊಂದು ಕಿರಿಕ್‌ ಪಾರ್ಟಿ ಇತ್ತು. ಓದಿನಲ್ಲಿ ಮುಕ್ಕಾಲಾದರೂ ಚೇಷ್ಟೆಯಲ್ಲಿ ನೂರ್ಪಾಲು!

ಕಾಲೇಜ್‌ ಲೈಫ್ ಎಂಜಾಯ್‌ ಮಾಡಬೇಕು ಎಂಬ ಆಸೆಗೋ, ಕೆಟ್ಟ ಕುತೂಹಲಕ್ಕೋ ನಾನೂ ಆಗಾಗ ಅವರ ಕಲ್ಯಾಣ ಗುಣಗಳ ಚಟುವಟಿಕೆಯಲ್ಲಿ ಭಾಗಿಯಾಗಿರುತ್ತಿದ್ದೆ. ನಮ್ಮ ಎನ್‌ಸಿಸಿ ಮಾಸ್ತರರು ಕೊಂಚ ಸ್ಟ್ರಿಕುr. ನೀಟಾಗಿ ಪರೇಡ್‌ ನಡೆಯದಿದ್ದರೆ ಸಿಟ್ಟಾಗುತ್ತಿದ್ದರು. ಒಂದು ದಿನ ಪರೇಡ್‌ನ‌ಲ್ಲಿ ನಮ್ಮ ಪಾರ್ಟಿಯ ಇಬ್ಬರು ಪುನಃ ಪುನಃ ತಪ್ಪು ಹೆಜ್ಜೆ ಹಾಕಿದರು. ಸಣ್ಣಪುಟ್ಟದ್ದಕ್ಕೂ ಮಾಸ್ತರರದು ದಂಡಂ ದಶಗುಣಂ ಭವೇತ್‌ ಸಿದ್ಧಾಂತ.

ಇಬ್ಬರಿಗೂ ಮೊಣಕಾಲುಗಂಟಿಗೆ ದೊಣ್ಣೆಯಿಂದ ಬಾರಿಸಿ ಮತ್ತೆ ಮತ್ತೆ ಪರೇಡ್‌ ಮಾಡಿಸಿದರು. ಎಲ್ಲರ ಮುಂದೆ ಪೆಟ್ಟು ತಿಂದ ನಮ್ಮ ಹೀರೋದ್ವಯರಿಗೆ ಮಾಸ್ತರರ ಮೇಲೆ ತುಂಬಾ ಕೋಪ ಬಂತು. ಎನ್‌.ಸಿ.ಸಿ. ಸರ್‌ಗೆ ಏನಾದರೂ ಕಿರಿಕ್‌ ಮಾಡಿ, ಈಗ ಆಗಿರುವ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಎಲ್ಲರೂ ಸೇರಿ ಒಂದು ಐಡಿಯಾ ಮಾಡಿದರು. ಮಾಸ್ತರರಿಗೆ ಬೆಕ್ಕು ಅಂದ್ರೆ ಭಯ ಅನ್ನೋದು ಗೊತ್ತಿತ್ತು.

ಅದನ್ನೇ ಅಸ್ತ್ರವಾಗಿಸಿಕೊಂಡು ಒಂದು ಬೆಕ್ಕನ್ನು ಹಿಡಿದು ತಂದರು. ಸ್ಟಾಫ್ರೂಮ್‌ಗೆ ಹೊಂದಿಕೊಂಡಂತಿದ್ದ ಟಾಯ್ಲೆಟ್‌ಗೆ ಹೊರಗಿನಿಂದ ಸಣ್ಣದಾಗಿ ಗಾಳಿಯಾಡಲು ವೆಂಟಿಲೇಷನ್‌ ಬಿಟ್ಟಿದ್ದರು. ಆಗೆಲ್ಲ ಅದಕ್ಕೆ ಗ್ಲಾಸ್‌ ಹಾಕುತ್ತಿರಲಿಲ್ಲ. ನಮ್ಮ ಕಿರಿಕ್‌ಪಾರ್ಟಿಯ ಇಬ್ಬರು ಹೊಂಚು ಹಾಕಿ ಎನ್‌.ಸಿ.ಸಿ. ಸರ್‌ ಟಾಯ್ಲೆಟ್‌ಗೆ ಹೋಗುವುದನ್ನೇ ಕಾದು ಕುಳಿತಿದ್ದರು. ಸರ್‌ ಒಳಗೆ ಹೋಗಿದ್ದನ್ನು ನೋಡಿ ಹೊರಬದಿಯ ವೆಂಟಿಲೇಷನ್‌ನಿಂದ ಬೆಕ್ಕನ್ನೆತ್ತಿ ಟಾಯ್ಲೆಟ್‌ ಒಳಗೆಸೆದಿದ್ದರು.

ಮರುಕ್ಷಣದಲ್ಲಿ ಸರ್‌ ಚೀರಾಟ, ಹೋರಾಟದೊಂದಿಗೆ ಪ್ಯಾಂಟ್‌ ಏರಿಸಿಕೊಂಡು ಎದ್ದೆನೋ ಬಿದ್ದೆನೋ ಎಂದು ಹೊರಗೋಡಿ ಬಂದರಂತೆ. ಪುಣ್ಯಕ್ಕೆ ಈ ಮಹತ್ಕಾರ್ಯ ನಡೆದ ದಿನ ನಾನು ಕಾಲೇಜಿಗೆ ಹೋಗಿರಲಿಲ್ಲ. ಮಾಸ್ತರರು ತಕ್ಷಣ ಪತ್ತೇದಾರ ಪುರುಷೋತ್ತಮನಂತೆ ಅಪರಾಧಿಗಳ ಶೋಧನೆಯಲ್ಲಿ ತೊಡಗಿದರು. ಈ ಮಹತ್ಕಾರ್ಯವನ್ನು ಕಣ್ಣಾರೆ ನೋಡಿದ್ದ ತೋಟದ ಮಾಲಿ ಗುಟ್ಟಾಗಿ ಅವರಿಗೆ ವಿಷಯ ತಿಳಿಸಿಬಿಡಬೇಕೇ? ಮರುದಿನ ನಮ್ಮ ಕಿರಿಕ್‌ ಪಾರ್ಟಿಯ ಆ ಇಬ್ಬರಿಗೂ ಮಧ್ಯಾಹ್ನ 12 ಗಂಟೆಯ ಬಿಸಿಲಿನಲ್ಲಿ ಕಾಲೇಜು ಮೈದಾನಕ್ಕೆ 50 ಸುತ್ತು ಓಡುವ ಶಿಕ್ಷೆ ಜಾರಿಯಾಗಿತ್ತು!

* ಕೆ. ಶ್ರೀನಿವಾಸರಾವ್‌ ಹರಪನಹಳ್ಳಿ

ಟಾಪ್ ನ್ಯೂಸ್

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.