ಪಾಸು-ಫೇಲು ಅಂಕ ಪಟ್ಟಿಗೆ, ಬದುಕಿಗಲ್ಲ!

ಡುಮ್ಕಿ ಹೇಳಿದ ಬದುಕಿನ ಫಿಲಾಸಫಿ

Team Udayavani, Jul 21, 2020, 1:21 PM IST

ಪಾಸು-ಫೇಲು ಅಂಕ ಪಟ್ಟಿಗೆ, ಬದುಕಿಗಲ್ಲ!

ಸಾಂದರ್ಭಿಕ ಚಿತ್ರ

ಗ್ರಾಮೀಣ ಭಾಗದಿಂದ ಬಂದವರಿಗೆ ಇಂಗ್ಲಿಷ್‌ ಅನ್ನೋದು ಪೆಡಂಭೂತ. ಎಷ್ಟೋ ಜನ ಫೇಲ್‌ ಆಗಲು ಮೂಲ ಕಾರಣವೇ ಇಂಗ್ಲಿಷ್‌. ಇವತ್ತು ಪ್ರತಿಷ್ಠಿತ ಕಂಪೆನಿಯ ಸಿ.ಇ.ಒ ಆಗಿರುವ ಗದಗಿನ ಸಿಕಂದರ್‌ ಸಾಬ್‌ ಮೀರಾನಾಯಕ್‌ ಅವರು ಎಸ್ಸೆಸ್ಸೆಲ್ಸಿಯಲ್ಲಿ ಫೇಲ್‌ ಆಗುವುದಕ್ಕೂ ಇಂಗ್ಲಿಷೇ ಕಾರಣ. ತಮ್ಮನ್ನು ಕಾಡಿದ ಇಂಗ್ಲಿಷನ್ನು ಮೆಟ್ಟಿ ನಿಂತು, ಬದುಕು ಕಟ್ಟಿಕೊಂಡ ಬಗೆಯನ್ನು ಅವರಿಲ್ಲಿ ಹೇಳಿಕೊಂಡಿದ್ದಾರೆ.

ಇಂಗ್ಲೀಷ್‌ ಇದೆಯಲ್ಲ, ಇದು ನನ್ನ ಬದುಕಿನ ದೊಡ್ಡ ಶತ್ರು. ದೇವರು ಈ ಭಾಷೆಯನ್ನು ಏಕೆ ಸೃಷ್ಟಿಸಿದನೋ… ಜೀವನದಲ್ಲಿ ಏನು ಬೇಕಾದರೂ ಮಾಡಬಹುದು. ಈ ಇಂಗ್ಲೀಷ್‌ ಕಲಿಯಲು ಆಗದು ಅಂತೆಲ್ಲ ಒಂದು ಸಂದರ್ಭದಲ್ಲಿ ನಾನು ತೀರ್ಮಾನ  ಮಾಡಿಬಿಟ್ಟಿದ್ದೆ. ಇಂಗ್ಲೀಷ್‌ ಭಾಷೆಯನ್ನ ವಿರೋಧ ಮಾಡಲೆಂದೇ ಕಾಲೇಜಲ್ಲಿ ಕನ್ನಡ ಬಳಗದ ಕಾರ್ಯದರ್ಶಿಯಾಗಿದ್ದೆ.

ಈ ಇಂಗ್ಲೀಷ್‌ ಭಯ ಈಗಿನದ್ದಲ್ಲ. ಗದುಗಿನ ಕೋಟಮಸಿಗಿ ಗ್ರಾಮದಲ್ಲಿ ಸೋಮೇಶ್ವರ ಪ್ರೌಢಶಾಲೆಗೆ ಸೇರಿದಾಗಿನಿಂದಲೂ ಇದೆ. ಆದರೆ ಇವತ್ತು ನಾನು
ಇಂಗ್ಲೀಷ್‌ ಭಾಷೆಯ ಜುಟ್ಟು ಹಿಡಿದು ಮಾತನಾಡುತ್ತೇನೆ. ದೇಶ, ವಿದೇಶಿಗರ ಜೊತೆ ಇಂಗ್ಲೀಷನಲ್ಲೇ ವ್ಯವಹಾರ ಮಾಡ್ತೇನೆ. ಬರೆಯುತ್ತೇನೆ. ಅದೆಲ್ಲ ಹೇಗಾಯ್ತು ಅಂದರೆ- ಆ ಒಂದು ಫೇಲ್‌ನಿಂದ. ಹಾಗಂತ ಬೇರೆ ವಿಷಯದಲ್ಲಿ ದೊಡ್ಡ ದೊಡ್ಡ ಅಂಕ ತೆಗೆಯುತ್ತಿದ್ದೆ ಅಂತೆಲ್ಲ ತಿಳಿಬ್ಯಾಡ್ರಿ. ಆವರೇಜ್‌ ಸ್ಟೂಡೆಂಟ್‌ ನಾನು. ಹತ್ತನೇ ಕ್ಲಾಸಲ್ಲಿದ್ದಾಗ ಈ ವರ್ಷ ಗಣಿತದಲ್ಲಿ ಡುಮ್ಕಿ ಹೊಡೀಬಹುದು ಅಂದ್ಕೊಂಡಿದ್ದೆ. ಆದರೆ, ಹೋಗಿದ್ದು ಇಂಗ್ಲೀಷ್‌. ಬರೀ ಐದೇ ಐದು ಅಂಕಗಳಿಂದ. ನಾಲಿಗೆ ಮೇಲೆ ನಿಲ್ಲದ ಆ ಇಂಗ್ಲೀಷ್‌ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು ಏಕೆಂದರೆ, ಪರೀಕ್ಷೇಲಿ ನನ್ನ ಪಕ್ಕದಲ್ಲಿದ್ದ ಗೆಳೆಯನ ಹತ್ತಿರ ಅಲ್ಪಸ್ವಲ್ಪ ನೋಡಿಕೊಂಡು ಬರೆದುಬಿಟ್ಟಿದ್ದೆ. ಪಾಸಾಗಲೇ ಬೇಕು ಎಂಬ ಆಸೆ, ಕಾಪಿ ಹೊಡೆಯಲು ಪ್ರೇರೇಪಿಸಿತ್ತು.

ಇಂಗ್ಲೀಷಲ್ಲಿ ಫೇಲಾದಾಗ ತುಂಬಾ ನೋವಾಯ್ತು. ನನ್ನ ಅಗದೀ ಗೆಳೆಯರೆಲ್ಲ ಪಾಸಾಗಿದ್ದರು. ನಾನು ಮಾತ್ರ ಫೇಲ್. ಬರೀ ಐದು ಮಾರ್ಕ್ಸ್ ಅಂತರದಲ್ಲಿ. ಮನೆಯಲ್ಲಿ ಅಪ್ಪ-ಅಮ್ಮಗೆ ಬೇಜಾರಾಗಿತ್ತು. ಅಪ್ಪ ಮೌಲಾ ಸಾಬ್‌ ಬಯ್ಯಲಿಲ್ಲ. ಗದರಲಿಲ್ಲ. ಬದಲಿಗೆ- ನೋಡಪ್ಪಾ, ಫೇಲಾಗಿದ್ದೀ. ಮುಂದೆ ಏನು ಮಾಡ್ತೀ ನೋಡು.. ಅಂದರು ಅಷ್ಟೇ. ನಾನು- “ಲಾರಿ ಓಡಿಸ್ತೀನಪ್ಪಾ’ ಅಂದೆ. ಆದರೆ ನಮ್ಮ ಕಾಕ- “ಬೇಡ, ಲಾರಿ ಓಡಿಸಿದರೆ ಏನೂ ಸಾಧಿಸಿದಂತೆ ಆಗೋಲ್ಲ. ಇನ್ನೊಮ್ಮೆ ಪರೀಕ್ಷೆ ಬರಿ’ ಅಂದರು. ಅಕ್ಟೋಬರ್‌ನಲ್ಲಿ ಪರೀಕ್ಷೆ. ಆತನಕ ಏನು ಮಾಡೋದು ಅಂತ ನಾನು ಗದಗದ ಸಿಜಿ ಬಾಗ್ಮಾರಾ ಬುಕ್‌ ಅಂಗಡೀಲಿ ಕೆಲಸ ಸೇರಿಕೊಂಡೆ.  ಹಾಗೂ ಹೀಗೂ ಪರೀಕ್ಷೆ ಬರೆದು ಪಾಸ್‌ ಆಗೋದೆ. ಆಮೇಲೆ ಪಿಯುಸಿ ಸೇರಿದೆ. ಎನ್‌ ಎಸ್‌ಎಸ್‌ ಸಂಪರ್ಕ ಹೆಚ್ಚಿತ್ತು. ಲೀಡರ್‌ ಶಿಪ್‌ ಕ್ವಾಲಿಟಿ ಬೆಳೆದಿತ್ತು. ಡಿಗ್ರಿಯಲ್ಲಿ ಸೆಕೆಂಡ್‌ ಕ್ಲಾಸ್‌ ಬಂದೆ. ಆದರೆ, ಇಂಗ್ಲೀಷ್‌ನ ಭಯ ಮಾತ್ರ ಹೋಗಿರಲಿಲ್ಲ. ಡಿಗ್ರಿಯಲ್ಲೂ ನನಗೆ ಇಂಗ್ಲಿಷ್‌ನಲ್ಲಿ ಬರೀ 35 ಅಂಕ. ಆಮೇಲೆ ಬಿಎಸ್‌ ಡಬ್ಲ್ಯೂ ಓದೋಕೆ ಮುಂದಾದೆ. ಅಷ್ಟರಲ್ಲಿ ನಮ್ಮ ಓಣಿಯಲ್ಲಿ ಸುಮಾರು ಜನಕ್ಕೆ ನೌಕರಿ ಸಿಕ್ಕಿ ಬಿಡ್ತು. ಆಗ ಅಪ್ಪನಿಗೆ ಕೋಪ ಬಂತು. “ಎಲ್ರೂ ನೌಕ್ರಿ ಹಿಡ್ದಾರ. ನಿನಗ್ಯಾಕೆ ಸಿಗಲಿಲ್ಲ’ ಅಂತ ರೇಗಿದರು. “ನಾನು ನೌಕರಿ ಹಿಡಿಯೋ ವಿದ್ಯಾಭ್ಯಾಸ ಮಾಡ್ತಿಲ್ಲ. ನೌಕರಿ ಕೊಡೋ ವಿದ್ಯಾಭ್ಯಾಸ ಮಾಡ್ತಿದ್ದೀನಿ’ ಅಂತ ಹೇಳಿದೆ.

ನನಗೆ ಮೊದಲಿಂದಲೂ ನೀರಿನ ಬಗ್ಗೆ ಮೋಹ. ಊರಲ್ಲಿ ನೀರಿಗೆ ಸಿಕ್ಕಾಪಟ್ಟೆ ಸಮಸ್ಯೆ ಇತ್ತು. ಹಾಗಾಗಿ, ನೀರಿನ ಮೇಲೆ ಕೆಲಸ ಮಾಡಿದರೆ ಏನಾದರೂ
ಮಾಡಬಹುದು ಅಂತ ಇತ್ತು. ಅಣ್ಣಾ ಹಜಾರೆ, ರಾಜೇಂದ್ರಸಿಂಗ್‌ ಅವರ ಲೇಖನಗಳನ್ನು ಓದಿ ಸ್ಫೂರ್ತಿ ತಗೊಂಡಿದ್ದೆ. ಸರ್ಕಾರದ ಸುಜಲಾ, ಜಲಾನಯನ
ಯೋಜನೆಯಲ್ಲಿ ಕೆಲಸ ಮಾಡಿದೆ. ನೀರ ಬಳಕೆ ಜ್ಞಾನ ಬಂತು. ಅಯ್ಯಪ್ಪ ಮಸ್ಕಿ ಜೊತೆ ಸೇರಿದೆ. ಮಳೆ ಕೊಯ್ಲು ತಂತ್ರಗಳ ಬಗ್ಗೆ ತಿಳಿಯಿತು.

ಹುಬ್ಬಳ್ಳಿಯ ದೇಶ ಪಾಂಡೆ ಫೌಂಡೇಶನ್‌ ತೆಕ್ಕೆಗೆ ಬಿದ್ದೆ. ಅಲ್ಲಿ ನವೀನ್‌ ಝಾ ಸಿಕ್ಕರು. ಗುರುವಾದರು. ಫೆಲೋಶಿಪ್‌ ಸಿಕ್ಕಿತು. ಆಗಲೂ ಇಂಗ್ಲೀಷ್‌ ಬರುತ್ತಿರಲಿಲ್ಲ.
ಕೊನೆಗೆ, ಭಯವನ್ನು ಜಾಡಿಸಿ, ಹಠಕ್ಕೆ ಬಿದ್ದು ಅಲ್ಲೇ ಇಂಗ್ಲೀಷ್‌ ಕಲಿತೆ. ನನ್ನ ಕಾಲ ಮೇಲೆ ನಾನು ನಿಂತೆ. ರೂರಲ್‌ ಡೆವಲಪ್‌ ಮೆಂಟ್‌ ಸೊಸೈಟಿ ಶುರು
ಮಾಡಿದೆ, ಅದರಡಿಯಲ್ಲೇ ಬೆಳೆದ ಸಂಕಲ್ಪ ರೂರಲ್‌ ಸೊಸೈಟಿಯ ಅಧ್ಯಕ್ಷನಾದೆ. ಸಂಕಲ್ಪ ವಾಟರ್‌ ಹಾರ್ವೆಸ್ಟಿಂಗ್‌ ಸಲ್ಯೂಷನ್‌, ಮನಸ್ಸಾಕ್ಷಿ ಪತ್ತಿನ ಸಹಕಾರಿ
ಸಂಘ ಆರಂಭಿಸಿ ಅಪ್ಪನಿಗೆ ಹೇಳಿದಂತೆ, ಈಗ ಸುಮಾರು 35 ಜನ ಕೆಲಸ ಕೊಟ್ಟಿದ್ದೀನಿ. ವಾರ್ಷಿಕ ವಹಿವಾಟು ಮೂರು ಕೋಟಿಗೂ ಅಧಿಕ.

ಡಿಗ್ರಿ ತನಕ ರಾಜ್ಯದ ಪ್ರವಾಸವನ್ನೇ ಮಾಡದ ನಾನು, ಇವತ್ತು ಜಮ್ಮು ಕಾಶ್ಮೀರ ಬಿಟ್ಟು ಮಿಕ್ಕೆಲ್ಲಾ ರಾಜ್ಯಗಳ ಹಳ್ಳಿ ಹಳ್ಳಿಯಲ್ಲಿ ಅಡ್ಡಾಡಿದ್ದೇನೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನ‌ಲ್ಲಿರುವ ದೊಡ್ಡ ಕ್ಲೈಂಟ್‌ಗಳ ಜೊತೆ ಮಾತನಾಡುತ್ತೇನೆ. ಅದೂ ನನ್ನ ಫೇಲ್‌ ಮಾಡಿಸಿದ ಇಂಗ್ಲೀಷ್‌ನಲ್ಲೇ. ರ್‍ಯಾಂಕ್‌, ಮಾರ್ಕ್‌ ಅನ್ನೋದು ಕೇವಲ ಅಂಕಪಟ್ಟಿ ತುಂಬೋಕೆ ಮಾತ್ರ. ಬದುಕಿಗಲ್ಲ ಅನ್ನೋದು ಅರ್ಥವಾಗಿದೆ. ಅಂಕವೇ ಬದುಕಲ್ಲ, ಬದುಕೋಕೆ ಯಾರೂ ಅಂಕ ಕೊಡಲ್ಲ.

 ಕೆ.ಜಿ.

ಟಾಪ್ ನ್ಯೂಸ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.