ಜನರು, ಶಿಳ್ಳೆ ಹಾಕಿದ್ದು ಚಪ್ಪಾಳೆ ತಟ್ಟಿದ್ದು  ನನ್ನ ಅಭಿನಯಕ್ಕಲ್ಲ!


Team Udayavani, May 9, 2017, 3:45 AM IST

08-JOSH-3.jpg

ಹಿಂತಿರುಗಿ ಓಡಿ ಪ‌ರದೆಯ ಹಿಂದೆ ಬಂದು ನಿಂತೆ. ಜನ ಸೀಟಿ ಹೊಡೆಯುತ್ತಿದ್ದರು. ಬರಿಯ ಒಂದೇ ಡೈಲಾಗಿಗೆ ನನಗೆ ಸಿಗುತ್ತಿರುವ ಈ ಮಟ್ಟಿಗಿನ ಪ್ರತಿಕ್ರಿಯೆ ಕಂಡು ಉಬ್ಬಿ ಹೋದೆ. ನಾನೂ ವರನಟ ರಾಜ್‌ಕುಮಾರ್‌ ಆಗಬಹುದೆನಿಸಿತು. ಎದುರಿಗೆ ಕಿಟ್ಟಣ್ಣ ದೂರ್ವಾಸನಂತೆ ನಿಂತಿದ್ದು ಕಂಡು ಅಂತರ್ಧಾನನಾದೆ!

1970ರ ಮಾತಿದು. ನನ್ನೂರು ಹರಪನಹಳ್ಳಿಯಲ್ಲಿ ಎಸ್‌.ಎಸ್‌.ಎಲ್‌.ಸಿ ಮುಗಿಸಿ ಬೆಂಗಳೂರಿನ ಎಂ.ಇ.ಎಸ್‌. ಕಾಲೇಜಿನಲ್ಲಿ ಪಿಯುಸಿಗೆ ಸೇರಿದ್ದೆ. ಪ್ರಾಂಶುಪಾಲರಾದ ಎಂ.ಪಿ.ಎಲ್‌. ಶಾಸ್ತ್ರಿಯವರ ಆದರ್ಶ, ಶಿಸ್ತು, ನಿಷ್ಠುರತೆಗಳೊಂದಿಗೆ ಅದ್ಭುತ ಪಾಠ ಮಾಡುವ ಪ್ರಾಧ್ಯಾಪಕರ ಸಮೂಹ ಎಲ್ಲವೂ ಇದ್ದರೂ ಏನೋ ಭಯ, ಏನೋ ಅಬ್ಬೇಪಾರಿತನ! ಮನೆಮಂದಿಯನ್ನೆಲ್ಲ ಬಿಟ್ಟು ದೂರದ ಬೆಂಗಳೂರಿಗೆ ಬಲಗಾಲಿಟ್ಟಾಗ ಸರೋವರದಿಂದ ದುಡುಮ್ಮನೆ ಸಾಗರಕ್ಕೆ ಜಿಗಿದ ಅನುಭವ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದವನಿಗೆ ಇಲ್ಲಿನ ಕಾನ್ವೆಂಟ್‌ ಕಂದಮ್ಮಗಳ ಓ.ಕೆ. ಯಾರ್‌, ಹಾಯ್‌, ಠುಸ್‌ಪುಸ್‌ಗಳು ಬೇಜಾನ್‌ ಭಯ ತರಿಸಿ, ಸಂತೆಯಲ್ಲಿ ಬೆತ್ತಲೆ ನಿಂತಂತಾಗಿತ್ತು!

 ಶೇಷಾದ್ರಿಪುರಂನ ಬಡಗನಾಡು ಹಾಸ್ಟೆಲ್‌ ವಾಸ. ಮೊದಮೊದಲು ಅಲ್ಲೂ ಅನಾಥಪ್ರಜ್ಞೆ, ಸೀನಿಯರ್‌ಗಳ ಕುತ್ಸಿತ ಮಾತು, ನಡವಳಿಕೆ, ಒಂದರ್ಥದ ರ್ಯಾಗಿಂಗ್‌. ಈ ಸಂದರ್ಭದಲ್ಲಿ ನನ್ನ ರಕ್ಷಣೆಗೆ ಬಂದವರು, ಕೈ ಹಿಡಿದು ನಡೆಸಿದವರು ನನಗಿಂತ 2 ವರ್ಷ ಸೀನಿಯರ್‌ ವಿದ್ಯಾರ್ಥಿಯಾಗಿದ್ದ ಬಿ. ಕೃಷ್ಣಮೂರ್ತಿ. ಇವರು ನಮ್ಮೂರಲ್ಲೇ ಜನಿಸಿದ ಸುಪ್ರಸಿದ್ದ ಹಾಸ್ಯ ಲೇಖಕ ಬಳ್ಳಾರಿ ಬೀಚಿಯವರ ಅಣ್ಣ ಹಯವದನರಾಯರ ಮೊಮ್ಮಗ. ಭಾಷಣ, ನಾಟಕ, ಕಲೆ ಇವರಿಗೂ ರಕ್ತಗತ. ಓದಿನೊಂದಿಗೆ ರಂಗಭೂಮಿಯ ನಂಟು, ಅಪ್ರತಿಮ ಕಲಾವಿದ. ಅದರಲ್ಲೂ ಅವರ ಅಂಗುಲಿಮಾಲನ ಪಾತ್ರ ವೈಭವ ಈಗಲೂ ನನ್ನ ಕಣ್ಣ ಪಾಪೆಯಲ್ಲಿ ರಿವೈಂಡ್‌ ಆಗುತ್ತಿರುತ್ತದೆ.

ಹೊಸ ವರ್ಷಾಚರಣೆ ಮುಗಿದು ಮರು ತಿಂಗಳಿನಲ್ಲಿಯೇ ಹಾಸ್ಟೆಲ್‌ ಡೇ ಯೋಜಿಸಿದ್ದೆವು. ಕಾರ್ಯಕ್ರಮಗಳ ಪಟ್ಟಿಯಲ್ಲಿ ಒಂದು ನಾಟಕ. ಅದರ ಹೆಸರು ಈಗ ನೆನಪಾಗುತ್ತಿಲ್ಲ. ನಮ್ಮ ಕೃಷ್ಣಮೂರ್ತಿ ಅರ್ಥಾತ್‌ ಕಿಟ್ಟಣ್ಣನೇ ನಿರ್ದೇಶಕ ಮತ್ತು ನಾಯಕ. ಅದರಲ್ಲೊಂದು 2 ನಿಮಿಷಗಳ ಪುಟ್ಟ ಪಾತ್ರ. ನಾಯಕಿಗೆ ನೃತ್ಯ ಕಲಿಸುವ ಮಾಸ್ಟರ್‌ನ ಪಾತ್ರ. ನಾಯಕಿಯ ತಾಯಿ ಸಂದರ್ಶಿಸುವ ಸನ್ನಿವೇಶ. ನನ್ನ ಕೇಡುಗಾಲವೋ ಅಥವಾ ಕಿಟ್ಟಣ್ಣನ ಪ್ರೀತಿಯ ದ್ಯೋತಕವೋ ಆ ಪಾತ್ರವನ್ನು ನಾನೇ ಮಾಡಬೇಕೆಂದು ಕಿಟ್ಟಣ್ಣ ದುಂಬಾಲು ಬಿದ್ದ, ಆಜಾnಪಿಸಿದ.

ನನಗೋ, ವೇದಿಕೆಯೆಂದರೆ ನಖಶಿಖಾಂತ ನಡುಕ. ಅದುವರೆಗೆ ಪ್ರಬಂಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದೆನಾದರೂ ಭಾಷಣ, ಅಭಿನಯಗಳಲ್ಲಿ ಶೂನ್ಯ ಅಂದ್ರೆ ಶೂನ್ಯ! ನಾನೂ ಅದೆಷ್ಟೇ ಬೇಡ ಬೇಡ ಅಂದರೂ ಕಿಟ್ಟಣ್ಣ ಸುತರಾಂ ಒಪ್ಪಲಿಲ್ಲ. ನಾಲ್ಕೈದು ಬಾರಿ ರಿಹರ್ಸಲ್‌ಗೆ ಎಳೆದೊಯ್ದು ತರಬೇತಿ ನೀಡಿದ. ನನ್ನ ಪಾತ್ರ ಹೀಗಿತ್ತು: ನಾನು ವಯ್ನಾರದಿಂದ ಹೆಲೆನ್‌ಳಂತೆ ಹಂಸಗಮನೆಯಾಗಿ ನಾಯಕಿಯ ತಾಯಿಯ ಮುಂದೆ ಹೋಗಬೇಕು. ಒಂದೆರಡೇ ಸಂಭಾಷಣೆಗಳು. ನಂತರ ಅದೇ ರೀತಿ ವಾಪಸ್‌ ಬರಬೇಕು. ಐದಾರು ಜನರ ನಡುವೆ ಹಾಗೂ ಹೀಗೂ ರಿಹರ್ಸಲ್‌ ಮಾಡಿ ತೋರಿಸಿದೆ.

ನಾಟಕದ ಸಮಯ ಬಂದೇ ಬಿಟ್ಟಿತ್ತು. ಆರಂಭವೂ ಆಯಿತು. ನನಗೆ ಕಚ್ಚೆ ಪಂಚೆ, ದೊಗಳೆ ಜುಬ್ಟಾ ಹಾಕಿ ನನ್ನ ಗುರುತು ನನಗೇ ಸಿಗಲಾರದಷ್ಟು ಮೇಕಪ್‌ ಮಾಡಿ ನಿಲ್ಲಿಸಿದ್ದರು. ಕನ್ನಡಿಯಲ್ಲಿ ನೋಡಿದಾಗ ಗೊಗ್ಗಯ್ಯ ಎನಿಸಿತು! ಬೆವರು ಹನಿಯಲಾರಂಭಿಸಿ ತೊಳ್ಳೆಗಳು ಅದುರುತ್ತಿದ್ದವು. ಇದೀಗ ನನ್ನ ಭರ್ಜರಿ ಎಂಟ್ರಿ! ವಯ್ನಾರದಿಂದ… ಅದನ್ನೆಲ್ಲಿಂದ ತರೋದು? ನಾನು ಥೇಟ್‌ ಎನ್‌.ಸಿ.ಸಿ ವಿದ್ಯಾರ್ಥಿಯಂತೆ ಲೆಫ್ಟ್- ರೈಟ್‌ ಗತಿಯಲ್ಲಿ ನಡೆಯುತ್ತಾ ನಾಯಕಿಯ ಅಮ್ಮನ ಮುಂದೆ ಹೋಗಿ ನಿಂತೆ.

“ನೀವೇ ಏನ್ರೀ ಮಾಸ್ತರರು? ಯಾವ ಯಾವ ಪ್ರಕಾರದ ನೃತ್ಯ ಹೇಳಿಕೊಡ್ತೀರಾ?’ ನನ್ನ ಉತ್ತರವಿಲ್ಲ. ಪುನಃ ಅವರೇ ಕೇಳಿದರು: “ಭರತನಾಟ್ಯ ಬರುತ್ತೇನ್ರೀ…?’ ಹೂಂ ಎಂದು ತಲೆಯಾಡಿಸಿದೆ. ಅದೊಂದನ್ನೇ ನಾನು ಅಭಿನಯಿಸಿದ್ದು. “ಸರಿ, ನಾಳೆಯಿಂದ ಪಾಠ ಶುರು ಮಾಡಿ”. ಅಲ್ಲಿಗೆ ನನ್ನ ಪಾತ್ರವಿದ್ದ ದೃಶ್ಯ ಮುಗಿಯಿತು. ಅಬ್ಟಾ ಬಚಾವಾದೆ ಎಂದುಕೊಂಡು ಒಮ್ಮೆ ಜನಸ್ತೋಮದೆಡೆಗೆ ನೋಡಿದೆ. ಜಗತ್ತೆಲ್ಲ ನನ್ನನ್ನೇ ದಿಟ್ಟಿಸುತ್ತಿದೆಯೆನಿಸಿತು. ಹಿಂತಿರುಗಿ ಓಡಿ ಪ‌ರದೆಯ ಹಿಂದೆ ಬಂದು ನಿಂತೆ. ಜನ ಸೀಟಿ ಹೊಡೆಯುತ್ತಿದ್ದರು. ಬರಿಯ ಒಂದೇ ಡೈಲಾಗಿಗೆ ಈ ಮಟ್ಟಿಗಿನ ಪ್ರತಿಕ್ರಿಯೆ ಕಂಡು ಉಬ್ಬಿ ಹೋದೆ. ನಾನೂ ವರನಟ ರಾಜ್‌ಕುಮಾರ್‌ ಆಗಬಹುದೆನಿಸಿತು. ಎದುರಿಗೆ ಕಿಟ್ಟಣ್ಣ ದೂರ್ವಾಸನಂತೆ ನಿಂತಿದ್ದು ಕಂಡು ಅಂತರ್ಧಾನನಾದೆ! ಆಮೇಲೆ ಗೊತ್ತಾಯಿತು. ಜನ ಶಿಳ್ಳೆ ಹೊಡೆದಿದ್ದು ನನ್ನ ಅಭೂತಪೂರ್ವ ಅಭಿನಯಕ್ಕಲ್ಲ ಅಂತ. ಹಿಂತಿರುಗಿ ಓಡುವಾಗ ಕಾಲಿಗೆ ಸಿಕ್ಕಿ ನನ್ನ ಪಂಚೆಯ ಕಚ್ಚೆ ಬಿಚ್ಚಿ ಉದುರಿತ್ತು. ಪಂಚೆ ಕೆಳಕ್ಕೆ ಉದುರಿದ ಮೇಲೆಯೇ ನಾನು ಸ್ಟೇಜಿನುದ್ದಕ್ಕೂ ನರ್ತಿಸಿದ್ದೆ! ನನ್ನ ಆ ವೇಷವನ್ನು ನೋಡಿಯೇ ಜನರು ಕೇಕೆ ಹಾಕಿ ಶೀಟಿ ಹೊಡೆದಿದ್ದರು.

ಅದೇ ಕೊನೆ. ಈ ಘಟನೆಯಾಗಿ 45 ವರ್ಷಗಳೇ ಕಳೆದುಹೋದವು. ಆವತ್ತಿನಿಂದ ಈವತ್ತಿನವರೆಗೂ ಯಾವುದೇ ವೇದಿಕೆ ಹತ್ತಿಲ್ಲ. ಅಪ್ಪಿತಪ್ಪಿ ಬಲವಂತದಿಂದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿಸಿದರೂ, ಆ ದಿನ ನಾನು ಖಂಡಿತ ಊರಿನಲ್ಲಿರುವುದಿಲ್ಲ.

ಕೆ. ಶ್ರೀನಿವಾಸರಾವ್‌, ಹರಪನಹಳ್ಳಿ

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.