ಶಿಕ್ಷಕಿಯಾದೆ, ಐಸಿಎಸ್ ಕೂಡ ಮಾಡಿದೆ!
Team Udayavani, Mar 31, 2020, 3:12 PM IST
ಅಪ್ಪ, ಅಮ್ಮ ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದುದರಿಂದ, ನಾನು-ನನ್ನ ತಂಗಿ ಅಜ್ಜಿ ಮನೆಯಲ್ಲಿ ಬೆಳೆದೆವು. ಅದು ಹಳ್ಳಿಯಾದ್ದರಿಂದ, ಐದನೇ ತರಗತಿಯವರೆಗೆ ಕನ್ನಡ ಶಾಲೆ ಇತ್ತು. ಬರೀ ಮೂರು ಶಿಕ್ಷಕರು ಇದ್ದರು. ಐದನೇ ತರಗತಿಗೆ ಬಂದಾಗ ಒಂದನೇ ತರಗತಿಗೆ ಅಆಇಈ ಕಲಿಸುವಷ್ಟು ಬುದ್ಧಿವಂತಿಕೆ ನನಗೆ ಇತ್ತು.
ಹಾಗಾಗಿ, ಚಿಕ್ಕಂದಿನಿಂದಲೂ ಮುಂದೆ ನಾನು ಶಿಕ್ಷಕಿ ಆಗಬೇಕು ಎಂಬ ಕನಸು ಕಾಣುತ್ತಿದ್ದೆ. ಆರನೇ ತರಗತಿಗೆ ಬಂದಾಗ, ಅಪ್ಪ- ಅಮ್ಮನ ಜೊತೆ ಇರುವ ಅವಕಾಶ ಸಿಕ್ಕಿತು. ಉಡುಪಿಯ ಕಾನ್ವೆಂಟ್‌ನಲ್ಲಿ ಹತ್ತನೇ ತರಗತಿಯವರೆಗೆ ಓದಿದೆ. ಅಲ್ಲಿಯ ಸಿಸ್ಟರ್ಸ್‌ರವರ ಶ್ರದ್ಧಾಪೂರ್ವಕ ಕೆಲಸ ನೋಡಿ ನನಗಂತೂ ಶಿಕ್ಷಕಿ ಆಗಲೇಬೇಕು ಎಂಬ ಆಸೆ ಮತ್ತಷ್ಟು ಗಟ್ಟಿಯಾಯಿತು. ಮನೆಗೆ ಬಂದ ನೆಂಟರು,ದೊಡ್ಡವಳಾದ ಮೇಲೆ ಏನಾಗುತ್ತೀಯಾ ಎಂದಾಕ್ಷಣ ಟೀಚರ್ ಎನ್ನುತ್ತಿದ್ದೆ. ಅಷ್ಟರಲ್ಲಿ ನಮ್ಮ ಅಪ್ಪಾಜಿ, ಮಧ್ಯೆ ಬಾಯಿ ಹಾಕಿ… ಇವಳಿಂದ ಐ.ಸಿ.ಎಸ್. ಮಾಡಿಸುತ್ತೇನೆ ಎಂದು ಹೇಳಿ ಮುಗುಳು ನಗುತ್ತಿದ್ದರು. ಅದೇನೋ ಏನೋ ದೊಡ್ಡ ಹುದ್ದೆ ಅಂತ ನಾನು ಅಂದು ಕೊಂಡದ್ದೆ. ನಿಜ ಏನೆಂದರೆ, ಐ.ಸಿ.ಎಸ್. ಎಂಬುದರ ಅರ್ಥ, ಇಂಡಿಯನ್ ಕುಕಿಂಗ್ ಸರ್ವಿಸ್!.
ಅಂದರೆ, ಅಡುಗೆ ಮಾಡುವುದು ಅಂತ ತಿಳಿದು ಕೊಳ್ಳುವುದಕ್ಕೆ ಬಹಳ ವರ್ಷಗಳೇ ಹಿಡಿಯಿತು. ಮುಂದೆ ಡಿಗ್ರಿ ಪೂರೈಸಿ, ಬಿ.ಎಡ್. ಮುಗಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಿಕ್ಷಕಿ ಆಗಿ ನನ್ನ ಕನಸನ್ನು ಈಡೇರಿಸಿಕೊಂಡೆ. ಅಷ್ಟರಲ್ಲೇ ನೆಂಟಸ್ತಿಕೆ ಕೂಡಿ ಬಂದು ಮದುವೆಯೂ ಆಯಿತು. ನನ್ನ ಯಜಮಾನರು ಕೆಲಸಕ್ಕೆ ಹೋಗಲು ಅನುಮತಿ ಕೊಟ್ಟರು. ಕೆಲವು ದಿನಗಳ ನಂತರ ಏಳನೇ ತರಗತಿಯ ಕ್ಲಾಸ್ ಟೀಚರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿತು. ಬಾಲ್ಯದ ಕನಸು ನನಸಾಯಿತು ಎಂಬುದು ನನ್ನ ಖುಷಿ . ಇದು ಜಾಸ್ತಿ ದಿನ ಇರಲಿಲ್ಲ. ಮಕ್ಕಳಾದ ಮೇಲೆ, ಅವರ ಆರೈಕೆಗೋಸ್ಕರ ಕೆಲಸ ಬಿಡಬೇಕಾಯಿತು. ಆದರೇನಂತೆ, ಕಲಿತ ವಿದ್ಯೆಯಿಂದ ನನ್ನ ಮಕ್ಕಳಿಗೆ ಟ್ಯೂಶನ್‌ಗೆ ಕಳುಹಿಸದೇ ವಿದ್ಯಾಭ್ಯಾಸ ಕಲಿಸಲು ಅನುಕೂಲಯಿತು.
ಈಗ ಮಕ್ಕಳಿಗೆ ತರಾವರಿ ಅಡುಗೆ ಮಾಡುವುದರಲ್ಲಿ ಪರಿಣತಿ ಹೊಂದಿದ್ದೇನೆ. ಬಿಡುವಿನ ವೇಳೆಯಲ್ಲಿ ಅಡುಗೆಗಳ ಬಗ್ಗೆ ಬರೆಯುತ್ತೇನೆ. ಬಾಟನಿ ಓದಿದ್ದರಿಂದ ತಾರಸಿ ತೋಟ ಮಾಡಲು ಸಹಾಯವಾಗಿದೆ. ಈಗ ಅತ್ತೆ, ಮಕ್ಕಳು, ಗಂಡನೊಂದಿಗೆ ಸಂತೋಷದಿಂದ ಕಳೆಯುತ್ತಿದ್ದೇನೆ. ಬಗೆಬಗೆಯ ಅಡುಗೆ ಮಾಡುವಾಗ ಅಪ್ಪಾಜಿಯು “ಇವಳನ್ನು ಐ.ಸಿ.ಎಸ್. ಮಾಡಿಸ್ತೇನೆ’ ಎಂದಿದ್ದ ಮಾತು ಯಾವಾಗಲೂ ನೆನಪಾಗುತ್ತದೆ. ಅಡುಗೆಯೂ ಒಂದು ಕಲೆ ಎಂದಮೇಲೆ ನಾನು ಐ.ಸಿ.ಎಸ್. ಪದವೀಧರೆ ಎನ್ನಲು ಬಹಳ ಸಂತೋಷವೂ ಆಗುತ್ತದೆ.
-ಸಹನಾ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.