ಕೋವಿಡ್ ವಿರುದ್ಧ ಫೈಟಿಂಗ್‌ಗೆ ನಿಂತ ಪೈಲಟ್‌

ಹೊಸಪೇಟೆಯ ಧೀರನ ಕಥೆ ಕೇಳಿ...

Team Udayavani, Aug 25, 2020, 7:23 PM IST

ಕೋವಿಡ್ ವಿರುದ್ಧ ಫೈಟಿಂಗ್‌ಗೆ ನಿಂತ ಪೈಲಟ್‌

ಸಾಂದರ್ಭಿಕ ಚಿತ್ರ

ಖಾಸಗಿ ಕಂಪನಿಯೊಂದರಲ್ಲಿ ವಿಮಾನದ ಪೈಲಟ್‌ ಆಗಿದ್ದ ಲಕ್ಕಿ ಬೇಡಿ, ಇದೀಗ ಕೋವಿಡ್ ವಾರಿಯರ್‌ ಆಗಿ ಸೇವೆಗೆ ನಿಂತಿದ್ದಾರೆ. ಬೇಡಿಯವರ ಪುತ್ರ ಸಾಗರ್‌ ಸಿಂಗ್‌, ತಂದೆಗೆ ಸಾಥ್‌ ಕೊಡುತ್ತಾರೆ. ಈ ಜೋಡಿ, ಹೊಸಪೇಟೆಯ ಹಲವು ಪ್ರದೇಶಗಳಲ್ಲಿ ಸೋಡಿಯಂ ಹೈಪೋ ಕ್ಲೋರೈಡ್‌ ಸಿಂಪಡಿಸುತ್ತಾ, ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ…

ಕೋವಿಡ್ ಸೋಂಕು ಕ್ಷಿಪ್ರಗತಿಯಲ್ಲಿ ಹರಡಿದ ಹಿನ್ನೆಲೆಯಲ್ಲಿ, ಸರಕಾರ ಲಾಕ್‌ಡೌನ್‌ಗೆ ಆದೇಶ ಹೊರಡಿಸಿದ್ದು ಹಳೆಯ ಸಂಗತಿ. ಇದರಿಂದಾಗಿ, ಹಲವು ಉದ್ಯೋಗಿಗಳು ಮನೆಯಲ್ಲೇ ಉಳಿದರು. ಈ ಪೈಕಿ ಬೆರಳಣಿಕೆ  ಯಷ್ಟು ಜನ, ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಮುಂದಾದರು. ಸಂಕಷ್ಟಕ್ಕೆ ಸಿಲುಕಿದವರಿಗೆ ಯಾವುದಾದರೂ ಬಗೆಯಲ್ಲಿ ನೆರವಾಗುತ್ತಾ, ಅವರಿಗೆ ಆಸರೆಯಾಗಿ ನಿಲ್ಲುವ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಈ ಸಾಲಿಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಪೈಲಟ್‌ ಲಕ್ಕಿ ಬೇಡಿ, ಪಂಜಾಬ್‌ ಮೂಲದ ಮತ್ತು ಅವರ ಮಗ ಸಾಗರ್‌ ಸಿಂಗ್‌ ಸೇರುತ್ತಾರೆ. ಲಕ್ಕಿ ಬೇಡಿ ಅವರು MSPL LIMITED, BALDOTA GROUP ನಲ್ಲಿ ವಿಮಾನದ ಪೈಲಟ್‌ ಆಗಿ ಕೆಲಸ ಮಾಡುತ್ತಿದ್ದರು.

ಲಾಕ್‌ಡೌನ್‌ ಘೋಷಣೆಯಾದ ನಂತರ ವಿಶ್ರಾಂತಿ ಇದ್ದ ಕಾರಣಕ್ಕೆ, ಕೋವಿಡ್ ವಾರಿಯರ್‌ ಆಗಿ ಜನರ ಸೇವೆ ಮಾಡಬಾರದೇಕೆ ಎಂದು ಯೋಚಿಸಿದರು. ಕಳೆದ ಐದು ತಿಂಗಳಿಂದ ಇವರು ಸ್ಥಳೀಯ ನಗರ ಸಭೆ ನೆರವಿನೊಂದಿಗೆ ಹೊಸಪೇಟೆಯ ಸ್ಯಾನಿಟೈಸರ್‌ ಕೆಲಸ ಮಾಡುತ್ತಾ, ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿದ್ದಾರೆ! ಲಕ್ಕಿ ಬೇಡಿ ಅವರ ಸೇವೆ ಜನರಿಗೆ ಎಷ್ಟರಮಟ್ಟಿಗೆ ತಲುಪಿದೆ ಅಂದರೆ, ಹೊಸಪೇಟೆಯ ಬಹುತೇಕರು- “ಸರ್‌, ನಮ್ಮ ಏರಿಯಾ ಕಂಟೈನ್ಮೆಂಟ್‌ ಝೊàನ್‌ ಆಗಿದೆ. ಬೇಗ ಬನ್ನಿ ಡಿಸ್‌ ಇನ್ಫೆಕ್ಷನ್‌ ಮಾಡಿ…”ಎಂದು ಕರೆ ಮಾಡುವುದು ನಗರಸಭೆಗೆ ಅಲ್ಲ! ಈ ಪೈಲಟ್‌ ಲಕ್ಕಿ ಬೇಡಿಗೆ!. ಕರೆ ಸ್ವೀಕರಿಸಿ “ದಸ್‌ ಮಿನಿಟ್‌ ಮೆ ಆತಾ ಹೂ..’ ಎಂದವರೇ ತನ್ನ ಟೊಯೋಟಾ ಇನ್ನೋವಾದಲ್ಲಿ ಸ್ಥಳಕ್ಕೆ ಹೋಗುತ್ತಾರೆ. ಸೋಂಕಿತ ಪ್ರದೇಶದಲ್ಲಿ ಸೋಡಿಯಂ ಹೈಪೋ ಕ್ಲೋರೈಡ್‌ ಮಿಶ್ರಣವನ್ನು ಸಿಂಪಡಿಸುತ್ತಾರೆ. ಜೊತೆಗೆ ಮಾಸ್ಕ್, ಹ್ಯಾಂಡ್‌ ಗ್ಲೌಸ್‌ ಅವಶ್ಯಕತೆ ಇದ್ದವರಿಗೆ ಕೊಡುತ್ತಾರೆ. ಅಷ್ಟರಲ್ಲಿ ಮತ್ತೂಂದು ಕರೆ ಬಂದ್ರೆ ಅಲ್ಲಿಗೆ ಹೊರಡು ತ್ತಾರೆ. ಇದು, ಪೈಲಟ್‌ ಬೇಡಿ ಮತ್ತು ಅವರ ಮಗ ಸಾಗರ್‌ ಸಿಂಗ್‌ನ ದಿನಚರಿಯೇ ಆಗಿಹೋಗಿದೆ.

ಸರಕಾರ ಏಪ್ರಿಲ್‌ನಲ್ಲಿ ಲಾಕ್‌ಡೌನ್‌ ಘೋಷಿಸುತ್ತಿದ್ದಂತೆ, ನನ್ನ ಚೀಫ್ ಪೈಲಟ್‌ ಬಲ್ದೋಟಾ ಕಂಪನಿ ಕೆಲಸಕ್ಕೆ ತಾತ್ಕಾಲಿಕ ವಿಶ್ರಾಂತಿ ಸಿಕ್ತು. ಕೋವಿಡ್ ವಾರಿಯರ್ಸ್‌, ಕೋವಿಡ್ ವಿರುದ್ಧ ಹೋರಾಡುತ್ತಿದ್ದುದನ್ನು ನೋಡಿ, ಅವರೊಂದಿಗೆ ನಾನೂ ಕೈಜೋಡಿಸಬೇಕೆಂದು ನಿರ್ಧರಿಸಿದೆ. ತಕ್ಷಣ ನಗರಸಭೆ ಆಯುಕ್ತರಾದ ಜಯಲಕ್ಷ್ಮಿಯವರನ್ನು ಭೇಟಿಯಾಗಿ ವಿಷಯ ತಿಳಿಸಿದೆ. ನನ್ನ ನಿರ್ಧಾರ ತಿಳಿದು ಅವರು ಹರ್ಷ ವ್ಯಕ್ತಪಡಿಸಿದ್ದಲ್ಲದೆ, ನಿರಂತರವಾಗಿ ಸೋಡಿಯಂ ಹೈಪೋ ಕ್ಲೋರೈಡ್‌ ನೀಡುತ್ತೇನೆಂದರು. ಅಂದಿನಿಂದ ಆರಂಭವಾದ ಸೇವೆ ನಿರಂತರವಾಗಿ ಸಾಗುತ್ತಿದೆ..’ ಎನ್ನುತ್ತಾ ಲಕ್ಕಿ ಬೇಡಿ ತಮ್ಮ ಕಾರನ್ನು ತೋರಿಸಿದರು.

ಇನ್ನೋವಾದ ಹಿಂಬದಿಯಲ್ಲಿ, ಸ್ವಂತ ಖರ್ಚಿನಲ್ಲಿ ಇದಕ್ಕಾಗಿ ಪ್ರತ್ಯೇಕವಾಗಿ ಫ್ರೆàಮ್‌ ಮಾಡಿಸಿ, 110 ಲೀಟರ್‌ ಸಾಮರ್ಥ್ಯದ ಡ್ರಮ್‌ ಫಿಟ್‌ ಮಾಡಿ, ಅದರಲ್ಲಿ ಸೋಡಿಯಂ ಹೈಪೋ ಕ್ಲೋರೈಡ್‌ ಮಿಶ್ರಣ ಶೇಖರಿಸಿಟ್ಟು, ಸೇವೆಗೆ ಸನ್ನದ್ಧರಾಗಿದ್ದರು. ಹೆಚ್ಚುಕಮ್ಮಿ ಲಾಕ್‌ಡೌನ್‌ ಆದ ಮೂರು ತಿಂಗಳ ಕಾಲ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ವೇಳೆ ನಗರದ ಬಸ್‌ ನಿಲ್ದಾಣ, ಮಾರುಕಟ್ಟೆ, ಆಸ್ಪತ್ರೆ, ಕಾಲೊನಿಗಳು, ಪ್ರಮುಖ ವೃತ್ತಗಳು, ಠಾಣೆಗಳು, ಮೈದಾನ… ಹೀಗೆ ನಗರದಲ್ಲಿ ಅಂದಾಜು 25 ಕಿ.ಮೀ. ವ್ಯಾಪ್ತಿಯಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದರು. ಲಾಕ್‌ಡೌನ್‌ ಅನ್‌ಲಾಕ್‌ ಆದ ನಂತರ ಜನ ದಟ್ಟಣೆ ಹೆಚ್ಚಾಗಿದ್ದರಿಂದ ಡಿಸ್‌ ಇನ್ಫೆಕ್ಷನ್‌ ಮಾಡುವ ಕೆಲಸ ಸವಾಲು ಆಗಿತ್ತು. ಹೀಗಾಗಿ, ಇವರು ಈಗ ವಾರಕ್ಕೊಮ್ಮೆ ಅಂದ್ರೆ ಭಾನುವಾರ ನಗರದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಜನ ಸೇರಿದ ಮತ್ತು ಜನ ಕರಗಿದ ನಂತರ ಸಿಂಪಡಣೆ ಮಾಡಿದರೆ ಉಪಯುಕ್ತ ಎನ್ನುವ ಕಾರಣಕ್ಕೆ ಬೆಳ್ಳಂಬೆಳಗ್ಗೆ ಇಂತಹ ಸ್ಥಳಗಳಿಗೆ ಹೋಗುತ್ತೇವೆ. ಅದು ಬಿಟ್ಟರೆ ಸಂಜೆಯ ನಂತರ… ಎನ್ನುತ್ತಾನೆ ಯುವಕ ಸಾಗರ್‌ ಸಿಂಗ್‌. ಕಾರು ಹೋಗದ ಜಾಗದಲ್ಲಿ ಡಿಸ್‌ ಇನ್ಫೆಕ್ಷನ್‌ ಮಾಡುವುದು ಕಷ್ಟ. ಈ ತಂದೆ-ಮಗ ಅದಕ್ಕೂ ಒಂದು ಮಾರ್ಗ ಕಂಡುಕೊಂಡಿದ್ದಾರೆ. 100 ಮೀಟರ್‌ ಉದ್ದದ ಪೈಪನ್ನು ಅದಕ್ಕೆಂದೇ ಖರೀದಿಸಿದ್ದಾರೆ! ಇವರು ಇಲ್ಲಿಯವರೆಗೆ ನಗರದ ಸುಮಾರು 2000 ಕಿ.ಮೀ. ವ್ಯಾಪ್ತಿಯಲ್ಲಿ 22,000 ಲೀಟರ್‌ ರಾಸಾಯನಿಕ ವನ್ನು ಸಿಂಪಡಣೆ ಮಾಡಿದ್ದಾರೆ!

ಇವರು ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕೆಲಸ ಮಾಡುವು ದಾಗಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು. ಇದಕ್ಕೆ ಪೂರಕವಾಗಿ ತಮ್ಮ ಕಾರಿಗೆ ಸ್ವಂತ ಖರ್ಚಿನಲ್ಲಿ ಹೆಚ್ಚುವರಿ ಆಗಿ ಫ್ರೇಮ್‌ ಅಳವಡಿಸಿದ್ದರು. “ನಮ್ಮೊಂದಿಗೆ ಕೈ ಜೋಡಿಸಿ ಅನೇಕ ಸೋಂಕಿತ, ಜನದಟ್ಟಣೆ ಪ್ರದೇಶಗಳನ್ನು ಡಿಸ್‌ ಇನ್ಫೆಕ್ಷನ್‌ ಮಾಡುತ್ತಿದ್ದಾರೆ. ಇವರ ಸೇವಾ ಬದ್ಧತೆಗೆ ನಗರ ಸಭೆ ಸೇರಿದಂತೆ ಸ್ಥಳೀಯರು ಫಿದಾ ಆಗಿದ್ದೇವೆ…’ ಎನ್ನುತ್ತಾರೆ ನಗರಸಭೆಯ ಆಯುಕ್ತೆ ಜಯಲಕ್ಷ್ಮೀ.

“ಎಲ್ಲವನ್ನೂ ಸರಕಾರವೇ ಮಾಡಲಿಕ್ಕೆ ಆಗಲ್ಲ. ಸರಕಾರವೇ ಮಾಡಲಿ ಎನ್ನುವ ಮನಸ್ಥಿತಿಯಿಂದ ನಾವು ಹೊರಬರಬೇಕು. ನಾವು ನಮ್ಮ ಕೈಲಾದಷ್ಟು ಸೇವೆ ಮಾಡಬೇಕು. ಅದು ನಮ್ಮ ಕರ್ತವ್ಯ ಕೂಡ. ನನ್ನ ಈ ಸೇವೆ ನಿರಂತರವಾಗಿರುತ್ತೆ’ ಎನ್ನುತ್ತಾರೆ ಪೈಲಟ್‌ ಲಕ್ಕಿ ಬೇಡಿ. ಸೇವೆಯಿಂದ ಸುಖವುಂಟು ಎಂಬ ಮಾತಿಗೆ ಸಾಕ್ಷಿ ಯಾಗಿ ರುವ ಈ ಅಪರೂಪದ ವ್ಯಕ್ತಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ- 9902071662.­

 

– ಸ್ವರೂಪಾನಂದ ಎಂ. ಕೊಟ್ಟೂರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.