ಜುಗ್ಗನ ಪಿಜ್ಜಾ ಡೆಲಿವರಿ
ವಿಂಡೋ ಸೀಟು
Team Udayavani, Mar 26, 2019, 6:00 AM IST
ಸಾಂದರ್ಭಿಕ ಚಿತ್ರ
ಪಿಜ್ಜಾ ಡೆಲಿವರಿ ಬಾಯ್ ಅವತ್ತು ಸಪ್ಪೆ ಮೋರೆ ಹಾಕ್ಕೊಂಡು ತನ್ನ ಶಾಪ್ಗೆ ಬಂದಿದ್ದ. ದಿನಾ ನಗು ನಗ್ತಾ ಇದ್ನಲ್ಲ, ಮೊನ್ನೆಯಷ್ಟೇ ಮದುವೆನೂ ಆಗಿದ್ನಲ್ಲ. ಹೀಗೆ ಸಪ್ಪೆ ಮೋರೆ ಹಾಕ್ಕೊಂಡಿದ್ರೆ, ಗ್ರಾಹಕರು ಏನು ತಿಳ್ಕೊಳ್ಳೋದಿಲ್ಲ ಅಂತ ಆತನ ಗೆಳೆಯರೆಲ್ಲ ಗುಸು ಗುಸು ಅಂತ ಮಾತಾಡಿಕೊಳ್ತಿದ್ರು. ಕೊನೆಗೂ ಅವನ ಮುನಿಸಿಗೆ ಕಾರಣ ಗೊತ್ತಾಯ್ತು…. ಮನೆಯಲ್ಲಿ ಹೆಂಡ್ತಿಗೂ, ಗಂಡನಿಗೂ ಸಣ್ಣ ಜಗಳ ಆಗಿದೆ. ಮದುವೆಯಾಗಿ 6 ತಿಂಗಳಾದರೂ ಏನೂ ತಂದುಕೊಟ್ಟಿಲ್ಲ, ತನ್ನ ಗಂಡ ವಿಪರೀತ ಜುಗ್ಗ ಅಂತ ಮುನಿಸಿಕೊಂಡು, ಪತ್ನಿ ತನ್ನ ಗೆಳತಿಯ ಮನೆಗೆ ಹೋಗಿದ್ದಳಂತೆ. ಆಕೆ ಎಲ್ಲಿದ್ದಾಳೆಂದು ಎರಡು ದಿನದಿಂದ ಹುಡುಕಿ ಹುಡುಕಿ ಸಾಕಾಗಿ, ಪೇಚು ಮೋರೆ ಹಾಕ್ಕೊಂಡು ಆತ ಪಿಜ್ಜಾ ಶಾಪ್ಗೆ ಬಂದಿದ್ದ.
ಅಷ್ಟರಲ್ಲೇ ಒಂದು ಪಿಜ್ಜಾ ಆರ್ಡರ್ ಕರೆ ಬಂತು. 3 ಪೀಸ್ ಬೇಬಿ ಕಾರ್ನ್ ಪಿಜ್ಜಾ ಬೇಕು ಅಂತ. ಎಲ್ಲ ಸಹೋದ್ಯೋಗಿಗಳೂ, ಅವನಿಗೆ ಸಮಾಧಾನ ಹೇಳಿ, ನೀನೇ ಈ ಆರ್ಡರನ್ನು ತಲುಪಿಸಿ ಬಾ ಅಂತೇಳಿ ಕಳಿಸಿದ್ರು. ಇಪ್ಪತ್ತು ನಿಮಿಷದೊಳಗೆ ಆತ ಆ ಅಪರಿಚಿತ ಮನೆಯ ಮುಂದೆ ನಿಂತು ಕರೆ ಮಾಡಿದ. ಎರಡನೇ ಮಹಡಿಗೆ ಬನ್ನಿ ಅಂತೇಳಿ, ಆ ಕಡೆಯಿಂದ ಉತ್ತರ ಬಂತು. ಸೀದಾ ಮೇಲಕ್ಕೆ ಹೋಗಿ, ಮನೆಯ ಬಾಗಿಲು ತಟ್ಟಿದ. ಅವನ ಹೆಂಡತಿ ನಗುತ್ತಾ, ಬಾಗಿಲು ತೆರೆದಳು. ನೋಡಿದರೆ, ಗಂಡನೇ..! ಅವನ ಕೈಯಲ್ಲಿದ್ದ ಪಿಜ್ಜಾ ನೋಡಿ ಅವಳ ಮುಖ ಇನ್ನಷ್ಟು ಅರಳಿತು. ಅವರ ಜತೆಗೆ ತಾನೂ ಒಟ್ಟಿಗೆ ಕುಳಿತು ಪಿಜ್ಜಾ ತಿಂದು, ನಯಾಪೈಸೆಯನ್ನೂ ತೆಗೆದುಕೊಳ್ಳದೇ, ಡೆಲಿವರಿ ಬಾಯ್ ಸಂತೋಷದಿಂದ ಡ್ನೂಟಿಗೆ ಬಂದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.