ನೀನು ಬೇಗ ಬರದಿದ್ರೆ ನನ್ ಕಥೆ ಅಷ್ಟೆ…
Team Udayavani, Apr 2, 2019, 6:00 AM IST
ಈಗ ಏನಾಗಿದೆ ಗೊತ್ತಾ? ಗುರು ನನ್ನ ತಲೆ ಮೇಲೆ ಬಂದು ಕೂತಿದ್ದಾನಂತೆ. ಈ ಯುಗಾದಿ ಕಳೆದ ಕೂಡಲೇ ಮಗಳಿಗೆ ಮದುವೆ ಮಾಡಿಬಿಡೋದು ಸೂಕ್ತ ಅಂತ ಪುರೋಹಿತರು ನಮ್ಮಪ್ಪನ ಹತ್ರ ಹೇಳಿದ್ದಾರೆ. ಈಗಾಗಲೇ ಯಾರೋ ಒಂದಿಬ್ಬರು ನನ್ನನ್ನು ಕೇಳಿದ್ದಾರೆ ಅಂತ ಅಪ್ಪ, ಅಮ್ಮನ ಎದುರು ಹೇಳ್ತಾ ಇದ್ರು.
ಓಹ್, ನನ್ನ ಹುಡುಗಿ ಪ್ರೇಮ ಪತ್ರ ಬರೆದಿದ್ದಾಳೆ ಅಂತ ಜಾಸ್ತಿ ಖುಷಿ ಪಡಬೇಡ. ಯಾಕಂದ್ರೆ, ನಿಂಗೆ ಪ್ರಪೋಸ್ ಮಾಡೋಕಲ್ಲ ಈ ಪತ್ರ ಬರೀತಾ ಇರೋದು. ನೀನು ಹಿಂದೊಮ್ಮೆ ನಂಗೆ ಪ್ರಪೋಸ್ ಮಾಡಿದ್ದೀಯ ಅಂತ, ಮತ್ತು ನಾನದನ್ನು ಮನಸಾರೆ ಒಪ್ಪಿಕೊಂಡಿದ್ದೇನೆ ಅಂತ ನಿಂಗೆ ನೆನಪಿಸೋಕೆ ಈ ಪತ್ರ ಬರೆದಿರೋದು.
“ಯಾಕೆ ಕೋಪ ಮಾಡ್ಕೊತೀಯಾ?’ ಅಂತ ಪಾಪದವನ ಹಾಗೆ ಮುಖ ಮಾಡಿ, ನನ್ನ ಅನುಕಂಪ ಗಿಟ್ಟಿಸುವ ಯೋಚನೆಯೂ ಮಾಡಬೇಡ. ಯಾಕಂದ್ರೆ, ನಂಗೆ ನಿನ್ಮೆàಲೆ ತುಂಬಾನೇ ಕೋಪ ಬಂದಿದೆ. ನಿನ್ನ ಪಾಪಚ್ಚಿ ಮುಖ ನೋಡಿ ಸುಮ್ಮನೆ ಇರೋಳಲ್ಲ ನಾನು.
ಅಲ್ಲಾ, ನಾನು ನಿನ್ನನ್ನು ಮದುವೆ ಆಗೋಕೆ ಒಪ್ಪಿಕೊಂಡಾಗ ಏನು ಹೇಳಿದ್ದೆ ಅಂತ ನೆನಪಿದೆಯಾ? ನೀನಾಗಿಯೇ ನಮ್ಮನೆಗೆ ಬಂದು, ನಮ್ಮಪ್ಪನ ಎದುರು ನಿಂತು ಮಾತಾಡಬೇಕು, ನಾನಾಗಿ ಪ್ರೀತಿಯ ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳ್ಳೋದಿಲ್ಲ ಅಂದಿದ್ದೆ. ಅದಕ್ಕೆ ನೀನು ಕೂಡ ಒಪ್ಪಿದ್ದೆ. “ಆದಷ್ಟು ಬೇಗ ಬರ್ತೀನಿ ಕಣೇ. ನೀನು ಕಾಫಿ-ಉಪ್ಪಿಟ್ಟು ಹಿಡಿದು ಯಾರ್ಯಾರಧ್ದೋ ಮುಂದೆ ನಿಲ್ಲೋಕೆ ನಾನು ಬಿಡೋದಿಲ್ಲ’ ಅಂದಿದ್ದೆ ಅಲ್ವಾ? ಅದೆಲ್ಲಾ ಈಗ ಮರೆತೋಯ್ತಾ? ಹಾಗೆ ಹೇಳಿ ಎರಡೂವರೆ ವರ್ಷ ಆಯ್ತು. ಮನೆಗೆ ಬಂದು ನಮ್ಮಪ್ಪನ ಎದುರು ನಿಲ್ಲುವ ಧೈರ್ಯವನ್ನೇ ತೋರಿಲ್ಲ ನೀನು.
ಇಷ್ಟು ದಿನ ನನಗೆ “ಗುರು ಬಲ’ ಇಲ್ಲ ಅಂತ ಮನೆಯಲ್ಲಿ ಮದುವೆ ಪ್ರಸ್ತಾಪ ಎತ್ತಿರಲಿಲ್ಲ. ಆದ್ರೆ ಈಗ ಏನಾಗಿದೆ ಗೊತ್ತಾ? ಗುರು ನನ್ನ ತಲೆ ಮೇಲೆ ಬಂದು ಕೂತಿದ್ದಾನಂತೆ. ಈ ಯುಗಾದಿ ಕಳೆದ ಕೂಡಲೇ ಮಗಳಿಗೆ ಮದುವೆ ಮಾಡಿಬಿಡೋದು ಸೂಕ್ತ ಅಂತ ಪುರೋಹಿತರು ನಮ್ಮಪ್ಪನ ಹತ್ರ ಹೇಳಿದ್ದಾರೆ. ಮುಂದಿನ ವಾರವೇ ಜಾತಕ ಹೊರಡಿಸ್ತಾರಂತೆ. ಈಗಾಗಲೇ ಯಾರೋ ಒಂದಿಬ್ಬರು ನನ್ನನ್ನು ಕೇಳಿದ್ದಾರೆ ಅಂತ ಅಪ್ಪ, ಅಮ್ಮನ ಎದುರು ಹೇಳ್ತಾ ಇದ್ರು. ನಮ್ಮಮ್ಮ ನನಗೆ ಸೀರೆ ಉಡಿಸಿ, ಕೈಯಲ್ಲಿ ಕಾಫಿ- ಉಪ್ಪಿಟ್ಟಿನ ಟ್ರೇ ಇಟ್ಟು, ಬಂದವರ ಎದುರು ನಿಲ್ಲಿಸುವುದಕ್ಕೆ ಹೆಚ್ಚು ಸಮಯ ಬೇಡ. ಅದನ್ನು ಕಲ್ಪಿಸಿಕೊಂಡೇ ನಂಗೆ ಅಳು ಬರ್ತಾ ಇದೆ. ನಿಂಗೊತ್ತು ತಾನೇ, ನಂಗೆ ಅದೆಲ್ಲಾ ಇಷ್ಟ ಆಗುವುದಿಲ್ಲ ಅಂತ.
ಇನ್ನೂ ತಡ ಮಾಡಿದರೆ ನಂಗೆ ತುಂಬಾ ಕಷ್ಟ ಆಗುತ್ತೆ. ನಮ್ಮಪ್ಪನಿಗೆ ಮೊದಲೇ ನನ್ನ ಮೇಲೆ ತುಂಬಾ ನಂಬಿಕೆ. ಹಾಗಾಗಿ, ನಮ್ಮ ಪ್ರೀತಿಯ ವಿಷಯ ಹೇಳಿ ಅವರಿಗೆ ನೋವುಂಟು ಮಾಡಲು ನಂಗಿಷ್ಟವಿಲ್ಲ. ನೀನು ಬಂದು ಕೇಳಿದರೆ ಖಂಡಿತಾ ನಮ್ಮಪ್ಪ ಈ ಮದುವೆಗೆ ಒಪ್ತಾರೆ. ಯಾಕೆ ಗೊತ್ತಾ? ಹೇಗೂ ಅಪ್ಪನಿಗೆ ನಿಮ್ಮ ಕುಟುಂಬದ ಪರಿಚಯ ಇದೆ. ಅಪ್ಪ ಒಪ್ಪದಿದ್ದರೆ ಏನ್ಮಾಡೋದು ಅಂತೇನಾದ್ರೂ ನೀನು ಹೆದರುತ್ತಿದ್ದರೆ, ಆ ಹೆದರಿಕೆ ಬಿಟ್ಟುಬಿಡು, ಆಯ್ತಾ.
ಮುಂದಿನ ವಾರವೇ ನೀನು, ನಿನ್ನ ಅಪ್ಪ-ಅಮ್ಮನ ಜೊತೆ ಬಂದು ಹೆಣ್ಣು ಕೇಳುವ ಶಾಸ್ತ್ರ ಮುಗಿಸು. ಮದುವೆ ಬೇಕಾದ್ರೆ, ಮುಂದಿನ ವರ್ಷವೇ ಆಗೋಣ. ನಮ್ಮ ಮದುವೆಗೆ ಮನೆಯವರು ಒಪ್ಪಿಬಿಟ್ಟರೆ ನನಗೂ ನೆಮ್ಮದಿ. ಹೇಗೂ, ನಿಮ್ಮ ಮನೆಯಲ್ಲಿ ಎಲ್ಲರಿಗೂ ನಮ್ಮ ಪ್ರೀತಿಯ ವಿಷಯ ಗೊತ್ತಿದೆ. ನೀನು ಹೂಂ ಅನ್ನೋದನ್ನೇ ಅವರೂ ಕಾಯುತ್ತಿದ್ದಾರೆ. ಮತ್ತೆ ನಿಂಗೆ ಹೂಂ ಅನ್ನೋಕೆ ಏನು ಧಾಡಿ?
ಇಂತಿ, ನಿನ್ನ ದಾರಿ ಕಾಯುತ್ತಿರುವ
ರೋಹಿಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.