ಪ್ಲೀಸ್, ಹಿಮಾಲಯದಂತೆ ತಣ್ಣಗಾಗು ಮಾರಾಯ…
Team Udayavani, Apr 11, 2017, 3:50 AM IST
ಪ್ರೀತಿಯ ಹುಡ್ಗ,
ಏನ್ ಬಹಳ ಬ್ಯುಸಿ ಆಗ್ಬಿಟ್ಟಿದ್ದೀ. ಕೊಬ್ಬು ಕಣಾ ನಿಂಗೆ. ಅಷ್ಟೆಲ್ಲಾ ಬೈದ್ರೂ ನಾನೇ ಪೋನ್ ಮಾಡ್ತೀನಿ, ಸಾರಿ ಕೇಳ್ತಿನಿ. ಇವ್ಳು ಬಿಟ್ ಹೋಗಲ್ಲ ಅಂತ ಆಟ ಆಡಿಸ್ತೀಯ ಅಲ್ವಾ? ಅಷ್ಟಕ್ಕೂ ನೀನ್ಯಾಕೆ ಬೈಯೋದು ನಂಗೆ? ನಾನು ನಿನ್ನ ಅರ್ಥ ಮಾಡ್ಕೊಳ್ಳೋದಿಲ್ಲ ಅಂತಾನಾ? ನಿನ್ನನ್ನು ಅಪಾರ್ಥ ಮಾಡ್ಕೊಂಡು, ತಪ್ಪಾಗಿ ತಿಳಿದು, ನೀನೊಬ್ಬ ಗೂಬೆ ಅಂತನ್ನಿಸಿ ಮತ್ತೆ “ಛೇ ಛೇ, ಅವನು ಆ ಥರದ ಹುಡುಗ ಅಲ್ಲ, ಛೇ ನಾನು ಬೈದ್ನಲ್ಲಾ’ ಎಂದು ಪರಿತಪಿಸುವಲ್ಲಿ ಒಂಥರಾ ಹೇಳ್ಕೊಳ್ಳೋಕೆ ಆಗದೆ ಇರುವ ಮಾಧುರ್ಯ ಇರುತ್ತೆ ಮನಸ್ಸಲ್ಲಿ. ತಿಳೀತಾ? ತುಂಬಾ ವೇಳೆ ನಿನ್ನ ಬಳಿ ಹೇಳಿದ್ದೇನೆ; ನನಗೆ ಸುಳ್ಳಾಡುವ ಎರಡು ನಾಲಿಗೆಯವರೆಂದ್ರೆ ಆಗೋದಿಲ್ಲ. ಅಷ್ಟೆಲ್ಲ ಸುಳ್ಳಿಗರ ದ್ವೇಷಿಯಾದ ನಾನು ನಿನ್ನ ಜೀವದ ಉಸಿರಿನಷ್ಟು ಪ್ರೀತಿಸ್ತೀನಿ ಅಂದ್ರೆ ಅರ್ಥ ಆಗೋಲ್ವಾ? ನಾನೇನ್ ಪಫೆìಕ್ಟ್ ಹುಡ್ಗಿ ಅಲ್ಲಯ್ನಾ… ನಾನೂ ತಪ್ಪು ಮಾಡ್ತೀನಿ, ಅದನ್ನು ತಿದೊಡೂ ನಡೀತೀನಿ. ನಂಗೆ ಸಣ್ಣಪುಟ್ಟ ತಪ್ಪು ಮಾಡೋದ್ ಅಂದ್ರೆ ಸಖತ್ ಇಷ್ಟ. ನಾನೆಷ್ಟು ದಡ್ಡಿ ಅಂತ ಒಳಗೊಳಗೇ ನಗ್ತಿನಿ, ಖುಷಿಯಾಗ್ತಿನಿ. ಅದಕ್ಕಾಗಿ ಅಳ್ಳೋದಿಲ್ಲ. ಆದ್ರೆ ನೀನು ಬಿಟ್ ಹೋದಾಗ ಇರುಳು ಪೂರಾ ಬಿಕ್ಕಿದ್ದೇನೆ. ಜೀವನದ ಬಗ್ಗೆ ಬೇಸರಪಟ್ಟಿದ್ದೇನೆ. ಎದೆಯಲ್ಲಿ ನೋವು ಬಂದಾಗಲೇ ತಿಳಿದಿದ್ದು ಹೃದಯ ಎಡ ಭಾಗದಲ್ಲೆ„ತೆ ಅಂತ! ಪ್ರೀತಿ ಹೃದಯದಲ್ಲಿ ಇದೆ ಅಂತ ಈ ನೋವಿನ ಪುರಾವೆಯಿಂದಲೇ ತಿಳಿದಿದ್ದು.
ಗೊತ್ತಾಯ್ತಾ? ಅಷ್ಟು ನಂಬಿಕೆ, ವಿಶ್ವಾಸ ನಿನ್ ಮೇಲೆ. ನಂಗೆ ನಿನ್ನನ್ನು ಇಂದ್ರ ಚಂದ್ರ ಅಂತೆಲ್ಲ ಹೊಗಳ್ಳೋಕೆ ಬರಲ್ವಯ್ನಾ. ಆದ್ರೆ, ನಾ ಪ್ರೀತಿಸುವ ಈ ಪ್ರಕೃತಿಯ ನೆರಳಿನಲ್ಲಿ ನಿನ್ನ ಕಂಪು, ಹರಿವ ತೊರೆ, ಪಕ್ಷಿಗಳ ಸ್ವರದಲ್ಲಿ ನಿನ್ನ ಇಂಪು ಮೈಗೂಡಿ ಬರುತ್ತವೆ. ಅವುಗಳಷ್ಟೇ ತಂಪಾದ ಭಾವ, ಮಡಿಲ ಚೇತರಿಕೆ ನೀಡುತ್ತವೆ. ನನಗೊಂದು ಕೆಟ್ಟ ಹವ್ಯಾಸವೆಂದರೆ, ನೇರವಾಗಿ ಹೇಳಿ ಬೈಸ್ಕೊಳ್ಳೋ ಚಾಳಿ. ಇಲ್ಲಾ, ಅಂಥವರ ಸಹವಾಸವೇ ಬೇಡಾಂತ ಕೈಮುಗಿದು ಹೊರಟ್ ಹೋಗ್ತಿàನಿ. ಎಷ್ಟು ಜನ ದೂರಾದ್ರೂ ಡೋಂಟ… ಕೇರ್.
ನಿನ್ ಹಳೆ ಪುರಾಣವೆಲ್ಲ ನನ್ ಕಿವಿಗೂ ಗೊತ್ತಿದೆಯೋ. ಆದ್ರೆ ನಾನು ಅದನ್ನು ಕೇಳ್ಳೋದಿಲ್ಲ. ತಪ್ಪು$ಮಾಡೆª ಇರೋರು ಯಾರಿದ್ದಾರೆ ಹೇಳು? ಆದ್ರೆ ನೀನ್ ಮಾತ್ರ, ನಿಂಗೆ ಕೋಪ ಬಂದ್ರೆ ತಪ್ಪು ಮಾಡಿದ್ರೆ ಬಿಟೊಗು ಅನ್ನೊ ನಕಲಿ ಪದನ ಬಾಂಬ… ಥರಾ ಉದುರಿಸಿಬಿಡ್ತೀಯಾ. ಯಾಕೆ? ಅಷ್ಟೊಂದು ಕಷ್ಟವಾಗಿದ್ದೀನಾ ನಾನು? ಹೀಗೆ ನೀನಿಲ್ಲ ಅಂದ್ರೆ ಇನ್ನೊಬ್ಬ, ಅವನಲ್ಲದಿದ್ರೆ ಮತ್ತೂಬ್ಬ ಅಂತ ಹುಡ್ಕೊಂಡ್ ಹೋದ್ರೆ ಪ್ರೀತಿ ಹ್ಯಾಗ್ ಆಗುತ್ತೋ ಹುಡ್ಗ? ಹೋದ್ರೂ ನೆಮ್ಮದಿ ಇರುತ್ತೇನೋ? ಮನಸ್ಸು ವಿಲ ವಿಲ ನಲುಗುತ್ತೆ ಕಣೋ. ಪ್ರೀತೀನ ಬಿಟ… ಹೋಗೋದೇ, ಹಠ ಮಾಡದೆ ಇರೋದೇ ಮೆಚೂರಿಟಿಯಾ? ಎಷ್ಟೇ ಜಗಳ ಆದರೂ ಒಂದು ಗಂಟೆ ಒಳಗೆ ಕೋಪ ಪರಾರಿಯಾಗಿ, ಹೃದಯ ತಣ್ಣಗಾಗುತ್ತೆ. ಕೊನೆವರೆಗೂ ಆ ಒಲವಿನ ಸಂಬಂಧವನ್ನು ಜತನದಿಂದ, ಸಂತಸದಿಂದ ಕಾಪಿಟ್ಟುಕೊಂಡ್ರೆ ಅದೇ ಮೆಚ್ಯೂರಿಟಿ. ಅದನ್ನೇ ಪ್ರೀತಿ ಅಂದ್ಕೋತೀನಿ ನಾನು. ಪ್ಲೀಸ್, ಹಿಮಾಲಯದಂತೆ ತಣ್ಣಗಾಗು ಮಾರಾಯ…
ನಾನಂತೂ ಎಲ್ಲಾನೂ ಹೇಳಿದ್ದೀನಿ. ನಂಬೋದು ಬಿಡೋದು, ನಿಂಗ್ ಬಿಟ್ಟಿದ್ದು. ಆದ್ರೆ ತುಂಬಾ ಅಳಿಸ್ಬೇಡ್ವೋ ನನ್ನ ಪ್ಲೀಸ್…
ಇಂತಿ ನಿನ್ನ ಪೆದ್ದಿ
ಮಲ್ಲಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.