ಸೋಲೆಂಬುದು ಹಾದಿಯಲ್ಲಿ ಸಿಗುವ ಒಂದು ಸಣ್ಣ ಕಲ್ಲು!
Team Udayavani, Feb 16, 2021, 7:14 PM IST
ನೀವು ಒಬ್ಬರ ಸಾಧನೆಯ ಮಾತುಗಳನ್ನುಕೇಳುತ್ತೀರಿ. ಆಗ, ನಾನೂ ಇವರಂತೆಯೇ ಸಾಧನೆ ಮಾಡಬೇಕು. ಜೀವನದಲ್ಲಿ ಗೆಲ್ಲಬೇಕು, ನನ್ನನ್ನು ಎಲ್ಲರೂ ಗುರುತಿಸುವಂತಾಗಬೇಕು ಎಂದೆಲ್ಲಾ ಅನಿಸುತ್ತದೆ. ಆದರೆ ಈ ಮನಸ್ಥಿತಿನಿಮ್ಮೊಂದಿಗೆ ಸ್ವಲ್ಪ ಹೊತ್ತಷ್ಟೇ ಇರುತ್ತದೆ. ಮರುದಿನ ಬೆಳಿಗ್ಗೆ ಎಂದಿನಂತೆ ದಿನಚರಿ ಮುಗಿಯುತ್ತದೆ ಅಲ್ವಾ? ನಮಗೆಲ್ಲಾ ಯಾಕೆಹೀಗಾಗುತ್ತದೆ ಅಂದರೆ, ಒಂದು ಗೆಲುವಿನಯಾತ್ರೆಯಲ್ಲಿ ಹೆಜ್ಜೆಯಿಡಲು ನಮ್ಮ ಮನಸ್ಸು ಸಿದ್ಧವಾಗಿರುವುದೇ ಇಲ್ಲ. ನನ್ನಿಂದ ಇದು ಸಾಧ್ಯವಾ? ನಾನು ಈ ಪ್ರಯತ್ನದಲ್ಲಿ ಗೆಲ್ತಿàನಾ? ಎಂಬ ಅನುಮಾನ ಜೊತೆಗೇ ಉಳಿದುಬಿಟ್ಟಿರುತ್ತದೆ. ಅದೇ ಕಾರಣಕ್ಕೆ, ಗೆಲ್ಲಬೇಕೆಂಬ ಹುಮ್ಮಸ್ಸು, ಬಂದಷ್ಟೇ ಬೇಗ ವಾಪಸ್ ಹೋಗಿಬಿಡುತ್ತದೆ.
ಇಂಥ ಸಂದರ್ಭದಲ್ಲಿ ಗೆಲುವಿನ ಕುದುರೆ ಹತ್ತಲು ನಿರ್ಧರಿಸಿದವರು ಮಾಡಬೇಕಿರುವುದಿಷ್ಟೇ: ನೀವು ಏನುಸಾಧನೆ ಮಾಡಬೇಕು ಮೊದಲು ನಿರ್ಧರಿಸಿಕೊಳ್ಳಿ. ಪ್ರಯತ್ನ ನಿರಂತರವಾಗಿರಲಿ, ಸೋಲು ಜೊತೆಯಾದಾಗ ಕುಗ್ಗಬೇಡಿ. ಸೋಲೆಂಬುದು ಗೆಲುವಿನ ಹಾದಿಯಲ್ಲಿ ಸಿಗುವ ಪುಟ್ಟ ಕಲ್ಲು. ಅದನ್ನು ಪಕ್ಕಕ್ಕೆ ಸರಿಸಿ ಮುನ್ನಡೆಯಿರಿ. ಸದಾ ಯಾವುದಾದರೂ ಒಂದು ವಿಷಯದ ಬಗ್ಗೆ ಓದಿ, ನೋಡಿ ಅಥವಾ ಕೇಳಿಕಲಿಯಿರಿ. ನನಗೆ ಯಾರೂಸಪೋರ್ಟ್ ಮಾಡುವುದಿಲ್ಲ ಎಂದು ಕೊರಗಬೇಡಿ. ಕೆಲವೊಮ್ಮೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಸಾಧ್ಯವಾದರೆ ದಿನವೂ ರಾತ್ರಿ ಮಲಗುವ ಮುನ್ನ ಸಾಧಕರ ಕಥೆಗಳನ್ನು ಓದಿ ಅಥವಾ ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿ. ಸಾಧಿಸಲು ಹೊರಟವರಿಗೆ ನೂರೆಂಟು ವಿಘ್ನಗಳು ಜೊತೆಯಾಗುವುದು ಸಹಜ. ಅವನ್ನು ಎದುರಿಸಿ ನಿಂತಾಗ ಗೆಲುವು ನಮ್ಮದೇ.
-ರಕ್ಷಿತ ಪ್ರಭು ಪಾಂಬೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.