ಪಬ್ಲಿಕ್ಕೇ ಪರಮಗುರು!


Team Udayavani, Jan 29, 2019, 12:30 AM IST

m-6.jpg

ಪ್ರಚಾರ (ಪಬ್ಲಿಸಿಟಿ) ಯಾರಿಗೆ ತಾನೇ ಬೇಕಿಲ್ಲ. ಹಿಂದೆಲ್ಲಾ ದೊಡ್ಡ ದೊಡ್ಡ ಸಂಸ್ಥೆಗಳು ಮಾತ್ರವೇ ಪ್ರಚಾರದ ಮೊರೆ ಹೋಗುತ್ತಿದ್ದವು. ತಮ್ಮ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಲು ಅವರಿಗೆ ಪ್ರಚಾರದ ಅಗತ್ಯ ಇದ್ದೇ ಇತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ತಮ್ಮ ತಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಚಾರ ಅನ್ನೋದು ಒಂದಲ್ಲ ಒಂದು ರೀತಿಯಲ್ಲಿ ಜನರಿಗೂ ಅಗತ್ಯವಾಗಿಬಿಟ್ಟಿದೆ. ಬರಹಗಾರರು, ಸಮಾಜ ಸೇವಕರು, ಉದ್ಯಮಿಗಳು, ನಟ- ನಟಿಯರು, ಚಿತ್ರಕಲಾವಿದರು ಹೀಗೆ ಪಟ್ಟಿ ಉದ್ದ ಸಾಗುತ್ತದೆ. ಇವರಿಗೆ ಪ್ರಚಾರ ನೀಡಲು ನೆರವಾಗುವವರೇ ಪಿ.ಆರ್‌.ಒ (ಪಬ್ಲಿಕ್‌ ರಿಲೇಷನ್‌ ಆಫೀಸರ್‌). ಈಗೀಗ ಭಾರತದಲ್ಲಿ ಪಿ.ಆರ್‌. ಕ್ಷೇತ್ರ (ಸಾರ್ವಜನಿಕ ಸಂಪರ್ಕ ವಿಭಾಗ) ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ಸೆಲಬ್ರಿಟಿಗಳೊಂದಿಗೆ ಕೆಲಸ
ಸೃಜನಾತ್ಮಕ ಮನಸ್ಸು, ಸಮಯಪ್ರಜ್ಞೆ, ಎಲ್ಲಕ್ಕಿಂತ ಮುಖ್ಯವಾಗಿ ಸಂವಹನ ಕಲೆ ಈ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕು. ಕಂಪೆನಿಯೊಂದರ ಬ್ರ್ಯಾಂಡ್‌ ಇಮೇಜ್‌ ಕಟ್ಟಿ ಬೆಳೆಸುವ ಮುಖ್ಯ ಜವಾಬ್ದಾರಿ ಇದು. ಪತ್ರಿಕೆ, ದೃಶ್ಯ ಮಾಧ್ಯಮದವರಿಗೆ ಮಾಹಿತಿ ಕಳಿಸಬೇಕಾದುದರಿಂದ ಬರವಣಿಗೆಯ ಕೌಶಲ್ಯವನ್ನೂ ಈ ವೃತ್ತಿ ಬೇಡುತ್ತದೆ. ಪಿ.ಆರ್‌. ಕ್ಷೇತ್ರದಲ್ಲಿ ಅನುಭವ ಪಡೆದಂತೆಲ್ಲ ಅತ್ಯುತ್ತಮ, ಪ್ರತಿಷ್ಠಿತ ಕಂಪೆನಿಗಳು, ಸೆಲಬ್ರಿಟಿಗಳೊಂದಿಗೆ ಗುರುತಿಸಿಕೊಳ್ಳುವ, ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಿ.ಆರ್‌. ಉದ್ಯೋಗಿಗಳಿಗೆ ದೊರೆಯುತ್ತದೆ. ಒಟ್ಟಿನಲ್ಲಿ ಪಿ.ಆರ್‌. ಎನ್ನುವುದು ಸಂಸ್ಥೆಯು ತನ್ನ ಹಾಗೂ ಸಾರ್ವಜನಿಕರ ನಡುವಣ ಬಾಂಧವ್ಯವನ್ನು ಇಟ್ಟುಕೊಳ್ಳಲು ನೆರವಾಗುವ ಕ್ಷೇತ್ರ. 

ವಿದ್ಯಾರ್ಹತೆ ಮತ್ತು ಕೌಶಲ
ಸಾಮಾನ್ಯವಾಗಿ ಜರ್ನಲಿಸಂ ಮತ್ತು ಮಾಸ್‌ ಕಮ್ಯೂನಿಕೇಷನ್‌ (ಪತ್ರಿಕೋದ್ಯಮ) ಓದಿದ ವಿದ್ಯಾರ್ಥಿಗಳೇ ಮುಂದೆ ಹೆಚ್ಚಾಗಿ ಪಿ.ಆರ್‌.ಗಳಾಗಿ ಸೇವೆ ಸಲ್ಲಿಸುತ್ತಾರೆ. ಅಲ್ಲದೆ ಬೇರೆ ಬೇರೆ ಕ್ಷೇತ್ರಗಳ ಪದವೀಧರರು ಪಿ.ಆರ್‌ ಕ್ಷೇತ್ರಕ್ಕೆ ಅಗತ್ಯವಾದ ಕೌಶಲಗಳನ್ನು ಹೊಂದಿದ್ದರೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬಹುದು. ಅಂಚೆ ಶಿಕ್ಷಣದ ಮೂಲಕ ಕಲಿತೂ ಪಿ.ಆರ್‌. ಕ್ಷೇತ್ರಕ್ಕೆ ಕಾಲಿಡಬಹುದು. ಓದುವ ಹವ್ಯಾಸವಿದ್ದರೆ ಔದ್ಯೋಗಿಕ ಬೆಳವಣಿಗೆಗೆ ಪ್ಲಸ್‌ ಪಾಯಿಂಟ್‌. ದಿನಪತ್ರಿಕೆ, ನಿಯತಕಾಲಿಕೆಗಳು ಮತ್ತು ಪುಸ್ತಕಗಳನ್ನು ಓದುವುದರಿಂದ ನಮ್ಮ ಸುತ್ತಮುತ್ತಲಿನ ಆಗುಹೋಗುಗಳು ತಿಳಿಯುವುದಲ್ಲದೆ ಇತರೆ ಪಿ.ಆರ್‌. ಸಂಸ್ಥೆಗಳ ಹೊಸ ಹೊಸ ಬ್ರ್ಯಾಂಡಿಂಗ್‌ ಪ್ರಯತ್ನಗಳ ಬಗ್ಗೆಯೂ ತಿಳಿದುಕೊಂಡಂತಾಗುತ್ತದೆ.  

ಉತ್ತಮ ಪಿ.ಆರ್‌. ಆಗುವುದು ಹೇಗೆ?
ಪಿ.ಆರ್‌. ಆದವರು ಇತರ ಕಂಪೆನಿಗಳ ಬ್ರಾಂಡಿಂಗ್‌ ತಂತ್ರಗಳನ್ನು, ಅವರು ಬಳಸುತ್ತಿರುವ ಮಾದರಿ, ಮಾಧ್ಯಮಗಳನ್ನು ಗಮನಿಸುತ್ತಿರಬೇಕು. ಕೇವಲ ಬರಹದಲ್ಲಿ ನಿಪುಣತೆ ಸಾಧಿಸುವುದಲ್ಲದೆ ಬ್ರಾಂಡ್‌ ಬೆಳೆಸಲು, ಹೊಸ ಕ್ಲಯಂಟ್‌ಗಳನ್ನು ಸಂಪರ್ಕಿಸಲು ಪಿ.ಆರ್‌. ಸಿದ್ಧನಾಗಬೇಕು. ಜೊತೆಗೆ ಕ್ಲಯಂಟ್‌ ಕುರಿತ ಧನಾತ್ಮಕ, ಸೃಜನಾತ್ಮಕ ನಿರೂಪಣೆಗಳನ್ನು ಹೆಣೆಯಬೇಕು. ಗ್ರಾಹಕರ ಮನಸ್ಸಿನಲ್ಲಿ ಕಂಪೆನಿಗೆ ಅನುಕೂಲಕರವಾದ ಚಿತ್ರಣ ಸೃrಸಬೇಕು, ಧನಾತ್ಮಕ ಚರ್ಚೆಗೆ ಸೂಕ್ತ ವೇದಿಕೆ ನಿುìಸಬೇಕು, ಅಡೆತಡೆಗಳನ್ನು ನಿವಾರಿಸಲು ಸಿದ್ಧರಿರಬೇಕು ಹಾಗು ಈವೆಂಟ್‌ಗಳನ್ನು ಪ್ರಮೋಟ್‌ ಮಾಡಬೇಕು. ಇವೆಲ್ಲವನ್ನು ಸಮರ್ಥವಾಗಿ ನಿಭಾುಸಬೇಕಾದರೆ ನಿಮ್ಮ ಟಾರ್ಗೆಟ್‌ ಆಡಿಯನ್ಸ್‌ ಯಾರೆಂದು ಗೊತ್ತಿರಬೇಕು. ಸುತ್ತಲಿನ ಸೂಕ್ಷ್ಮ ಬದಲಾವಣೆಗಳ ಮೇಲೆ ದೃುrದ್ದಾಗ ನೀವೊಬ್ಬ ಉತ್ತಮ ಪಿ.ಆರ್‌. ಆಗಬಲ್ಲಿರಿ.

ವಿವಿಧ ಪ್ರಚಾರ ತಂತ್ರಗಳು, ಮಾಧ್ಯಮಗಳ ಬಳಕೆ

ಪಿ.ಆರ್‌. ಜವಾಬ್ದಾರಿಗಳೇನು?
– ಪತ್ರಿಕಾ ಪ್ರಕಟಣೆಗಳನ್ನು ರೂಪಿಸಿ, ಸೂಕ್ತ ಸಮಯದಲ್ಲಿ ಅವು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವಂತೆ ಮಾಡುವುದು.
– ಸಂಸ್ಥೆಗೆ ಬೇಕಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಉಸ್ತುವಾರಿ ನೋಡಿಕೊಳ್ಳುವುದು.
– ಗ್ರಾಹಕರು/ ಸಾರ್ವಜನಿಕರು ಮತ್ತು ಸಂಸ್ಥೆಯ ನಡುವೆ ಸಕರಾತ್ಮಕ ಸಂವಹನ ಏರ್ಪಡುವಂತೆ ಮಾಡುವುದು 
– ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಸಂಸ್ಥೆಯ ಬ್ರಾಂಡ್‌ ಇಮೇಜ್‌ ಎತ್ತಿ ಹಿಡಿಯುವುದು.
– ಕ್ಲೈಂಟ್‌ (ನಿಯೋಜಿಸಿದ ಸಂಸ್ಥೆ ಅಥವಾ ವ್ಯಕ್ತಿ) ಇಮೇಜಿಗೆ ಹಾನಿಯಾಗುವ ಸಂದರ್ಭ ಒದಗಿದರೆ – ಪರಿಸ್ಥಿತಿ ತಿಳಿಯಾಗಿಸಿ, ಡ್ಯಾಮೇಜ್‌ ಕಂಟ್ರೋಲ್‌ ಮಾಡುವುದು.
– ಹೊಸ ಹೊಸ ಪ್ರಚಾರ ತಂತ್ರಗಳನ್ನು ರೂಪಿಸುವುದು
– ಇಂಟರ್‌ನೆಟ್‌, ದಿನಪತ್ರಿಕೆ, ದೃಶ್ಯ ಮಾಧ್ಯಮಗಳೆಲ್ಲವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು

ರಘು ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.