ಕೊಟ್ಟೂರಿನ ಟಾಪ್‌ಗೇರ್‌ ಚದುರೆ

ಈಕೆಯ ಅಪ್ಪನೂ "ದಂಗಲ್‌' ಹೀರೋ

Team Udayavani, Apr 23, 2019, 6:00 AM IST

13

ತಾನು ರಿಪೇರಿ ಮಾಡಿದ ಬೈಕುಗಳೆಲ್ಲ ಟಾಪ್‌ಗೇರ್‌ನಲ್ಲಿ ಹೊರಡುವಾಗ, ಇನ್ನು ಹೃದಯದ ತುಂಬಾ ಜೋಶ್‌ ತುಂಬಿಕೊಂಡ ಕುಸುಮಾ ಟಾಪ್‌ ಬರದೇ ಇರುತ್ತಾಳಾ?

ಸಾಧಕನ ನಿಜವಾದ ಪರೀಕ್ಷೆ ಹಿಮಾಲಯದಲ್ಲಿ ತಪಸ್ಸನ್ನಾಚರಿಸುವುದರಲ್ಲಿ ಇಲ್ಲ. ಜನರ ಸಂತೆಯ ನಡುವೆಯೇ, ಪ್ರಾಪಂಚಿಕ ವ್ಯವಹಾರಗಳ ನಡುವೆಯೇ ಇದ್ದುಕೊಂಡು ಧ್ಯಾನಸ್ಥನಾಗುವುದೇ ಸಾಧನೆ. ಈ ನಿದರ್ಶನಕ್ಕೆ ಸಾಕ್ಷಿಯಾಗಿದ್ದಾಳೆ ಕೊಟ್ಟೂರಿನ ಕುಸುಮ. ಮನೆಯಲ್ಲಿ ನೂರೆಂಟು ತಾಪತ್ರಯಗಳು, ಆರ್ಥಿಕ ಮುಗ್ಗಟ್ಟು, ಅಪ್ಪನ ಪಂಕ್ಚರ್‌ ಅಂಗಡಿಯಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ. ಆದರೆ ಇವ್ಯಾವುವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅವಳು ಮೊದಲ ಸ್ಥಾನ ಪಡೆಯುವುದನ್ನು ತಪ್ಪಿಸಲಿಲ್ಲ. ಟೈಮ್‌ಟೇಬಲ್‌ ಹಾಕಿಕೊಳ್ಳದೆ, ಮಿಲಿಟರಿ ಶಿಷ್ಟಾಚಾರಗಳಿಲ್ಲದೆಯೂ ಈ ಸಾಧನೆ ಮಾಡಿದ್ದು ಹೇಗೆ ಎಂದು ಕೇಳಿದರೆ ಕುಸುಮ ಹೇಳಿದ್ದು “ಎಲ್ಲಿ ಕಂಟಿನ್ಯುಟಿ ಮಿಸ್‌ ಆಗಿಬಿಡುತ್ತದೋ ಎಂದು ಒಂದಿನವೂ ತರಗತಿಗೆ ಚಕ್ಕರ್‌ ಹಾಕಿಲ್ಲ.’ ಎಂದು. ಹುಷಾರು ತಪ್ಪಿದಾಗಲೂ ಕುಸುಮ ಕಾಲೇಜ್‌ ಬಂಕ್‌ ಮಾಡಿಲ್ಲ. “ಜ್ವರ ಬಂದರೆ ಮಾತ್ರೆ ತೆಗೆದುಕೊಂಡುಬಿಟ್ಟರೆ ಹೋಗುತ್ತದೆ. ಆದರೆ ಪಾಠ ಮಿಸ್‌ ಆಗಿಬಿಟ್ಟರೆ ಮತ್ತೆ ವಿಷಯವನ್ನು ಗ್ರಹಿಸುವುದು ಕಷ್ಟ.’ ಎಂದು ನಗುತ್ತಾಳೆ ಆಕೆ.

ತಾನು ರಿಪೇರಿ ಮಾಡುವ ಬೈಕಿಗೂ, ಈ ಬದುಕಿಗೂ ಹೆಚ್ಚೇನೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ತಣ್ತೀದಲ್ಲಿ ನಂಬಿಕೆ ಇಟ್ಟವರು, ಕುಸುಮಾ. ಪಂಕ್ಚರ್‌ ಆಗದೇ ನಾವು ಮುಂದೆ ಸಾಗೋದು ಹೇಗೆ, ಯಾವ್ಯಾವ ಗತಿಯಲ್ಲಿ ಯಾವ್ಯಾವ ಗೇರ್‌ ಹಾಕಿ ಮುಂದೆ ಸಾಗಬೇಕು, ಯಾವ ಅಪಾಯದ ಸನ್ನಿವೇಶದಲ್ಲಿ ಬ್ರೇಕ್‌ ಒತ್ತಬೇಕು, ಸಮಾನ ಮನಸ್ಕರೊಂದಿಗೇ ಪಯಣಿಸಬೇಕು… ಇವೆಲ್ಲವೂ ಬದುಕಿಗೂ ಅನ್ವಯ. ರಿಪೇರಿ ಮಾಡಿದ ಬೈಕುಗಳೆಲ್ಲ ಟಾಪ್‌ಗೇರ್‌ನಲ್ಲಿ ಹೊರಡುವಾಗ, ಇನ್ನು ಹೃದಯದ ತುಂಬಾ ಜೋಶ್‌  ತುಂಬಿಕೊಂಡ ಕುಸುಮಾ ಟಾಪ್‌ ಬರದೇ ಇರುತ್ತಾಳಾ?

ಅಂದಹಾಗೆ ಅವರ ಮನೆಯಲ್ಲಿ ಒಟ್ಟು ಐವರು ಮಕ್ಕಳು. ಕುಸುಮ ಕೊನೆಯವಳು. ದೊಡ್ಡ ಅಣ್ಣ ತಂದೆಗೆ ನೆರವಾಗುತ್ತಿದ್ದರೆ ಉಳಿದ ಮೂವರು ಅಕ್ಕಂದಿರು ಎಂ.ಕಾಂ, ಬಿ.ಎಡ್‌, ಬಿ.ಎಸ್ಸಿ ಓದಿದ್ದಾರೆ. ತಾನು ಓದದೇ ಇದ್ದರೂ ತಮ್ಮ ಮಕ್ಕಳನ್ನು ಓದಿಸಬೇಕೆಂಬುದು ದೇವೇಂದ್ರಪ್ಪನ ಕನಸು. “ದಂಗಲ್‌’ ಸಿನಿಮಾದಲ್ಲಿ ಅಕ್ಕ ತಂಗಿಯರು ಕಬಡ್ಡಿಯಲ್ಲಿ ಮೆಡಲ್‌ ಗೆಲ್ಲುವ ಅಪ್ಪನ ಕನಸನ್ನು ನೆರವೇರಿಸಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲೂ ಕುಸುಮ ಮತ್ತವಳ ಅಕ್ಕಂದಿರು ಚೆನ್ನಾಗಿ ಓದಿ ತಮ್ಮ ತಂದೆಗೆ ಹೆಮ್ಮೆಯನ್ನುಂಟು ಮಾಡಿರುವುದು ಯಾವುದೇ ಒಲಿಂಪಿಕ್‌ ಮೆಡಲ್‌ಗ‌ೂ ಕಡಿಮೆ ಸಾಧನೆಯೇನಲ್ಲ.

– ಹವನ

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.