ಪಂಬ್ಲರ್ ಒಬ್ಬನ ಪಂಚಿಂಗ್ ಸ್ಟೋರಿ
Team Udayavani, Aug 1, 2017, 2:40 PM IST
ನಲ್ಲಿ ರಿಪೇರಿ ಮಾಡುವ ಕಾನರ್ ಎಂಬಾತನನ್ನು ಡೆವಿಲಿನ್ ಎಂಬಾಕೆ, ಬಾಕ್ಸರ್ ಆಗಿ ರೂಪಿಸಿದ ಕತೆಯಿದು… ಒಂದು ದಿನ ಬಾಕ್ಸಿಂಗ್ ರಿಂಗ್‌ನಲ್ಲಿ ಅವನು ಸೋತಾಗ…
ಅಲ್ಲಿ ಕುಸ್ತಿ ಪಂದ್ಯ ನಡೆಯುತ್ತಿತ್ತು. ಇಬ್ಬರು ವ್ಯಕ್ತಿಗಳು ರಕ್ತ ಬರುವಂತೆ ಹೊಡೆದಾಡುತ್ತಿದ್ದರೆ, ಸುತ್ತಲೂ ನೆರೆದಿರುವ ಮಂದಿ ಜೋರಾಗಿ ಹರ್ಷೋದ್ಗಾರ ಮಾಡುತ್ತಿದ್ದಾರೆ. ಹೊಡೆದಾಟದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆ ಯುಎಫ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವದು. ಹೊಡೆತ ತಿನ್ನುತ್ತಿದ್ದ ವ್ಯಕ್ತಿ ದಣಿದಿದ್ದ, ಹೈರಾಣಾಗಿ ಹೋಗಿದ್ದ. ಎದುರಾಳಿಯ ಪಟ್ಟುಗಳು, ಗುದ್ದುಗಳು ಅವನನ್ನು ಪ್ರಜ್ಞಾಹೀನ ಸ್ಥಿತಿಯವರೆಗೆ ತಂದು ನಿಲ್ಲಿಸಿತ್ತು.
ಪಂದ್ಯಾವಳಿಯಲ್ಲಿ ಆತ ಫೈನಲ್ ತನಕ ಬಂದಿದ್ದೇ ಹೆಚ್ಚು ಎನ್ನುವ ಅಭಿಪ್ರಾಯವೇ ಎಲ್ಲರಲ್ಲೂ. ಯಶಸ್ಸಿಗೆ ಆತ ಅಷ್ಟು ಹತ್ತಿರ ಬಂದಿದ್ದು ಅದೇ ಮೊದಲು. ಕಾನರ್‌ನಲ್ಲಿ ದುಃಖ ಮಡುಗಟ್ಟಿತ್ತು. ಇಡೀ ಬದುಕೇ ಒಂದು ಕ್ಷಣದಲ್ಲಿ ಕಣ್ಣ ಮುಂದೆ ಹಾದು ಹೋಗಿತ್ತು. ಒಂದೊಮ್ಮೆ ಪಂಬ್ಲಿರ್ ಆಗಿದ್ದ ಆತನಿಗೆ ಬದುಕು ಇನ್ನಿಲ್ಲದಷ್ಟು ಪಾಠಗಳನ್ನು ಕಲಿಸಿತ್ತು. ತುತ್ತು ಅನ್ನಕ್ಕೂ ಪರದಾಡಿದ್ದ. ಅದಕ್ಕೇ ತಾನು ಸೋಲುತ್ತಿರುವುದು ಈ ಒಂದು ಪಂದ್ಯದಲ್ಲಿ ಮಾತ್ರವಲ್ಲ, ಬದುಕಿನಲ್ಲೂ ಎಂಬ ಭಾವನೆ ಮೂಡಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಪೈಪ್ ದುರಸ್ತಿ ಮಾಡುತ್ತಿದ್ದ ಕೂಲಿಯನ್ನು ಈ ಮಟ್ಟಕ್ಕೆ ಬೆಳೆಸಿದವಳಿಗೆ ನಿರಾಶೆ ಮಾಡಿದೆನಲ್ಲ ಎಂಬ ದುಃಖ ಬೇರೆ! ರೆಫರಿ ಎದುರಾಳಿಯನ್ನು ಜಯಶಾಲಿಯೆಂದು ಘೋಷಿಸುತ್ತಿದ್ದಂತೆಯೇ ಪ್ರೇಕ್ಷಕರ ಉನ್ಮಾದ ಮುಗಿಲು ಮುಟ್ಟಿತ್ತು.
“ನಗುವಾಗ ಎಲ್ಲಾ ನೆಂಟರು, ಅಳುವಾಗ ಯಾರೂ ಇಲ್ಲ’ ಎನ್ನುವ ಹಾಡಿನ ಸಾಲಿನಂತೆ ಇವನ ಬಳಿ ಯಾರೂ ಇರಲಿಲ್ಲ. ಅತ್ತ ಗೆದ್ದವನನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರೆ ಇತ್ತ ಧರಾಶಾಯಿಯಾಗಿದ್ದ ಕಾನರ್‌ಗೆ ಹೆಗಲು ನೀಡಿದ ಒಬ್ಬಳು ಹೆಣ್ಣುಮಗಳು ಅವನನ್ನು ಚಿಕಿತ್ಸಾ ಕೋಣೆಯೊಳಕ್ಕೆ ಕರೆದೊಯ್ಯಲು ಹರಸಾಹಸ ಪಡುತ್ತಿದ್ದಳು. ಅವಳೇ ಕಾನರ್‌ನ ಪ್ರೇಯಸಿ ಡೆವಿಲಿನ್.
ಅಕೆಯ ಬಗ್ಗೆ ಕೆಲ ಮಾತುಗಳನ್ನು ಹೇಳಲೇಬೇಕು. ಅವಳು ಕಾನರ್‌ನನ್ನು ಭೇಟಿಯಾದಾಗ ಆತ ಒಬ್ಬ ಸರ್ವೇಸಾಮಾನ್ಯ ಕೂಲಿ! ಅವನಿಗೆ ಮುಂಚಿನಿಂದಲೂ ಫೈಟಿಂಗ್‌ನಲ್ಲಿ ಆಸಕ್ತಿಯಿತ್ತು. ಕಾನರ್ ತನ್ನ ಕನಸಿನ ಸಾಕಾರಕ್ಕಾಗಿ ಮುನ್ನುಗ್ಗಲು ಪ್ರೇರಣೆ ಮತ್ತು ಬೆನ್ನೆಲುಬಾಗಿ ನಿಂತಿದ್ದೇ
ಡೆವಿÉನ್. ಪ್ರೇರಣೆ ಎಂದರೆ ಬರೀ ಪ್ರೇರಣೆಯೇ ಅಲ್ಲ. ಅವಳು ಅವನಿಗಾಗಿ ತನ್ನ ಆಸೆ ಕನಸುಗಳನ್ನೇ ಮುಡಿಪಿಟ್ಟಿದ್ದಳು. ಅವನು ದಿನವಿಡೀ ಜಿಮ್‌ನಲ್ಲಿ ಕಸರತ್ತಿನಲ್ಲಿ ನಿರತನಾಗಿದ್ದರೆ ಡೆವಿಲಿನ್ ಮನೆಯಲ್ಲಿ ಅವನ ಬಟ್ಟೆ ಒಗೆಯುತ್ತಾ, ಅಡುಗೆ ಮಾಡಿ ಜಿಮ್‌ಗೆ ಕೊಂಡೊಯ್ಯುತ್ತಿದ್ದಳು. ಕುಸ್ತಿ ಅಂಕಣದಲ್ಲಿ ಪ್ರೇಕ್ಷಕರ ಸೀಟಿನಲ್ಲಿ ಕೂತು ಹುರಿದುಂಬಿಸುತ್ತಿದ್ದಳು.
ತನಗಾಗಿಯಲ್ಲದಿದ್ದರೂ ಅವಳಿಗಾಗಿಯಾದರೂ ಪಂದ್ಯ ಗೆಲ್ಲಬೇಕೆಂದೇ ಕಾನರ್ ಕಣಕ್ಕೆ ಇಳಿದಿದ್ದ. ಆದರೀಗ ಅವನಾಸೆ ನುಚ್ಚು ನೂರಾಗಿತ್ತು. ತನ್ನ ಕನಸು ಈಡೇರದ್ದಕ್ಕೆ ಆದ ಬೇಸರಕ್ಕಿಂತ, ತನ್ನ ಮೇಲೆ ಭರವಸೆ ಇರಿಸಿದ್ದ ಡೆವಿಲಿನ್ನನ್ನು ನಿರಾಶೆಗೊಳಿಸಿದೆನಲ್ಲ ಎಂಬ ನೋವೇ ಅವನನ್ನು ಹೆಚ್ಚಾಗಿ ಕಾಡಿತ್ತು. ಆದರೆ, ಡೆವಿಲಿನ್ ಎಂಥ ಹೆಣ್ಣುಮಗಳೆಂದರೆ ಅವಳು ಒಂದಿನಿತೂ ಬೇಸರ ತೋರಲಿಲ್ಲ. ಬದಲಾಗಿ ಅವನನ್ನು ಆತ್ಮೀಯವಾಗಿ ಆಲಂಗಿಸಿದಳು. ಇದೇ ಅಲ್ಲವೇ, ಪ್ರೀತಿ ಎಂದರೆ? ಇಬ್ಬರ ಕಣ್ಣಾಲಿಗಳು ತುಂಬಿ ಬಂದವು. ನೋಡ ನೋಡುತ್ತಿದ್ದಂತೆಯೇ ಇಬ್ಬರು ಪ್ರೇಮಿಗಳ ಚುಂಬನಕ್ಕೆ ಇಡೀ ಸ್ಟೇಡಿಯಂ ಸಾಕ್ಷಿಯಾಯಿತು. ಕ್ಯಾಮೆರಾಗಳು ಅವರತ್ತ ತಿರುಗಿದವು. ರಾತ್ರೋರಾತ್ರಿ ಕಾನರ್- ಡೆವಿಲಿನ್ ಪ್ರಖ್ಯಾತರಾದರು. ಅಂದು ಅವನು ನಿಜಕ್ಕೂ ಸೋತು ಗೆದ್ದಿದ್ದ.
ಅಂದಹಾಗೆ, ಕಾನರ್ ಈಗ ಎರಡು ಚಾಂಪಿಯನ್‌ಶಿಪ್ ಪ್ರಶಸ್ತಿಗಳ ಒಡೆಯ.
ಜೋತ್ಸ್ನಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.