ಡ್ರಾಪ್‌ ಔಟ್‌ ದೊರೆಗೆ ರ್‍ಯಾಂಕ್‌ ಬೆಡಗಿಯ ಪ್ರೇಮ ಪತ್ರವು…


Team Udayavani, Mar 6, 2018, 3:54 PM IST

dropout.jpg

ಬದುಕೋದು ನಿನ್ನೊಂದಿಗೇ ಎಂದು ನಿರ್ಧರಿಸಿದ ಆಗಿದೆ. ಇನ್ನಾದ್ರೂ ಲೈಫ್ ಬಗ್ಗೆ ಸೀರಿಯಸ್‌ ಆಗು. ಓಹೋ ಅನ್ನುವಷ್ಟಲ್ಲದಿದ್ದರೂ ಓಕೆ ಅನ್ನುವಷ್ಟು ಸಂಬಳ, ಸೂಪರ್‌ ಅಲ್ಲದಿದ್ದರೂ ಸಾಧಾರಣ ಅನ್ನುವಂಥ ಪುಟ್ಟ ಮನೆ ಮಾಡು. ಆ ಮನೇಲಿ ಕೂತು ಭವಿಷ್ಯದ ಬಗ್ಗೆ ಪ್ಲಾನ್‌ ಮಾಡೋಣ. 

ಹಾಯ್ ಈಡಿಯಟ್‌, ಹೇಗಿದ್ದೀಯಾ? ನಿಂಗೆ ಈಡಿಯಟ್‌ ಅಲ್ಲದೇ ಬೇರೆ ಹೆಸರು ಒಪ್ಪಲ್ಲ ಕಣೋ. ಅಮ್ಮನ ಪಕ್ಕ ಕುಳಿತು ಲಕ್ಷ್ಮೀ ಸರಸ್ವತಿ ಪೂಜೆ ಮಾಡ್ತಾ ಇದ್ದ ಮುದ್ದು ಗೌರಿಯಂಥ ಹುಡುಗೀನ, ಹೀಗೆ ಕೋಣೆಯ ಬಾಗಿಲು ಹಾಕ್ಕೊಂಡು 143 ಮಗ್ಗಿ ಗಟ್ಟು ಮಾಡುವ ಹಾಗೆ ಮಾಡಿºಟ್ಯಲ್ಲೋ? ನೀನು ಕರಿಯ, ನಾನು ಬೆಳದಿಂಗಳು. ನೀನು ಪೆದ್ದು ನಾನು ಮುದ್ದು. ನೀನು ಕೊಳ್ಕ, ನಾನು ಫೇರ್‌ ಅಂಡ್‌ ಲವ್ಲಿ.

ನೀನು ಒರಟ, ನಾನು ಹಾಲುಗೆನ್ನೆಯ ಹುಡುಗಿ. ನೀನು ಎಸ್ಸೆಸ್ಸೆಲ್ಸಿ ಡುಮ್ಕಿ, ನಾನು ಬಿ.ಎಸ್ಸಿ ಟಾಪು. ನಾನು ಎಂ.ಜಿ ರೋಡು, ನೀನು ಕೊತ್ತನೂರು. ನಾನು ಪಿ.ವಿ.ಆರ್‌, ನೀನು ಬಾಲಜಿ ಟೆಂಟು. ನಾನು ಪುಳಿಯೊಗರೆ, ನೀನು ಎಸ್‌.ಎಲ್.ವಿ ಕಾಲುಸೂಪು. ನಾನು ಎಮ್ಮೆಸ್‌ ಸುಬ್ಬುಲಕ್ಷ್ಮೀ ನೀನು ಹರಿಕೃಷ್ಣ. ನಾನು ಶಿವ ಶಿವ ಗುರುರಾಘವೇಂದ್ರ ಸ್ವಾಮಿ, ನೀನು ಜಲಗೇರಮ್ಮ ಮುಳ್ಕಟ್ಟಮ್ಮ ದೇವಿ. ನಾನು ತುಳಸಿ ಪಂಚಾಮೃತ ತೀರ್ಥ, ನೀನು ಪಕ್ಕಾ ಲೋಕಲ್ ಒರ್ಜಿನಲ್ ಚಾಯ್ಸು! ಛೇ ಏನ್‌ ಜೀವ°ನೋ ನಿಂದು? ನನಗೂ ನಿನಗೂ ಒಂದ್‌ ವಿಷ್ಯದಲ್ಲೂ ಮ್ಯಾಚ್‌ ಆಗ್ತಾ ಇಲ್ವಲ್ಲ?

ನಿನ್ನ ಪ್ರೀತೀಲಿ ಬೀಳಬಾರದು ಅಂತ ಎಷ್ಟೆಲ್ಲ ಕಷ್ಟಪಟ್ಟೆ ಗೊತ್ತಾ? ನೀನು ಹೇಳಿದ ಜಾಗಕ್ಕೆ ಬರಲಿಲ್ಲ, ನಿನ್ನ ಪತ್ರಗಳಿಗೆ ಉತ್ತರ ಬರೆಯಲಿಲ್ಲ, ಕಾಲೇಜಿಗೆ ಹೋಗುವಾಗ ಭಿಕ್ಷುಕನ ಹಾಗೆ ನಿಂತಿರುತ್ತಿದ್ದ ನಿನ್ನನ್ನ ತಿರುಗಿ ಕೂಡ ನೋಡಲಿಲ್ಲ, ಆದರೆ ನೀನು ಮಾತ್ರ ಅಖಂಡ ತಪಸ್ವಿ. ನಿನಗೆ ಗೊತ್ತಿತ್ತಾ? ಒಂದಲ್ಲ ಒಂದು ದಿನ ಈ ಪುಳಿಚಾರು, ಚಿಕನ್‌ ಬಿರಿಯಾನಿಗೆ ಫಿದಾ ಆಗೇ ಆಗುತ್ತೆ ಅಂತ ?

ಬರೋಬ್ಬರಿ ಐದು ವರ್ಷದ ನಿನ್ನ ಪ್ರಾಮಾಣಿಕ ಪ್ರೀತಿಗೆ ಫಿದಾ ಆಗದೆ ಹೇಗಿರಲಿ ಹೇಳು? ನಿನ್ನಲ್ಲಿ ಕಪಟವಿರಲಿಲ್ಲ, ವಂಚನೆಯಿರಲಿಲ್ಲ, ಸುಳ್ಳು ಇರಲಿಲ್ಲ, ನನಗಾಗಿ ಸುಳ್ಳೇ ಬದಲಾಗಲಿಲ್ಲ, ನೀನು ಹೇಗಿದ್ದೆಯೋ ಹಾಗೆ ಇದ್ದೆ. ಅದೇ ಪ್ರೀತಿಯನ್ನ, ಅದೇ ಅಂತರವನ್ನ, ಇವತ್ತಿಗೂ ಉಳಿಸಿಕೊಂಡು ಬಂದಿದ್ದೀಯಾ ಅಲ್ವಾ… ಅದೇ ನನಗಿಷ್ಟವಾಗಿದ್ದು. ಇನ್ನು ಮುಂದೆ ಮನೆ ಕೆಲ್ಸದವಳ ಹತ್ತಿರ ಕಾಗುಣಿತ ಸರಿ ಇಲ್ಲದ ನಿನ್ನ ಪ್ರೇಮ ಪತ್ರ ಕಳ್ಸೋದು ನಿಲ್ಸು ಮಾರಾಯ.

ನಿನ್ನ ಕನ್ನಡ ನೋಡಿ ನನ್ನ ಕನ್ನಡ ಆತ್ಮಹತ್ಯೆ ಮಾಡ್ಕೊಳ್ಳುತ್ತೆ. ಸ್ವಲ್ಪ ಹುಡುಗಾಟ ಕಡ್ಮೆ ಮಾಡು. ಇಲ್ಲಿಯವರೆಗೆ ಹಿಂದೆ ಸುತ್ತಿದ್ದು, ಅತ್ತಿದ್ದು, ಬೇಡಿಕೊಂಡಿದ್ದು ಎಲ್ಲವೂ ಈಗ ಮುಗಿದ ವಿಷಯ. ನಾನು ಬದುಕೋದಾದ್ರೆ ನಿನ್ನ ಜೊತೆ ಅಂತ ತೀರ್ಮಾನಿಸಿಯಾಗಿದೆ, ನನ್ನ ಚೆನ್ನಾಗಿ ನೋಡ್ಕೊತೀಯಾ ಅನ್ನೋ ನಂಬಿಕೆ ನನಗೂ ಬರಬೇಕಲ್ಲ ಹುಡುಗಾ? ಅದಕ್ಕೋಸ್ಕರ ಒಂದು ಸಣ್ಣ ಕೆಲ್ಸ,

ಓಹೋ ಅನ್ನುವಷ್ಟಲ್ಲದಿದ್ರೂ ಓಕೆ ಅನ್ನುವಷ್ಟು ಸಂಬಳ, ಸೂಪರ್‌ ಅಲ್ಲದಿದ್ದರೂ ಡಬಲ್‌ ಬೆಡ್‌ರೂಮಿನ, ಸಾಧಾರಣ ಅನ್ನುವಂಥ ಮನೆ, ಈಗ ಉಳಿಸಿಕೊಂಡಿದ್ದೀಯಲ್ಲ ಅದೇ ಪ್ರೀತಿಯನ್ನ ಜೀವನಪೂರ್ತಿ ನನಗೆ ಕೊಡ್ತೀನಿ ಅನ್ನೊ ಒಂದು ನಂಬಿಕೆ.. ಇಷ್ಟೇ ಸಾಕು ಕಣೋ ಈ ಹುಡುಗಿಗೆ. ಮುಂದೆ ನಿನಗೆ ಪುಳಿಯೊಗರೆ ತಿನ್ನಿಸೋದಾ ಅಥವಾ ನಾನೇ ಬಿರಿಯಾನಿ ಮಾಡೋದ್ನ ಕಲಿಯೋದಾ ಅನ್ನೋದನ್ನ ಇಬ್ಬರೂ ಕುಳಿತು ಯೊಚಿಸೋಣ.

ನಿನ್ನ
* ನವಿಲೂರ್‌ ಹುಡುಗಿ

ಟಾಪ್ ನ್ಯೂಸ್

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

1-raj

Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್‌ ಫೈನಲ್‌ಗೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-saaai

Malaysia Super 1000; ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.