ಓದು ಜನುಮೇಜಯ… ರೆಡೀ ಸ್ಟಾಡಿ


Team Udayavani, Dec 3, 2019, 10:32 AM IST

JOSH-TDY-1

ಪರೀಕ್ಷೆ ಎಂದರೆ ಸಾಕು, ಬರೀ ಮಕ್ಕಳಷ್ಟೇ ಅಲ್ಲ, ಪೋಷಕರಿಗೂ ನಡುಕ! ಈ ಪರೀಕ್ಷೆ ಎನ್ನುವಗುಮ್ಮನ ಭಯಕ್ಕಿಂತಲೂ ಪರೀಕ್ಷೆಯಲ್ಲಿ ನಾನು ಫೇಲ್‌ಆದರೆ ಎನ್ನುವ ಭಯವೇ ಅತಿಯಾಗಿ ಕಾಡುವುದು. ಅಸಲಿಗೆ, ಈ ಪರೀಕ್ಷೆ ಎಂದರೇನು? ಮಕ್ಕಳು, ತಾವು ಅಭ್ಯಸಿಸಿದ ಪಾಠಗಳನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ಅರಿಯಲು ಮತ್ತು ಆ ಕಲಿಕೆಯ ಸಾಮರ್ಥ್ಯವನ್ನು ಅಂಕದ ರೂಪದಲ್ಲಿ ಕೊಡುವ ಒಂದು ಕ್ರಮ ಅಷ್ಟೇ. ಹೀಗಿರುವಾಗ, ಪರೀಕ್ಷೆ ಎಂದರೆ ಒಂದು ಭೂತವೇನೋ ಎಂಬಂಥ ಭಯ ಏಕೆ? ಅದರೊಟ್ಟಿಗೆ, ಓದು ಓದುಅನ್ನುವ ಮೂಲಕ ಪೋಷಕರು ಸೃಷ್ಟಿಸುವ ಒತ್ತಡದಿಂದ ಮಕ್ಕಳ ಕಂಗಾಲಾಗೋದು ನಿಶ್ಚಿತ.

ಎಷ್ಟು ಗಂಟೆ ಓದಬೇಕು? ಮತ್ತು ಹೇಗೆ ಓದಬೇಕು? ಓದಿಗೆ ಯಾವ ಸಮಯ ಸೂಕ್ತ? ಎನ್ನುವ ಗೊಂದಲ ಬೇರೆ. ಹೀಗಾದಾಗ, ಎಷ್ಟು ಓದಿದರೂ ಪರೀಕ್ಷೆಯ ವೇಳೆಯಲ್ಲಿ ಎಲ್ಲವೂ ಮರೆತು ಹೋಗುವುದು, ಪರೀಕ್ಷೆಯ ಸಂದರ್ಭದಲ್ಲೇ ಆರೋಗ್ಯ ಕೆಡುವುದು, ಓದಲು ಸಮಯ ಸಾಕಾಗದೇ ಹೋಗುವುದು, ಬಿಟ್ಟೂ ಸಮಸ್ಯೆ ತಲೆನೋವು ಬರುವುದು ಮುಂತಾದ ಕಾರಣಗಳು ಧುತ್ತೆಂದು ಜೊತೆಯಾಗಿಬಿಡುತ್ತವೆ. ಇವೆಲ್ಲಾ ಒತ್ತಡದ ಓದಿನ ಲಕ್ಷಣಗಳು. ನೆನಪಿರಲಿ!ಓದಿಗೆ ಶಾರ್ಟ್‌ ಕಟ್‌ ಇಲ್ಲ. ಪರೀಕ್ಷೆ ಎಂಬ ಮೂರುಗಂಟೆಗಳ ಕಾಲದ ಪ್ರದರ್ಶನದಲ್ಲಿ ಪಾಸ್‌ ಆಗಲು ವರ್ಷ ಪೂರ್ತಿ ಸಿದ್ಧತೆ ಬೇಕೇ ಬೇಕು. ಅದಕ್ಕೆ ಹೀಗೆಲ್ಲಾ ಮಾಡಿ.

ಓದುವ ಸ್ಥಳ ಪ್ರಶಾಂತವಾಗಿರಲಿ: ನೀವು ಓದಲು ಎಲ್ಲಿ ಕೂರುತ್ತೀರಿ ಎನ್ನುವುದು ಬಲು ಮುಖ್ಯ. ಓದಲು ಕೂರುವ ಸ್ಥಳ ಅನಗತ್ಯವಾದ ಗಲಾಟೆ ಮತ್ತು ನಿಮ್ಮ ಏಕಾಗ್ರತೆಯನ್ನು ಭಂಗ ಮಾಡುವ ತಾಣವಾಗದಿರಲಿ. ಓದಲು ಕೂತ ರೂಮಿನಲ್ಲಿ ಅಪ್ಪಿತಪ್ಪಿಯೂ ಟಿ.ವಿ, ಮ್ಯೂಸಿಕ್‌ ಸಿಸ್ಟಮ್‌ ಬೇಡ.ಓದಲು ಗ್ರೂಪ್‌ ಸ್ಟಡಿ ಒಳ್ಳೆಯದೇ. ಆದರೆ, ನಿಮ್ಮೊಂದಿಗೆ ಓದಲು ಕೂರುವವರಿಗೂ ನಿಮ್ಮಂತೆಯೇ ಓದಿನಲ್ಲಿ ಆಸಕ್ತಿ ಇರಲೇಬೇಕು. ಅಲ್ಲಿ ನೀವು ಕಲಿತ ಪಾಠಗಳನ್ನು ಚರ್ಚಿಸಿ ಸಂದೇಹಗಳನ್ನು ಬಗೆಹರಿಸಿ ಕೊಳ್ಳಬಹುದು. ಹೀಗೆ ಚರ್ಚಿಸುವುದರಿಂದ ಓದಿದ್ದು ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ಗ್ರೂಪ್‌ ಸ್ಟಡಿಗೆ ಕೂತಾಗಕಾಡುಹರಟೆ ಶುರುವಾದರೆ, ಅಮೂಲ್ಯ ಸಮಯ ಪೋಲಾಗುತ್ತದೆ. ಹಾಗಾಗದಿರಲಿ.

ಆರಂಭದಿಂದಲೂ ಓದಿ: ಪಠ್ಯದಲ್ಲಿರುವ ಆರಂಭಿಕ ಪಾಠದಿಂದಲೂ ಓದಿ. ಏಕೆಂದರೆ, ಆರಂಭದ ಪಾಠಗಳು ನಂತರದ ಪಾಠಗಳಿಗೆ ಕೊಂಡಿಯಂತಿರುತ್ತವೆ. ಸಮಾಧಾನವಾಗಿ, ಒಂದಾದ ಮೇಲೊಂದು ಪಾಠಗಳನ್ನು ಓದಿ, ಮನನ ಮಾಡುತ್ತಾ ಹೋಗಿ. ಕೊನೆಯಲ್ಲಿ, ಆ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ಓದಿದಪಾಠವನ್ನು ಕೀ ವರ್ಡ್ಸ್‌ಗಳ ಮೂಲಕ ನೆನಪಿನಲ್ಲಿಡಲು ಪ್ರಯತ್ನಿಸಿ ಮತ್ತು ಆ ಕೀ ವರ್ಡ್ಸ್‌ ಅನ್ನು ಅಲ್ಲಿಯೇ ಬರೆದಿಡಿ. ಅದಕ್ಕೆ ಮೈಂಡ್‌ ಮ್ಯಾಪ್‌ ಅಥವಾ ಫ್ಲೋ ಚಾರ್ಟ್ಸ್ಅಂ ತಾರೆ. ಮುಂದೆ ಆ ಪಾಠ ಓದಲು ಬಂದಾಗ ಆ ಕೀ ವರ್ಡ್ಸ್‌ ನೋಡಿದರೆ, ಅಷ್ಟೂ ಪಾಠ ನಿಮಗೆ ನೆನಪಾಗಬೇಕು.

ಇನ್ನೊಂದು ವಿಚಾರ ಏನೆಂದರೆ, ನಿಮಗೆ ಬೇಕಿರುವ ಎಲ್ಲಾ ಪಠ್ಯಪುಸ್ತಕಗಳು, ಗೈಡ್‌, ಪೆನ್‌, ಪೆನ್ಸಿಲ್ಜಾ ಮಿಟ್ರಿ ಬಾಕ್ಸ್‌, ರಬ್ಬರ್‌ ಹೀಗೆ ಪ್ರತಿಯೊಂದು ವಸ್ತುವೂ ಕೈಗೆಟಕುವ ದೂರದಲ್ಲಿರಲಿ. ಎಲ್ಲೆಲ್ಲೋ ಇಟ್ಟು, ಬೇಕಾದಾಗ ಎದ್ದು ಹುಡುಕಿಕೊಳ್ಳುವುದರಲ್ಲೇ ಅಧಿಕ ಸಮಯ ವ್ಯರ್ಥವಾಗೋದು ಬೇಡ. ಹೀಗೆ ಹುಡುಕಾಟ ಮಾಡುತ್ತಿರುವಾಗಲೇ ಎಷ್ಟೋ ಸಲ ಓದುವ ಮೂಡ್‌ ಹಾಳಾಗಿ ಹೋಗುತ್ತದೆ.

ಯಾವ ಸಮಯ ಉತ್ತಮ?: ಓದಲು ಬೆಳಗಿನ ಜಾವವೇ ಸೂಕ್ತವಾದರೂ ಕೆಲವರಿಗೆ ಏಳಲು ಸಾಧ್ಯವಾಗುವುದಿಲ್ಲ. ಅಂಥವರು ರಾತ್ರಿಯೇ ಓದಿ ಮಲಗುವುದು ಸೂಕ್ತ. ರಾತ್ರಿ ಮಲಗುವಾಗ ಮುಂಜಾನೆ ಬೇಗ ಎದ್ದರಾಯ್ತು ಎಂದೋ, ರಾತ್ರಿ ತುಂಬಾ ಹೊತ್ತು ಓದಿದರಾಯ್ತು ಅಂದು ಕೊಳುತ್ತಲೋ ಮುಂದೂಡುತ್ತಾ ಇರಬೇಡಿ. ಮುಂಜಾನೆ ಮತ್ತು ರಾತ್ರಿ ಮಕ್ಕಳು ಓದುವಾಗ ಪೋಷಕರೂ ಅವರೊಂದಿಗೆ ಎದ್ದಿದ್ದು ಮಾನಸಿಕವಾಗಿ ಮಕ್ಕಳಿಗೆ ನೆರವಾಗಬೇಕು. ಹಾಗಂತ ಟಿ.ವಿ, ಮ್ಯೂಸಿಕ್‌, ಮೊಬೈಲ್‌ ಇಟ್ಟುಕೊಂಡು ಪಕ್ಕದಲ್ಲಿ ಕೂರಬೇಡಿ. ಬದಲಿಗೆ ನೀವೂ ಓದುವ ಗೀಳನ್ನು ಬೆಳೆಸಿಕೊಳ್ಳಿ. (ಕಥೆ, ಕಾದಂಬರಿ ಯಾವುದೂ ಆದೀತು) ಹೀಗೆ ಓದುವಾಗ, ನಿಮಗೆ ಗೊತ್ತಾಗದ ವಿಷಯಗಳನ್ನು ಶಿಕ್ಷಕರಲ್ಲಿ, ಸ್ನೇಹಿತರಲ್ಲಿ, ಪೋಷಕರಲ್ಲಿ ಅಥವಾಒಡಹುಟ್ಟಿದವರೊಂದಿಗೆ ಚರ್ಚಿಸಿ ಸಂದೇಹಗಳನ್ನು ಬಗೆಹರಿಸಿಕೊಳ್ಳಿ.

ಈಗ ಬೈಜೂಸ್‌, ಅಡ್ಡಾ 24 7, ಅನ್‌ ಅಕಾಡೆಮಿಯಂಥ ಬಹಳಷ್ಟು ಅನುಮಾನ ಪರಿಹರಿಸುವ ಆ್ಯಪ್‌ಗ್ಳು,ಯು ಟ್ಯೂಬ್‌ ವೀಡಿಯೊ ಗಳು ಬಂದಿವೆ. ಅವುಗಳ ಸಹಾಯವನ್ನೂ ಪಡೆಯಬಹುದು. ನೀವು ಓದಿದ ನಿಮ್ಮ ಜ್ಞಾನವನ್ನು ಆಗಿಂದಾಗ್ಗೆ ನೀವೇ ಸಣ್ಣ ಪರೀಕ್ಷೆಗಳನ್ನು ಕೊಟ್ಟುಕೊಳ್ಳುವುದರ ಮೂಲಕ ಪರೀಕ್ಷೆ ಮಾಡಿನೋಡಿ. ಆಗ ನೀವು ಎಲ್ಲಿದ್ದೀರಿ, ಇನ್ನೆಷ್ಟು ತಯಾರಿ ಬೇಕು ಎಂಬ ಅಂದಾಜು ಸಿಗುತ್ತದೆ.

ತಪ್ಪದೆ, ಕಡಿಮೆ ಎಂದರೂ ಒಂದೈದು ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರಿ. ಆಗ ಪ್ರಶ್ನೆಗಳು ಯಾವ ರೀತಿಯಲ್ಲಿ ಬರುತ್ತವೆ ಎಂಬ ಅಂದಾಜು ಸಿಗುತ್ತದೆ. ಟೈಮ್‌ ಸೆಟ್‌ ಮಾಡಿಕೊಂಡರೆ ನಿಮಗೆ ಅಷ್ಟೂ ಪ್ರಶ್ನೆಗಳನ್ನು, ಕೊಟ್ಟಿರುವ ಸಮಯದಲ್ಲಿ ಬರೆಯಲು ಅಭ್ಯಾಸವಾಗುತ್ತದೆ. ಇದರಿಂದ ನಿಮಗೆ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಕೈಯಲ್ಲಿ ಹಿಡಿದುಕೊಂಡಿದ ತಕ್ಷಣ ಅಬ್ಟಾ, ಇಷ್ಟು ಪ್ರಶ್ನೆಗಳಿಗೆ ಎರಡು ಗಂಟೆಗಳಲ್ಲಿ ಹೇಗೆ ಉತ್ತರಿಸೋದುಎನ್ನುವ ಭಯ ಹೋಗುತ್ತದೆ. ಉತ್ತರ ಬರೆಯುವ ಶೈಲಿಯನ್ನು ರೂಢಿಸಿಕೊಳ್ಳಿ. ಕಲಿತ ವಿಷಯವನ್ನು ಸರಿಯಾಗಿ ಅಭಿವ್ಯಕ್ತಿಸುವುದೂ ಒಂದು ಕಲೆ. ಇದು ಕನ್ನಡ,

ಇಂಗ್ಲೀಷ್‌,ಹಿಂದಿ ಅಥವಾ ಸಮಾಜ ಶಾಸ್ತ್ರದಲ್ಲಿ ಹೆಚ್ಚಾಗಿ ಉಪಯೋಗವಾಗುತ್ತದೆ. ಎಷ್ಟು ಅಂಕಗಳಿಗೆ ಎಷ್ಟು ಉತ್ತರಿಸಬೇಕು ಎಂಬುದನ್ನು ಅರಿಯಿರಿ. ಕೇವಲ ಎರಡು ಅಂಕಗಳಿಗೆ ಒಂದು ಪೇಜು ಉತ್ತರದ ಅಗತ್ಯವಿರುವುದಿಲ್ಲ. 5-10 ಅಂಕಗಳಿಗೆ ಒಂದುಪ್ಯಾರಾಗ್ರಾಫ್ ಉತ್ತರ ಸಾಕಾಗುವುದಿಲ್ಲ. ಹಾಗೆಯೇ, ನಿಮ್ಮ ಪದ ಸಂಪತ್ತನ್ನು ವೃದ್ಧಿಸಿಕೊಳ್ಳಿ. ಇದು ನಿಮ್ಮ ಉತ್ತರವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ನೆರವಾಗುತ್ತದೆ. ಇದೆಲ್ಲಾ ನಿಮಗೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಾ ಹೋಗುವಾಗ ಅರ್ಥವಾಗುತ್ತದೆ.

ಊಟ ತಿಂಡಿ : ಇಷ್ಟೆಲ್ಲಾ ಸಿದ್ಧತೆಯಿದ್ದು, ಪರೀಕ್ಷೆ ಸಂದರ್ಭದಲ್ಲೇ ಆರೋಗ್ಯ ಹಾಳಾದರೆ? ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ. ದಿನದ ಒಟ್ಟೂ ಸಮಯದಲ್ಲಿ ಒಂದಿಷ್ಟು ಸಮಯ ಧ್ಯಾನ ಮತ್ತು ವ್ಯಾಯಾಮಕ್ಕೂ ಮೀಸಲಿಡಿ. ಧ್ಯಾನದಿಂದ ನಿಮ್ಮ ಏಕಾಗ್ರತೆ ವೃದ್ಧಿಯಾಗುತ್ತದೆ. ವ್ಯಾಯಾಮದಿಂದ ನಿಮ್ಮ ಆರೋಗ್ಯ. ಊಟದಲ್ಲಿಹಣ್ಣು, ಸೊಪ್ಪು, ತರಕಾರಿಹಾಲುಧಾನ್ಯ, ಮೊಟ್ಟೆ  ಮತ್ತು ಮೀನನ್ನು(ಮಾಂಸಾಹಾರಿಯಾಗಿದ್ದಲ್ಲಿ) ಉಪಯೋಗಿಸಿ.

ಇವುಗಳ ಸೇವನೆಯಿಂದ ನಿಮ್ಮ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಕರಿದ ಪದಾರ್ಥಗಳು, ಸಿಹಿ ತಿಂಡಿಗಳನ್ನು ಅತಿಯಾಗಿ ತಿನ್ನಬೇಡಿ. ದೇಹಾಲಸ್ಯ ಮತ್ತು ಜಡತ್ವದಿಂದ ಅತಿಯಾದ ನಿದ್ದೆ ಆವರಿಸುತ್ತದೆ. ಬದಲಿಗೆ ಹಣ್ಣಿನ ರಸ ಕುಡಿಯಿರಿ. ಸಕ್ಕರೆ, ಐಸ್‌ ಬೇಡ.

 

ಗಾಯತ್ರಿ ರಾಜ್‌

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.