ಕನಸು ಕೈಗೂಡುತ್ತಾ? ನನಗೂ ಗೊತ್ತಿಲ್ಲ…
Team Udayavani, Jul 9, 2019, 5:30 AM IST
ನನ್ನ ಭಾವನೆಗಳಿಗೆ ಅವಳು, ಅವಳ ಭಾವನೆಗಳಿಗೆ ನಾನು ಸ್ಪಂದಿಸಿದ್ವಿ ಅಷ್ಟೆ. ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಇದನ್ನು ಅವಳೂ ನನ್ನ ಬಳಿ ಹೇಳಿಕೊಂಡಿಲ್ಲ. ನಾನೂ ಅವಳ ಹತ್ತಿರ ಹೋಗಿ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಮೂರನೇ ಪಾರ್ಟಿಯಿಂದ ವಿಷಯ ತಿಳಿಯಬೇಕಾಯಿತು.
ಅವಳಿಗಾಗಿ ನಾನು ಹಲವು ಕನಸುಗಳನ್ನ ಕಟ್ಟಿಕೊಂಡಿರುವೆ.ಮುಂದಿನ ಟ್ರಿಪ್ಪಿಗಾಗಿ ಈಗಲೇ ಪ್ಲಾನ್ ಮಾಡಿರುವೆ. ಮುಂಜಾನೆಯ ಮಂಜಲ್ಲಿ ಚುಮು ಚುಮು ಚಳಿಯಲ್ಲಿ ನನ್ನವಳ ಕೈ ಹಿಡಿದು ಕೊಡಚಾದ್ರಿ ಬೆಟ್ಟ ಹತ್ತಿ, ಮೋಡಗಳೊಂದಿಗೆ ಬೆರೆತು ಅವಳ ಜೊತೆ ಹರಟುವ ಕನಸಿದೆ.ಎಷ್ಟೆಲ್ಲ ಕನಸು ಕಂಡರೂ ನಾವು ನಾವೂ ಎಲ್ಲರಂತೆ ಫೋನಿನಲ್ಲಿ ಗಂಟೆಗಟ್ಟಲೆ ಹರಟಲಿಲ್ಲ, ಪಾರ್ಕು ಸಿನಿಮಾ ಸುತ್ತಲಿಲ್ಲ, ಏನಿದ್ದರೂ ಬರಿಯ ಮುಸುಕಿನ ಗುದ್ಧಾಟವಷ್ಟೇ. ಅದೂ ಹೆಚ್ಚು ಎಂದರೆ ಒಂದು ದಿನ ಮಾತ್ರ. ಒಮ್ಮೆ ಮಾತ್ರ ನಾವಿಬ್ಬರೂ ಬರೋಬ್ಬರಿ 10 ದಿನ ಮಾತು ಬಿಟ್ಟಿದ್ದೆವು. ಆಗ ನಮ್ಮ ಚಾಟ್‌ಗಳೆಲ್ಲವೂ ಸ್ಟೇಟಸ್ ನಲ್ಲೆ ನಡೆಯುತ್ತಿದ್ದವು.
ಈಗ, ನಾವಿಬ್ಬರೂ ಒಬ್ಬರನ್ನೊಬ್ಬರು ಮೀಟ್ ಆಗಿ ವರ್ಷಗಳೇ ಕಳೆದು ಹೋಗಿವೆ. ಇಬ್ಬರೂ ಮತ್ತೆ ಸಿಗೋಣ ಎಂದರೆ ಅವಕಾಶಗಳೇ ಸಿಗುತ್ತಿಲ್ಲ.ಅದನ್ನೆಲ್ಲ ನೆನಪು ಮಾಡಿಕೊಂಡಾಗ ಸಹಜವಾಗಿಯೇ ಸಂಕಟವಾಗುತ್ತದೆ. ಯಾರೊಂದಿಗೆ ಹೇಳಿಕೊಳ್ಳುವುದು? ಅವಳೊಂದಿಗೆ ಬದುಕುವ ಕನಸೇನೋ ಇದೆ. ಅದು ನಿಜವಾಗುತ್ತಾ, ಇಲ್ಲವಾ ಎಂಬುದನ್ನು ಹೇಳಲು, ಹುಲುಮಾನವನಾದ ನಾನೆಷ್ಟರವನು?
-ಪವನ್ ಕುಮಾರ್. ಎಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.