ಪ್ರೀತಿಸಿದ್ದು ನಿಜವೇ ಆದ್ರೆ ನನ್ನನ್ನು ಕ್ಷಮಿಸಿಬಿಡು!
Team Udayavani, Jul 3, 2018, 6:00 AM IST
ಬದುಕು ಅಂದ್ರೆ ಕಾಂಪ್ರೊಮೈಸ್ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಗೊತ್ತಿರಲಿಲ್ಲ. ನನ್ನ ಮುಂದಿದ್ದುದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನು ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ, ಪ್ರೇಮಲೋಕದ ಪಾಲಿಗೆ ಕೈ ಕೊಟ್ಟವಳು, ನಂಬಿಕೆ ದ್ರೋಹಿ ಅನ್ನಿಸಿಕೊಂಡೆ.
ಗೆಳೆಯಾ,
ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ಕೈಕೊಟ್ಟ ಅದೃಷ್ಟವನ್ನು ಹಳಿಯುತ್ತಾ, ನನ್ನನ್ನು ನಾನೇ ಶಪಿಸಿಕೊಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟಪಟ್ಟು ಈ ಪತ್ರದಲ್ಲಿ ತುಂಬಿಸಲು ಹೆಣಗುತ್ತಿದ್ದೇನೆ. ಕಣ್ಣಿಂದ ಒಂದೊಂದೇ ಹನಿಗಳು ಜಾರುತ್ತಿವೆ, ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಒಂದೊಂದೇ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈ ಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿಬಿಟ್ಟೆ.
ನಾವಿಬ್ಬರೂ ಪ್ರೀತಿಯಿಂದ, ಮಮತೆಯಿಂದ, ಸಂಯಮದಿಂದ ಕಟ್ಟಿದ ಪ್ರೀತಿಯ ಅರಮನೆಯಿಂದ ನಿನಗೆ ಹೇಳದೆ ಹೊರನಡೆಯುತ್ತಿದ್ದೇನೆ. ಪ್ಲೀಸ್ ಕಣೋ: ನನ್ನನ್ನು ಮರೆತುಬಿಡು. ನನ್ನ ತಪ್ಪನ್ನ ಮನ್ನಿಸಿಬಿಡು. ನಿನ್ನೆದೆಯೊಳಗಿನ ಅಷ್ಟೂ ಮಮತೆಗೆ ಸಮಾಧಿ ಕಟ್ಟಿದ ನನ್ನ ಅಸಹಾಯಕತೆಯನ್ನು ಕ್ಷಮಿಸಿಬಿಡು. ನಿನ್ನ ಜೊತೆ ಕೊನೆಯವರೆಗೂ ಬರಲಾರದ ಈ ಹೆಜ್ಜೆಗಳ ತಪ್ಪನ್ನು ಮತ್ತೂಮ್ಮೆ ಮನ್ನಿಸಿಬಿಡು. ಈ ಬದುಕು ನಿನ್ನೊಂದಿಗೇ ಎಂದು ಕ್ಷಣಕ್ಕೊಮ್ಮೆ ಹೇಳಿದ, ಸಾವಿರಾರು ಆಣೆ ಪ್ರಮಾಣ ಮಾಡಿ ನಿನ್ನ ಖುಷಿ ಹೆಚ್ಚಿಸಿದ್ದ ಈ ಪಾಪದ ಹುಡುಗಿಯನ್ನ ದಯವಿಟ್ಟು ಕ್ಷಮಿಸಿಬಿಡು.
ನಿನ್ನ ಕುರಿತಾಗಿ ಒಂದೆರಡಲ್ಲ, ಸಾವಿರ ಕನಸುಗಳನ್ನು ಕಂಡಿದ್ದೆ ಕಣೋ. ಹಾಳಾದ್ದು ಒಂದೂ ನನಸಾಗಲಿಲ್ಲ. ದೇವರು ಯಾಕೋ ನನ್ನ ಪ್ರಾರ್ಥನೆಗಳನ್ನು ಆಲಿಸಲಿಲ್ಲ. ನನ್ನ ಪೂಜೆಗಳು ಫಲಿಸಲಿಲ್ಲ. ಬೇಡಿಕೊಂಡ ಒಂದೇ ಒಂದು ಕನಸು ನನಸಾಗಿದ್ದರೂ ನಾನು ನಿನ್ನ ಮಡಿಲಲ್ಲಿರುತ್ತಿದ್ದೆ. ನಿನ್ನ ಜೊತೆಗಿದ್ದಿದ್ದರೆ ದಿನಕ್ಕೊಮ್ಮೆ, ಕ್ಷಣಕ್ಕೊಮ್ಮೆ, ಹಗಲಿನಲ್ಲೊಮ್ಮೆ, ನಡುರಾತ್ರಿಯಲ್ಲೂ ಒಮ್ಮೆ ಸುಮ್ಮನೆ ಮುನಿಸಿಕೊಳ್ಳುತ್ತಿದ್ದೆ. ಇದೇನಾಯ್ತು ನಿಂಗೆ ಎಂದು ನೀನು ಕೇಳುವ ಮೊದಲೇ ಸಾರಿ ಕೇಳಿ, ಮುತ್ತಿಟ್ಟು, ಖೀಲ್ಲನೆ ನಕ್ಕು ನಿನ್ನನ್ನು ತಬ್ಬಿಬ್ಬು ಮಾಡುತ್ತಿದ್ದೆ.
ಆದರೆ, ಅಂದುಕೊಂಡಂತೆ ಏನೂ ಆಗಲಿಲ್ಲ…
ಬದುಕು ಒಂದೊಂದು ಸಲ ತುಂಬಾ ಕ್ರೂರಿ ಅನ್ನಿಸಿಬಿಡುತ್ತೆ. ಇಲ್ಲಿ ನಮ್ಮಂಥವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ. ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂಥ ಸೆಂಟಿಮೆಂಟಲ್ ಹುಡುಗಿಯರು ಆ ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೆ ಬರೀ ಕೈಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದಿಟ್ಟರೂ ಕಾಣದ ಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೊಮೈಸ್ ಅಂದೊRಂಡಿ¨ªೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಗೊತ್ತಿರಲಿಲ್ಲ.
ಮನಸ್ಸು ಮುರಿದುಕೊಂಡು ಇದ್ದಕ್ಕಿದ್ದಂತೆ ಎದ್ದು ಹೋಗಿದ್ದು ಯಾಕೆ ಅಂದೆಯಾ? ಬದಲಾದ ಸನ್ನಿವೇಶದಲ್ಲಿ ನನ್ನ ಮುಂದಿದ್ದುದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನು ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ, ಪ್ರೇಮಲೋಕದ ಪಾಲಿಗೆ ಕೈ ಕೊಟ್ಟವಳು, ನಂಬಿಕೆ ದ್ರೋಹಿ ಅನ್ನಿಸಿಕೊಂಡೆ. ಅಂಥದೊಂದು ಆರೋಪ ಹೊತ್ತುಕೊಂಡೇ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್, ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆದರೆ ನನ್ನನ್ನು
ಕೊನೆಯ ಬಾರಿಗೆ ಕ್ಷಮಿಸಿ ಬಿಡು.
ನಿನ್ನ
ಹರ್ಷಿತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.