ಮನಸೇ ರಿಲ್ಯಾಕ್ಸ್ .. ಬೀ ಪಾಸಿಟೀವ್
Team Udayavani, May 12, 2020, 12:01 PM IST
“ಇಲ್ಲ, ಮುಂದಿನ ಬದುಕು ಬಹಳ ಕಷ್ಟ ಇದೆ. ಮುಂದೆ, ನನ್ನ ಕೆಲಸವೇ ಹೋಗಬಹುದು, ಇಲ್ಲಾ ಬಿಡ್ರೀ, ನನ್ನ ಹಣೇ ಬರಹವೇ ಹಾಗಿದೆ…’ ಹೀಗೆ, ಇಡೀ ಜಗತ್ತೇ ತಲೆಯ ಬಿದ್ದಂತೆ ಮಾತನಾಡು ವವರನ್ನು, ನೀವು ನೋಡಿರಬಹುದು. ಇವರಿಗೆ, ಏನೇ ಕಂಡರೂ, ಏನೇ ಕೇಳಿಸಿದರೂ, ಅದು ನೆಗೆಟೀವ್ ಆಗೇ ಇರುತ್ತದೆ. ಯಾರು ಏನೇ ಮಾತನಾಡಿದರೂ, ಅದರಲ್ಲೂ ನೆಗೆಟೀವ್ ಹುಡುಕುತ್ತಿರುತ್ತಾರೆ. ಇವರು ಯಾರನ್ನೂ ನಂಬು ವುದಿಲ್ಲ. ಬೇರೆಯ ವರು ಇರಲಿ, ತಮ್ಮೊಳಗಿರುವ ಪಾಸಿಟೀವ್ ಅಂಶಗಳನ್ನೆಲ್ಲ ಕೈಬಿಟ್ಟು, ಬರೀ ನೆಗೆಟೀವ್ ವಿಷಯಗಳನ್ನು
ಮಾತ್ರ ಜೋಳಿಗೆಯಲ್ಲಿ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಇದನ್ನೇ ನೆಗೆಟೀವ್ ಸಿಂಡ್ರೋಮ್ ಅನ್ನೋದು.
ಎಷ್ಟೋ ಜನರ ಒಳಗೆ, ಒಬ್ಬ ಅದ್ಭುತ ಚಿತ್ರಕಲಾವಿದನೋ, ಸಂಗೀತಗಾರನೋ, ನಟನೋ ಇರುತ್ತಾನೆ. ಅದನ್ನು ಗುರುತಿಸದೇ, ಸಣ್ಣದೊಂದು ಸೋಲಿಗೇ ಹೆದರಿ, ಬದುಕು ಮುಗಿದೇ ಹೋಯ್ತು ಎಂಬಂತೆ ಪರಿತಪಿಸುತ್ತಾರೆ. ಅಂದಹಾಗೆ, ನೆಗೆಟೀವಿಟಿ ಏಕೆ ಬರುತ್ತದೆ ಗೊತ್ತಾ? ಆತ್ಮವಿಶ್ವಾಸದ ಕೊರತೆಯಿಂದ ಹೀಗಾಗುತ್ತದೆ. ಬದುಕಿನಲ್ಲಿ ನಡೆದ ಯಾವುದೋ ಕಹಿ ಘಟನೆ, ನೆಗೆಟೀವ್ ಥಿಂಕ್‌ಗೆ ದಾರಿ ಮಾಡುತ್ತದೆ. ಇಂಥದೊಂದು ಯೋಚನೆ ಜೊತೆಯಾಗಿ ಬಿಟ್ಟರೆ ಅಪಾಯ. ಹೀಗಾಗಿ, ಬಿ- ಪಾಸಿಟೀವ್ ಆಗಿರೋದು ಅಂದರೆ, ನಮ್ಮ ತಪ್ಪುಗಳನ್ನು ತಿದ್ದುವ, ನಮ್ಮನ್ನು ಹುರಿದುಂಬಿಸುವ ಗೆಳೆಯರ ಪಡೆ ಕಟ್ಟಿ ಕೊಳ್ಳೋದು. ಪ್ರತಿ ತಪ್ಪುಗಳನ್ನು ಗುರುತು ಮಾಡಿಕೊಂಡು, ಅವು ಮರುಕಳಿಸದಂತೆ ನೋಡಿಕೊಳ್ಳುವುದು.
ನಮ್ಮ ಶಕ್ತಿ ಏನು ಅಂತ ತಿಳಿದು, ಅದಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಾ ಹೋಗು ವುದು. ಎಲ್ಲಕ್ಕಿಂತ ಮುಖ್ಯವಾಗಿ, ಅವನು ಹಾಗಂತೆ, ಇವನು ಹೀಗಂತೆ. ಪಕ್ಕದ
ಮನೆ ಸರೋಜ ಏನೇನೆಲ್ಲಾ ಮಾಡಿದಳು ಗೊತ್ತಾ? ಎಂಬಂಥ ಮಾತುಗಳಿಗೆ, ಕಿವಿ ಯನ್ನು ಬಂದ್ ಮಾಡುವುದು.
ನಮ್ಮದಲ್ಲದ, ನಮಗೆ ಬೇಕಿಲ್ಲದ ವಿಷಯಗಳಿಗೆ ಮನಸ್ಸು ತೆರೆದಿಡುವುದನ್ನು ನಿಲ್ಲಿಸಿಬಿಡಬೇಕು. ಮನಸ್ಸಿನಲ್ಲಿ ಜಗದ ನೆಗೆಟೀವ್ ಸುದ್ದಿಗಳೆಲ್ಲ ಬಂದು ಕೂತಾಗಲೇ, ನಮ್ಮ ಬಗ್ಗೆ ನಮಗೇ ಕೀಳರಿಮೆ ಉಂಟಾಗಿ, ನಮ್ಮಲ್ಲಿನ ಪಾಸಿಟೀವ್ ವಿಚಾರಗಳು ಕಾಣದೇ ಹೋಗುತ್ತವೆ. ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ. ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳು ಏನೇನು ಅನ್ನುವುದರ ಪಟ್ಟಿ ಮಾಡಿ. ಪಾಸಿಟೀವ್, ನೆಗೆಟೀವ್ ಅನ್ನೋದು, ಬಿಳಿ ಮತ್ತು ಕೆಂಪು ರಕ್ತ ಕಣ ಇದ್ದಂತೆ. ಎರಡೂ ಇದ್ದರೇನೇ ಜೀವನ. ಆದರೆ, ನೆಗೆಟಿವಿಟಿ ನಮ್ಮನ್ನು ಆಳಬಾರದು ಅನ್ನೋ ಎಚ್ಚರಿಕೆ ಇರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.