ಆ ಚಪ್ಪಲಿ ಕತಿ ನೆನಸ್ಕೊಂಡ್ರಾ…
Team Udayavani, Jan 21, 2020, 4:23 AM IST
ನಮ್ಮ ತಾಯಿ ತವರುಮನಿ ಹಾವೇರಿ ಜಿಲ್ಲಾ ಒಳಗ್ ಒಂದು ಸಣ್ಣ ಹಳ್ಳಿ . ಅವಾಗವಾಗ ಏನರ ಕಾರ್ಯಕ್ರಮ ಇದ್ರ ಹೋಗಿರ್ತಿದ್ವಿ . ಹೀಗೇ ಹೋದಾಗ, ಸುಮಾರು 15 ವರ್ಷದ ಹಿಂದೆ ಆದ ಘಟನೆ . ಮಾಮಾನ ಮನಿ ಒಳಗ ಸತ್ಯನಾರಾಯಣ ಪೂಜಾ ಇತ್ತು. ಎಲ್ಲಾ ಬಳಗ ಸೇರಿತ್ತು . ನನಗ 7 ಜನ ಮಾಮಂದಿರು . ಅದ್ರಾಗ ಮೂರು ಜನರ ಫ್ಯಾಮಿಲಿ ಹಾಜರ್ ಆಗಿತ್ತು. ಅವರ ಮಕ್ಕಳೆಲ್ಲ ನನಗಿಂತ ಸಣ್ಣವರು . ದಿನಾ ರಾತ್ರಿ ದೊಡ್ಡ ದೊಡ್ಡ ತಾಟಿ (ತಟ್ಟೆ )ನೊಳಗ ಅನ್ನ , ತರಕಾರಿ ಹಾಕಿದ ಸಾಂಬಾರ್, ತುಪ್ಪ ಇದಿಷ್ಟು ಒಂದು ಹಾಕಿದ್ರು. ಇನ್ನೊಂದ್ರಾಗ ಕೆನಿಮೊಸರು ಹಾಲು ಹಾಕಿ ಕಲಸಿ , ಒಗ್ಗರಣೆ ಕೊಟ್ಟ ಮೊಸರನ್ನ . ಇದೆಲ್ಲದರ ಜೊತಿಗೆ ಉಪ್ಪಿನಕಾಯಿ , ಬಾಳಕ ,ಸಂಡಿಗೆ ಮತ್ತು ಹಪ್ಪಳಗಳು ಊಟಕ್ಕೆ ಇದ್ದವು. ಎಲ್ಲಾ ಹುಡಗೂರು ಸುತ್ತಲೂ ಕೂತು ಕೈತುತ್ತು ಹಾಕಿಸ್ಕೊತಿದ್ರು.
ನಾನೂ ಅವರ ಜೊತಿಗೆ ತಿನ್ನುತ್ತಿದ್ದೆ. ನಾನೇ ಅವರಿಗೆಲ್ಲಾ ಹಿರಿಯಕ್ಕ. ಆದ್ದರಿಂದ ತುಸು ಹೆಚ್ಚೇ ಅನ್ನೋವಷ್ಟು ಪ್ರೀತಿ. ಭಾರಿ ಮಜಾ ಇದ್ಲು ಆ ದಿನಗಳು . ನದಿಯಲ್ಲಿ ಈಜೋದು , ತೊಗರಿ ಹೊಲದಲ್ಲಿ ನುಗ್ಗಿ ವಾನರ ಸೈನ್ಯದಂಗ ತೊಗರಿ ಕಾಯಿ ಕಿತ್ತಿ ತಿನ್ನೋದು . ಶೇಂಗಾ ತಿನ್ನೋದು .ಯಾರಿಗೂ ಹೆದರ್ತಿರ್ಲಿಲ್ಲಾ . ಕವಡೆ , ಪಗಡೆಯಾಟ ಆಡೋದು , ಮರಕೋತಿ ಆಡೋದು , ಒಟ್ಟಿನ್ಯಾಗ ಭಾಳ ಖುಷಿಯಿಂದ ಇರ್ತಿದ್ವಿ . ಅವತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಅಂತ ಎಲ್ಲರೂ ಕೂಡಿದ್ವಿ . ಅಂತ್ಯಾಕ್ಷರಿ , ಜೋಕ್ಸ್, ದೇವರಹಾಡು ..ಇದೆಲ್ಲ ಮಾಡ್ಕೊತ ಹೆಂಗ್ ಒಂದು ವಾರ ಹೋತು ಗೊತ್ತಾಗ್ಲಿಲ್ಲ . ಊರಿಗೆ ಹೋಗೋ ದಿನ ಬಂತು . 5, 6 ಜನರು ಹೊರಟಿವಿ. ನಮ್ಮನ್ನ ಕಳಸ್ಲಿಕ್ಕೆ ಕಪಿ ಸೈನ್ಯ ನಮ್ಮ ಜೊತಿ ಜೊತಿಗೆ . ಹಳ್ಳಿ ದಾರಿ , ಎಡಬಲ ಮುಸುಕಿನ ಜೋಳದ ಹೊಲ. ಸಣ್ಣ ಕಾಲುದಾರಿ. ನಡ್ಕೊತ 3 ಕಿಲೋಮೀಟರು ದೂರದ ರೈಲ್ವೇ ಸ್ಟೇಷನ್ ತನಕ ಹೋದ್ವಿ. ಯಾವ ವಾಹನ ಹೋಗೋ ದಾರಿನೂ ಅಲ್ಲ ಅದು. ಮಳಿ ಬಂದು ದಾರಿ ಎಲ್ಲ ಕೆಸರು ರಾಡಿ .. ಹಿಂಗ 15 ಹೆಜ್ಜಿ ಹೋಗೋದ್ರಾಗ ನನ್ನ ಚಪ್ಪಲಿ ಉಂಗುಷ್ಟ ಕಿತ್ತಿ ಬಿಡು¤. ಹೆಂಗ್ ನಡೀತೀರಿ? ಕೈಯಾಗ್ ಹಿಡ್ಕೊಂಡು ಹೊಂಟೆ ಎರಡೂ ಚಪ್ಲಿನ. ಪಾಪ, ನನ್ನ ಮಾಮನ ಮಗನೊಬ್ಬ ನನ್ನ ಗೋಳು ನೋಡಲಾರ್ದ ” ಅಕ್ಕ ನನ್ನ ಚಪ್ಪಲ್ ಹಾಕ್ಕೋ ‘ಅಂತ ತನ್ನ ಚಪ್ಲಿ ಕೊಟ್ಟ .ಅವನ ಚಪ್ಪಲಿಗಳ್ಳೋ ನನ್ನ ಪಾದದ ಎರಡು ಪಟ್ಟು ದೊಡುÌ . ಇಷ್ಟಾಗೋದ್ರಾಗ ಟ್ರೈನ್ ಬಂತು ಅಂತ ಗೊತ್ತಾತು .ಓಡಿ ಓಡಿ ಅದು ಬರೋದುಕ್ಕು ನಾವು ಸ್ಟೇಷನ್ ಮುಟ್ಟಿದ್ವಿ .ಟ್ರೈನ್ ಹತ್ತೇಬಿಟ್ವಿ . ಕೆಳಗ್ ಎಲ್ಲಾ ಹುಡಗೂರು ಬೇಜಾರ್ ಮಾಡ್ಕೊಂಡು ಇಳಿ ಮುಖ ಮಾಡ್ಕೊಂಡು ಟಾಟಾ ಅಕ್ಕ ಅಂದುÌ . ಅದ್ರಗೂ ಚಪ್ಪಲಿ ಕೊಟ್ಟ ತಮ್ಮಾ ಜೋರಾಗಿ ಕೈ ಬೀಸ್ಲಿಕತ್ತಾ. ನಾನು ಬೈ ಮತ್ತ ಸಿಗೋಣ .ಚಿyಛಿ ಚಿyಛಿ ಅಂದದ್ದೇ ಅವ ನನ್ನ ಟ್ರೈನ್ ಜೊತಿಗೆ ಓಡಿ ಓಡಿ ಬರ್ಲಿಕತ್ತಾ. “ಬಬ್ಯಾìಡೋ ಹೋಗು ಹೋಗು ‘ ಅಂತೇನಿ. ಅವ ಕೈ ಮಾಡೇ ಮಾಡ್ತಾನ. ಜೊತಿಗೆ ಟ್ರೈನ್ ಹೋದಷ್ಟು ಸ್ಪೀಡ್ ಒಳಗ ಓಡಿ ಬರ್ಲಿಕತ್ತಾನ. ಟ್ರೈನ್ ಬ್ಯಾರೆ ರಶ್ ಇತ್ತು. ಯಾರೋ ಅಂದ್ರು “ಏನೋ ಕೇಳ್ತಾರಿ ಅವ್ರು . ಏನೋ ಕೊಡು ಅಂತಿದ್ದಾರೆ ‘ ಅಂದ್ರು.
ನಂಗೊ ಅವನ ಮಾತು ಕೇಳ್ತಿಲ್ಲ . ಕಿಡಕಿ ಹತ್ರ ತಲಿ ಹಾಕಿ “ಏನೋ?’ ಅಂದೇ . “ಅಕ್ಕಾ ನನ್ನವು ಚಪ್ಪಲಿ ಕೊಡಕ್ಕ. ಒಗಿ ಕಿಡಿಕ್ಯಾಗಿಂದ ‘ ಅಂದ . ಅವಾಗ ನೆನಪು ಬಂತು ..ಒಂದು ಕಾಲಾಗಿಂದು ಒಮ್ಮೆ ಬೀಸಿ ಎಸೆದೆ. ಇನ್ನೊಂದು ಕಾಲಾಗಿಂದು ಇನ್ನೊಮ್ಮೆ ಕಿಡಕಿ ಒಳಗ್ ಒಗದೆ. ಕತ್ತಲು ಬ್ಯಾರೆ . ಎಲ್ಲಿ ಬಿದ್ದಾವು ಅಂತ ಕಾಣವಲು. ಗಾರ್ಡ್ ಬೀಸೋ ಲೈಟ್ ಇಸ್ಕೊಂಡು ಹುಡಿಕ್ಕೊಂಡನಂತ. ಕಿಲೋಮೀಟರ್ ದೂರ ಬಿದ್ದಿದ್ವಂತ. ಹುಡಿಕಿ ಹಾಕ್ಕೊಂಡೆ ಅಕ್ಕಾ ಅಂತ ಫೋನ್ ಮಾಡಿದ್ದಾ.
ಈ ಪ್ರಕರಣ ಆಗಿ 15 ವರ್ಷ ಆತು . ಈಗೂ ನೆನಿಸ್ಕೊಂಡು ನಗ್ತೀವಿ . ಈಗ ಆ ಹಳ್ಳಿ ಭಾಳ್ ಸುಧಾರಸೇದ. ಬಸ್ ಅಡ್ಡಾಡ್ತಾವು. ಆದ್ರ, ಅಲ್ಲೇ ಮಾಮ ಇಲ್ಲ . ತೀರಿಕೊಂಡು 10 ವರ್ಷಾತು. ತಮ್ಮಂದ್ರು ಜಾಬ್ ಹಿಡ್ಕೊಂಡು , ಮದುವಿ ಮಾಡ್ಕೊಂಡಾರ. ಈಗೂ ಕಾರ್ಯಕ್ರಮ ಇದ್ದಾಗ ಎಲ್ಲಾರು ಸೇತೇìವಿ.ಆದ್ರ ಆವಾಗಿನ ಮಜಾ ಸಿಗಂಗಿಲ್ಲ .
ಶ್ರೀಮತಿ ಲತಾ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.