ರೆಸ್ಯೂಮ್ ಸ್ಪೆಷಲಿಸ್ಟ್
Team Udayavani, Sep 17, 2019, 5:42 AM IST
ಗೆಳೆಯರೆಲ್ಲ ಈ ಕಂಪನಿಗೆ ಸೇರೋಣ, ಆ ಕಂಪನಿಯಲ್ಲಿ ಸಂಬಳ ಚೆನ್ನಾಗಿದೆ. ನಿನಗೆ ಯಾವ ಕಂಪನಿ ಇಷ್ಟ ಹೀಗೆ ಮಾತನಾಡುತ್ತಿದ್ದರೆ ನಿಖೀತ ಚಾವ್ಲಾ ಆಕಾಶ ದಿಟ್ಟಿಸುತ್ತಿದ್ದಳು. ಅವರಿಗೆಲ್ಲಾ ಓದುತ್ತಿರುವಾಗಲೇ ಪ್ಲೇಸ್‌ಮೆಂಟ್ ಆಗಿತ್ತು. ಹೀಗಾಗಿ, ಕಂಪನಿಗಳ ಬಗ್ಗೆ ಓತಪ್ರೋತವಾಗಿ ಮಾತನಾಡುತ್ತಿದ್ದರು. ನಿಖೀತಾಗೆ ಯಾರೂ ಕೆಲಸಕ್ಕೆ ಕರೆದಿರಲಿಲ್ಲ. ಇದ್ದ ಒಂದೇ ಒಂದು ಅವಕಾಶ ಎಂದರೆ ಯಾವುದಾದರು ಶಾಲೆಗೆ ಹೋಗಿ ಪಾಠ ಮಾಡುವುದು. ಬದುಕಿನ ಪೂರ್ತಿ ಪಾಠ ಕೇಳಿ ಈಗ ಪಾಠ ಮಾಡಲು ಇವಳಿಗೆ ಇಷ್ಟ ಇರಲಿಲ್ಲ.
ಎಲ್ಲ ಭಾವಿ ಉದ್ಯೋಗಿಗಳ ಮಧ್ಯೆ ಈಕೆ ಪರಮ ನಿರುದ್ಯೋಗಿ. ಹೀಗಾಗಿ, ಮನಸ್ಸಲ್ಲಿ ಬೇಸರ. ಎಲ್ಲರಿಗೂ ಉತ್ತರ ಕೊಡುವಂತೆ ಏನಾದರು ಮಾಡಬೇಕು ಅಂತ ಯೋಚಿಸುತ್ತಿದ್ದಾಗಲೇ ಹೊಳೆಯಿತು, ಕೆಲಸಕ್ಕೆ ಹೋಗುವ ಬದಲು ಕೆಲಸಗಾರರನ್ನೇ ಸೆಳೆದರೆ ಹೇಗೆ ಅಂತ? ಆಗ ಶುರು ಮಾಡಿದ್ದು ಟ್ವಿಟರ್, ಇನ್ಸ$r$Åಗ್ರಾಮ್ ರೆಸ್ಯೂಮ್. ಅದ್ಬುತವಾದ ಪರಿಕಲ್ಪನೆ. ನಮ್ಮ ನಮ್ಮ ಆಸಕ್ತಿಗಳನ್ನು ಚಿತ್ರಗಳ ಮೂಲ ತೋರಿಸುವುದು. ಇದು ಹಿಟ್ ಆಯ್ತು. ಆಗ ನಿಖೀತಾಳನ್ನು ಡೆಲೋಯಿಟ್ ಕಂಪನಿ ಅವರು ಕಂಟೆಂಟ್ ಕ್ರಿಯೇಟರ್ ಆಗಿ ಸೇರಿಸಿಕೊಂಡಿತು. ಇವತ್ತು 17.5 ಕೆ ನಷ್ಟು ಈಕೆಗೆ ಇನ್‌ಸ್ಟ್ರಗ್ರಾಮ್ ಹಿಂಬಾಲಕರಿದ್ದಾರೆ. ಯಾರೇ ಕೆಲಸಕ್ಕೆ ಅರ್ಜಿ ಗುಜರಾಯಿಸಬೇಕಾದರೆ, ಈಕೆಯ ಪ್ರಯತ್ನವನ್ನು ಒಂದು ಸಾರಿ ಕಣ್ತುಂಬಿಕೊಳ್ಳುತ್ತಾರಂತೆ. ಚಾವ್ಲಾಗಿಂತ ಮೊದಲು ಕೆಲಸಕ್ಕೆ ಸೇರಿದ ಸ್ನೇಹಿತೆಯರೂ ಕೂಡ ಈಕೆಯಿಂದಲೇ ರೆಸ್ಯೂಮ್ ತಯಾರು ಮಾಡಿಸಿಕೊಳ್ಳುತ್ತಾರಂತೆ.
ಹಿಂದಿನ ಬೆಂಚಲ್ಲಿ ಇದ್ದರೂ, ಜಗತ್ತಿನಲ್ಲಿ ಮುಂದೆ ಬರೋದು ಅಂದರೆ ಹೀಗೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.