ಬಾಲ್ಯದಲ್ಲಿ ಕಂಡ ರಾಕ್‌ ಸ್ಟಾರ್‌ಗಳು!


Team Udayavani, May 16, 2017, 12:51 PM IST

balya.jpg

“ಅನಾಶ್ರಿತಾಕರ್ಮಫ‌ಲಂಕಾರ್ಯಂಕರೋತಿಯಃ…’ ಎಂದು ಅವರು ಹಾಡಲು ಶುರುಮಾಡಿದರೆ ನಮಗೆ ಶ್ಲೋಕಗಳ ಅರ್ಥ ತಿಳಿಯದಿದ್ದರೂ ಭಕ್ತಿಲೋಕದಲ್ಲಿ ಮುಳುಗೇಳುತ್ತಿದ್ದೆವು. ನಮ್ಮ ಹಿಂದಿ ಟೀಚರ್‌ ಅಂತೂ ಅವರಿಬ್ಬರ ದೊಡ್ಡ ಫ್ಯಾನ್‌ ಆಗಿಬಿಟ್ಟಿದ್ದರು. ಎಷ್ಟರಮಟ್ಟಿಗೆ ಅಂದರೆ, ಅವರು ಕ್ಲಾಸಿಗೆ ಬಂದ ತಕ್ಷಣ ಅವರಿಬ್ಬರಿಂದ ಹಾಡು ಹೇಳಿಸಿ ನಂತರವೇ ಪಾಠ ಮಾಡಲು ಶುರುಮಾಡುತ್ತಿದ್ದರು. 
 
ತುಮಕೂರಿನ ಸಿದ್ಧಗಂಗಾ ಮಠದಲ್ಲಿ 5ನೇ ತರಗತಿ ಓದುತ್ತಿದ್ದೆ. ಆಗಷ್ಟೇ ಹೊಸತಾಗಿ ಮಠಕ್ಕೆ ಸೇರಿದ್ದ ನಾನು ಸ್ಕೂಲ್‌ ಹೇಗಿರುತ್ತದೆ ಎಂಬ ಕುತೂಹಲದಿಂದ ಶಾಲೆಗೆ ಕುಣಿಯುತ್ತಲೇ ಹೋಗಿ¨ªೆ. “ನಿಮ್ಮಲ್ಲಿ ಯಾರಿಗೆ ಚೆನ್ನಾಗಿ ಹಾಡಲು ಬರುತ್ತದೆ?’ ಎಂದು ನಮ್ಮ ಕ್ಲಾಸ್‌ ಟೀಚರ್‌ ಸತೀಶ್‌ ಗುರುಗಳು ಮೊದಲ ದಿನವೇ ಕೇಳಿದ್ದರು. ನಾವು ಹುಡುಗರು ಒಬ್ಬರಿನ್ನೊಬ್ಬರ ಮುಖ ನೋಡುತ್ತಾ ಕುಳಿತುಬಿಟ್ಟೆವು. ಅಷ್ಟರಲ್ಲಿ “ಸಾರ್‌, ನಾನು ಹಾಡುತ್ತೇನೆ’ ಎಂಬ ದನಿ ಕೇಳಿ ಬಂದಾಗ ನಮ್ಮ ಕಣ್ಣುಗಳೆಲ್ಲಾ ಆ ಹುಡುಗನ ಮೇಲೆ ನೆಟ್ಟಿತು. ಆ ಹುಡುಗ ನಾಚಿಕೆಯಿಂದಲೇ ತಲೆತಗ್ಗಿಸಿಕೊಂಡು ನಮ್‌ ಮುಂದೆ ಬಂದು ನಿಂತು ಹಾಡತೊಡಗಿದ, “ದೇವನ ಮನೆಯಿದು ಈಜಗವೆÇÉಾ, ಬಾಡಿಗೆದಾರರು ನಾವು ನೀವುಗಳೆÇÉಾ…’. ತನ್ಮಯತೆಯಿಂದಲೇ ಹಾಡಿದ. ಹಾಡು ಕೇಳಿ ನಮ್ಮ ಗುರುಗಳು ಮೆಚ್ಚುಗೆ ಸೂಚಿಸಿದರು. ಅವನ ಹೆಸರು ದುರ್ಗಪ್ಪ. ಬಾಗಲಕೋಟೆ ಜಿÇÉೆಯ ಹುಡುಗ. ಹಿಂದಿನ ದಿನವಷ್ಟೇ ಹಾಸ್ಟೆಲಿನಲ್ಲಿ ಯಾವುದೋ ಕಾರಣಕ್ಕೆ ಅವನೊಂದಿಗೆ ಜಗಳವಾಡಿಕೊಂಡು ಅವನ ಮೇಲೆ ಮುನಿಸಿಕೊಂಡಿದ್ದೆ. ಆದರೆ ಅವನ ಹಾಡು ಕೇಳಿದ ಮೇಲೆ ಅವನ ಅಭಿಮಾನಿಯಾಗಿಬಿಟ್ಟಿ¨ªೆ. ಯಾಕಾದರೂ ಅವನೊಂದಿಗೆ ಜಗಳವಾಡಿದೆ ಅನ್ನಿಸಿಬಿಟ್ಟಿತು. 

ಅವನಷ್ಟೇ ಸುಶ್ರಾವ್ಯವಾಗಿ ಹಾಡುವ ಮತ್ತೂಬ್ಬ ಹುಡುಗ ನಮ್ಮ ಕ್ಲಾಸಿನಲ್ಲಿದ್ದ. ಅವನ ಹೆಸರು ಪರಸಪ್ಪ. ಕುತೂಹಲದ ಸಂಗತಿಯೆಂದರೆ ದುರ್ಗಪ್ಪ ಮತ್ತು ಪರಸಪ್ಪ ಇಬ್ಬರೂ ಅಣ್ಣತಮ್ಮಂದಿರಾಗಿದ್ದರು. ಅವರ ಹಾಡುಗಾರಿಕೆಯನ್ನು ಮೆಚ್ಚಿಕೊಂಡಿದ್ದ ನಮ್ಮ ಕ್ಲಾಸ್‌ ಟೀಚರ್‌, ತಾವು ಪಾಠ ಮಾಡುವ ತರಗತಿಗಳಿಗೆಲ್ಲ ಅವರಿಬ್ಬರನ್ನು ಕರೆದುಕೊಂಡು ಹೋಗಿ ಹಾಡಿಸುತ್ತಿದ್ದರು. ಅಷ್ಟೇ ಅಲ್ಲ, ನಮ್ಮ ಶಾಲೆಯಲ್ಲಿ ಬೆಳಿಗ್ಗೆ ಪ್ರಾರ್ಥನಾ ಗೀತೆಯನ್ನು ಹಾಡಲು  ಮುಖ್ಯೋಪಾಧ್ಯಾಯರ ಬಳಿ ಅವರಿಬ್ಬರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಅಂದಿನಿಂದ ನಮ್ಮ ಶಾಲೆಯಲ್ಲಿ ಪ್ರಾರ್ಥನೆಯಿರಲಿ, ಸಾಂಸ್ಕೃತಿಕ ಸಮಾರಂಭಗಳಿರಲಿ ಅವರ ಹಾಡಿಲ್ಲದೆ ಆರಂಭವಾಗುತ್ತಿರಲಿಲ್ಲ.

ನಾವು 6ನೇ ತರಗತಿಯಲ್ಲಿ ಓದುತ್ತಿರುವಾಗ ಆದಿಚುಂಚನಗಿರಿ ಮಠದಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಗೆ ಹುಡುಗರನ್ನು ಆಯ್ಕೆ ಮಾಡುವ ಸಲುವಾಗಿ ಮಠದ ಸಂಗೀತ ಶಿಕ್ಷಕರಾಗಿದ್ದ ಲಕ್ಷ್ಮಣ ಗುರುಗಳು ಅಡಿಷನ್‌ ಕರೆದಿದ್ದರು. ನನಗೆ ಚೆನ್ನಾಗಿ ಗೊತ್ತಿತ್ತು, ಪರಸಪ್ಪ- ದುರ್ಗಪ್ಪ ಅವರೇ$ಆಯ್ಕೆ ಆಗುತ್ತಾರೆಂದು. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಅವರಿಬ್ಬರೂ ಸ್ಪರ್ಧೆಗೆ ಆಯ್ಕೆಯಾದರು. ಸ್ಪರ್ಧೆಯಲ್ಲಿ ಭಗವದ್ಗೀತೆಯ 6ನೇ ಅಧ್ಯಾಯದ ಮೊದಲ ಹದಿನೈದು ಶ್ಲೋಕಗಳನ್ನು ಹಾಡಬೇಕಿತ್ತು. ಅಂತೂ ಆದಿಚುಂಚನಗಿರಿಯಲ್ಲಿ ಅವರು ಬಹುಮಾನ ಗೆದ್ದು ಬಂದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಅವರಿಬ್ಬರೂ ಸೇರಿ ಭಗವದ್ಗೀತೆಯನ್ನು ಹಾಡುತ್ತಿದ್ದರೆ ಅÇÉೊಂದು ಮಾಯಾಲೋಕವೇ ಸೃಷ್ಟಿಯಾಗಿಬಿಡುತ್ತಿತ್ತು. “ಅನಾಶ್ರಿತಾಕರ್ಮಫ‌ಲಂಕಾರ್ಯಂಕರೋತಿಯಃ…’ ಎಂದು ಅವರು ಹಾಡಲು ಶುರುಮಾಡಿದರೆ ನಮಗೆ ಶ್ಲೋಕಗಳ ಅರ್ಥ ತಿಳಿಯದಿದ್ದರೂ ಭಕ್ತಿಲೋಕದಲ್ಲಿ ಮುಳುಗೇಳುತ್ತಿದ್ದೆವು. ನಮ್ಮ ಹಿಂದಿ ಟೀಚರ್‌ ಅಂತೂ ಅವರಿಬ್ಬರ ದೊಡ್ಡ ಫ್ಯಾನ್‌ ಆಗಿಬಿಟ್ಟಿದ್ದರು. ಎಷ್ಟರಮಟ್ಟಿಗೆ ಅಂದರೆ, ಅವರು ಕ್ಲಾಸಿಗೆ ಬಂದ ತಕ್ಷಣ ಅವರಿಬ್ಬರಿಂದ ಹಾಡು ಹೇಳಿಸಿ ನಂತರವೇ ಪಾಠ ಮಾಡಲು ಶುರುಮಾಡುತ್ತಿದ್ದರು. ಆಗ ಈಗಿನಂತೆ ಮೊಬೈಲ…, ಟಿ.ವಿ., ಸೋಶಿಯಲ್‌ ಮೀಡಿಯಾಗಳ ಹಾವಳಿ ಇರಲಿಲ್ಲ. ನಮಗೇನಾದರೂ ಹಾಡು ಕೇಳಬೇಕೆನಿಸಿದರೆ ಪರಸಪ್ಪನಲ್ಲಿ ಮನವಿ ಮಾಡುತ್ತಿದ್ದೆವು. ಪರಸಪ್ಪ ನಮ್ಮ ಮನವಿಗೆ ಸ್ಪಂದಿಸುತ್ತಿದ್ದ. ನಮ್ಮ ಮಠದಲ್ಲಿ ಪ್ರತಿನಿತ್ಯ ದೊಡ್ಡ ಬುದ್ಧಿಯವರ (ಡಾ. ಶಿವಕುಮಾರ ಸ್ವಾಮಿಗಳು) ಸಾನ್ನಿಧ್ಯದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಮಾಡುವ ಸಾಮೂಹಿಕ ಪ್ರಾರ್ಥನೆಯನ್ನು ನೋಡುವುದೇ ಕಣ್ಣಿಗೆಹಬ್ಬ. ಅಷ್ಟೂ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಹೇಳಿಕೊಡಲು ನಾಲ್ಕೈದು ಹುಡುಗರನ್ನು ಆಯ್ಕೆ ಮಾಡಲಾಗುತ್ತಿತ್ತು. ಅವರಲ್ಲಿ ಪರಸಪ್ಪ-$ದುರ್ಗಪ್ಪರೂ ಇದ್ದರು. ಹೀಗಾಗಿ ನಮ್ಮ ಮಠದಲ್ಲಿ ಎಲ್ಲರಿಗೂ ಅವರು ಚಿರಪರಿಚಿತರಾಗಿದ್ದರು. ಪ್ರತಿಭಾ ಕಾರಂಜಿಯಿರಲಿ ಅಥವಾ ಯಾವುದೇ ಸಂಗೀತ ಸ್ಪರ್ಧೆಯಿರಲಿ, ಅವರು ಬಹುಮಾನಗಳನ್ನು ಗೆದ್ದುಕೊಂಡು ಬರುತ್ತಿದ್ದರು. ಒಮ್ಮೆ ದುರ್ಗಪ್ಪ ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಗೊಂಡಿದ್ದ. ಆದರೆ ನಮ್ಮ ಶಾಲೆಯಲ್ಲಿ ಆಯ್ಕೆಯಾದವನು ಒಬ್ಬನೇ ಹುಡುಗನಾಗಿದ್ದರಿಂದ, ಒಬ್ಬನಿಗಾಗಿ ಅಷ್ಟು ದೂರ ಹೋಗುವುದು ತ್ರಾಸದಾಯಕ ಅಂತಲೋ ಏನೋ ಶಾಲೆಯವರು ನಿರ್ಲಕ್ಷÂ ತೋರಿದ್ದರಿಂದ ಅವನು ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ವಂಚಿತನಾಗಿದ್ದ. ಇಂಥ ಸಾಕಷ್ಟು ಘಟನೆಗಳು ಅವರ ಜೀವನದಲ್ಲಿ ನಡೆದಿವೆ. 

ಹತ್ತನೆಯ ತರಗತಿಯವರೆಗೂ ಜೊತೆಯಲ್ಲಿಯೇ ಓದಿದ ನಾವು ಪಿಯುಸಿಯಲ್ಲಿ ಬೇರ್ಪಟ್ಟೆವು. ಅವರಿಬ್ಬರನ್ನೂ  ನೋಡಿ 8 ವರ್ಷಗಳಾಗುತ್ತಾ ಬಂದವು. ಆದರೂ ಇಂದಿಗೂ ನಾವು ದೂರವಾಗಿದ್ದೇವೆ ಅಂತ ಯಾವತ್ತೂ ಅನ್ನಿಸಿಲ್ಲ. ಅವರು ಹಾಡುವುದನ್ನು ಕಡಿಮೆ ಮಾಡಿ¨ªಾರೆ ಎಂದು ಯಾರಿಂದಲೋ ಕೇಳಿ ಮನಸ್ಸಿಗೆ ಬಹಳ ಬೇಸರವಾಯಿತು. ಈಗ ಸಂಗೀತ ಕಲಿಯುವವರಿಗೆ ಸಿಗುವ ಅವಕಾಶಗಳು, ಪ್ರೋತ್ಸಾಹ ಆಗ ಅವರಿಗೇನಾದರೂ ಸಿಕ್ಕಿದ್ದರೆ ಅವರೂ ಅದ್ಭುತ ಗಾಯಕರಾಗಿರುತ್ತಿದ್ದರು ಅಂತ ಅನ್ನಿಸಿದ್ದಿದೆ. 

– ಹನುಮಂತ ಕೊಪ್ಪದ, ಮೈಸೂರು

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.