ಫಸ್ಟ್ ಇಯರ್‌ನ ಎಲ್ಲ ಹುಡುಗರ ಕಡೆಯಿಂದ…
ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್ನಾ!
Team Udayavani, Apr 23, 2019, 6:00 AM IST
ಇಷ್ಟು ಹೊತ್ತಿನವರೆಗೂ ವಿಧಿವಿಧಾನಗಳಂತೆ ಯಾರಿಗೆ, ಯಾರಿಂದ, ಯಾವ ಹಾಡು ಎಂದು ಹೇಳುತ್ತಿದ್ದವರು, ನನ್ನ ವಿಷಯದಲ್ಲಿ ಮಾತ್ರ ಯಾವೊಂದು ವಿವರಣೆಯನ್ನೂ ಕೊಡದೆ, ನೇರವಾಗಿ ಹಾಡನ್ನೇ ಪ್ಲೇ ಮಾಡಿದರು.
ನನಗಿನ್ನೂ ನೆನಪಿದೆ. ಅದು ಎಂಜಿನಿಯರಿಂಗ್‌ನ ಮೊದಲ ವರ್ಷ. ನಾವಿಲ್ಯಾಕೆ ಬಂದಿದ್ದೀವಿ, ಏನೇನು ಓದಬೇಕು, ಹೇಗೆಲ್ಲ ಪರೀಕ್ಷೆ ಎದುರಿಸಬೇಕು ಮುಂತಾದ ವಿಷಯಗಳನ್ನು ತಿಳಿಯುವ ಮೊದಲೇ ಪರೀಕ್ಷಾ ವೇಳಾಪಟ್ಟಿ ನೋಟಿಸ್ ಬೋರ್ಡ್ ಮೇಲೆ ನೇತಾಡುತ್ತಿತ್ತು. ಜೊತೆಗೆ ವಾರ್ಷಿಕೋತ್ಸವದ ದಿನವೂ ಬಂತು! ಪರೀಕ್ಷೆ ಬಗ್ಗೆಯೇ ಜಾಸ್ತಿ ಗೊತ್ತಿರಲಿಲ್ಲ. ಅಂದಮೇಲೆ, ನಾವು ವಾರ್ಷಿಕೋತ್ಸವದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ದೂರದ ಮಾತು. ಹಾಸ್ಟೆಲ್‌ನ ಹುಡುಗಿಯರನ್ನು ಬಿಟ್ಟರೆ (ಅವರಿಗೆ ಸೀನಿಯರ್ಸ್‌ಗಳ ಒತ್ತಡದಿಂದ ಭಾಗವಹಿಸಲೇಬೇಕಾಗಿತ್ತು), ಉಳಿದವರಿಗೆ ವಾರ್ಷಿಕೋತ್ಸವದ ಬಗ್ಗೆ ಹೆಚ್ಚೇನೂ ಕುತೂಹಲವಿರಲಿಲ್ಲ. ನಮಗೆ ಕುತೂಹಲವಿದ್ದುದು ಎರಡೇ ವಿಷಯಗಳ ಬಗ್ಗೆ; ಒಂದು ಅವತ್ತು ಊಟಕ್ಕೆ ಏನೇನಿರುತ್ತದೆ? ಎರಡನೆಯದು ಮತ್ತು ಮುಖ್ಯವಾದದ್ದು ವಾರ್ಷಿಕೋತ್ಸವದ ಕಾರ್ಯಕ್ರಮಗಳು ಮುಗಿದ ಮೇಲೆ ಮನೆಗೆ ಹೋಗಲು ಕಾಲೇಜ್ ಬಸ್ ಅರೇಂಜ್‌ಮೆಂಟ್ ಇರುತ್ತದೋ, ಇಲ್ಲವೋ ಎಂದು!
ಹೀಗಿರುವಾಗ, ವಾರ್ಷಿಕೋತ್ಸವದ ಮೊದಲನೇ ದಿನ ಒಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏನೆಂದರೆ, ಇಷ್ಟ ಬಂದವರಿಗೆ ಕವಿತೆ, ಚಿತ್ರಗೀತೆ ಅಥವಾ ಶಾಯರಿಯನ್ನು ಅರ್ಪಿಸುವ ಕಾರ್ಯಕ್ರಮ. ಈ ಹಾಡು/ ಕವಿತೆ ಯಾರಿಂದ, ಯಾರಿಗೋಸ್ಕರ ಎಂದು ನಿರೂಪಕರು ಮೈಕ್‌ನಲ್ಲಿ ಹೇಳುತ್ತಿದ್ದರು. ಕೆಲವರು ತಮ್ಮ ಸ್ನೇಹಿತರಿಗೆ ಸ್ನೇಹಕ್ಕೆ ಸಂಬಂಧಿಸಿದ ಹಾಡು ಅರ್ಪಿಸಿದರೆ, ಇನ್ನೂ ಕೆಲವರು ತಮ್ಮ ನೆಚ್ಚಿನ ಶಿಕ್ಷಕರಿಗೆ ಗೌರವಾರ್ಥವಾಗಿ ಹಾಡು ಅರ್ಪಿಸಿದರು. ಇದನ್ನೇ ಅವಕಾಶ ಮಾಡಿಕೊಂಡು ಕೆಲ ಹುಡುಗರು ತಮ್ಮ ಪ್ರೀತಿಯ ಹುಡುಗಿಗೆ ಪ್ರೇಮ ನಿವೇದನೆಯನ್ನೂ ಮಾಡಿದರು!
ನನ್ನ ಹೆಚ್ಚಿನ ಸಹಪಾಠಿಗಳಿಗೆ ಪ್ರೀತಿ ನಿವೇದನೆಯ ಹಾಡುಗಳು ಸಾಲು ಸಾಲಾಗಿ ಬರಲಾರಂಭಿಸಿದವು. ಅದೂ ಅಲ್ಲದೆ, ಕೆಲ ಹುಡುಗರು ತಮ್ಮ ಹೆಸರನ್ನು ಹೇಳದೆ, ಬರೀ ಎಲೆಕ್ಟ್ರಾನಿಕ್ಸ್ ವಿಭಾಗ, ಮೆಕ್ಯಾನಿಕಲ್ ವಿಭಾಗ ಎಂದಷ್ಟೇ ನಮೂದಿಸಿ; ಈ ಹುಡುಗ ಯಾರಿರಬಹುದು ಎಂದು ಹುಡುಗಿಯರ ತಲೆಯೊಳಗೆ ಹುಳ ಬಿಟ್ಟರು. ಆಗ ನಿರೂಪಕರು ಥಟ್ಟನೆ ನನ್ನ ಹೆಸರನ್ನು ಹೇಳಿಬಿಟ್ಟರು! “ಈಗ ಹಾಕಲಾಗುವ ಹಾಡು, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಅನುಪಮಾ ಬೆಣಚಿನಮರ್ಡಿ ಅವರಿಗೆ’ ಎಂದು ಹೇಳಿದರಷ್ಟೇ. ನಿಮಿರಿ ನಿಂತಿದ್ದ ನನ್ನ ಕಿವಿಗಳು “ಯಾರಿಂದ?’ ಎಂದು ಕೇಳಲು ಹಾತೊರೆದವು. ಆದರೆ, ಇಷ್ಟು ಹೊತ್ತಿನವರೆಗೂ ವಿಧಿವಿಧಾನಗಳಂತೆ ಯಾರಿಗೆ, ಯಾರಿಂದ, ಯಾವ ಹಾಡು ಎಂದು ಹೇಳುತ್ತಿದ್ದವರು, ನನ್ನ ವಿಷಯದಲ್ಲಿ ಮಾತ್ರ ಯಾವೊಂದು ವಿವರಣೆಯನ್ನೂ ಕೊಡದೆ, ನೇರವಾಗಿ ಹಾಡನ್ನೇ ಪ್ಲೇ ಮಾಡಿದರು. ಅದೂ ಯಾವ ಹಾಡು?- ಜೋಗಿ ಚಿತ್ರದ “ಹೊಡಿ ಮಗ ಹೊಡಿ ಮಗ, ಬಿಡಬೇಡ ಅವಾ°…’
ಎಲ್ಲರೂ ಹೋ ಎಂದು ಕೂಗಲು ಶುರು ಮಾಡಿದರು. ಸ್ವಲ್ಪ ಹೊತ್ತು ಜಾಸ್ತಿಯೇ ಪ್ಲೇ ಮಾಡಿದ ನಿರೂಪಕರು, ಹಾಡು ಮುಗಿದ ಮೇಲೆ “ಇದು ಎಲ್ಲ ಫಸ್ಟ್ ಇಯರ್ ಹುಡುಗರ ಕಡೆಯಿಂದ’ ಎಂದು ಒತ್ತಿ ಒತ್ತಿ ಹೇಳಿದರು. ನನಗಂತೂ ಕೋಪ ನೆತ್ತಿಗೇರಿತ್ತು. ನನ್ನ ಸ್ನೇಹಿತೆಯರೆಲ್ಲ ನಕ್ಕು ನಕ್ಕು, “ಏನೇ, ಕಾಲೇಜ್ ಬ್ಯಾಗಲ್ಲಿ ಲಾಂಗು, ಮಚ್ಚು ಏನಾದ್ರೂ ಇಟ್ಕೊಂಡಿದೀಯಾ? ಅವರು ಯಾಕೆ ಆ ಹಾಡನ್ನು ಅರ್ಪಿಸಿದ್ದಾರೆ?’ ಅಂತ ಗೇಲಿ ಮಾಡುತ್ತಿದ್ದರು.
ಸ್ವಲ್ಪ ನೇರವಾಗಿ, ಇದ್ದುದನ್ನು ಇದ್ದ ಹಾಗೆ ಹೇಳುವ ನನ್ನ ಸ್ವಭಾವ ಹಾಗೂ ಒಂದೆರಡು ಬಾರಿ, ಕಾಲೇಜ… ಬಸ್‌ನಲ್ಲಿ ಹುಡುಗಿಯರಿಗೆ ಮೀಸಲಿರಿಸಿದ ಸೀಟ್‌ನಲ್ಲಿ ಕುಳಿತಿದ್ದ ಹುಡುಗರನ್ನು ಎಬ್ಬಿಸಿ ನಾನು ಕೂತಿದ್ದಕ್ಕೆ ಈ ಹಾಡನ್ನು ಅರ್ಪಿಸುವುದೇ? ನನಗೆ ಗೊತ್ತಿತ್ತು, ಇಡೀ ಕಾಲೇಜಿನ ಫಸ್ಟ್ ಇಯರ್ ಹುಡುಗರ ಮೆದುಳು ಒಂದೇ ತೆರನಾಗಿ ಕೆಲಸ ಮಾಡಲು ಸಾಧ್ಯವೇ? ಯಾರೋ ತಮ್ಮ ಹೆಸರನ್ನು ನಮೂದಿಸಲು ಭಯವಾಗಿ ಹೀಗೆ ಮಾಡಿದ್ದಾರೆ ಎಂದು!
ಆದರೆ, ಇದೊಂದು ಸವಿನೆನಪಾಗಿ ನನ್ನ ಮನಃಪಟಲದಲ್ಲಿ ಉಳಿದಿದೆ. ಈಗಲೂ, ಜೋಗಿ ಚಿತ್ರದ ಹಾಡು ಟಿವಿಯಲ್ಲಿ ಬರುತ್ತಿದ್ದರೆ, ಸ್ನೇಹಿತರು ಮೆಸೇಜ… ಮಾಡಿ, “ಈ ಚಾನೆಲ… ಹಾಕು’ ಅಂತ ಕಿಚಾಯಿಸುತ್ತಾರೆ. ಇವತ್ತಿಗೂ, ಆ “ಎಲ್ಲ ಫಸ್ಟ್ ಇಯರ್ ಹುಡುಗರ ಕಡೆಯಿಂದ’ ಎಂದು ಬರೆದುಕೊಟ್ಟ ಹುಡುಗನನ್ನು ಹುಡುಕುತ್ತಿದ್ದೇನೆ (ಸಿಗಲಿ ನನ್ನ ಕೈಗೆ ಎಂದು!).
ಅನುಪಮಾ ಬೆಣಚಿನಮರ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.