ಕಣ್ಣು ಕಣ್ಣು ಕಲಿತಾಗ…


Team Udayavani, Sep 25, 2018, 6:00 AM IST

lead-1-eyes.jpg

ಹೆಡ್‌ಮಾಸ್ಟರ್‌ಗೆ, ಶಾಲೆಯೇ ಮನೆ, ವಿದ್ಯಾರ್ಥಿಗಳೆಲ್ಲರೂ ಅವರ ಮಕ್ಕಳು. ಮಕ್ಕಳಿಗೆ ಯಾವುದೇ ಸಮಸ್ಯೆ ಬಾರದಂತೆ ಕಾಯುತ್ತಾರೆ ಹೆಡ್‌ಮಾಸ್ಟರ್‌. ಅವರ ಕಣ್ಗಾವಲಿನಲ್ಲಿ ಒಂದಿಡೀ ಯುವಸಮೂಹ ಬೆಳಕು ಕಾಣುತ್ತದೆ. ಅಂಥ ಹೆಡ್‌ಮಾಸ್ಟರರಲ್ಲೊಬ್ಬರು ಕ್ಯಾಲಿಸ್ಟಾಸ್‌ ಡೇಸಾ. ಮಂಗಳೂರಿನಲ್ಲಿ ಸೇವಾಭಾರತಿ ಸಂಸ್ಥೆ ನಡೆಸುತ್ತಿರುವ ಅಂಧರ ಶಾಲೆಯ ಹೆಡ್‌ಮಾಸ್ಟರ್‌ ಅವರು. ಕಳೆದ 9 ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಅಂಧ ವಿದ್ಯಾರ್ಥಿಗಳನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಕೆಲಸದಲ್ಲಿ ತೊಡಗಿರುವ ಕ್ಯಾಲಿಸ್ಟಾಸ್‌ ಅವರು ಸ್ವತಃ ಅಂಧರು!

ನಿಮಗೆ ಹೆಲೆನ್‌ ಕೆಲ್ಲರ್‌ ಗೊತ್ತಾ? ಅವರು ಕುರುಡರಾಗಿದ್ದರು ಎನ್ನುವ ಸಂಗತಿ ಕೆಲವರಿಗೆ ತಿಳಿದಿರಬಹುದು. ಆದರೆ, ಕುರುಡುತನ ಒಂದೇ ಅವರ ಸಮಸ್ಯೆಯಾಗಿರಲಿಲ್ಲ. ಅವರಿಗೆ ಹಲವು ದೈಹಿಕ ನ್ಯೂನತೆಗಳಿದ್ದವು. ಮೆದುಳಿಗೆ ವಿಚಿತ್ರ ಕಾಯಿಲೆ ಅಂಟಿಕೊಂಡುಬಿಟ್ಟಿತ್ತು. ಕಿವಿ ಕೇಳಿಸುತ್ತಿರಲಿಲ್ಲ. ಮಾತಾಡುವುದಕ್ಕೂ ಕಷ್ಟವಾಗುತ್ತಿತ್ತು. ಏಳನೇ ವಯಸ್ಸಿನಲ್ಲಿಯೇ ಅವರು 60 ಬಗೆಯ ಸಂಜ್ಞೆಗಳ ಮೂಲಕ ಸಂವಹಿಸುತ್ತಿದ್ದರು. ಹೆಜ್ಜೆಯ ವೈಬ್ರೇಷನ್ನಿಂದಲೇ ವ್ಯಕ್ತಿಗಳನ್ನು ಗುರುತಿಸುವ ಹಂತವನ್ನು ತಲುಪುವವರೆಗೆ ನೂರಾರು ಅಡೆತಡೆಗಳನ್ನು ದಾಟಿಕೊಂಡು ಬಂದ ಪುಣ್ಯಾತಿತ್ತಿ ಹೆಲೆನ್‌ ಕೆಲ್ಲರ್‌! “ಅವರು ಎದುರಿಸಿದುದರ ಮುಂದೆ ನಮ್ಮ ಕಷ್ಟ ಏನೇನೂ ಇಲ್ಲ’ ಎಂದು ಮಗುಮ್ಮಾಗಿ ನಗುತ್ತಾರೆ ಕ್ಯಾಲಿಸ್ಟಾಸ್‌ ಡೇಸಾ. ಮಂಗಳೂರು, ಉಡುಪಿ, ಕಾರವಾರ, ಕೊಡಗು ಪ್ರಾಂತ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಅಂಧರ ಶಾಲೆ “ರೋಮನ್‌ ಕ್ಯಾಥರಿನ್‌ ಲೋಬೋ ಅಂಧರ ವಸತಿ ಶಾಲೆ’. ಮಂಗಳೂರಿನ ಬಿಜೈನಲ್ಲಿರುವ ಈ ಶಾಲೆ ಶುರುವಾದಾಗಿನಿಂದಲೂ ಕ್ಯಾಲಿಸ್ಟಾಸ್‌ ಅವರೇ ಪ್ರಾಂಶುಪಾಲರು.

ಸ್ವಾವಲಂಬಿಯಾಗಿ ಬೆಳೆಸಿ
ಹುಟ್ಟು ಅಂಧತ್ವವನ್ನು ಹೊಂದಿರುವ ಕ್ಯಾಲಿಸ್ಟಾಸ್‌ ಅವರು, ಸವಾಲುಗಳ ನಡುವೆಯೂ ಸ್ವಾವಲಂಬಿ ಜೀವನವನ್ನು ಆಯ್ದುಕೊಂಡವರು. ಅನೇಕ ಹಂತಗಳಲ್ಲಿ ಎದುರಾದ ಬದುಕಿನ ಸವಾಲನ್ನು ಮೆಟ್ಟಿ ನಿಂತು ಉನ್ನತ ಶಿಕ್ಷಣ ಪಡೆದವರು. ಬೆಂಗಳೂರಿನಲ್ಲಿ ಡಿವೈನ್‌ ಲೈಟ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ಸೇಂಟ…, ಕ್ಸೇವಿಯರ್‌ ಕಾಲೇಜಿನಲ್ಲಿ ಬಿ.ಎ. ಪದವಿ, ಮುಂಬೈ ಯುನಿವರ್ಸಿಟಿಯಿಂದ ಸಮಾಜವಿಜ್ಞಾನದಲ್ಲಿ ಎಂ.ಎ ಪದವಿ ಪಡೆದರು. ನಂತರ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಬದುಕು ಪ್ರಾರಂಭಿಸಿದ್ದರು. “ಮನೆಯವರು, ಕುರುಡನಿಗೇಕೆ ಓದು ಪಾಠ ಅಂತ ಅಂದುಕೊಂಡಿದ್ದರೆ ನಾನು ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಮನೆಯವರಿಗೆ ಕೃತಜ್ಞತೆ ಅರ್ಪಿಸುತ್ತಾರವರು. ಪ್ರತಿ ಅಂಧ ಮಗುವಿನ ತಂದೆ ತಾಯಿ ತಮ್ಮ ಮಕ್ಕಳನ್ನು ಸ್ವಾವಲಂಬಿಯಾಗಿ ಬೆಳೆಯಲು ಪ್ರೋತ್ಸಾಹಿಸಬೇಕು ಎನ್ನುವುದು ಅವರ ಕಳಕಳಿ.

ಶಾಲೆಯ ಪಾಠಗಳು
ಎಲ್ಲಾ ಶಾಲೆಗಳಲ್ಲಿ ಯಾವ ಯಾವ ಪಾಠಗಳನ್ನು ಬೋಧಿಸಲಾಗುತ್ತದೋ, ಅವೇ ವಿಷಯಗಳನ್ನು ಈ ಶಾಲೆಯಲ್ಲೂ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಅಲ್ಲದೇ, ಈ ಮುಖ್ಯ ವಿಷಯಗಳನ್ನು ಹೊರತುಪಡಿಸಿ “ಓರಿಯೆಂಟೇಷನ್‌ ಅಂಡ್ ಮೊಬಿಲಿಟಿ’ ಪಾಠ ಮಾಡಲಾಗುತ್ತೆ. ಸಮಾಜದಲ್ಲಿ ಬೇರೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಹೊಂದಿಕೊಂಡು ಬಾಳಬೇಕು ಅನ್ನೋದನ್ನು ಕಲಿಸಿಕೊಡಲಾಗುತ್ತದೆ.

ಹೆತ್ತವರಿಗೆ ಕೌನ್ಸೆಲಿಂಗ್‌!
ರೋಮನ್‌ ಕ್ಯಾಥರೀನ್‌ ಅಂಧರ ಶಾಲೆಯಲ್ಲಿ ನೀಡಲಾಗುವ ಶಿಕ್ಷಣ ಸಂಪೂರ್ಣ ಉಚಿತ. ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ, ಊಟ, ಯೂನಿಫಾರ್ಮ್ ನೀಡಲಾಗುತ್ತಿದೆ. ಶಾಲೆ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಅದೆಷ್ಟೋ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ಅವರಲ್ಲೇನಕರು ಹೈಸ್ಕೂಲ್‌ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಶಿಕ್ಷಣವನ್ನೂ ಪಡೆದುಕೊಳ್ತಿದ್ದಾರೆ. ಸಾಮಾನ್ಯವಾಗಿ ವಿಕಲಚೇತನರಿಗೆ ಬದುಕನ್ನು ಎದುರಿಸುವ ಕುರಿತು, ಸಮಸ್ಯೆಗಳೊಂದಿಗೆ ಹೋರಾಡುವ ಬಗ್ಗೆ ಕೌನ್ಸೆಲಿಂಗ್‌ ಮಾರ್ಗದರ್ಶನ ಮಾಡುತ್ತಾರೆ. ಇಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೂ ಕೌನ್ಸೆಲಿಂಗ್‌ ನೀಡಲಾಗುತ್ತದೆ. ತಮ್ಮ ಮಕ್ಕಳನ್ನು ಹೇಗೆ ಕಾಣಬೇಕು ಮುಂತಾದ ವಿಚಾರಗಳ ಕುರಿತು ಮಾರ್ಗದರ್ಶನ ಮಾಡುತ್ತಾರೆ. 

ವಿಳಾಸ: 
ರೋಮನ್‌ ಅಂಡ್‌ ಕ್ಯಾಥರೀನ್‌ ಲೋಬೋ ರೆಸಿಡೆನ್ಶಿಯಲ್‌ ಸ್ಕೂಲ್‌ ಫಾರ್‌ ಬ್ಲೆ„ಂvÕ…
3ನೇ ಕ್ರಾಸ್‌, ಕೋಟೆಕಣಿ ರಸ್ತೆ, ಬಿಜೈ, ಮಂಗಳೂರು
ದೂರವಾಣಿ ಸಂಖ್ಯೆ- 9945421892/ 0824-2458552

ಪುಟಾಣಿ ಅಂಧರಿಗೆ ಬೆಳಕಾಗಿರುವ ಕ್ಯಾಲಿಸ್ಟಾಸ್‌ ಡೇಸಾ ಅವರೊಂದಿಗೆ ಪುಟ್ಟ ಮಾತುಕತೆ…

–  ಉಳಿದವರೆಲ್ಲಾ ವೀಕೆಂಡ್‌ ಬಂತು ಅಂದ್ರೆ ಮೂವಿ, ಔಟಿಂಗ್‌ ಅಂತ ಹೋಗ್ತಾರೆ. ನಿಮ್ಮ ಎಂಟರ್‌ಟೈನ್‌ಮೆಂಟ್‌ ಹೇಗಿರುತ್ತೆ?
ಮೊದಲೆಲ್ಲಾ ರೇಡಿಯೋ ಕೇಳ್ತಿದ್ದೆ. ಹಳೆಯ ಹಿಂದಿ ಮತ್ತು ಕನ್ನಡ ಹಾಡುಗಳು ನನಗೆ ತುಂಬಾ ಇಷ್ಟ. ಈಗ ಟಿ.ವಿ. ಕೇಳುತ್ತೇನೆ. ನಮ್ಮ ಶಾಲೆಯಲ್ಲಿ ಟಿ.ವಿ ಇದೆ. ತುಂಬಾ ಜನ ಕೇಳ್ತಾರೆ, ಅಂಧರ ಶಾಲೆಯಲ್ಲಿ ಟಿ.ವಿ ಯಾಕೆ ಅಂತ. ಒಂದು ಮಾತಿದೆ, “man
watches movie in his eyes, but a blind watches movie from his mind’ ಅಂತ. ನಾವು ಸಂಭಾಷಣೆ ಕೇಳಿ ಕತೆ ಅರ್ಥ ಮಾಡಿಕೊಳೆ¤àವೆ. ಅದಲ್ಲದೇ ಓದುವ ಹವ್ಯಾಸವೂ ಇದೆ.

– ವಿದ್ಯಾರ್ಥಿಗಳು ಶಾಲೆಯಿಂದ ಹೊರ ಹೋದಾಗ, ಸಮಾಜ ಅವರನ್ನು ಅನುಚಿತವಾಗಿ ನಡೆಸಿಕೊಂಡಿದ್ದಿದೆಯಾ? ಅಂಥ ಸಂದರ್ಭದಲ್ಲಿ ಅವರಿಗೆ ನೀವು ಯಾವ ರೀತಿಯ ಧೈರ್ಯ ನೀಡ್ತೀರಿ? 
ಆಗಿದೆ. ಅವರಿಗೆ ಕೌನ್ಸೆಲಿಂಗ್‌ ನೀಡುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡ್ತೇವೆ. ಮೊದಲನೆಯದಾಗಿ, ನಾವು ಇರುವ ಸ್ಥಿತಿಯನ್ನು ಸ್ವೀಕರಿಸುವುದು. ನಾವು ಅಂಧರು. ಅದನ್ನು ಮೊದಲು ನಾವು ಒಪ್ಪಿಕೊಳ್ಬೇಕು. ತಪ್ಪುಗಳಾಗೋದು ಸಹಜ. ಆದ್ರೆ ತಪ್ಪಿನಿಂದ ಕಲೀಬೇಕು. ಅಂಧರಾಗಿರುವುದಕ್ಕೆ ಯಾವುದೇ ರೀತಿಯ ಪಶ್ಚಾತ್ತಾಪವಾಗಲೀ, ಕೀಳರಿಮೆಯಾಗಲೀ ಬೇಡ ಅನ್ನೋ ಕಿವಿ ಮಾತು ಹೇಳೆ¤àವೆ. 

– ಕಣ್ಣಿನ ಆಪರೇಷನ್‌ ಬಗ್ಗೆ ಜಾಗೃತಿ ಮೂಡಿಸ್ತಿದ್ದೀರಾ?
ಎಲ್ಲಾ ರೀತಿಯ ಅಂಧತ್ವದ ಸಮಸ್ಯೆಗಳನ್ನು ಸರ್ಜರಿಯಿಂದ ಸರಿಪಡಿಸ್ಲಿಕ್ಕೆ ಆಗೋದಿಲ್ಲ. ಕಾರ್ನಿಯಾದಲ್ಲಿ ಸಮಸ್ಯೆಯಿದ್ರೆ ಮಾತ್ರ ಕಣ್ಣಿನ ಸರ್ಜರಿ ಮಾಡಿಸಿಕೊಂಡು ದೃಷ್ಟಿ ಪಡೆಯಬಹುದು. ನಮ್ಮ ವಿದ್ಯಾರ್ಥಿಗಳಲ್ಲಿ ಅಂಥವರು ಯಾರೂ ಇಲ್ಲ. ಆದರೆ, ಸೇವಾಭಾರತಿ ಸಂಸ್ಥೆಯ ಸಕ್ಷಮ ಯೋಜನೆಯಡಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸ್ತಿದ್ದೇವೆ. 

– ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ ಹೇಗಿದೆ?
ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಮನರಂಜನೆಗೂ ಅವಕಾಶವಿದೆ. ಇಲ್ಲಿ ಮಕ್ಕಳು ಕ್ರಿಕೆಟ್‌ ಆಡ್ತಾರೆ. ಅಂಧರ ವರ್ಲ್ಡ್ ಕಪ್‌ನಲ್ಲಿ ಭಾರತ ಗೆದ್ದಿರುವುದು ನಿಮಗೇ ಗೊತ್ತಿದೆ. ಮಕ್ಕಳಿಗೆ ಇಲ್ಲಿ ಕಂಪ್ಯೂಟರ್‌, ಡ್ಯಾಮ್ಸ್, ತಬಲ, ಡ್ರಮ್ಸ್ ತರಗತಿಗಳೂ ನಡೆಯುತ್ತವೆ. ತರಗತಿ ಮುಗಿದ ನಂತರ ಮಕ್ಕಳಿಗೆ ನಾವ್ಯಾರೂ ಶಿಕ್ಷಕರಲ್ಲ, ಪೇರೆಂಟ್ಸ್‌ ಆಗಿರುತ್ತೇವೆ. ಹಾಗಿದೆ ನಮ್ಮ ಬಾಂಧವ್ಯ. ಇಲ್ಲಿನ ಸಿಬ್ಬಂದಿಗಳೂ ಸೇವಾ ಮನೋಭಾವ ಉಳ್ಳವರು. ತುಂಬಾ ಆಸಕ್ತಿಯಿಂದ ಕೆಲಸ ಮಾಡ್ತಾರೆ. ಇದರಿಂದಾಗಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗಿದೆ.

– ಕೊನೆಯದಾಗಿ ಒಂದು ಮಾತು…
ನಮ್ಮ ಶಾಲೆಗೆ ಹಲವಾರು ಮಂದಿ ಜನ ಧನಸಹಾಯ ಮಾಡುತ್ತಿರುತ್ತಾರೆ. ಅವರಲ್ಲಿ ಕೆಲವರು “ಅಂಧ ಮಕ್ಕಳು ಹೇಗೆ ಊಟ ಮಾಡ್ತಾರೆ? ಅವರ ಫೋಟೋ ತೆಗೀಬೋದಾ’ ಆಂತೆಲ್ಲಾ ಕೇಳ್ತಾರೆ. ಇದು ಆಗಬಾರದು. ಈ ಕಾರಣಕ್ಕಾಗಿಯೇ ಸರ್ಕಾರ ಕೆಲವೊಂದು ಕಾನೂನುಗಳನ್ನು ಮಾಡಿದೆ. ಅಂಧರ ಶಾಲೆಗೆ ಊಟ ಕೊಡೊºàದು. ಆದ್ರೆ ಡೈನಿಂಗ್‌ ಹಾಲ್‌ಗೆ ಬರೋ ಹಾಗಿಲ್ಲ. ನಾವೂ ಮನುಷ್ಯರೇ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು.

– ಶುಭಾಶಯ ಜೈನ್‌

ಟಾಪ್ ನ್ಯೂಸ್

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

cm-sidd

ಡಿ. 5ರಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.