ಕೆರೆ -ದಂಡೆ, ದಂಡೆ -ಕೆರೆ! ನಾವು ಮರೆತ ಹಳೆಯ ಆಟ
Team Udayavani, Jan 19, 2021, 3:59 PM IST
ಕೆರೆ ಎಂದ ತಕ್ಷಣ ಚಿಕ್ಕವರಿರುವಾಗ ಆಡಿದ ಕೆರೆ ದಂಡೆ ಆಟ ನೆನಪಿಗೆ ಬರುತ್ತದೆ.ಇದು ನಾಲ್ಕು ಅಥವಾ ಹೆಚ್ಚು ಜನರು
ಆಡುವಂತಹ ಆಟ. ಈ ಆಟದಲ್ಲಿ ಆಡುವವರ ಜೊತೆಗೆ ಒಬ್ಬರು ಕಂಟ್ರೋಲರ್ ಕೂಡ ಇರಲೇಬೇಕು. ಒಂದು ಉದ್ದನೆಯ ಅಡ್ಡ ಗೆರೆ ಎಳೆದು ಗೆರೆಯ ಒಂದು ಬದಿಯನ್ನು ಕೆರೆ, ಇನ್ನೊಂದು ಬದಿಯನ್ನು ದಂಡೆ ಎಂದು ಗುರುತಿಸಬೇಕು. ಆಟಗಾರರನ್ನು ಗೆರೆಯ ಮೇಲೆ ನಿಲ್ಲಿಸಬೇಕು. ನಂತರ, ಈ ಆಟದ ಕಂಟ್ರೋಲರ್ ಅಥವಾ ನಿರ್ವಾಹಕರು ರೆಡೀ ಎಂದು ಹೇಳಿ, ಮುಂದೆ ನಿಂತು, ಕೆರೆ,
ದಂಡೆ ಎಂದು ಹೇಳಬೇಕು. ನಿರ್ವಾಹಕರು ಕೆರೆ ಎಂದಾಗ, ಕೆರೆಯ ಬದಿಗೂ, ದಂಡೆ ಎಂದಾಗ ದಂಡೆಯ ಬದಿಗೂ ಆಟಗಾರರು
ಜಿಗಿಯಬೇಕು.
ಮೊದಮೊದಲೂ ನಿಧಾನವಾಗಿ ಸೂಚನೆ ನೀಡುತ್ತಾ, ನಂತರ ವೇಗವಾಗಿ ಕೆರೆ-ದಂಡೆ ಎಂದು ಹೇಳುತ್ತಾ ಸಾಗಿದಂತೆ, ಕೆರೆ-ಕೆರೆ, ದಂಡೆ-ದಂಡೆ ಎಂದು ಸೂಚನೆ ನೀಡಿದಾಗ ಆಟಗಾರರಿಗೆ ಗೊಂದಲ ಶುರುವಾಗುತ್ತದೆ. ಅವರು ಮೈಮರೆವಿನಲ್ಲಿ ಕೆರೆ ಎಂದಾಗ ದಂಡೆಯತ್ತ ಜಿಗಿಯುತ್ತಾರೆ. ದಂಡೆ ಎಂದಾಗ ಕೆರೆಯತ್ತ ಹಾರುತ್ತಾರೆ!. ಹೀಗೆ ಮಾಡಿದವರು ಆಟದಿಂದ ಔಟ್ ಆದಂತೆ! ಹೆಚ್ಚು ಜನ ಆಟಗಾರರು ಇದ್ದರೆ ಭರಪೂರ ಮನರಂಜನೆ ಕೊಡುವ ಆಟ ಇದು. ಒಂದು ರೀತಿಯಲ್ಲಿ ಮ್ಯೂಸಿಕಲ್ ಚೇರ್ ಆಟ ಇದ್ದ ಹಾಗೆ. ಆಟ ಮುಂದುವರಿಯುತ್ತಾ ಹೋದಂತೆಲ್ಲಾ ಔಟ್ ಆಗುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ.
ಇದನ್ನೂ ಓದಿ:ಮುಠ್ಠಾಳ ಎಂದು ಕೂಗಿದರೆ ಬಹುಮಾನ ಉಂಟು!
ಕಡೆಯಲ್ಲಿ ಒಬ್ಬ ಮಾತ್ರ ವಿಜೇತ ಆಗುತ್ತಾನೆ. ಆಟಗಾರರು, ನಿರ್ವಾಹಕರ ಸೂಚನೆಗೆ ತಕ್ಕಂತೆ ಪದೇಪದೆ ಆ ಕಡೆ ಈ ಕಡೆ ಜಿಗಿಯುತ್ತಲೇ ಇರಬೇಕಾಗುತ್ತದೆ. ಈ ನೆಪದಲ್ಲಿ ಒಳ್ಳೆಯ ವ್ಯಾಯಾಮ ಆಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಕೂಡ ಹೆಚ್ಚುತ್ತದೆ.
– ಸಾವಿತ್ರಿ ಶ್ಯಾನುಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.