ಸಾ..ರೇ..ಗ..ಮಾ..ಪಾ..
ಹಾಡಾಡ್ತಾ ಹಾಡಾಡ್ತಾ ಉದ್ಯೋಗ
Team Udayavani, Oct 15, 2019, 5:42 AM IST
ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ, ಮ್ಯೂಸಿಕ್ ರಿಯಾಲಿಟಿ ಶೋಗಳು ಪ್ರಸಾರ ವಾದಮೇಲಂತೂ ಕಲಿಕಾರ್ತಿಗಳ ಸಂಖ್ಯೆ ಹೆಚ್ಚಾಗಿ, ಸಂಗೀತ ಕಲಿಸುವುದು ಕಮರ್ಷಿಯಲ್ ಚಟುವಟಿಕೆಯಾಗಿ ಮಾರ್ಪಾಡಾಗಿದೆ. ಹೀಗಾಗಿ, ಶಾಲಾ, ಕಾಲೇಜುಗಳಲ್ಲಿ ಸಂಗೀತ ಹೇಳಿಕೊಡುವುದು ಹೆಮ್ಮೆಯ ಸಂಗತಿ. ಈ ರೀತಿ ಕಲಿತು ಪದವಿಗಳನ್ನು ಪಡೆದು ವೃತ್ತಿಯಾಗಿಸಿಕೊಂಡವರಿಗೆ ಉದ್ಯೋಗದ ನಾನಾ ಹಾದಿಗಳು ತೆರೆಯುತ್ತಿವೆ..
ಇವತ್ತಿನ ಮಕ್ಕಳಿಗೆ ಹಾಡುವುದು ಒಂದು ಪ್ಯಾಷನ್. ಬದುಕಲ್ಲಿ ಮುಂದೆ ಏನಾಗಬೇಕು ಅಂತಿದ್ದೀರಾ ಅಂತ ಯಾರನ್ನಾದರೂ ಕೇಳಿದರೆ, ವಿಜಯಪ್ರಕಾಶ್ ಥರ ಆಗ್ತಿನಿ, ಎಸ್.ಪಿ. ಬಾಲಸುಬ್ರಮಣ್ಯಂ ಥರ ಹಾಡ್ತೀನಿ, ಪಂಡಿತ್ ವೆಂಕಟೇಶ್‌ಕುಮಾರ್ ರೀತಿ ದೇವರನಾಮ ಹೇಳ್ತೀನಿ ಅಂತಾರೆ. ಬಾಪರೇ, ಈ ಟಿ.ವಿಗಳಲ್ಲಿ ರಿಯಾಲಿಟಿ ಶೋ ಅಂತ ಶುರುವಾದ ಮೇಲಂತೂ, ನಮ್ಮ ಮಗು ಆ ಶೋನಲ್ಲಿ ಹಾಡುವಂತೆ ಏನಾದರೂ ಮಾಡಿ ಅಂತ ಕೇಳ್ಳೋ ಹೆತ್ತವರ ಸಂಖ್ಯೆ ದಿನೇ ದಿನೆ ಜಾಸ್ತಿಯಾಗುತ್ತಿದೆ.
ಇವತ್ತು ಈ ರೀತಿ ಹಾಡೋದು, ಹಾಡೋ ರೀತಿ ಹೇಳಿಕೊಡೋದು ಕೂಡ ಒಂದು ಪ್ರೊಫೆಷನ್ ಆಗಿ ಮಾರ್ಪಟ್ಟಿದೆ ಅಂದರೆ, ಇನ್ನು ಸಂಗೀತಕ್ಕೆ ಎಷ್ಟು ಬೆಲೆ ಬಂದಿರಬಹುದು ಊಹಿಸಿ.
ನಿಜ ಹೇಳಬೇಕು ಅಂದರೆ, ಇವತ್ತು ಸಂಗೀತ ಅನ್ನೋದು ಉಪಕಲಿಕೆ ಆಗಿಲ್ಲ. ಅದನ್ನು ವೃತ್ತಿಯಾಗಿ ಪಡೆದವರು ಎಷ್ಟೋ ಜನ ಇವತ್ತು ನೆಮ್ಮದಿಯಾಗಿದ್ದಾರೆ. ಪಂಡಿತ್, ವಿದ್ವಾನ್, ಗವಾಯಿಗಳಾಗಿ ನಾಡಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿಯೇ, ನಮ್ಮ ಮೈಸೂರಲ್ಲಿ ಸಂಗೀತಕ್ಕಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು.
ಸಂಗೀತ ಅಂದರೆ ಕೇವಲ ಹಾಡೋದು ಒಂದೇ ಅಲ್ಲ. ಟಿ.ವಿಗಳಲ್ಲಿ ಬರೀ ಹಾಡೋರನ್ನು ಹೆಚ್ಚು ಹೆಚ್ಚು ತೋರಿಸುವುದರಿಂದ ಸಂಗೀತ ಅಂದರೆ ಹಾಡೋದೇ ಅನ್ನೋ ರೀತಿ ಆಗಿದೆ. ನಿಜಕ್ಕೂ ಸಂಗೀತದಲ್ಲಿ ನಾನಾ ವಿಭಾಗಗಳು ಇವೆ. ಇದರಲ್ಲಿ ಹಾಡುಗಾರಿಕೆ, ಜಾನಪದ, ಡ್ಯಾನ್ಸ್, ಡ್ರಾಮಾ, ಪಕ್ಕವಾದ್ಯಗಾರಿಕೆ ಅನ್ನೋ ವಿಭಾಗಗಳು ಇವೆ. ಹಾಡಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಎಂಬ ಎರಡು ವಿಭಾಗವಿದೆ. ಇದರಲ್ಲಿ ಸೀನಿಯರ್ ಜ್ಯೂನಿಯರ್, ವಿದ್ವತ್ ಹೀಗೆ ನಾನಾ ಪದವಿಗಳಿವೆ. ಡಾಕ್ಟರೇಟ್ ತನಕವೂ ಇಲ್ಲಿ ಅಧ್ಯಯನ ಮಾಡಲು ಅವಕಾಶವಿದೆ.
ಪಕ್ಕವಾದ್ಯದಲ್ಲಿ ತಬಲ, ಮೃದಂಗ, ವೀಣೆ, ವಯಲಿನ್, ಖಂಜರ, ಫಕ್ವಾಸ್, ಡೋಲಕ್ ಹೀಗೆ ನಾನಾ ರೀತಿಯ ವಾದ್ಯಗಳು, ಅದರದೇ ಪರೀಕ್ಷೆಗಳು ಉಂಟು. ಹಾಡುಗಾರಿಕೆಗೆ ದನಿ ಹೊಂದಾಣಿಕೆ ಆಗದೇ ಇರುವವರು ಈ ರೀತಿಯ ಪಕ್ಕವಾದ್ಯ ಕ್ಷೇತ್ರಕ್ಕೆ ಕಾಲಿಡಬಹುದು. ಇದರಲ್ಲೂ ಕೂಡ ಜ್ಯೂನಿಯರ್, ಸೀನಿಯರ್ ಅಂತೆಲ್ಲ ನಾನಾ ವಿಭಾಗಗಳು ಇವೆ. ಕರ್ನಾಟಕದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀûಾ ಮಂಡಳಿ ಕೂಡ ಇಂಥ ಪರೀಕ್ಷೆಗಳನ್ನು ಮಾತ್ರ ನಡೆಸುತ್ತವೆ.
ಇದು ಒಂದು ಹಾದಿ. ಇನ್ನೊಂದು, ಅಕಾಡೆಮಿಕ್ ಆಗಿ ಕಲಿಯುವುದೇ ಆದರೆ, ಕಾಲೇಜುಗಳಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಆನರ್ಸ್ ಇನ್ ಮ್ಯೂಸಿಕ್. ಬ್ಯಾಚುಲರ್ ಆಫ್ ಮ್ಯೂಸಿಕ್, ಮಾಸ್ಟ್‌ರ್ ಆಫ್ ಮ್ಯೂಸಿಕ್ ಅಂತೆಲ್ಲ ಪದವಿಗಳು ಇವೆ. ಇದಲ್ಲದೆ, 6 ತಿಂಗಳು, ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗಳು ಕೂಡ ಇವೆ.
ಸಂಗೀತ ಸಂಸ್ಕಾರವೇ?
ಸಂಗೀತ ಸಂಸ್ಕಾರದಿಂದ ಬರುವುದೇ? ಎಲ್ಲರೂ ಕಲಿಯಬಹುದೇ? ಏನಿದರ ಮರ್ಮ ಅನ್ನೋದು ಬಹಳಷ್ಟು ಜನರ ಪ್ರಶ್ನೆ.
ಹಾಡಲು ಕಂಠ ಶ್ರುತಿಗೆ ಹೊಂದುವಂತಿರಬೇಕು. ಇದನ್ನು ಹೊರತಾಗಿ ಈ ರೀತಿಯ ನಿಬಂಧನೆಗಳು ಏನೂ ಇಲ್ಲ. ಕಲಿಯುವಾಗ ಹೆಚ್ಚಿನ ಶ್ರದ್ಧೆ ಬೇಡುವ ವೃತ್ತಿ ಸಂಗೀತ. ಇಲ್ಲಿ ನಾವು ಮಾಡುವ ತಪ್ಪುಗಳನ್ನು ಹಿಂದೆ ಬಂದು ಮತ್ತೆ ತಿದ್ದುಕೊಳ್ಳಲು ಆಗದು. ಆದರೆ, ಮುಂದೆ ಈ ರೀತಿಯ ತಪ್ಪು ಆಗದಂತೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ, ಸಂಗೀತದ ಸಂಸ್ಕಾರವಿದ್ದರೆ ಒಳಿತು, ಇಲ್ಲದೇ ಇದ್ದರೆ ಶ್ರದ್ಧೆ, ಆಸಕ್ತಿಯಿಂದ ಕಲಿಯುವ ಮೂಲಕ ಸಂಗೀತವನ್ನು ಒಲಿಸಿಕೊಳ್ಳಬಹುದು. ಸಂಗೀತದ ಬಗೆಗಿನ ಇನ್ನೊಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಏನೆಂದರೆ, ಸಂಗೀತ ಕಲಿತು, ಪದವಿ ಪಡೆದ ನಂತರ ಸಂಗೀತದಿಂದ ದೂರ ನಿಂತರೆ ಯಾವ ಪ್ರಯೋಜನವೂ ಇಲ್ಲ. ಸದಾ ರಿಯಾಜ್( ಪ್ರಾಕ್ಟೀಸ್) ಮಾಡುತ್ತಿದ್ದರೆ ಮಾತ್ರ ನಮ್ಮೊಳಗಿರುವ ಸಂಗೀತ ಮತ್ತಷ್ಟು ಪ್ರಖರವಾಗುತ್ತದೆ.ಯಾವುದೇ ಪ್ರಕಾರದ ಸಂಗೀತವಾಗಲಿ, ಅದನ್ನು ಕಲಿತ ಮೇಲೆ ರಿಯಾಜ್ ಮತ್ತು ಅನುಭವ ಇವರೆಡೇ ಕೈ ಹಿಡಿಯುವುದು. ಹೀಗಾಗಿ, ಸಂಗೀತ ಅನ್ನೋದು ಭೌತಶಾಸ್ತ್ರ, ಸಮಾಜ ವಿಜ್ಞಾನ, ಎಂಜಿನಿಯರಿಂಗ್‌ನಂತ ಕಲಿಕೆಯಂತಲ್ಲ. ಇದು ಕಲೆ.
ಸಂಗೀತ ಎಲ್ಲ ಕಡೆ ಹರಿಯುತ್ತಿದೆ
ಈ ಮೊದಲು ಸಂಗೀತವನ್ನು ಮನೆಯಲ್ಲೋ, ದೇವಸ್ಥಾನ, ಭಜನಾ ಮಂದಿರಗಳಲ್ಲೋ ಹಾಡುವುದಕ್ಕೆ ಬಳಸಲಾಗುತ್ತಿತ್ತು. ಸಂಗೀತವನ್ನೇ ವೃತ್ತಿಯಾಗಿಸಿಕೊಂಡಿದ್ದವರು ಬಹಳ ಕಡಿಮೆ. ಈಗ ಸಂಗೀತಕ್ಕೆ ಕಮರ್ಷಿಯಲ್ ಸ್ವರೂಪ ಬಂದಿದೆ. ಹೀಗಾಗಿ, ಎಲ್ಲಡೆ ಸಂಗೀತ ಹೇಳಿಕೊಡುವ ಟ್ಯುಟೋರಿಯಲ್‌ಗಳು, ಕಾಲೇಜುಗಳು, ಅಧ್ಯಯನ ಕೇಂದ್ರಗಳು ಕೂಡ ಹುಟ್ಟಿಕೊಂಡಿವೆ. ಅವುಗಳಲ್ಲಿ ಪ್ರಮುಖವಾದವು, ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯ, ಮೈಸೂರಿನಲ್ಲಿ ಸಂಗೀತಕ್ಕಾಗಿಯೇ ಲಲಿತಕಲೆಗಳ ಕಾಲೇಜು ಇದೆ. ಇಲ್ಲೆಲ್ಲಾ ಎಲ್ಲ ರೀತಿಯ ಸಂಗೀತ ಕಲೆಗಳನ್ನು ಹೇಳಿಕೊಡಲಾಗುತ್ತಿದೆ. ಇದೇ ರೀತಿ ಬೆಂಗಳೂರಿನ ಜೈನ್ ವಿವಿ, ಭಾರತೀಯ ವಿದ್ಯಾಭವನ, ಬೆಳಗಾಂನ ಕೆ.ಎಲ್. ಇ ಕಾಲೇಜಿನಲ್ಲಿ ಫೈನ್ ಆರ್ಟ್ಸ್ , ಧಾರವಾಡದ ಕರ್ನಾಟಕ ವಿವಿ, ಬೆಂಗಳೂರು ವಿವಿಯಲ್ಲೂ ಪದವಿ ಕೋರ್ಸ್‌ಗಳಿವೆ.
ಮುಂದೇನು?
ಸಂಗೀತ ಕೋರ್ಸ್‌ಗಳನ್ನು ಮುಗಿಸಿದ ನಂತರ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಾಗಬಹುದು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪ್ರಾಂಶುಪಾಲರಿಗೆ ದೈಹಿಕ ಶಿಕ್ಷಕರು ಅಥವಾ ಸಂಗೀತ ಶಿಕ್ಷಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇತ್ತೀಚೆಗೆ ಸಂಗೀತ ಶಿಕ್ಷಕರ ಆಯ್ಕೆ ಹೆಚ್ಚಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಂಗೀತ ಅನ್ನೋದು ಮಕ್ಕಳನ್ನು ಸೆಳೆಯುವ ಸಾಧನವಾಗಿರುವುದರಂದ, ಫುಲ್ ಟೈಂ, ಪಾರ್ಟ್ ಟೈಂ ಕೆಲಸ ಗ್ಯಾರಂಟಿ. ಇದಲ್ಲದೇ, ಆಕಾಶವಾಣಿಯಲ್ಲಿ ಎ ಗ್ರೇಡ್ ಪಡೆದವರು ನಿಲಯದ ಕಲಾವಿದರಾಗುವ ಅವಕಾಶವೂ ಉಂಟು. ಇಲ್ಲಿ ಆಗಾಗ ಕಾರ್ಯಕ್ರಮಗಳನ್ನು ಕೊಡಬಹುದು. ಎಲ್ಲದಕ್ಕಿಂತ ಮುಖ್ಯವಾಗಿ, ಖಾಸಗಿಯಾಗಿ ಸಂಗೀತ ಪಾಠ ಹೇಳಿಕೊಡುವುದರಿಂದಲೇ ಆದಾಯ ಹೆಚ್ಚು. ಸ್ವಲ್ಪ ಹೆಸರು ಮಾಡಿದರಂತೂ ಸಾರ್ವಜನಿಕ ಕಾರ್ಯಕ್ರಮಗಳನ್ನೂ ಕೊಡಬಹುದು. ಪಕ್ಕವಾದ್ಯಗಾರರಾದರೆ, ಸಿನಿಮಾ ರೆಕಾರ್ಡಿಂಗ್, ಆಲ್ಬಂಗಳಲ್ಲಿ ತೊಡಗಿಸಿಕೊಳ್ಳಬಹುದು. ರೆಕಾರ್ಡಿಂಗ್‌ಗಳಲ್ಲಿ ಸಂಭಾವನೆ ದಿನಕ್ಕೆ ಕನಿಷ್ಠ ಎಂದರೂ, ಎರಡು, ಮೂರು ಸಾವಿರ ರೂ. ಇದೆ. ಅದೇ ರೀತಿ, ಪ್ರತಿಭೆಯನ್ನು ಮೈಗೂಡಿಸಿಕೊಂಡ ಕಲಾವಿದರಾದರೆ, ಒಂದೊಂದು ವೇದಿಕೆ ಕಾರ್ಯಕ್ರಮಗಳಿಂದ, ಎರಡು ಮೂರು ಸಾವಿರ ಸಂಪಾದನೆ ಮಾಡುವ ಅವಕಾಶ ಇರುತ್ತದೆ.
ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.