ಸೇಲ್ಸ್‌ ಎಂಬ ಆಧಾರ ಸ್ತಂಭ

ಕಂಪನಿಗಳ ಭವಿಷ್ಯ ನುಡಿಯುತೈತೆ...

Team Udayavani, Jun 25, 2019, 5:00 AM IST

6

ವ್ಯಾವಹಾರಿಕ ಜಗತ್ತಿನ ಎರಡು ಪ್ರಮುಖ ಹಾಗೂ ಆಸಕ್ತಿದಾಯಕ ಕ್ಷೇತ್ರಗಳೆಂದರೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌. ಇವು ಬಹಳ ಪ್ರಭಾವಶಾಲಿ ಕ್ಷೇತ್ರಗಳೂ ಹೌದು. ಕಂಪೆನಿಯ ಆದಾಯಕ್ಕೆ ಇವುಗಳೇ ರಾಜಮಾರ್ಗ. ಹೀಗಾಗಿ ಈ ಕ್ಷೇತ್ರಗಳನ್ನು ಕಂಪನಿಯ ಆಧಾರಸ್ತಂಭ ಎಂದೂ ಕರೆಯಬಹುದು. ಸೇಲ್ಸ್‌ನಲ್ಲಿ ಕೆಲಸ ಮಾಡುವವರು ಎಂದಾಕ್ಷಣ ಸೂಟು ಬೂಟು ತೊಟ್ಟು ಮೀಟಿಂಗುಗಳಲ್ಲಿ ಬಿಝಿಯಾಗಿರುವವರು ಮಾತ್ರವೆ ಎಂದು ತಿಳಿಯದಿರಿ. ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ತೋರಿಸುವವರು, ಮನೆ ಮನೆಗೆ ಕಂಪನಿಯ ಗೃಹಬಳಕೆಯ ಉತ್ಪನ್ನಗಳನ್ನು ಮಾರುವವರು ಎಲ್ಲರೂ ಒಳಗೊಳ್ಳುತ್ತಾರೆ. ದೊಡ್ಡ ಕಂಪನಿಗಳಲ್ಲಿ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುವವರು ಕೂಡಾ ಈ ಹಂತವನ್ನು ದಾಟಿಕೊಂಡೇ ಉನ್ನತ ಹುದ್ದೆಗೆ ಏರಿರುತ್ತಾರೆ.

ಸೇಲ್ಸ್‌ ಕೆರಿಯರ್‌ ಭವಿಷ್ಯ
ತಾಂತ್ರಿಕ ಅಥವಾ ಆಡಳಿತ ವರ್ಗಗಳಿಗಿಂತ ಹೆಚ್ಚು ಹಣ ತಂದುಕೊಡುವುದು ಸೇಲ್ಸ್‌ ವಿಭಾಗ. ಕಂಪನಿಯ ಆಯುಷ್ಯ, ಉಳಿಗಾಲಗಳು ಸೇಲ್ಸ್‌ ಅನ್ನು ಅವಲಂಬಿಸಿರುತ್ತವಾದ್ದರಿಂದ ಸೇಲ್ಸ್‌ನಲ್ಲಿ ಯಶಸ್ಸು ಪಡೆದ ಕೆಲಸಗಾರರಿಗೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಜೊತೆಗೆ, ಅವರು ತಮ್ಮಲ್ಲಿಯೇ ಸೇವೆ ಮುಂದುವರಿಸಲಿ ಎಂಬ ಆಶಯದಿಂದ ಕಂಪನಿಗಳು ಇಂತಹ ಯಶಸ್ವಿ ಸೇಲ್ಸ್‌ ತಂಡಗಳಿಗೆ ಹೆಚ್ಚಿನ ಸಂಬಳ, ಭತ್ಯೆ, ಸಂಸ್ಥೆಯಿಂದ ಪ್ರಯಾಣ ವ್ಯವಸ್ಥೆ ಮುಂತಾದ ಸವಲತ್ತುಗಳನ್ನು ನೀಡುತ್ತವೆ. ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಪರಿಣತಿ ಸಾಧಿಸಿದಂತೆಲ್ಲ ಗಳಿಕೆಯೂ ಹೆಚ್ಚುತ್ತ ಹೋಗುವುದು. ಈ ಕಾರಣದಿಂದಾಗಿಯೇ ಅನೇಕರು ಸೇಲ್ಸ್‌ ಕರಿಯರ್‌ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಉನ್ನತ ಹುದ್ದೆಗೆ ಏರಲು ಇದುವೇ ಏಣಿ
ದೇಶಿ ಕಂಪನಿ ಇರಲಿ, ವಿದೇಶಿ ಕಂಪನಿಯೇ ಇರಲಿ ಅದರ ಆಡಳಿತ ವರ್ಗವನ್ನು ಗಮನಿಸಿದರೆ ಉನ್ನತ ಸ್ಥಾನ ಅಲಂಕರಿಸಿರುವ ಬಹುತೇಕರು ಸೇಲ್ಸ್‌ ಹಿನ್ನೆಲೆಯಿಂದ ಬಂದಿರುವುದು ತಿಳಿಯುತ್ತದೆ. ಬಹುತೇಕ ಕಂಪೆನಿಗಳ ಚೀಫ್ ಎಕ್ಸಿಕ್ಯುಟಿವ್‌ಗಳು ಅಥವಾ ಸೀನಿಯರ್‌ ಮ್ಯಾನೇಜರ್‌ಗಳು ಸೇಲ್ಸ್‌ನಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿರುತ್ತಾರೆ ಅಥವಾ ಅಲ್ಪ ಕಾಲವಾದರೂ ಅದರಲ್ಲಿ ಅನುಭವ ಪಡೆದಿರುತ್ತಾರೆ. ಇದರಿಂದ ಅವರಿಗೆ ತಳ ಮಟ್ಟದಿಂದಲೇ ಕಂಪನಿಯ ಕಾರ್ಯ ವಿಧಾನ, ಮಾರುಕಟ್ಟೆಯ ಸ್ಥಿತಿಗತಿಗಳ ನೈಜ ಪರಿಚಯ ಸಿಕ್ಕಿರುತ್ತದೆ. ಹೀಗಾಗಿ ಆತ ಕಂಪನಿಯನ್ನು ಮುನ್ನಡೆಸಬಲ್ಲ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಹೀಗಾಗಿ ಅಂಥವರು ವೃತ್ತಿಜೀವನದಲ್ಲಿ ಬಹಳ ಬೇಗನೆ ಮೇಲಕ್ಕೇರುತ್ತಾರೆ.

ಸೇಲ್ಸ್‌ ಕರಿಯರ್‌ಗಾಗಿ ವಿದ್ಯಾಭ್ಯಾಸ
ಸೇಲ್ಸ್‌ ಮ್ಯಾನೇಜರ್‌ಗಳು ಬಿಝಿನೆಸ್‌ ಅಡ್ಮಿನಿಸ್ಟ್ರೇಷನ್‌, ಸ್ಟಾಟಿಸ್ಟಿಕ್ಸ್‌, ಗಣಿತ ವಿಷಯಗಳಲ್ಲಿ ಪದವಿ ಪಡೆದಿರುತ್ತಾರೆ. ಸಾಮಾನ್ಯವಾಗಿ ಬ್ಯಾಚುಲರ್‌ ಡಿಗ್ರಿ ಇದ್ದರೆ ಸಾಕಾಗುತ್ತದಾದರೂ ಕೆಲ ಸಂಸ್ಥೆಗಳು ಉದ್ಯೋಗಾಕಾಂಕ್ಷಿಗಳಿಂದ ಬಿಝಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಾಸ್ಟರ್ ಪದವಿಯನ್ನು ಅಪೇಕ್ಷಿಸುತ್ತವೆ. ಕಾಮರ್ಸ್‌ ಹಿನ್ನೆಲೆ ಇಲ್ಲದವರು/ ಬಿ.ಇ- ಬಿ.ಟೆಕ್‌ ಪದವಿ ಪಡೆದವರು ಎಂ.ಬಿ.ಎ ಓದುವುದರ ಮೂಲಕ ಸೇಲ್ಸ್‌ ಕ್ಷೇತ್ರವನ್ನು ಪ್ರವೇಶಿಸಬಹುದು. ಇದಲ್ಲದೆ ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೂ ಸೇಲ್ಸ್‌ ಕ್ಷೇತ್ರದಲ್ಲಿ ಅನೇಕ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶವಿದೆ.

ಸಂಸ್ಥೆಯೇ ತರಬೇತಿ ನೀಡುತ್ತದೆ
ಇಂದು ಬಹುತೇಕ ಕಂಪನಿಗಳು ತಮ್ಮದೇ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. 1ರಿಂದ 3 ತಿಂಗಳವರೆಗಿನ ಈ ಅವಧಿಯಲ್ಲಿ ಸ್ಟೈಪೆಂಡ್‌ ಕೊಡುವ ಕಂಪೆನಿಗಳೂ ಉಂಟು. ದೇಶದಲ್ಲಿ ಅತ್ಯಧಿಕ ಮಾರಾಟ ಜಾಲ ಹೊಂದಿರುವ ಮಾರುತಿ ಸುಜುಕಿಯ ಟ್ರೇನಿಂಗ್‌ ಭಾಗದ ರಾಷ್ಟ್ರೀಯ ಮುಖ್ಯಸ್ಥರಾದ ಅಜಿತ್‌ ಸಿಂಗ್‌ ಹೇಳುವಂತೆ ಅವರ ಉದ್ಯೋಗಿಗಳಲ್ಲಿ ಶೇ. 32ರಷ್ಟು ಸಿಬ್ಬಂದಿ ವರ್ಗ ಸೇಲ್ಸ್‌ ಡಿಪಾರ್ಟ್‌ಮೆಂಟಿನದು. ಅಭ್ಯರ್ಥಿಗಳು ಆಯ್ಕೆಯಾದ ಬಳಿಕ 3 ತಿಂಗಳ ಸ್ಟೈಪೆಂಡ್‌ ಸಹಿತ ತರಬೇತಿ ನೀಡಲಾಗುತ್ತದೆ. ಅನಂತರ ಸೇಲ್ಸ್‌ ಸಹಾಯಕರಾಗಿ ಉದ್ಯೋಗಾರಂಭ. ಇಲ್ಲಿ ಸಂಬಳಕ್ಕಿಂತ ಭತ್ಯೆಯೇ ಹೆಚ್ಚು. ಹಂತ ಹಂತವಾಗಿ ಬೆಳೆದು ಅವರು ಕಂಪೆನಿಯ ಸೇಲ್ಸ್‌ ಮ್ಯಾನೇಜರ್‌ ಕೂಡ ಆಗಬಹುದು.
ಮಾರುತಿಯ ಟ್ರೇನಿಂಗ್‌ ಪಾಟ್ನರ್‌ NTTFನ ಪ್ರಶಾಂತ್‌ (ಸಂಪರ್ಕ: 9535553168) ಹೇಳುತ್ತಾರೆ.
ಕೋಟ್‌- ಸೇಲ್ಸ್‌ ಒಂದು ಕಲೆ. ಅದನ್ನು ಬೆಳೆಸಿಕೊಂಡರೆ ಅಭ್ಯರ್ಥಿ ಬಹಳ ಯಶಸ್ಸು ಕಾಣುತ್ತಾನೆ. ತರಬೇತಿ ನೀಡಲು ಸಂಸ್ಥೆ ಸದಾ ಸಿದ್ಧ. ಇಂದು ಸೇಲ್ಸ್‌ ಕ್ಷೇತ್ರ ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿದೆ. ಯುವಜನರು ಸೇಲ್ಸ್‌ ಕ್ಷೇತ್ರಕ್ಕೆ ಧುಮಕಲು ಇದು ಸಕಾಲ.
ಹೆಚ್ಚಿನ ಮಾಹಿತಿಗೆ: www.marutisuzuki.com/corporate/careers/training-academyNTTF

– ರಘು

ಟಾಪ್ ನ್ಯೂಸ್

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.