ಸ್ಸಾರಿ ಕಣೋ…
Team Udayavani, Aug 8, 2017, 6:00 AM IST
ನಲ್ಮೆಯ ಗೆಳೆಯ,
ನಮ್ಮಿಬ್ಬರ ಪ್ರೇಮಯಾನ ಆರಂಭವಾಗಿ ವರ್ಷಗಳುರುಳಿದವು. ಹೇಗೆ ಸಮಯ ಕಳೆಯಿತೆಂದೇ ತಿಳಿಯಲಿಲ್ಲ. ಈ ನಡುವೆ ಜಗಳಗಳು, ಪ್ರೀತಿ ಮುದ್ದಾಟಗಳು ಎಷ್ಟು ನಡೆದುಹೋದವಲ್ಲ. ಒಂದಂತೂ ನಿಜ. ನಮ್ಮ ನಡುವಿನ ಕೋಪ ಕ್ಷಣಿಕದ್ದು, ಪ್ರೀತಿ ಮಾತ್ರ ಶಾಶ್ವತವಾದದ್ದು.ಗೋಡೆ ಮೇಲೆ ನಮ್ಮ ಹೆಸರು ಗೀಚಿದ್ದು, ಮೇಷ್ಟ್ರು ಪಾಠ ಮಾಡುತ್ತಿದ್ದಾಗ ನನ್ನತ್ತ ರಾಕೆಟ್ ಹಾರಿಸಿದ್ದು, ಇದೇ ಕಾರಣಕ್ಕೆ ಲೆಕ್ಚರರ್ ಬಳಿ ಬೈಸಿಕೊಂಡಿದ್ದು. ಕ್ಲಾಸ್‌ಗೆ ಬಂಕ್ ಹಾಕಿ ಜೊತೆಗೆ ಫಿಲಂ ನೋಡಿದ್ದು, ಲಾಸ್ಟ್ ಬೆಂಚಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದದ್ದು… ಎಲ್ಲವನ್ನೂ ನೆನೆಯಲು ಈಗ ತುಂಬಾ ಹಿತಕರವೆನಿಸುತ್ತದೆ.
ನಿನ್ನ ಪರಿಚಯವಾದಾಗಿನಿಂದ ನಾನು ನಿನ್ನ ಮಡಿಲಲ್ಲಿರುವ ಮಗುವಿನಂತಾಗಿರುವೆ. ನಿನ್ನನ್ನು ಕಂಡರೆ ಅದೇನೋ ವಾತ್ಸಲ್ಯ, ಮಮತೆ. ನಿನ್ನ ಬಳಿ ಎಲ್ಲವನ್ನೂ ಹೇಳಿಕೊಳ್ಳುವಾಸೆ. ನನ್ನೆಲ್ಲಾ ಕಷ್ಟ ಸುಖಗಳಲ್ಲಿ ನಿನ್ನನ್ನು ಭಾಗಿಯಾಗಿಸಿಕೊಳ್ಳೋ ಆಸೆ. ಆದರೂ ಆ ದಿನ ಯಾಕೆ ಹಾಗೆ ಮಾಡಿದೆ ಅನ್ನೋದಕ್ಕೆ ಉತ್ತರ ನನಗೂ ತಿಳಿದಿಲ್ಲ.
ಅಂದು ನೀನು ಪ್ರೇಮದ ವಿಷಯ ಪ್ರಸ್ತಾಪಿಸಿದಾಗ, ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಏಕೆಂದರೆ ಯಾವತ್ತೂ ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ಅದಕ್ಕೆ ನಾನು ಮೌನವಾಗಿಬಿಟ್ಟೆ. ಆ ನನ್ನ ಮೌನವನ್ನು ನೀನು ಏನೆಂದು ಅರ್ಥೈಸಿರಬಹುದೆಂದು ನಾನು ಊಹಿಸಬಲ್ಲೆ. ನನ್ನ ಮೌನದಿಂದ ನಿನಗೆ ನೋವಾಗಿರಲೇಬೇಕು. ಅದಕ್ಕಾಗಿ ಕ್ಷಮೆ ಇರಲಿ. ನಾವಿಬ್ಬರೂ ಯಾವತ್ತಿಗೂ ಜೊತೆಯಿರಬೇಕೆಂಬ ನಿನ್ನ ಆಸೆ ಈಗ ನನ್ನದೂ ಕೂಡ. ಆದಷ್ಟು ಬೇಗನೆ ನಿನ್ನನ್ನು ಸೇರುವಾಸೆ. ಮತ್ತೆ ಹೇಳುತ್ತಿದ್ದೇನೆ- ಸ್ಸಾರಿ!
ಎಂದೆಂದಿಗೂ ನಿನ್ನವಳು
– ನಾಗರತ್ನ ಮತ್ತಿಘಟ್ಟ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.