ಆತ ಕೊಟ್ಟ ಪುಸ್ತಕದಿಂದ ಅಂಕಗಳು ಬಂದವು…
Team Udayavani, Jan 7, 2020, 5:00 AM IST
ನಮ್ಮದು ಮಧ್ಯಮ ವರ್ಗದ ಕುಟುಂಬ. ಮನೆಯ ಪರಿಸ್ಥಿತಿ ಅಷ್ಟಕಷ್ಟೇ ಇದ್ದುದರಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆ. 10ನೇ ತರಗತಿಲ್ಲಿದ್ದ ಸಂದರ್ಭವದು. ಜಾಣೆ ಎಂದು ನನ್ನನ್ನು ಕ್ಲಾಸ್ ಲೀಡರ್ ಮಾಡಿದ್ದರು. ಊರೂರು ಅಲೆಯುತ್ತಾ 10ನೇ ತರಗತಿಯ ಗೈಡ್ ಮಾರುತ್ತಿದ್ದ ಒಬ್ಬ ವ್ಯಕ್ತಿ ನಮ್ಮ ಶಾಲೆಗೂ ಬಂದ. “ಗೈಡ್ ಬೇಕಾದವರು 10ರುಪಾಯಿ ತಂದು ಪುಸ್ತಕಕೊಳ್ಳಿ, ನಾಳೆ ಮತ್ತೆ ಬರುತ್ತೇನೆ’ ಎಂದು ಹೇಳಿ ಹೋಗಿದ್ದ. ನನಗೆ ಪುಸ್ತಕ ಕೊಳ್ಳುವ ಖುಷಿ. ಅಪ್ಪನ ಬಳಿ ಹೋಗಿ, ಗೈಡ್ ಕೊಳ್ಳಲು 10 ರೂ.ಬೇಕು ಅಂತ ಕೇಳಿದೆ.
“ಅಷ್ಟೊಂದು ಹಣ ಇಲ್ಲ ಮಗಳೇ, ಇರುವ ಪುಸ್ತಕವನ್ನೇ ಓದಿಕೋ’ ಅಂದರು. ಮರುದಿನ ಟೀಚರ್ ಬರದೇ ಇದ್ದುದರಿಂದ ಮೊದಲನೇ ಪಿರೀಯಡ್‌ನಲ್ಲಿ ಕ್ಲಾಸ್ ಲೀಡರ್ ಆಗಿದ್ದ ನಾನು, ಎಲ್ಲರನ್ನೂ ಸುಮ್ಮನೆ ಕೂರಿಸುವ ಕಾರ್ಯ ಮಾಡುತ್ತಿದ್ದೆ. ಹಿಂದಿನ ದಿನ ಗೈಡ್ ತಂದಿದ್ದ ವ್ಯಕ್ತಿ ಹೇಳಿದಂತೆ ಮತ್ತೆ ಬಂದ. ಎಲ್ಲ ವಿದ್ಯಾರ್ಥಿಗಳೂ ಒಬ್ಬೊಬ್ಬರಾಗಿ ಬಂದು 10 ರೂ. ಕೊಟ್ಟು ಅವನ ಬಳಿ ಗೈಡ್ ಕೊಂಡರು. ನಾನು ಪೆಚ್ಚುಮೋರೆ ಹಾಕಿಕೊಂಡು ದೂರದಲ್ಲಿ ನೋಡುತ್ತಾ ನಿಂತಿದ್ದೆ. ಎಲ್ಲಾ ಮಾರಾಟವಾದ ನಂತರ ಅವನು ನನ್ನತ್ತ ನೋಡಿ “ನಿನಗೆ ಬೇಡವಾ ಪುಟ್ಟಿ?’ ಅಂದ. ಸೋತ ಮುಖದಿಂದ ಬೇಡವೆಂಬಂತೆ ತಲೆಯಾಡಿಸಿ ನನ್ನಲ್ಲಿ 10 ರೂ. ಇಲ್ಲ ಎಂಬ ಸತ್ಯ ಅವನಿಗೆ ಗೊತ್ತಾಯಿತೋ ಏನೋ… ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೊರಗೆ ಹೋದವನು, ದೂರದಲ್ಲಿ ನಿಂತು ನನ್ನನ್ನು “ಬಾ’ ಎಂದು ಸಂಜ್ಞೆ ಮಾಡಿ ಕರೆದ. ಹತ್ತಿರ ಹೋದೆ. “ದುಡ್ಡೇನೂ ಕೊಡಬೇಡ ತಗೋ ಪುಟ್ಟಿ. ನೀನು ಇನ್ನೂ ಚೆನ್ನಾಗಿ ಓದು’ ಎಂದು ಗೈಡ್ ನನ್ನ ಕೈಗಿತ್ತು, ತಲೆಸವರಿ ನಗುಮೊಗದಿಂದ ಹೊರಟುಹೋದ.
ನಾನು ಇಷ್ಟಪಟ್ಟ ಗೈಡ್ ಸಿಕ್ಕಾಗ ತುಂಬಾ ಖುಷಿಯಾಗಿತ್ತು. 10ನೇ ತರಗತಿಯಲ್ಲಿ ಚೆನ್ನಾಗಿ ಓದಿ ಶೇ.91ರಷ್ಟು ಅಂಕ ಪಡೆದೆ. ಈಗ ಸದ್ಯಕ್ಕೆ ಸರ್ಕಾರಿ ನೌಕರಿಯಲ್ಲಿದ್ದೇನೆ. ಅಂದು ಅವನಿಗೆ ಕೊಡಲು 10 ರೂ. ಕೂಡ ಇರಲಿಲ್ಲ. ಇಂದು ಸಾವಿರಾರು ರೂ. ಸಂಪಾದಿಸುತ್ತಿದ್ದೇನೆ. ಆದರೆ ಸರಸ್ವತಿಯನ್ನು ಕೊಟ್ಟು ಆಶೀರ್ವಾದ ಮಾಡಿ ಹೋದ ಆ ದೇವರಂಥ ವ್ಯಕ್ತಿಯನ್ನು ಎಲ್ಲಿ ಹುಡುಕಲಿ? ಅವರ ನೆನಪಿಗಾಗಿ ಆ ಪುಸ್ತಕವನ್ನು ಇನ್ನು ಹಾಗೇ ಇಟ್ಟಿಕೊಂಡಿರುವೆ. ಅವರು ಎಲ್ಲೇ ಇರಲಿ, ಚೆನ್ನಾಗಿರಲಿ.
-ಸೌಮ್ಯಶ್ರೀ ಸುದರ್ಶನ್ ಹಿರೇಮಠ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.