ಅಂತರ್ಜಾಲದ ಟ್ರಾಫಿಕ್ ಪೊಲೀಸ್
ಎಸ್‌ಇಓ ಎಂಬ ವಿಸ್ತೃತ ಕ್ಷೇತ್ರ
Team Udayavani, May 28, 2019, 10:15 AM IST
ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್.ಇ.ಒ) ಇಂದು ಜಗತ್ತಿನಾದ್ಯಂತ ಮುಂಚೂಣಿಯಲ್ಲಿರುವ ಉದ್ಯೋಗ ಕ್ಷೇತ್ರವಾಗಿ ಬೆಳೆಯುತ್ತಿದೆ. ಒಂದೆರಡು ದಶಕಗಳ ಹಿಂದೆ ಸರ್ಚ್ ಎಂಜಿನ್ ಆಪ್ಟಿಮೈಸೇಷನ್ ಎಂಬ ನೌಕರಿ ಹುಟ್ಟಿಕೊಳ್ಳುತ್ತದೆ ಎಂದರೆ ಯಾರೂ ನಂಬುತ್ತಿರಲಿಲ್ಲ.
ಏಕೆಂದರೆ ಈ ಹುದ್ದೆ ಹುಟ್ಟಿದ್ದೇ ಗೂಗಲ್ ಹುಡುಕುತಾಣದ ಆವಿಷ್ಕಾರವಾದ ನಂತರ. ಎಸ್.ಇ.ಒ ಆಸರ್‌ನ ಕೆಲಸವೆಂದರೆ ತಮ್ಮ ಜಾಲತಾಣವನ್ನು ಗೂಗಲ್‌ನ ಫಲಿತಾಂಶಗಳ ಪಟ್ಟಿಯಲ್ಲಿ ಶುರುವಿಗೆ ಕಾಣಿಸಿಕೊಳ್ಳುವಂತೆ
ಮಾಡುವುದು. ಅದೇಕೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಗೂಗಲ್‌ನಲ್ಲಿ ಏನಾದರೂ ಹುಡುಕುವಾಗ ಬಳಕೆದಾರ ಮೊದಲ ಎರಡು ಪೇಜುಗಳನ್ನಷ್ಟೇ ಹುಡುಕುತ್ತಾನೆ. ಹೀಗಾಗಿ ಅಷ್ಟರೊಳಗೇ ತಮ್ಮ ಜಾಲತಾಣ ಕಾಣಿಸಿಕೊಳ್ಳಲಿ ಎಂದು ಅದರ ಯಜಮಾನ ಆಸೆಪಡುತ್ತಾನೆ. ಆಗ ಜಾಲತಾಣದ ಟ್ರಾಕ್(ಜಾಲತಾಣಕ್ಕೆ ಭೇಟಿ ನೀಡುವವರ ಸಂಖ್ಯೆ) ಹೆಚ್ಚುತ್ತದೆ. ಜಾಲತಾಣಕ್ಕೂ ರೇಟಿಂಗ್ ಬಹಳ ಹಿಂದೆ ಗೂಗಲ್ ಜಾಲತಾಣದ ಹಿಂದಿನ ಸೂತ್ರಗಳು ಬಹಳ ಸರಳವಾಗಿತ್ತು.
ಆದರೆ ಬರುಬರುತ್ತಾ ಅದು ಸುಧಾರಣೆಗೊಳಪಡುತ್ತಾ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋಯಿತು. ಪರಿಣಾಮವಾಗಿ, ಬಳಕೆದಾರ ಯಾವ ಪದವನ್ನು ಹುಡುಕಿದಾಗ ಯಾವ ಜಾಲತಾಣ ಮೊದಲು ಬರುತ್ತದೆ, ಯಾವುದು ಕೊನೆಯಲ್ಲಿ ಬರುತ್ತದೆ ಎನ್ನುವುದನ್ನು ಖಚಿತವಾಗಿ ಹೇಳಲು ಯಾರಿಗೂ ಆಗಲಿಲ್ಲ.
ಎಸ್.ಇ.ಓ ಉದ್ಯೋಗ ಕ್ಷೇತ್ರ ಹುಟ್ಟಿಕೊಂಡಿದ್ದು ಆಗಲೇ. ಅದು ಡಿಜಿಟಲ್ ಮಾರ್ಕೆಟಿಂಗ್‌ನ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಮಾರ್ಕೆಟಿಂಗ್, ಬರವಣಿಗೆ, ಬ್ಲಾಗಿಂಗ್ ಮುಂತಾದುದರಲ್ಲಿ ಆಸಕ್ತಿ ಇರುವವರು ಈ ಕೌಶಲ್ಯವನ್ನು ಕಲಿತರೆ ವೃತ್ತಿಯಲ್ಲಿ ಮುಂದೆ ಬರಬಹುದು. ಒಂದು ಲೇಖನದಲ್ಲಿ ಸಾವಿರಾರು ಪದಗಳಿರಬಹುದು ಆದರೆ ಕೆಲ ನಿರ್ದಿಷ್ಟ ಪದಗಳನ್ನು ಮಾತ್ರ ಅತಿ ಹೆಚ್ಚು ಗೂಗಲ್ ಬಳಕೆದಾರರು ತಮಗೆ ಬೇಕಾದುದನ್ನು ಹುಡುಕುವಾಗ ಬಳಸುತ್ತಾರೆ. ಅವನ್ನು “ಕೀ ವರ್ಡ್’ ಎನ್ನುತ್ತಾರೆ. ಜಾಲತಾಣದ ಪೇಜ್ ರ್‍ಯಾಂಕ್ (ಶುರುವಿನಲ್ಲಿ ಕಾಣಿಸಿಕೊಳ್ಳಲು
ಸಹಕರಿಸುವ ರೇಟಿಂಗ್) ಹೆಚ್ಚಿಸುವಲ್ಲಿ ಅವು ಮಹತ್ತರ ಪಾತ್ರ ವಹಿಸುತ್ತವೆ. ಅವನ್ನು ಪತ್ತೆ ಹಚ್ಚಿ ಉಪಯೋಗಿ ಸುವುದರಲ್ಲಿ ಎಸ್.ಇ.ಓ ಮ್ಯಾನೇಜರ್‌ನ ಜಾಣ್ಮೆ ಇರುತ್ತದೆ.
ಇದು ಇತ್ತೀಚಿಗೆ ಬೆಳಕು ಕಂಡು ಬೆಳೆಯುತ್ತಿರುವ ಕ್ಷೇತ್ರವಾದರೂ ಅಗಾಧವಾಗಿ ಹರಡಿಕೊಂಡಿದೆ. ಉದ್ದಿಮೆಗಳು, ವ್ಯಾಪಾರ ವಹಿವಾಟುಗಳು ಇಂಟರ್‌ನೆಟ್‌ಗೆ ಶಿಫಾrಗುತ್ತಿರುವ ಈ ಕಾಲದಲ್ಲಿ ಆನ್‌ಲೈನ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ.
ಇವೆಲ್ಲದರಿಂದಾಗಿ ಎಸ್.ಇ.ಓ ಮ್ಯಾನೇಜರ್‌ಗಳಿಗೆ ಅವಕಾಶಗಳ ಬಾಗಿಲು ತೆರೆಯುತ್ತಿದೆ.
ಏನು ಓದಿರಬೇಕು?
ವೆಬ್‌ಡಿಸೈನ್, ಆನ್‌ಲೈನ್ ಬರಹಗಾರರು, ಆನ್‌ಲೈನ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರು ಎಸ್.ಇ.ಓ ಕ್ಷೇತ್ರಕ್ಕೆ ಕಾಲಿಡಬಹುದು. ಅವರಿಗೆ ಮಾರ್ಕೆಟಿಂಗ್‌ನ ಮೂಲಭೂತ ವಿಚಾರಗಳು ಗೊತ್ತಿರುವುದರಿಂದ ಎಸ್.ಇ.ಓ ಕೌಶಲ್ಯಗಳನ್ನು ಕಲಿಯುವುದು ಕಷ್ಟವಾಗದು. ಅನುಭವದಿಂದ ಒಲಿಯುವ ವೃತ್ತಿಯಿದು. ಸರ್ಟಿಕೇಷನ್ ಕೋರ್ಸು ಮಾಡಿದ ಯಾರು ಬೇಕಾದರೂ ಈ ಕ್ಷೇತ್ರಕ್ಕೆ ಕಾಲಿಡಬಹುದಾದರೂ ಮಾಹಿತಿ ತಂತ್ರಜ್ಞಾನ, ಮಾರ್ಕೆಟಿಂಗ್ ಅಥವಾ ಬಿಝಿನೆಸ್‌ನಲ್ಲಿ ಬ್ಯಾಚುಲರ್ ಡಿಗ್ರಿ ಇದ್ದರೆ ಬೆಲೆ ಹೆಚ್ಚು
ಜವಾಬ್ದಾರಿಗಳು
* ಜಾಲತಾಣಗಳ ಪೇಜ್ ರ್‍ಯಾಂಕ್ ಹೆಚ್ಚಿಸಲು ವಿವಿಧ ಕಾರ್ಯತಂತ್ರಗಳನ್ನು
ರೂಪಿಸುವುದು
* ಜಾಲತಾಣದಲ್ಲಿ ನೀಡಲ್ಪಡುವ ವಿಷಯ, ಬಣ್ಣ – ವಿನ್ಯಾಸ, ಸೋಷಿಯಲ್ ಮೀಡಿಯಾ ಬಳಕೆ ಮುಂತಾದ ವಿಚಾರಗಳತ್ತ ಗಮನ ಹರಿಸುವುದು
* ಜಾಲತಾಣ ಬ್ರೌಸರ್‌ನಲ್ಲಿ ವೇಗವಾಗಿ ಲೋಡ್ ಆಗಲು ಅಗತ್ಯವಿರುವ ತಾಂತ್ರಿಕ ಅಂಶಗಳತ್ತಲೂ ಗಮನ ಕೊಡುವುದು.
* ಬರಹಗಳಲ್ಲಿ ಹೆಚ್ಚು ಹೆಚ್ಚು ಕೀವರ್ಡ್‌ಗಳು ಇರುವಂತೆ ನೋಡಿಕೊಳ್ಳುವುದು
* ಪ್ರತಿಸ್ಪರ್ಧಿಗಳ ಕಾರ್ಯತಂತ್ರಗಳನ್ನು ಗಮನಿಸುತ್ತಾ ಅದಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡುವುದು
* ಪ್ರಚಾರಕ್ಕೆ ಸೋಷಿಯಲ್ ಮೀಡಿಯಾ ತಂತ್ರಗಳನ್ನು ಅಳವಡಿಸಿ ಕೊಳ್ಳುವುದು
ಇರಬೇಕಾದ ಕೌಶಲ್ಯಗಳು
* ಎಚ್.ಟಿ.ಎಂ.ಎಲ್(ಜಾಲತಾಣ ರೂಪಿಸಲು ಬಳಸುವ ಕಂಪ್ಯೂಟರ್ ಕೋಡ್)
* ಗೂಗಲ್ ಅನಾಲಿಟಿಕ್ಸ್, ವೆಬ್ ಟ್ರೆಂಡ್ಸ್ ಮುಂತಾದ ಟೂಲ್‌ಗಳ ಜ್ಞಾನ
* ಸಂವಹನ ಕಲೆ
* ನಾಯಕತ್ವ ಗುಣ
* ಈ ಕ್ಷೇತ್ರದಲ್ಲಿ ಟ್ರೆಂಡ್ ಆಗಾಗ್ಗೆ ಬದಲಾಗುವುದರಿಂದ ತಾವೂ ಅಪ್ ಡೇಟ್ ಆಗುತ್ತಿರಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.