ಶ್ಯಾನೆ ಟಾಪ್ ಆಗವ್ನೆ ನಮ್ ಹುಡ್ಗ
Team Udayavani, Jul 30, 2019, 3:00 AM IST
ಸುಂದರ ಮೊಗದ ತರುಣ…
ಜೊತೆಯಾದರೆ ಭಯದ ಹರಣ…
ಮಾತಲಿ ತುಂಬಿದೆ ಪ್ರೀತಿಯ ಹೂರಣ…
ಕಣ್ ಸನ್ನೆಯಲಿ ಹೂಡುವನು ಹೂ ಬಾಣ…
ಪ್ರಣಯದ ಗೀತೆಗೆ ಈತನೇ ಚರಣ..
ಏನಪ್ಪಾ ಇದು, ತನ್ನ ಹುಡುಗನ್ನ ಹೊಗಳಿ ಅಟ್ಟಕೇರಿಸ್ತಿದಾಳೆ ಅಂದ್ಕೋಂಡ್ರಾ? ಎಲ್ಲ ಹುಡುಗಿಯರಿಗೂ ಅವರವರ ಹುಡುಗನೇ ಟಾಪ್ ಅಲ್ವಾ, ನನಗೂ ಅಷ್ಟೇ… ಅವನ ಪರಿಚಯ ಯಾಕಾಯ್ತೋ, ಹೇಗಾಯ್ತೋ ಗೊತ್ತಿಲ್ಲ. ಅವನ ಕಣ್ಣೋಟ, ಅವನೊಟ್ಟಿಗಿನ ಒಡನಾಟ ನನಗೆ ತಲೆ ಕೆಡಿಸಿತ್ತು. ಪ್ರತೀ ಮಾತಲ್ಲಿ ಅವನಿಗಿರೋ ಗತ್ತು ಗಾಂಚಾಲಿ ನನಗೆ ತುಂಬಾನೇ ಇಷ್ಟವಾಯ್ತು. ಮೊದ ಮೊದಲು ಅರ್ಥವಾಗದ ಅವನು, ದಿನ ಕಳೆದಂತೆ ಹೃದಯಕ್ಕೆ ಹತ್ತಿರವಾದ..
“ಅಲ್ಲ ಶೆಟ್ರೆ, ನೋಡೋಕ್ ಇಷ್ಟು ಚೆನ್ನಾಗಿದೀರ, ನಿಮಗ್ ಯಾವ ಹುಡುಗೀನೂ ಬಿದ್ದಿಲ್ವ …?’ ಅಂತ ಅವನಲ್ಲಿ ಕೇಳ್ಬೇಕು ಅನ್ಸುತ್ತೆ. ಅಯ್ಯೋ ಬೇಡಪ್ಪಾ, ಇನ್ಮೆಲೆ ಬೀಳ್ಳೋದು ಬೇಡ. ಯಾಕಂದ್ರೆ, ನಂಗೆ ಅವನು ತುಂಬಾನೇ ಇಷ್ಟ ಆಗಿದಾನೆ. ಅವನ ಮೇಲೆ ಯಾವ ಹುಡುಗಿ ಕಣ್ಣೂ ಬೀಳದೆ ಇರಲಿ ಅಂತ ಇವತ್ತೇ ಊರಲ್ಲಿರೋ ಅಷ್ಟೂ ದೇವರಿಗೆ ಹರಕೆ ಹೊರ್ತೀನಿ. ಅವನ ಅಮ್ಮನ ಹತ್ರ, “ಅತ್ತೆ, ನಾನೇ ನಿಮ್ಮ ಸೊಸೆ. ನಿಮ್ಮನೆ ಲೈಟ್ ಹಾಕೋಳು, ನಿಮ್ಮನೆ ತುಳಸಿ ಕಟ್ಟೆ ಸುತ್ತೋಳು ನಾನೇ! ಸೋ, ನಿಮ್ಮ ಮಗನಿಗೆ ಹೆಣ್ಣು ಹುಡುಕೋ ಕಷ್ಟ ತಗೋಬೇಡಿ’ ಅಂತ ಹೇಳ್ಳೋ ಆಸೆ ಆಗ್ತಿದೆ.
ಹೇ, ಹುಡುಗಾ! ತಿಳಿದೋ, ತಿಳಿಯದೆಯೋ ಈ ಮನಸ್ಸು ನಿನ್ನೆಡೆ ವಾಲಿದೆ. ತಿಳಿಯಾದ ನನ್ನ ಹೃದಯದಲ್ಲಿ ಹೊಸ ಆಸೆ, ಕನಸುಗಳನ್ನು ತುಂಬಿದವನು ನೀನು. ನಿನ್ನ ಜೊತೆ ಸಲುಗೆ ಹೆಚ್ಚಾದಂತೆ, ಕಣ್ಣಲ್ಲಿ ಕೂಡಿಟ್ಟ ಅಷ್ಟೂ ಕನಸುಗಳಿಗೆ ಒಡೆಯನಾಗಿಬಿಟ್ಟೆ ನೀನು. ಮನಸ್ಸಿನ ಅರಮನೆಯಲ್ಲಿನ ಬಣ್ಣ ಬಣ್ಣದ ಕನಸುಗಳಿಗೀಗ ನೀನೇ ಸೂತ್ರದಾರ ಅಂತ ಅವನಿಗೇ ಹೇಳಿಬಿಡಬೇಕು ಅನ್ನಿಸ್ತಿದೆ… ಅದ್ಯಾಕೋ ಇತ್ತೀಚೆಗೆ ಅವನ ಕಣ್ಣೋಟ ಎದುರಿಸಲಾರದೆ, ಕಂಗಳು ನಾಚಿ, ನೆಲ ನೋಡುತ್ತವೆ. ಏನ್ಮಾಡ್ಲಿ ಹೇಳಿ…
* ಮಂಜುಳಾ ಎನ್. ಶಿಕಾರಿಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.