ಮುಗುಳು ನಗೆಗೆ ಮರುಳಾದೆ, ನೀನದೆಲ್ಲಿ ಮರೆಯಾದೆ?


Team Udayavani, Jan 9, 2018, 1:04 PM IST

09-33.jpg

ನಿನ್ನ ಮುಗುಳ್ನಗೆಗೆ ಈ ನನ್ನ ಪುಟ್ಟ ಹೃದಯ ಮನಸೋತು, ಪ್ರೀತಿಯೆಂಬ ಬಾವಿಯೊಳಗೆ ಬಿದ್ದು ಒದ್ದಾಡುತ್ತಿದೆ. ಈ ನಡುವೆಯೇ ನಾನು, ನಮ್ಮ ಭವಿಷ್ಯದ ದಿನಗಳ ಬಗ್ಗೆ ಒಂದೆರಡಲ್ಲ, ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದೇನೆ…

ಹಾಯ್‌ ತಿಕ್ಲಿ, ಹೇಗಿದ್ದೀಯಾ? 
ಈಗ ಕಾಲೇಜಿಗೆ ರಜೆ ಇರುವುದರಿಂದ ನಾವು ಭೇಟಿಯಾಗಲು ಕಾರಣಗಳೇ ಸಿಗುತ್ತಿಲ್ಲ. ಆದರೆ, ಮೊಬೈಲ್ನಲ್ಲಾದರೂ “ಹಾಯ…’ ಎಂದು ಒಂದು ಮೆಸೇಜ… ಮಾಡಬಹುದಲ್ಲ? ಅದನ್ನೂ ನೀನು ಮಾಡುತ್ತಿಲ್ಲ. ನಾನೇ ಮೆಸೇಜ್‌ ಮಾಡಿದರೆ, “ನನ್ನ ಹತ್ತಿರ ಲವ್ವು-ಗಿವ್ವು ಇತ್ಯಾದಿ ಆಟಗಳೆಲ್ಲ ನಡೆಯೊಲ್ಲ ಜಸ್ಟ್ ಫ್ರೆಂಡಾಗಿ ಮಾತ್ರ ಮಾತಾಡು’ ಅಂತಿಯಾ! ಆ ಕಾರಣದಿಂದ ನಾನೂ ನಿನಗೆ ಮೆಸೇಜ… ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೇನೆ. ನೀನು ಮೆಸೇಜ… ಮಾಡಿದರೂ, ಮಾಡದಿದ್ದರೂ, ನಾನು ಪ್ರತಿದಿನ, ಪ್ರತಿಕ್ಷಣ ನಿನ್ನ ನೆನಪಲ್ಲೇ ಜೀವಿಸುತ್ತಿದ್ದೇನೆ. ಕಾರಣ ಗೊತ್ತಿರಬೇಕಲ್ಲ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ! 

  ನಿನ್ನ ಕಣ್ಣಿಗೆ ನಾನು ಪ್ಯಾಂಟು-ಶರ್ಟು ಧರಿಸಿದ ಒಬ್ಬ ಸಾಮಾನ್ಯ ಹುಡುಗನಂತೆ ಮಾತ್ರ ಕಾಣಬಹುದು. ಆದರೆ, ಅದೇ ಹುಡುಗನ ಕಣ್ಣುಗಳಿಗೆ ನೀನೇ ಒಂದು ಪ್ರಪಂಚ ಎನ್ನುವುದು ನಿನಗೆ ಗೊತ್ತಿಲ್ಲ. ನೀನಾಡುವ ಚಂದದ ಮಾತು, ನೀ ಮಾಡುವ ಮಂಗಚೇಷ್ಟೆ, ಸಣ್ಣ ಮಕ್ಕಳಂತೆ ಪ್ರತಿಯೊಂದು ಹಠ ಮಾಡಿ ಸಾಧಿಸುವ ನಿನ್ನ ಗುಣ, ಮಕ್ಕಳಾಟ ನೋಡಿದವರೆಲ್ಲ ನಿನ್ನನ್ನು ಮುದ್ದಾಗಿ “ತಿಕ್ಲಿ’ ಎಂದು ಕರೆಯುತ್ತಾರೆ. ಆದರೆ, ಆ ತಿಕ್ಕಲುತನವೇ ನನಗೆ ಇಷ್ಟವಾಗಿದ್ದು. ಬಹುತೇಕ ಹುಡುಗರು, ಹುಡುಗಿಯರ ಅಂದಚೆಂದ ನೋಡಿ ಪ್ರೀತಿಸುವುದಿಲ್ಲ. ಮಗುವಿನಂಥ ಮನಸ್ಸು ಮತ್ತು ಹುಡುಗಿಯ ಸಣ್ಣ ಸಣ್ಣ ಚೇಷ್ಟೆಗಳಿಗೆ ಮನಸೋಲುತ್ತಾರೆ. ಹಾಗೆಯೇ ನಾನೂ ಕೂಡ! ಹೆಣ್ಣಿಗೆ ಇರಬೇಕಾದ ಎಲ್ಲಾ ಸದ್ಗುಣಗಳನ್ನು ನಾನು ನಿನ್ನಲ್ಲಿ ಕಂಡಿದ್ದೇನೆ. ಅವೆಲ್ಲವುಗಳ ಕಿರೀಟಪ್ರಾಯವಾಗಿರುವುದು ನಿನ್ನ ತುಟಿಗಳ ಮೇಲೆ ಯಾವಾಗಲೂ ರಾರಾಜಿಸುವ ಮುಗುಳುನಗೆ. ನನ್ನ ಈ ಪುಟ್ಟ ಹೃದಯ ಅದಕ್ಕೆ ಮನಸೋತು ಪ್ರೀತಿಯೆಂಬ ಬಾವಿಯೊಳಗೆ ಬಿದ್ದು ಈಜು ಬರದೇ, ಒದ್ದಾಡುತ್ತಿದೆ. ನೀನು ಏನೇ ಕಾರಣಗಳನ್ನು ನೀಡಿದರೂ , ನೀನು ನನ್ನನ್ನು ಎಷ್ಟೇ ದೂರವಿಟ್ಟರೂ ನನ್ನ ಮನಸೇಕೋ ನಿನ್ನನ್ನೇ ಬಯಸುತ್ತಿದೆ. ನಿನಗಿಂತ ಸುಂದರಿಯರು, ಚಂದುಳ್ಳಿಚೆಲುವೆಯರು ಕಣ್ಮುಂದೆ ಇದ್ದರೂ ನಿನ್ನನ್ನು ಬಿಟ್ಟು ಬೇರೆ ಯಾರೂ ಕಾಣಿಸುತ್ತಿಲ್ಲ. ಹುಡುಗಿಯರ ಜೊತೆ ಮಾತೂ ಆಡದ ನನ್ನಂಥವನನ್ನು ಪ್ರೀತಿಯಲ್ಲಿ ಬೀಳಿಸಿದ ನೀನು ತುಂಬಾನೇ ಗ್ರೇಟ್‌. 

ಇಂದಲ್ಲಾ ನಾಳೆ ನಮ್ಮಿಬ್ಬರ ನಡುವಿನ ದೂರ ಕಡಿಮೆಯಾಗಿ, ನನ್ನ ಪ್ರೀತಿ ನಿನಗೆ ಅರ್ಥವಾಗಿ, ಅದನ್ನು ನೀನು ಒಪ್ಪಿಕೊಳ್ಳುವೆ ಎಂದು ಆಶಿಸುತ್ತಾ…

ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

4

Karkala: ನಲ್ಲೂರು; ಮಹಿಳೆ ಆತ್ಮಹ*ತ್ಯೆ

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.