![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 13, 2018, 3:30 PM IST
ಅವಳದ್ದು ಒಂಟಿಯಾಗಿ ಕಾಡಿನಲ್ಲಿ ಧ್ಯಾನ ಮಾಡುವ ಮನಸ್ಥಿತಿ. ಇವನಿಗೆ ಅವಳ ಧ್ಯಾನವನ್ನು ಭಂಗ ಮಾಡುವ ಪರಿಸ್ಥಿತಿ.
ಮೌನವನ್ನು ಮಗುವಿನಂತೆ ಪ್ರೀತಿಸುವ ಅವಳು ಅವಳನ್ನೇ ಮಗುವಿನಂತೆ ಪ್ರೀತಿಸುವ ಇವನು. ಪ್ರೀತಿ ಎಂದರೆ ಅವಳಿಗೆ ನಿರ್ಲಿಪ್ತ ಮನಸ್ಸಿನಲ್ಲಿ ಮೂಡುವ ಓಂಕಾರ. ಇವನಿಗೋ ಪ್ರೀತಿ ಎನ್ನುವುದು ಹೂವು. ಅವಳು ಪ್ರೀತಿಯನ್ನು ಮಾರಲು ಸಿದ್ಧವಿಲ್ಲ. ಹೂವಿನ ಮೇಲೆ ಗಿಡಕ್ಕಿರುವಷ್ಟು ಹಕ್ಕು ಕೊಳ್ಳುವವರಿಗಿಲ್ಲ ಅನ್ನುವುದು ಅವಳ ಭಾವ.ಹೂವು ಇರುವುದೇ ಕೊಳ್ಳುವುದಕ್ಕೆ, ಪೂಜಿಸುವುದಕ್ಕೆ, ಸವಿಯುವುದಕ್ಕೆ, ಪ್ರೀತಿಸುವುದಕ್ಕೆ. ಅಷ್ಟಕ್ಕೂ ಹೂವನ್ನು ಹಾಗೇ ಬಿಟ್ಟರೂ ಹಾಳಾಗುತ್ತದೆಯಲ್ಲವೇ ಎನ್ನುವುದು ಇವನ ವಾದ.
ಹತ್ತಿರ ಬಂದರೆ ಸುಟ್ಟುಬಿಡುವೆ ಎಂದು ಹೆದರಿಸುವ ಅವಳು.
ನಾನೇ ಹಿಮದಂತೆ ನಿನಗೆ ಕರಗುತ್ತಿರುವಾಗ ನಿನ್ನ ಬೆಂಕಿ ಏನು ಮಾಡಲು ಸಾಧ್ಯ ಅನ್ನುವ ಜಂಭದ ಇವನು. ಪರಿಶುದ್ಧವಾದ ಪ್ರೀತಿ ನೀರಿನಂತೆ ನಿಷ್ಕಲ್ಮಶ ಎನ್ನುವ ಅವಳು. ನೀರಿಗೆ ಕಲ್ಲು ಎಸೆದು ಅವಳ ಚಿತ್ತವನ್ನು ಕಲುಕುವ ಇವನು. ನಿರಾಳ ಮನಸ್ಸಿನ ಸದಾ ಗಜ ಗಾಂಭೀರ್ಯದ ಬದುಕು ಅವಳದು. ತೆರೆದಿಟ್ಟ ಹಲಸಿನ ಹಣ್ಣಿನಂತೆ ಖುಲ್ಲಂಖುÇÉಾ ಜೀವನ ಇವನದು. ದಿನಕ್ಕೆ ಹೆಚ್ಚೆಂದರೆ ಹದಿನಾಲ್ಕು ಮಾತುಗಳನ್ನು ಆಡುವ ಅವಳು. ದಿನವಿಡೀ ಅಲಾರಂ ಇಟ್ಟಂತೆ ವಟಗುಡುವ ಇವನು. ಪ್ರೇಮವೆಂದರೆ ಅವಳಿಗೆ ದೇವರು. ಅಹಂ ಬ್ರಹಾಸ್ಮಿ ಎನ್ನುವ ಇವನು. ಮಾತನಾಡಿದರೆ ಸೋಲಬಹುದು ಅನ್ನುವ ಆತಂಕ ಅವಳಿಗೆ. ಅವಳ ಮನಸ್ಸನ್ನು ಗೆಲ್ಲದೆ ಹೋದರೆ ಎನ್ನುವ ಭಯ ಇವನಿಗೆ. ಎಡೆಬಿಡದೆ ಸುರಿಯುವ ಜಡಿ ಮಳೆಯ ಹಾಗೇ ಅವಳನ್ನು ಪ್ರೀತಿಸುತ್ತಲೇ ಇದ್ದನು.
ಜಡಿ ಮಳೆಗೆ ಹೆದರದ ಸಮುದ್ರದ ಹಾಗೇ ಅವನನ್ನು ದ್ವೇಷಿಸುತ್ತಲೇ ಇದ್ದಳು. ಅವರ ಬದುಕಿನಾಟ ಹೀಗಿದ್ದಾಗಲೇ ಇದ್ದಕಿದ್ದಂತೆ ಒಂದು ದಿನ ಅವನು ಕಾಣೆಯಾದ… ಒಂದು ಸಂಜೆ ಸೂರ್ಯ ಬಾನಿನಲ್ಲಿ ರಕ್ತ ಕಾರುವುದನ್ನು ನೋಡುತ್ತಿದ್ದ ಅವಳಿಗೆ ಅದೇನು ಅನ್ನಿಸಿತೋ ಏನೋ ಮೌನಕ್ಕೆ ಕೊಳ್ಳಿ ಇಟ್ಟು ಅವನನ್ನು ಮಾತನಾಡಿಸಲು ಹುಡುಕಿದಳು. ಆದರೆ, ಅವನು ಅÇÉೆಲ್ಲೂ ಇರಲಿಲ್ಲ. ಮಾತು ಸಾಕೆನಿಸಿ ಅವನು ದೂರದ ಕಾಡಿನಲ್ಲಿ ಧ್ಯಾನದ ಮೊರೆ ಹೋಗಿದ್ದ. ಕೊನೆಗೆ ಅವನ ತಪಸ್ಸಿಗೆ ಭಂಗ ತರಲು ಇವಳು ಅವನನ್ನು ಹುಡುಕುತ್ತಾ ಕಾಡು ಸೇರಿದಳು.
-ಮಹೇಶ್.ಆರ್
You seem to have an Ad Blocker on.
To continue reading, please turn it off or whitelist Udayavani.