ಸೋರ್ಸ್ ಕೋರ್ಸ್
Team Udayavani, Dec 24, 2019, 5:24 AM IST
ಒಂದು ಕಾಲದಲ್ಲಿ ಅಣ್ಣತಮ್ಮಂದಿರಂತೆ ಕಾಣುತ್ತಿದ್ದ ಬಿಎ, ಬಿ. ಕಾಮ್, ಬಿಎಸ್ಸಿ ಕೋರ್ಸ್‌ಗಳು ಈಗ ಬಹಳಷ್ಟು ಬದಲಾಗಿವೆ. ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ, ಅವುಗಳಲ್ಲೇ ಟಿಸಿಲೊಡೆದು ಹೊಸ ಕಾಂಬಿನೇಷನ್‌ಗಳು ಹುಟ್ಟಿಕೊಂಡಿವೆ. ಎಂಜಿನಿಯರಿಂಗ್ ಪದವಿಗಳೂ ಇದಕ್ಕೆ ಹೊರತಾಗಿಲ್ಲ. ಬಿ.ಇ ಎಂದರೆ ಬೆರಗಾಗುತ್ತಿದ್ದ ಕಾಲ ಈಗಿಲ್ಲ. ಇದರ ಆಂತರ್ಯದಲ್ಲೂ ಹೊಸ ಹೊಸ ಕಾಂಬಿನೇಷನ್‌ಗಳು ಟಿಸಿಲೊಡೆದಿವೆ.
ಏನು ಓದಿದೀಯಪ್ಪಾ? ಹೀಗಂತ, ಹತ್ತು ವರ್ಷದ ಹಿಂದೆ ಕೇಳಿದ್ದಿದ್ದರೆ. ಬಿ.ಎ, ಬಿಕಾಂ ತೀರಾ ಬುದ್ಧಿವಂತರಾಗಿದ್ದರೆ ಬಿಎಸ್ಸಿ ಅಂದು ಬಿಡೋರು. “ನಾನು ಬಿ.ಇ ಮಾಡ್ತಾ ಇದ್ದೀನಿ’ ಅಂದವರಂತೂ ಸಮಾಜದ ಕಣ್ಣಲ್ಲಿ ಬಹಳ ಎತ್ತರದಲ್ಲಿ ನಿಂತು ಬಿಡೋರು. ಹೀಗೆ, ವಿದ್ಯಾರ್ಥಿಗಳ ಅವರ ಬುದ್ಧಿ ಮತ್ತೆಯನ್ನು ಕೋರ್ಸ್‌ಗಳ ತಕ್ಕಡಿಯಲ್ಲಿ ತೂಗಿ ನೋಡುವ ಕಾಲ ಅದಾಗಿತ್ತು.
ಆಗೆಲ್ಲಾ, ಹೆಚ್ಚಿನ ಹೆಣ್ಣು ಮಕ್ಕಳಂತೂ ಬಿ.ಎಗೆ ಅಂಟಿಕೊಂಡು ಬಿಟ್ಟಿದ್ದರು. ಬಿ.ಎ ಸಬೆjಕ್ಟ್ ಕೂಡ ಒಂಥರಾ ಆರಾಮ್‌ಚೇರ್ ಇದ್ದಾಗೇ ಇತ್ತು. ಇತಿಹಾಸ, ಸೋಶಿಯಾಲಜಿಗಳನ್ನು ಸರಾಗವಾಗಿ ಪೂರೈಸಿ, ಪದವಿಗಳನ್ನು ಹೆಸರಿನ ಪಕ್ಕ ಸಿಕ್ಕಿಸಿಕೊಳ್ಳಬಹುದಿತ್ತು. ಈ ಬಿ.ಎ ವಿತ್ ಮೇಜರ್ ಹಿಸ್ಟ್ರಿ ಪೂರೈಸಿ, ಎಂ.ಎ ನಲ್ಲೂ ಇದನ್ನೇ ಮುಂದುವರಿಸಿದರೆ ಹಿಸ್ಟ್ರಿ ಟೀಚರ್ ಕೆಲಸ ಗ್ಯಾರಂಟಿ. ಹೀಗೆ ಅಂದು ಕೊಂಡೇ ಡಿಗ್ರಿ ಮಾಡೋರ ಸಂಖ್ಯೆ ಹೆಚ್ಚಾದ ಮೇಲಂತೂ “ಅಯ್ಯೋ, ಬಿ.ಎನಾ… ‘ ಅಂತ ರಾಗ ಎಳೆಯುವ ಮಟ್ಟಿಗೆ ಬಂದು ಬಿಟ್ಟಿತು.
“ಹಿಸ್ಟ್ರಿ ಬದಲಾಯಿಸಕ್ಕೆ ಆಗುತ್ತಾ? ಇಲ್ಲ. ಓದಿದ್ದೇ ಓದಬೇಕು. ಎಷ್ಟು ವರ್ಷ ಓದುವುದು? ಎಷ್ಟು ವರ್ಷ ಇದನ್ನೇ ಪಾಠ ಮಾಡೋದು’ -ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ಇಂಥ ನಿರಾಸೆ ಶುರುವಾದಾಗಾಗ ಬಿ.ಎ ಮೇಜರ್ ಹಿಸ್ಟ್ರಿಯಿಂದ ಎಲ್ಲರೂ ದೂರ ನಿಂತುಬಿಟ್ಟರು.
ಸೈನ್ಸ್
ಸೈನ್ಸ್ ವಿದ್ಯಾರ್ಥಿಗಳು ಬಹಳ ಬುದ್ಧಿವಂತರು ಅಂತ ನಂಬುತ್ತಿದ್ದ ಕಾಲಘಟ್ಟದಲ್ಲೇ ಪಿಸಿಎಂನ (ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್) ಪಾದದಲ್ಲಿ ಕುಸಿಯಿತು. ಪಿಸಿಎಂ ಮೂಲ ವಿಜ್ಞಾನವನ್ನು ಲ್ಯಾಬ್‌ಗಳಲ್ಲಿ ಅಪ್ಲೆ„ ಮಾಡೋಕೆ ಆಗೋಲ್ಲ ಅನ್ನೋ ಮಾತೇ ಕಾರಣವಾದಾಗ ಅಪ್ಲೆ„ ಸೈನ್ಸ್‌ಗೆ ಬೇಡಿಕೆ ಶುರುವಾಯಿತು.
ಅಂದರೆ, ಅಪ್ಲಿಕೇಷನ್ ಓರಿಯಂಟೆಡ್ ಅಲ್ಲ. ಈ ಫಿಸಿಕ್ಸ್, ಮ್ಯಾಥಮೆಟಿಕ್ಸ್ ಭೂತ ಅನ್ನೋರಿಗಾಗಿ ಬಿ.ಎಸ್‌ಸಿ ಸಿಬಿಝೆಡ್ (ಕೆಮಿಸ್ಟ್ರಿ, ಬಾಟನಿ, ಜೂಯಾಲಜಿ) ಕಾಂಬಿನೇಷನ್ ಜೀವ ತಳೆಯಿತು. ಅಷ್ಟರಲ್ಲಿ, ಮಾರ್ಕೆಟ್ ಕಳೆದುಕೊಂಡಿದ್ದ ಪಿಸಿಎಂ ಕೋರ್ಸ್ ಪೂರೈಸಿದವರು ಬಿ.ಎಡ್ ಕೋರ್ಸ್ ಮಾಡಲು ಶುರುಮಾಡಿದರು. ಆರಂಭದಲ್ಲಿ ಒಂದಷ್ಟು ಉದ್ಯೋಗಗಳನ್ನು ತಂದು ಕೊಟ್ಟ ಕೀರ್ತಿ ಈ ಕೋರ್ಸಿಗೆ ದಕ್ಕಿತು. ಇದರ ಜೊತೆಗೆ, ಸಿಬಿಝೆಡ್ ವಿದ್ಯಾರ್ಥಿಗಳು ಬಿ.ಎಡ್ ಮಾಡಿ ಮೇಷ್ಟ್ರಾಗುವ ಹೊಸ ರಹದಾರಿ ಕಂಡುಕೊಂಡ ಮೇಲಂತೂ ಮೂಲ ಬಿಎಸ್ಸಿ ಕಾಂಬಿನೇಷನ್‌ಗಳ ಕುಸಿತ ಕಂಡುಬಂತು.
ಬಯೋಕೆಮಿಸ್ಟ್ರಿ, ಸಿರಿಕಲ್ಚರ್ ಕೂಡ ಬಿಎಸ್ಸಿ ಜೊತೆ ಸೇರಿಕೊಂಡಾಗ ಉದ್ಯೋಗ ಮಾರ್ಗಗಳು ಶುರುವಾದದ್ದು ಸುಳ್ಳೇನಲ್ಲ. ಮೈಕ್ರೋಬಯಾಲಜಿ, ಜುಯಾಲಜಿ, ಬಾಟನಿ ಕಾಂಬಿನೇಷನ್ ಬಂದ ಮೇಲೆ, ಸಿರಿಕಲ್ಚರ್ ಮಲಗಿಬಿಟ್ಟಿತು. ಇವತ್ತಿಗೂ ಮೈಕ್ರೋ ಬಯಾಲಜಿ, ಜುಯಾಲಜಿ, ಬಾಟನಿ ಕಾಂಬಿನೇಷನ್ ಮಾತ್ರ ಜೀವಂತವಾಗಿದೆ. ಕಾರಣ ಇಷ್ಟೇ. ಈ ಪದವಿ ಪಡೆದರೆ, ಲ್ಯಾಬೊರೇಟರಿಗಳು, ಮಾತ್ರೆ ತಯಾರು ಮಾಡುವ ಕಂಪನಿಗಳು, ಅನಾಲಿಟಿಕಲ್ ಲ್ಯಾಬೊರೇಟರಿಗಳಲ್ಲಿ ಕ್ವಾಲಿಟಿ ಚೆಕ್‌ನಂಥ ಕೆಲಸ ಗ್ಯಾರಂಟಿ ಇದೆ.
ಮೂಲ ವಿಗ್ರಹದಂತೆ ಇದ್ದ ಪಿಸಿಎಂ ಕಾಂಬಿನೇಷನ್ ಕಣ್ಮರೆಯಾದಂತಾಗಿ, ಇವತ್ತು ಟಿಶ್ಯುಕಲ್ಚರ್, ಫಾರೆಸ್ಟ್ರಿ, ಫಿಶರಿ ಹೀಗೆ ವೈವಿಧ್ಯಮಯ ಕಾಂಬಿನೇಷನ್‌ಗಳು ಬಿಎಸ್‌ಸಿ ಕೈ ಸೇರಿಕೊಂಡಿವೆ. ಇದರ ಜೊತೆಗಿನ ಮತ್ತೂ ತಾಜಾ, ತಾಜಾ ಕಾಂಬಿನೇಷನ್ ಅಂದರೆ, ಬಿಎಸ್‌ಸಿ ಇನ್ ಆನಿಮೇಷನ್, ಪ್ಯಾಷನ್ ಮ್ಯಾನೇಜ್‌ಮೆಂಟ್. ಫ್ಯಾಷನ್ ಶೋಗಳನ್ನು ಹೇಗೆ ಅರೇಂಜ್ ಮಾಡಬೇಕು ಅನ್ನೋದನ್ನು ಹೇಳಿಕೊಡುವ ಬಿಎಸ್‌ಸ್ಸಿ ಇನ್ ಲಗ್ಸುರಿ ಬ್ರಾಂಡ್ ಮ್ಯಾನೇಜ್‌ಮೆಂಟ್ ಕೂಡ ಇವತ್ತಿನ ಹಾಟ್ ಕೋರ್ಸ್‌ಗಳು.
ಹಾಗೆ, ನೋಡಿದರೆ, ನಮ್ಮ ಟ್ರಡೀಷನಲ್ ಕೋರ್ಸ್ ಆಗಿರುವ ಬಿ.ಕಾಂನ ಗ್ರಾಫ್ನಲ್ಲಿ ಅಂಥ ಏರುಪೇರಾಗಿಲ್ಲ. ಸರ್ವಕಾಲದಲ್ಲೂ ತೀರ ಹೆಚ್ಚು ಅಲ್ಲದೆ, ಬಿ.ಎನಂತೆ ಪಾತಾಳಕ್ಕೆ ಬೀಳದ ಕೋರ್ಸ್ ಅನ್ನೋ ಹೆಗ್ಗಳಿಕೆ ಅದಕ್ಕಿದೆ. ಬಿ.ಕಾಂ ಮಾಡಿದರೆ ನೆಮ್ಮದಿಯಿಂದ ಬದುಕಬಹುದು ಎಂಬ ಭರವಸೆ, ಹೆತ್ತವರೂ ಮತ್ತು ವಿದ್ಯಾರ್ಥಿಗಳಲ್ಲಿ ಇವತ್ತಿಗೂ ಉಳಿದಿದೆ. ಇದರಲ್ಲೂ ಕೂಡ ಫೈನಾನ್ಸ್ ಅಂಡ್ ಅಕೌಂಟ್ಸ್, ಮರ್ಚೆಂಟ್ ಲಾ, ಇವು ಪ್ರಮುಖ ವಿಷಯವಾಗಿದ್ದಾಗ…ಬ್ಯಾಂಕ್, ಟ್ಯಾಕ್ಸ್ ಕನ್ಸಲ್‌ಟೆಂಟ್ ಉದ್ಯೋಗಳಿಗೆ ಮಾತ್ರ ಸೀಮಿತವಾಗಿದ್ದ ಬಿ.ಕಾಂ ಪದವೀಧರರಿಗೆ, ಐಟಿಬಿಟಿ ಗರಿಗೆದರಿದಾಗ, ಬಿ.ಕಾಂ ಜೊತೆ ಟ್ಯಾಲಿ ಮಾಡಿದವರಿಗೆ ಒಳ್ಳೆಯ ಬೆಲೆ ಬಂತು. ಆದರೆ, 2008ರಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಮಂಕಾಯಿತು. ನಂತರ, ಬಿ.ಕಾಂನ ದಾರಿಯೇ ಬದಲಾಯಿತು. ಬಿಎಸ್ಸಿಯಂತೆ ಬಿ.ಕಾಂ ಜೊತೆಗೆ ಇನುÒರೆನ್ಸ್, ಫೈನಾನ್ಸ್‌ಮ್ಯಾನೇಜ್‌ಮೆಂಟ್, ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಇಂಟರ್‌ನ್ಯಾಷನಲ್ ಟ್ರೇಡ್, ಬ್ಯಾಚ್ಯುಲರ್ ಆಫ್ ಕಾಮರ್ಸ್ ಇನ್ ಮಾರ್ಕೆಟಿಂಗ್ ಹೀಗೆ… ಹಲವು ಕೋರ್ಸ್‌ಗಳು ಶುರುವಾದದ್ದು ಇದೇ ಕಾರಣಕ್ಕೆ. ನೋಡಿ, ಇವತ್ತು ಬಿ.ಕಾಂ ದಾರರಿಗೆ ಭಯವೇ ಇಲ್ಲ.
ಬಿ. ಇ ಜಗತ್ತು “ನನ್ನ ಮಗ ಬಿ.ಇ ಓದುತ್ತಿದ್ದಾನೆ’ ಅಂದಾಗ ಬೆರಗು ಗಣ್ಣುಗಳಿಂದ ನೋಡುತ್ತಿದ್ದವರಿಗೆ ಇವತ್ತು ಶಾಕ್ ಆಗಿದೆ. ಏಕೆಂದರೆ, ಬಿ.ಇ ಈಗ ಮಾರ್ಕೆಟ್ ಕಳೆದು ಕೊಂಡಿದೆ. ಹಾಗಾಗಿ, ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಹೇಳಿಕೊಳ್ಳುವ ಆಸಕ್ತಿ ಕಾಣುತ್ತಿಲ್ಲ. ಬಿ.ಇ ಕಾಂಬಿನೇಷನ್‌ನಲ್ಲಿದ್ದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಹೆಸರು ಬದಲಿಸಿಕೊಂಡು ಮ್ಯಾನುಫ್ಯಾಕ್ಚರಿಂಗ್ ಸೈನ್ಸ್ ಅಂತ ಆಗಿದೆ. ಆದರೂ ಬೇಡಿಕೆ ಬಂದಿಲ್ಲ.
ಇತ್ತೀಚೆಗೆ ಮಂಕು ಬಡಿದಂತಿದ್ದ ಸಿವಿಲ್ ಎಂಜಿನಿಯರಿಂಗ್ ಕೋರ್ಸುಗಳಿಗೆ ಈಗ ಬೆಲೆ ಬಂದಿದೆ. ಇದಕ್ಕೆ ಅಪಾರ್ಟ್‌ಮೆಂಟ್‌ಗಳೇ ಕಾರಣ. ಕನ್‌ಸ್ಟ್ರಕ್ಷನ್ ಮೆಕ್ಯಾನಿಸಂ ಆಗಿಯೂ ಹೆಸರು ಗಳಿಸಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂತೂ ಎವರ್‌ಗ್ರೀನ್ ಪದವಿ. ಈಗ ತಂತ್ರಜ್ಞಾನ ಮುಂದುವರಿದಿದ್ದರಿಂದ ಎಲ್ಲ ಪ್ರೋಗ್ರಾಮಿಂಗ್ ಕಂಪ್ಯೂಟರ್‌ನಿಂದಲೇ ತೀರ್ಮಾನವಾಗುತ್ತಿದೆ. ಹೀಗಾಗಿ, ಕ್ಯಾಮ್, ಕ್ಯಾಡ್ ಮಾಡಿದವರಿಗೆ ಬಹಳ ಬೇಡಿಕೆ ಇದೆ. ಹಾಗೆಯೇ, ಈ ಮೊದಲು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಹಾರ್ಡ್‌ವೇರ್ ಅನ್ನೋರು ಈಗ ತಂತ್ರಜ್ಞಾನ ಸೇರಿರುವುದರಿಂದ ಇದು ಸಾಫ್ಟವೇರ್ ಕೂಡ ಹೌದು.
ಮೊಬೈಲ್‌ಗಳ ಬಳಕೆ ಹೆಚ್ಚಾದಂತೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್‌ಗೆ ಹೊಸ ರೂಪ ಬಂದಿದೆ. ಅದರೊಳಗಿರು ಚಿಪ್, ಸಿಮ್ ಕಾರ್ಡುಗಳ ತಯಾರಿಗೆ ಇದರ ವ್ಯಾಪ್ತಿಗೇ ಬರುವುದರಿಂದ ಬಹಳ ಬೇಡಿಕೆ ಇದೆ. ಪ್ರಸ್ತುತ ಕಂಪೂಟರ್ ಅಂಡ್ ಸೈನ್ಸ್‌ಗೆ ಎಂಎಸಿಯಷ್ಟು ಬೇಡಿಕೆ ಕಾಣುತ್ತಿಲ್ಲ.
ಹೀಗೆ, ಕಾಲಘಟ್ಟದ ಪ್ರಭಾವದಿಂದ ಕೆಲವು ಕೋರ್ಸ್‌ಗಳು ಬದುಕಿವೆ, ಕೆಲವು ಅಳಿದಿವೆ.
ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.