ಸ್ಟಿಲ್‌; ಫೋಟೋಗ್ರಫಿ ಮಾಡ್ತೀರ?


Team Udayavani, Feb 18, 2020, 5:38 AM IST

ben-5

ಗ್ಲಾಸು ಖಾಲಿ, ಛೆ, ದ್ರಾಕ್ಷಿಯೂ ಹುಳಿ: 50 ಎಂ.ಎಂ., f 11, 1/30 ಸೆ, ಐ.ಎಸ್‌.ಒ 100, ಫ್ಲಾಶ್‌ ಇಲ್ಲ, ಬೆಳಕಿಗೆ 200 ಮತ್ತು ಎರಡು 75 ವಾಟ್ಸ್‌ ಫೋಟೋ ಫ್ಲಡ್‌ ಲ್ಯಾಂಪ್ಸ್‌ ಮೇಲಿನಿಂದ. ಹಿನ್ನೆಲೆಗೆ ಸ್ವವಿನ್ಯಾಸದ ಗಾಜಿನ ಶೀಟ್‌. ಟ್ರೈಪಾಡ್‌ ಬಳಸಿದೆ,

ಫೋಟೋಗ್ರಫಿಯು ನಿಸರ್ಗದ ಎಂತಹುದೇ ಆಕಾರ, ರೂಪ, ವರ್ಣ, ಪ್ರಮಾಣ, ಇರುವ ಜೀವ ಅಥವಾ ನಿರ್ಜೀವ ವಸ್ತುವನ್ನು, ಕನ್ನಡಿ ಹಿಡಿದಂತೆ ಯಥಾವತ್ತು ದೃಶ್ಯದಾಖಲೆಯಾಗಿಸುವಷ್ಟಕ್ಕೇ (Documentation) ಸೀಮಿತವಾಗಿದ್ದರೆ , ಅದೊಂದು ಫೋಟೋ ಜೆರಾಕ್ಸ್‌ ಥರ ಆಗಿಬಿಡುತ್ತಿತ್ತೇನೋ? ಚಿತ್ರಕಲಾವಿದರು ಬಣ್ಣ ಅದ್ದಿದ ಕುಂಚದಲ್ಲಿ ಕ್ಯಾನ್ವಾಸ್‌ ಮೇಲೆ ರಚಿಸುವ ಭಾವಪೂರ್ಣ ಕಲಾತ್ಮಕ ಕೃತಿಗೆ ಸರಿ ಸಮನಾಗಿ ಛಾಯಾಗ್ರಹಣದಲ್ಲೂ ಸಾಧ್ಯತೆ ಇರುವುದನ್ನು ಮನಗಂಡ ಸೃಜನಶೀಲರು, ಕಳೆದ ಒಂದೂವರೆ ಶತಮಾನದ ಆದಿಯಿಂದಲೇ ಅನೇಕಬಗೆಯಲ್ಲಿ ಪರಿಶ್ರಮಿಸಿದ್ದಾರೆ. 1839 ರಲ್ಲಿ ಛಾಯಾಗ್ರಹಣದ ತಾಂತ್ರಿಕ ಆವಿಷ್ಕಾರವಾಗುತ್ತಿದ್ದಂತೆಯೇ ಜಗತ್ತಿನಾದ್ಯಂತ ವೈಜ್ಞಾನಿಕವಾಗಿ ವಿವಿಧ ಸಂಶೋಧನೆಗಳು ನೆಡೆಯುತ್ತಾ ಸಾಗಿದವು. ಜೊತೆಜೊತೆಯಲ್ಲೇ ಕಲಾತ್ಮಕ – ದೃಶ್ಯ ರಚನೆಯಲ್ಲೂ ಪ್ರಯತ್ನಗಳು ನೆಡೆದವು. ಇಂದಿಗೂ ಎರಡೂ ದಿಸೆಯಲ್ಲಿ ಪ್ರತಿ ದಿನವೂ ಹೊಸತನ್ನೇನಾದರೂ ನೋಡುತ್ತಲೇ ಇದ್ದೇವೆಂದರೆ ಅತಿಶಯೋಕ್ತಿಯಲ್ಲ. ದೃಶ್ಯವೊಂದು ಚಿತ್ರಕಲೆಯ ಮೆರಗು ಪಡೆಯುವುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಈಗ ಅವಲೋಕಿಸೋಣ.

ಎಲ್ಲಾ ಗೋಲಮಯವೀ ಗೋಳ : 70 ಎಂ.ಎಂ., f 8, 1/60 ಸೆ, ಐ.ಎಸ್‌.ಒ 200, ಫ್ಲಾಶ್‌ ಇಲ್ಲ, ಬೆಳಕಿಗೆ 200 ಮತ್ತು 75ವಾಟ್ಸ್‌ ಫೋಟೋ ಫ್ಲಡ್‌ ಲ್ಯಾಂಪ್ಸ್‌ ಮೇಲಿನಿಂದ ( Top Lighting). ಹಿನ್ನೆಲೆಗೆ ಸ್ವವಿನ್ಯಾಸದ ಗಾಜಿನ ಶೀಟ್‌, ಇಕ್ಕೆಲಗಳಲ್ಲಿ ಬಣ್ಣದ ಕಾರ್ಡ್ಬೋರ್ಡ್‌. ಟ್ರೈಪಾಡ್‌ ಬಳಸಿದೆ.

ಚಿತ್ರಕಾರನಿಗೂ, ಛಾಯಾಗ್ರಾಹಕನಿಗೂ ಬೇಕಾದದ್ದು ವಸ್ತು ತಾನೆ. ಅಮೂರ್ತಗುಣರೂಪಕ – Abstract ಸದ್ಯಕ್ಕೆ ಬಿಟ್ಟು . ಬೆಳಕು ಮತ್ತು ಕ್ಯಾಮೆರಾ ಇದ್ದದ್ದೇ. ವಸ್ತುವಿನ ರೂಪಜ್ಞಾನ ( Form), ಪ್ರಮಾಣ (Structure ), ವರ್ಣ ( Tone), ಹೊರಮೈವಿನ್ಯಾಸ (Texture), ಸಾದೃಶ್ಯ ( Similitude ), ಲಾವಣ್ಯ ( Grace), ಭಾವ (Mood) ಮತ್ತು ತಾಂತ್ರಿಕ ಕುಶಲತೆ ಇವುಗಳ ಸೂಕ್ಷ್ಮತೆಯ ಅರಿವು, ಆದ್ಯತೆ ಮತ್ತು ಸಾದ್ಯತೆಯ ಅಡಿಯಲ್ಲಿ ಸಂಯೋಜಿಸಿ (Compose ) ಸೃಜನಶೀಲವಾದ ಚಿತ್ರಣವನ್ನು ಸೆರೆಹಿಡಿಯುವುದು ಒಂದು ಸವಾಲೇ. ವಸ್ತು ಜೀವಂತವಾಗಿದ್ದರೆ ಚಿತ್ರಣ ಪ್ರಭಾವಪೂರ್ಣವಾಗಿ, ಪರಿಣಾಮಕಾರಿಯಾಗಿ ಮೂಡುವಲ್ಲಿನ ಕಲಿಕೆ ಒಂದು ಬಗೆ. ಅದೇ ನಿರ್ಜೀವ ಜಡ ವಸ್ತುಗಳ ವಿನ್ಯಾಸದಲ್ಲಿ (Still Life) ಕೂಡಾ ಉತ್ತಮ ಕಲಾತ್ಮಕ ಚಿತ್ರಣ ರೂಪುಗೊಳ್ಳಬೇಕಾದ ಬಗೆಯಲ್ಲಿ ಮೇಲಿನ ಅಂಶಗಳೆಲ್ಲವೂ ಮುಖ್ಯವೇ. ಜೊತೆಗೆ, ಈ ವಿಭಾಗದಲ್ಲಿ ಅವಕಾಶಗಳಂತೂ ಹೇರಳ!

ಪ್ರಕೃತಿ ನಿರ್ಮಿತ ( ಮುತ್ತು ರತ್ನಗಳು, ಕಲ್ಲು, ಕಪ್ಪೆಚಿಪ್ಪು, ಸಮುದ್ರದಲ್ಲಿ ಸಿಕ್ಕುವ ಕವಡೆ, ಮರದ ದಂಟುಗಳು,ಬಳ್ಳಿ, ರುದ್ರಾಕ್ಷಿ, ಕಾಡಿನ ಹಣ್ಣು ಇತ್ಯಾದಿ) ಮೊದಲು ಒಂದಕ್ಕೊಂದು ಪೂರಕವಾಗುವಂತೆ ಅವುಗಳನ್ನು ಆಯ್ದು, ಒಂದು ಸೂಕ್ತ ವಿನ್ಯಾಸದಲ್ಲಿ ಜೋಡಿಸಿ. ಅದಕ್ಕೊಂದು ಮುನ್ನೆಲೆ, ಹಿನ್ನೆಲೆ ಮತ್ತು ಅಕ್ಕಪಕ್ಕ ದಿಂದ ಬೇಕಾದ ರಂಗನ್ನು ವಸ್ತುಗಳ ಅಂಚುಗಳಮೇಲೆ ಬಿಂಬಿಸಬಲ್ಲ ಬಣ್ಣದ ಕಾರ್ಡ್‌ ಬೋರ್ಡ್‌ ದಪ್ಪ ಶೀಟ್‌ಗಳನ್ನೂ ಬೇಕದಲ್ಲಿ ತೂಗುಹಾಕಿ. ದೃಶ್ಯಕ್ಕೆ ಸರಿಹೊಂದುವ ಭಾವನೆಯನ್ನು ಹೊಮ್ಮುವ ( Presentation) ಕ್ಯಾಮೆರಾದ ಕೋನವನ್ನು ಹೊಂದಿಸಿಟ್ಟುಕೊಳ್ಳಿ. ನಂತರ ಛಾಯಾಗ್ರಾಹಕನ ಕಲ್ಪನೆಯ ಅಭಿವ್ಯಕ್ತಿಗೆ ಅನುಗುಣವಾದ ಕ್ರಮದಲ್ಲಿ ಬೆಳಕಿನ ಪ್ರಕಾಶದ ಪ್ರಮಾಣವನ್ನೂ , ಕೋನವನ್ನೂ (Intensity and Direction ) ವ್ಯವಸ್ಥೆ ಮಾಡಿಕೊಳ್ಳಬೇಕು. ಆ ವಿನ್ಯಾಸಕ್ಕೆ, ಸಂಯೋಜನೆಗೆ ಮತ್ತು ಅಂತಿಮವಾಗಿ ರಚನೆಯಾಗುವ ಚಿತ್ರಣವು, ಅದರದ್ದೇ ಕತೆ ಹೇಳುವ, ನೋಡುಗನ ಕಣ್ಮನಗಳ ಮೇಲೆ ಪರಿಣಾಮ ಬೀರುವ, ದೃಶ್ಯವನ್ನು ಜೀವಂತವಾಗಿಸುವ (Lively) ಮತ್ತೆ ಮತ್ತೆ ತನ್ನೆಡೆ ಸೆಳೆಯುವ ( Interest) ಆಕರ್ಷಣೆಯನ್ನು ಮೈದಳೆದದ್ದು ಆಗಬಹುದಾದರೆ, ಅದೊಂದು ಸಾರ್ಥಕ ಪ್ರಯತ್ನ. ಇವೆಲ್ಲಕ್ಕೂ ಏನೂ ಗಡಿಬಿಡಿ ಇಲ್ಲದಿರುವುದೇ ಈ ನಿರ್ಜೀವ ಸ್ಟಿಲ್‌ ಲೈಫ್ ಫೋಟೋಗ್ರಫಿಯ ವೈಶಿಷ್ಟ್ಯ! ಒಮ್ಮೆ ಆಯೋಜಿಸಿದ್ದು ಸರಿಯಾಗಿಲ್ಲವಾದರೆ, ಬೆಳಕು ಹಾಗೂ ವಸ್ತು ವಿನ್ಯಾಸವನ್ನೇ ಬದಲಿಸಿ ಮತ್ತೆ ಸಂಯೋಜಿಸುವುದು ಸುಲಭ. ಎಲ್ಲ ಬಗೆಯ ಫೋಟೋಗ್ರಫಿಯ ಕಲಿಕೆಯಲ್ಲಿ, ಬೆಳಕಿನ ವ್ಯವಸ್ಥೆ, ವಸ್ತುವಿನ್ಯಾಸ ಮತ್ತು ಕಲ್ಪನೆಗೆ ಪೂರಕವಾದ ಭಾವಲಹರಿ ಇತ್ಯಾದಿ ಕಲಾತ್ಮಕ ಮೌಲ್ಯಗಳ ಅಭ್ಯಾಸಕ್ಕೆ ಪ್ರಾರಂಭಿಕವಾಗಿ ಈ ಜಡವಸ್ತು ಛಾಯಾಗ್ರಹಣದ ಅಭ್ಯಾಸ ತುಂಬಾ ಸಹಕಾರಿ, ಅಂತೆಯೇ ಇಲ್ಲಿ ನಾನು ಸೆರೆಹಿಡಿದ ಎರಡು ಚಿತ್ರಗಳನ್ನು ನೋಡಬಹುದಾಗಿದೆ.

ಕೆ.ಎಸ್‌. ರಾಜಾರಾಮ್‌

ಟಾಪ್ ನ್ಯೂಸ್

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.