ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

Team Udayavani, Apr 7, 2020, 6:04 PM IST

ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

ನಾಳೆಯಿಂದ ವರ್ಕ್‌ ಫ್ರಂ ಹೋಂ ಅಂದಾಗ, ಖುಷಿಯೋ ಖುಷಿ. ಹೆತ್ತವರಿಗೆ, ಮಗ ಮನೇಲೆ ಇರ್ತಾನೆ ಅನ್ನೋ ಸಡಗರ. ನಾಳೆ ತಿಂಡಿ ಏನು ಬೇಕು ಅಂತ ಹೆಂಡತಿ ಕೇಳಿದಳು. ಬಿಸಿಬೇಳೆ ಬಾತ್‌ ಮಾಡೇ ಅಂತ ಅಮ್ಮ ಅಂದಳು. ಅಪ್ಪಾ, ನಾಳೆ ನೀನು ನನ್ನ ಜೊತೆ ಆಟ ಆಡಬೇಕು ಅಂತ ಮಗ ಶುರು ಮಾಡಿದ… ಹೀಗೆ, ಪಟ್ಟಿ ಬೆಳೆಯುತ್ತಾ ಹೋಯಿತು. ವರ್ಕ್‌ ಫ್ರಂ ಹೋಮ್‌ ಖುಷಿಯ ಬೆನ್ನಿಗೆ.  ಸರಿ, ಆಫೀಸಲ್ಲಿ ಬಾಸ್‌ ನೇ ನಿಭಾಯಿಸಿದ್ದೀನಂತೆ; ಇವರು ಯಾವ ಮಹಾ ಅಂದುಕೊಂಡು ಯೋಜನೆ ಮಾಡಿದೆ. ಮಾರನೆ ದಿನ, ಬಿಸಿಬೆಳೆ ಬಾತ್‌ಗೆ ಒಲೆಯ ಮೇಲೆ ಅಕ್ಕಿ, ಬೇಳೆ ಬೇಯುತ್ತಿರುವಾಗಲೇ, ಮಗ ಆಟಕ್ಕೆ ಕರೆದ. ದಿನಾ ಬೆಳಗ್ಗೆ ಎದ್ದೇಳ್ಳೋದು ಇದ್ದಿದ್ದೇ ಅಂತ, ಸ್ವಲ್ಪ ನಿಧಾನಕ್ಕೆ ಎದ್ನಲ್ಲಪ್ಪ, ತಗೋ, ಆಫೀಸಿಂದ ಮೂರು ಕರೆ, 10 ಮೆಸೇಜು ರೆಡಿಯಾಗಿದ್ದವು.

ಆವತ್ತು ಏನಾಗಿತ್ತು ಅಂದರೆ, ನನ್ನ ಸಹೋದ್ಯೋಗಿಗೆ ಹುಷಾರಿಲ್ಲದೆ, ಅವನು ವರ್ಕ್‌ ಫ್ರಂ ಹೋಮ್‌ಗೆ ರಜೆ ಹಾಕಿದ್ದ. ಹೀಗಾಗಿ, ಅವನ ಎಲ್ಲ ಕೆಲಸಗಳನ್ನು ನಾನೇ ಮುಗಿಸಬೇಕಿತ್ತು. ನನ್ನ ಕೆಲಸ ಬಹಳ ವಿಚಿತ್ರದ್ದು. ಟೆಲಿಫೋನಿನಲ್ಲಿ ಗ್ರಾಹಕರನ್ನು ಸಂದರ್ಶಿಸಿ, ಅವರ ತಲೆ ಸವರಿ, ನಮ್ಮ ಪ್ರಾಡಕr…ಗಳನ್ನು ಅವರ ತಲೆಗೆ ಕಟ್ಟುವ ಪ್ರಕ್ರಿಯೆ. ಕೊರೊನಾಕ್ಕೂ ಮೊದಲು ಬಹಳ ಚೆನ್ನಾಗಿತ್ತು.

ವಿದೇಶಗಳಲ್ಲಿ ಮೆಡಿಕಲ್‌ಗೆ ಸಂಬಂಧಿಸಿದ ವಸ್ತುಗಳಿಗೆ ಬೇಡಿಕೆ ಇದ್ದುದರಿಂದ ನಮ್ಮ ಮಾತಿಗೆ ಗೌರವ ಕೂಡ ಇತ್ತು. ಆದರೆ, ಕೊರೊನಾ ಹೆಚ್ಚಾದಂತೆ, ವಿದೇಶಿ ಕರೆಗಳು ಬಂದ್‌ ಆದವು. ಸ್ಥಳೀಯರ ಕರೆಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವುದೇ ಉದ್ಯೋಗ ಮತ್ತು ಜವಾಬ್ದಾರಿಯಾಯಿತು. ಒಂದು ನಿಮಿಷ ಕೂಡ ಪುರುಸೊತ್ತಿಲ್ಲ. ಬೆಳಗ್ಗೆಯಿಂದಲೇ ಕರೆ, ಹೆಂಡತಿ, ಮಕ್ಕಳು, ಯಾರ ಬಳಿಯೂ ಮಾತನಾಡಲು ಸಮಯವಿಲ್ಲ. ಆಫೀಸಲ್ಲಾದರೆ, ನಿಗದಿತ ಸಮಯಕ್ಕೆ ಮಾತ್ರ ಕರೆ ಬರುತ್ತಿತ್ತು.

ನಮ್ಮದು ಮೆಡಿಕಲ್‌ ಕ್ಷೇತ್ರವಾದ್ದರಿಂದ, ಸೇವೆ ಅನ್ನೋ ಹೆಸರಲ್ಲಿ ನಮ್ಮ ಬಾಸ್‌ ಯಾವಾಗ ಬೇಕಾದರೂ ಕರೆ ಮಾಡಿ ಅಂತ ಹೇಳಿದ್ದಾರೆ. ಹೀಗಾಗಿ, ಸ್ನಾನ, ತಿಂಡಿ ಮಾಡುವಾಗಲೂ ಕರೆ ಬರುತ್ತಲೇ ಇತ್ತು. ಆಗ ಮನೆಯವರಿಗೆ ಅನ್ನಿಸಿದ್ದೇನೆಂದರೆ, ವರ್ಕ್‌ ಫ್ರಂ ಹೋಮ್‌ಗಿಂತ, ಇವರು ಆಫೀಸಲ್ಲಿ ಇದ್ದಿದ್ದರೇ ಚೆನ್ನಾಗಿತ್ತು ಅಂತ…

ಕಳಿಂಗ ಮೂರ್ತಿ, ಚಾಮರಾಜಪೇಟೆ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.