ಕಾಪಿ ಮಾಡಿ ಕೈ ಕೆಂಪಾಯ್ತು!
Team Udayavani, Aug 8, 2017, 6:15 AM IST
ಒಂದನೇ ಪ್ರಶ್ನೆಗೆ ನನಗೆ ಉತ್ತರ ಗೊತ್ತಿರಲಿಲ್ಲ. ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಗೆಳತಿ ಪೂಜಾಳನ್ನು ಉತ್ತರ ಗೊತ್ತಿದೆಯಾ? ಎಂದು ಸನ್ನೆ ಮಾಡಿ ಕೇಳಿದೆ.
ಅಂದು 5ನೇ ಕ್ಲಾಸಿನ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ಗಣಿತ ಪರೀಕ್ಷೆ ಪ್ರಾರಂಭವಾಯಿತು. ನಮ್ಮ ನಯನಾ ಟೀಚರ್ ಚೆನ್ನಾಗಿ ಪಾಠ ಮಾಡುತ್ತಿದ್ದುದರಿಂದ ಪಟಪಟನೆ ಉತ್ತರ ಬರೆಯಲಾರಂಭಿಸಿದೆವು. ಕೊನೆಯ ಭಾಗದಲ್ಲಿ 5 ಮಾರ್ಕಿನ 2 ಪ್ರಶ್ನೆಗಳಿದ್ದವು. ಆ ಪೈಕಿ ಒಂದನೇ ಪ್ರಶ್ನೆಗೆ ನನಗೆ ಉತ್ತರ ಗೊತ್ತಿರಲಿಲ್ಲ. ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಗೆಳತಿ ಪೂಜಾಳನ್ನು ಉತ್ತರ ಗೊತ್ತಿದೆಯಾ? ಎಂದು ಸನ್ನೆ ಮಾಡಿ ಕೇಳಿದೆ. ಆಕೆ ಗೊತ್ತಿದೆ ಎಂದು ತಲೆ ಅಲ್ಲಾಡಿಸಿ, ಎರಡನೇ ಪ್ರಶ್ನೆಯ ಉತ್ತರ ಹೇಳಿಕೊಡುವಂತೆ ಬೇಡಿಕೆಯಿಟ್ಟಳು. ಇಬ್ಬರೂ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರವನ್ನು ಬರೆದು ಎಕ್ಸ್ಚೇಂಜ್ ಮಾಡಿಕೊಂಡೆವು. ಈ ಸಂದರ್ಭ ಅವಳ ಪಕ್ಕದಲ್ಲಿ ಕೂತಿದ್ದ ಸೀನಿಯರ್ ಅಕ್ಕ ಮೇಘನಾ, ನಮ್ಮ ಚಲನವಲನಗಳನ್ನು ಗಮನಿಸುತ್ತಿದ್ದಳು.
ಯಾವತ್ತೂ ಸೈಲೆಂಟ್ ಆಗಿಯೇ ಇರುತ್ತಿದ್ದ ಮೇಘನಾ, ಟೀಚರ್ಗಳೊಂದಿಗೂ ಅಷ್ಟೊಂದು ಮಾತನಾಡುತ್ತಿರಲಿಲ್ಲ. ಹೀಗಾಗಿ ಆಕೆ ಕಂಪ್ಲೇಂಟ್ ಮಾಡಲಾರಳು ಎಂಬ ಧೈರ್ಯದಲ್ಲಿ ನಾವು ಕಾಪಿ ಮಾಡಿದೆವು. ಪರೀಕ್ಷೆ ಮುಗಿದು ನಾವು ಆಟವಾಡುತ್ತಿದ್ದ ಸಂದರ್ಭದಲ್ಲಿ ಪಿ.ಟಿ ಮೇಸ್ಟ್ರೆ ನಮ್ಮನ್ನು ಕರೆದು, ಸ್ಟಾಫ್ ರೂಂಗೆ ಬರುವಂತೆ ತಾಕೀತು ಮಾಡಿದರು. ಅಲ್ಲಿ ಮುಖ್ಯೋಪಾಧ್ಯಾಯಿನಿ ನಮ್ಮನ್ನು ತರಾಟೆಗೆ ತೆಗೆದುಕೊಂಡರು. ಬೆತ್ತದಿಂದ ಎರಡೇಟು ಕೊಟ್ಟರು. ಇದೆಲ್ಲ ಮೇಘನಾಳ ಕಿತಾಪತಿ ಎಂಬುದು ನಮಗೆ ಆಮೇಲೆ ತಿಳಿಯಿತು. ಕೆಂಪಾಗಿದ್ದ ಕೈಯನ್ನು ಉಜ್ಜಿಕೊಂಡು ಹೊರಬಂದ ನಾನು ಇನ್ನು ಮುಂದೆ ಎಂದಿಗೂ ಕಾಪಿ ಮಾಡಬಾರದೆಂದು ನಿರ್ಧರಿಸಿದೆ.
– ಪ್ರಜ್ಞಾ ಹೆಬ್ಟಾರ್, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್ಶಹರ್ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.