ಸೂಪರ್‌ಮ್ಯಾನ್!
Team Udayavani, Feb 20, 2018, 6:30 AM IST
ಜೋಳದರೊಟ್ಟಿ, ಮೆಂತ್ಯದ ದೋಸೆ, ಪಿಜ್ಜಾ, ಬರ್ಗರ್…ಇದೆಲ್ಲಾ ಒಂದೇ ಹೋಟೆಲಿನಲ್ಲಿ ರುಚಿರುಚಿ ಸ್ವಾದದಲ್ಲಿ ಸಿಗುತ್ತಿದೆ ಎಂದಿಟ್ಟುಕೊಳ್ಳಿ. ಅದರ ಪೂರ್ತಿ ಕ್ರೆಡಿಟ್ ಹೋಗಬೇಕಿರುವುದು ಆ ಹೋಟೆಲಿನ ಅಡುಗೆ ಭಟ್ಟ ಅರ್ಥಾತ್ ಶೆಫ್ಗೆ. ಈ ದಿನಗಳಲ್ಲಿ ಶೆಫ್ಗಳಿಗೆ ಭಾರೀ ಬೇಡಿಕೆಯಿದೆ. ಸ್ಟಾರ್ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಶೆಫ್ಗಳ ಸಂಬಳ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚಿರುತ್ತದೆ…
ಜೋಳದ ರೊಟ್ಟಿ- ಎಣ್ಣೆಗಾಯಿ ಪಲ್ಯವನ್ನು ಹೇಗೆ ತಯಾರಿಸಬೇಕೆಂದು ಹುಬ್ಬಳ್ಳಿ, ಬಾಗಲಕೋಟೆ, ರಾಯಚೂರಿನ ಜನರಿಗೆ ಗೊತ್ತಿರುತ್ತದೆ. ತೆಳ್ಳೇವು, ಹಾಲಾºಯಿಯ ಸವಿಯನ್ನು ಸವಿಯಬೇಕೆಂದರೆ ಮಂಗಳೂರು- ಶಿರಸಿಯವರೇ ನಡೆಸುವ ಹೋಟೆಲ್‌ಗೆ ಹೋಗಬೇಕು. ಅಂತೆಯೇ ರಾಗಿಮುದ್ದೆ- ಬಸ್ಸಾರು ಬೇಕೆಂದರೆ ಮಂಡ್ಯ- ಮೈಸೂರು- ಹಾಸನ ಸೀಮೆಯ ಬಾಣಸಿಗರಿದ್ದರೇ ಚೆಂದ.
ಅಂದರೆ, ಯಾವುದೇ ತಿನಿಸಾಗಲಿ ಆಯಾ ಪ್ರದೇಶಕ್ಕೆ ಸೇರಿದ ಜನರೇ ತಯಾರಿಸಿದರೆ ಅದರ ಒರಿಜಿನಲ್ ರುಚಿ ಸಿಗುತ್ತದೆ. ಈಗ ಪ್ರತಿ ನಗರದಲ್ಲೂ ಏಳೆಂಟು ರಾಜ್ಯಗಳ ಜನ ವಾಸಿಸುತ್ತಿದ್ದಾರೆ. ಸಹಜವಾಗಿಯೇ ಭಿನ್ನ ಶೈಲಿಯ ಆಹಾರ ತಯಾರಿಸುವ ಹೋಟೆಲ್ಲುಗಳೂ ಆರಂಭವಾಗಿವೆ. ಹಿಂದೆಲ್ಲಾ ಹೋಟೆಲಿನಲ್ಲಿ ಅಡುಗೆ ಮಾಡುವುದನ್ನು ಕನಿಷ್ಠ ಹುದ್ದೆ ಎಂದೇ ಹೇಳಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಅಡುಗೆ ಭಟ್ಟರು, ಬಾಣಸಿಗರು ಎಂದು ಕರೆಸಿಕೊಳ್ಳುತ್ತಿದ್ದವರೇ ಈಗ “ಶೆಫ್’ ಅನಿಸಿಕೊಂಡಿದ್ದರು.
ಬಗೆ ಬಗೆಯ ಅಡುಗೆ, ತಿನಿಸುಗಳ ತಯಾರಿಕೆಯಲ್ಲಿ ಪಳಗಿದವರಿಗೆ ಮಾಸ್ಟರ್ ಶೆಫ್ ಎಂದೂ ಕರೆಯಲಾಗುತ್ತದೆ. ಅಡುಗೆ ಮಾಡುವುದನ್ನು ಈಗ “ಸೂಪ ಶಾಸ್ತ್ರ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಅಡುಗೆ ಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ, ಅಡುಗೆ ಮಾಡುವ ವಿಧಾನ, ಖಾದ್ಯಗಳಲ್ಲಿ ಇರಬಹುದಾದ ನೂರೆಂಟು ಬಗೆ, ಯಾವುದೇ ತಿಂಡಿಯನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಪದ್ಧತಿಯಲ್ಲಿ ಸಿದ್ಧಪಡಿಸುವ ಕಲೆಯನ್ನು ಕಲಿಸುವ ಕೋರ್ಸ್‌ಗಳೂ ಆರಂಭವಾಗಿವೆ! ಪ್ರತಿಷ್ಠಿತ ಹೋಟೆಲುಗಳಲ್ಲಿ ಶೆಫ್ ಆಗಬೇಕೆಂದರೆ ಈ ಕೋರ್ಸ್ ಮಾಡಿದ್ದರೆ ಒಳ್ಳೆಯದು.
ಎಷ್ಟು ಓದ್ಬೇಕು?: ಪಿಯುಸಿ ಮುಗಿದ ಬಳಿಕ ಹೋಟೆಲ್ ಮ್ಯಾನೇಜ್‌ಮೆಂಟಿನಲ್ಲಿ ಪ್ರವೇಶ ಪಡೆಯುವುದು. ಅದರಲ್ಲಿಯೇ ಪದವಿ ಅಥವಾ ಡಿಪ್ಲೊಮಾ ಓದಿ, ಅದೇ ಕೋರ್ಸ್‌ನಲ್ಲಿ ಸ್ಪೆಷಲೈಸೇಷನ್ ಮಾಡಿದರೆ ಶೆಫ್ ಆಗಬಹುದು. ಮತ್ತೂಂದು ಮಾರ್ಗದಲ್ಲಿ ಪಿಯು ಬಳಿಕ ಪಾಕಶಾಸ್ತ್ರದ ಬಗ್ಗೆ ಅಪ್ರಂಟಿಸ್‌ಶಿಪ್ ಮುಗಿಸಿ ವಿವಿಧ ಮಾದರಿಯ ಅಡುಗೆ ಕಲಿತು, ಜೊತೆಗೆ ಹೋಟೆಲ್ ಮ್ಯಾನೇಜ್ ಮೆಂಟ್ ಅಭ್ಯಾಸ ಮಾಡಿದರೆ ಮಾಸ್ಟರ್ ಶೆಫ್ ಆಗಬಹುದು.
ಕೌಶಲಗಳೂ ಇರಲಿ…
– ಆಹಾರ ಪದಾರ್ಥ, ಅಡುಗೆ ಸಂಬಂಧಿತ ಎಲ್ಲ ಪರಿಕರಗಳ ಬಗ್ಗೆ ತಿಳಿವಳಿಕೆ
– ಹೊಸ ಪ್ರಯೋಗ, ಹೊಸದನ್ನು ಕಲಿಯುವ ಉತ್ಸುಕತೆ
– ರುಚಿ ಮತ್ತು ವಾಸನೆ ಗ್ರಹಿಸುವ ಶಕ್ತಿ
– ಒತ್ತಡದಲ್ಲಿ ಉತ್ತಮ ಆಹಾರ ತಯಾರಿಸುವ ಮತ್ತು ಕಡಿಮೆ ಜಾಗದಲ್ಲಿ ಕಾರ್ಯ ನಿರ್ವಹಿಸುವ ಚಾಕಚಕ್ಯತೆ
– ದೈಹಿಕ ಸಾಮರ್ಥ್ಯ, ಸಹನೆ ಮತ್ತು ತಾಳ್ಮೆ
– ಅಡುಗೆ ಮನೆ ಬಗ್ಗೆ ಕಾಳಜಿ, ಶುಚಿತ್ವದ ಜ್ಞಾನ, ಸಹಪಾಠಿಗಳೊಂದಿಗೆ ಸಹಕಾರ, ಗುಂಪಿನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ
– ಸಮಯಪಾಲನೆ ಮತ್ತು ಗ್ರಾಹಕರ ನಿರೀಕ್ಷೆ ಪೂರೈಸುವ ರುಚಿಯನ್ನು ನೀಡುವ ಚಾಕಚಕ್ಯತೆ
– ಆಹಾರ ಪದ್ಧತಿಯಲ್ಲಾಗುತ್ತಿರುವ ನಿರಂತರ ಬದಲಾವಣೆಗೆ ತೆರೆದುಕೊಳ್ಳಬೇಕು
– ಆಹಾರ ಮೇಳಗಳಲ್ಲಿ ಭಾಗವಹಿಸುವುದು, ಮೇಳಗಳನ್ನು ಆಯೋಜಿಸುವುದು, ಸ್ವತಃ ಕೆಲವು ಪಾಕಗಳ ಪ್ರಾವೀಣ್ಯತೆ ಸಾಧಿಸುವುದು
ಸಂಬಳ ಎಷ್ಟು ಕೊಡ್ತಾರೆ?: ಶೆಫ್, ಮಾಸ್ಟರ್ ಶೆಫ್, ಅಸಿಸ್ಟೆಂಟ್ ಇತ್ಯಾದಿ ಮಾದರಿಯ ಹುದ್ದೆಗಳು ಇದರಲ್ಲಿ ಬರುವುದುಂಟು. ಶೆಫ್ ಮತ್ತು ಮಾಸ್ಟರ್ ಶೆಫ್ಗಳು ಅನುಭವಿ ಪಾಕತಜ್ಞರಾಗಿರುತ್ತಾರೆ. ಇವರಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ಮಣೆ ಹಾಕುವುದಂಟು. ಹೀಗಾಗಿ ಇವರ ಗಳಿಕೆ ವಾರ್ಷಿಕವಾಗಿ 5-10 ಲಕ್ಷಗಳವರೆಗೆ ಇರುತ್ತದೆ. ಇವರಿಗೆ ಸಹಾಯಕರಾಗಿ ಇನ್ನೂ ಪ್ರಾವೀಣ್ಯತೆ ಸಾಧಿಸುತ್ತಿರುವ ಅಭ್ಯರ್ಥಿ ಅಂದರೆ ಅಸಿಸ್ಟೆಂಟ್‌ಗಳಿಗೆ ವಾರ್ಷಿಕ 3ರಿಂದ 7 ಲಕ್ಷ ರೂ.ವರೆಗೆ ವೇತನ ಪಾವತಿಸುವುದುಂಟು.
ಕಲಿಯೋದು ಎಲ್ಲಿ?
– ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮಂಟ್, ಬೆಂಗಳೂರು.
– ಆರ್ಯ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕ್ಯಾಟರಿಂಗ್ ಟೆಕ್ನಾಲಜಿ, ಬೆಂಗಳೂರು
– ಐಎಂಟಿ ಇನ್ಸ್ ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಬೆಂಗಳೂರು
– ವಿಜಯನಗರ ಶ್ರೀಕೃಷ್ಣದೇವರಾಯ ಯೂನಿವರ್ಸಿಟಿ, ಬಳ್ಳಾರಿ
– ಕ್ರೈಸ್ಟ್ (ಡೀಮ್ಡ್ ಯೂನಿವರ್ಸಿಟಿ) ಬೆಂಗಳೂರು
ಅವಕಾಶಗಳು ಎಲ್ಲೆಲ್ಲಿ?: ಸ್ವತಂತ್ರ ಉದ್ಯೋಗ, ಆಹಾರ ತಯಾರಿಕಾ ಘಟಕಗಳು, ಹೋಟೆಲ್‌ಗಳು, ಫುಡ್ ಇಂಡಸ್ಟ್ರಿಗಳು, ಏರ್‌ಲೈನ್ಸ್, ರೆಸ್ಟೋರೆಂಟ್, ಫುಡ್ ಪಾರ್ಕ್, ಕ್ಯಾಂಟೀನ್, ಫುಡ್ ಫ್ಯಾಕ್ಟರಿಗಳು.
* ಅನಂತನಾಗ್ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.