ಟಾಪರ್‌ ಆಗಿಸೋ ಆ್ಯಪ್‌!


Team Udayavani, May 15, 2018, 1:34 PM IST

n-1.jpg

ಮಗ ಹೆಚ್ಚು ಅಂಕ ಪಡೆಯಲಿ ಅನ್ನೋದು ಇಂದಿನ ಪ್ರತಿಪೋಷಕರ ಪ್ರಾರ್ಥನೆ. ಆ ಪ್ರಾರ್ಥನೆಗೊಂದು ಫ‌ಲ ಸಿಕ್ಕಿದೆ. ಅದುವೇ “ಡೆಲ್ಟಾ ಲರ್ನ್’ ಎಂಬ ಆ್ಯಪ್‌. ಇದು ಹೆಚ್ಚು ಅಂಕಕ್ಕೆ ನೆರವಾಗುವುದಲ್ಲದೇ, ಹೆತ್ತವರಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನೂ ಟ್ರ್ಯಾಕ್‌ ಮಾಡಿಕೊಡುತ್ತೆ…

ಈಗಿನ ಮಕ್ಳು ತುಂಬಾ ಬುದ್ಧಿವಂತರು. ಆಧುನಿಕ ಕಾಲದ ಆಗುಹೋಗುಗಳು, ಲೇಟೆಸ್ಟ್‌ ತಂತ್ರಜ್ಞಾನಗಳು, ಇವೆಲ್ಲದರ ಕುರಿತು ಕ್ಷಣಮಾತ್ರದಲ್ಲಿ ತಿಳಿದುಕೊಂಡು ಅಪ್‌ಡೇಟ್‌ ಆಗುತ್ತಿರುತ್ತಾರೆ. ಈಗ ಶೈಕ್ಷಣಿಕ ಓದುವ ಪ್ರಕ್ರಿಯೆಯನ್ನೂ ಡಿಜಿಟಲೀಕರಣಗೊಳಿಸುವ ಸಮಯ ಬಂದಿದೆ. ಎಲ್ಲಾ ಸಾಧ್ಯವಾಗುತ್ತಿರೋದು ಒಂದು ಆ್ಯಪ್‌ನಿಂದ. ಮಕ್ಕಳು ಹೆಚ್ಚು ಅಂಕವನ್ನು ಗಳಿಸಲು ಮಾತ್ರವಲ್ಲ, ಹೆತ್ತವರು ಇನ್ನುಮುಂದೆ ಸ್ಮಾರ್ಟ್‌ಫೋನ್‌ ಕೈಯಲ್ಲಿ ಹಿಡಿದು ತಮ್ಮ ಮಕ್ಕಳು ಓದಿದ್ದಾರೋ ಇಲ್ಲವೋ, ಎಷ್ಟು ಓದಿದ್ದಾರೆ ಮುಂತಾದ ಮಾಹಿತಿಯನ್ನೂ ತಿಳಿಯಬಹುದು. ಅಂಥದ್ದೊಂದು ಆ್ಯಪ್‌ ಅನ್ನು ಬೆಂಗಳೂರಿನ ಸಾಫ್ಟ್ವೇರ್‌ ತಂತ್ರಜ್ಞರು ತಯಾರಿಸಿದ್ದಾರೆ!

ಡೆಲ್ಟಾ ಲರ್ನ್
ಸ್ಮಾರ್ಟ್‌ ತರಗತಿಗಳು, ಸ್ಮಾರ್ಟ್‌ ಲರ್ನಿಂಗ್‌ನ ಫ‌ಲಶ್ರುತಿ ಈ ಆ್ಯಪ್‌. ಶಾಲೆಗಳಲ್ಲಿ ಶಿಕ್ಷಕರು ಪಾಠವೇನೋ ಮಾಡುತ್ತಾರೆ. ಆದರೆ, ಮಕ್ಕಳು ಮನೆಯಲ್ಲಿ ಅದನ್ನು ಓದಿಕೊಳ್ಳುವಾಗ ಬೇರೆಯದೇ ರೀತಿಯಲ್ಲಿ ಓದಿಕೊಳ್ಳುತ್ತಾರೆ. ಈ ವ್ಯತ್ಯಾಸದಿಂದ ಕೆಲವೊಂದಷ್ಟು ಮಾಹಿತಿಗಳು ಬಿಟ್ಟುಹೋಗಬಹುದು. ಈ ವ್ಯತ್ಯಾಸವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದಲೇ ಈ ಆ್ಯಪ್‌ ತಯಾರಾಗಿದೆ. ಐಟಿ ಕ್ಷೇತ್ರದಲ್ಲಿ 15- 20 ವರ್ಷಗಳ ಅನುಭವವನ್ನು ಹೊಂದಿರುವ ಸತೀಶ್‌ ಸಿಂದೋಗಿಯವರು ಹೊಸಬರಿಗೆ ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಾರೆ. ಐಟಿ ಕ್ಷೇತ್ರಕ್ಕೆ ಕಾಲಿಡುವ ಹೊಸಬರು ತುಂಬಾ ಸರಳವಾದ ಮತ್ತು ಬೇಸಿಕ್‌ ಎನ್ನಬಹುದಾದ ಜ್ಞಾನದ ಕೊರತೆ ಎದುರಿಸುತ್ತಿರುವುದು ಈ ಸಂದರ್ಭದಲ್ಲಿ ಗೊತ್ತಾಗಿದೆ. ಈ ಸಮಸ್ಯೆಯ ಮೂಲ ಇರುವುದು ಶಾಲೆಗಳಲ್ಲಿ ಎನ್ನುವುದು ಸತೀಶ್‌ ಅವರ ಅಭಿಪ್ರಾಯ. ಹೀಗಾಗಿ ಅವರ ತಂಡ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಆ್ಯಪ್‌ ಅನ್ನು ತಯಾರಿಸಿದೆ. ಈ ಆ್ಯಪ್‌ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿಕ್ಷಕರಿಗೂ ಸಹಕಾರಿ.

ಏನೇನಿದೆ?
ಮೊಬೈಲಿನಲ್ಲಿ ಗೇಮ್‌ ಆಡೋದನ್ನು ಮಕ್ಕಳಿಗೆ ಹೇಳಿಕೊಡಬೇಕಿಲ್ಲ. ಇನ್‌ಸ್ಟಾಲ್‌ ಮಾಡಿಕೊಂಡು, ತಮಗೆ ಬೇಕಾದ ಆಯ್ಕೆಯನ್ನು ಆರಿಸಿಕೊಂಡು ಆಟವಾಡುತ್ತಾರೆ. ಅದೇ ರೀತಿ ಈ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡು ತಮ್ಮ ಪಠ್ಯಪುಸ್ತಕದ ಪಾಠಗಳನ್ನು ಕಲಿಯುತ್ತಾ ಹೋಗಬಹುದು. ಸದ್ಯಕ್ಕೆ 8, 9 10ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳೆರಡು ಮಾತ್ರ ಕಲಿಕೆಗೆ ಲಭ್ಯ ಇವೆ. ರಾಜ್ಯ ಮತ್ತು ಸಿಬಿಎಸ್‌ಇ ಎರಡೂ ಸಿಲೆಬಸ್‌ನಲ್ಲಿರುವ ವಿಷಯಗಳೆಲ್ಲವನ್ನೂ ಮಕ್ಕಳಿಗೆ ಅರ್ಥವಾಗುವಂತೆ ಸರಳೀಕರಿಸಿ ಈ ಆ್ಯಪ್‌ನಲ್ಲಿ ನೀಡಲಾಗಿದೆ. ಚಿತ್ರಗಳು, ವಿಡಿಯೋಗಳಿರುವುದರಿಂದ ಮಕ್ಕಳು ಉರು ಹೊಡೆಯಬೇಕಿಲ್ಲ, ವಿಷಯವನ್ನು ಗ್ರಹಿಸಿಕೊಂಡೇ ಕಲಿಯಬಹುದು. ಇನ್ನೊಂದು ಮುಖ್ಯ ಅಂಶವೆಂದರೆ, ಪ್ರಯೋಗಗಳ(ಪ್ರಾಕ್ಟಿಕಲ್‌) ವಿಡಿಯೋ ಕೂಡಾ ಇದರಲ್ಲಿ ಲಭ್ಯ. ಪಾಠ ಓದಿದ ಮೇಲೆ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಲು ಕೊನೆಯಲ್ಲಿ ಟೆಸ್ಟ್‌ ಬರೆಯಬಹುದು. ಪರೀಕ್ಷೆಯ ಫ‌ಲಿತಾಂಶ ಪಾಲಕರ ಮೊಬೈಲಿಗೆ ಎಸ್ಸೆಮ್ಮೆಸ್‌ ಕಳಿಸುವ ಆಯ್ಕೆಯೂ ಇದೆ, ಬೇಡದಿದ್ದರೆ ಈ ಆಯ್ಕೆಯನ್ನು ತೆಗೆಯುವ ಸ್ವಾತಂತ್ರ್ಯವೂ ಇದೆ. 

  ಅಂದಹಾಗೆ ಡೆಲ್ಟಾ ಲರ್ನ್ ಆ್ಯಪ್‌ ಆನ್‌ಲೈನ್‌ ಮತ್ತು ಆಫ್ಲೈನ್‌ ಎರಡೂ ಆವೃತ್ತಿಗಳಲ್ಲಿ ಲಭ್ಯವಿದೆ. ಇಂಟರ್‌ನೆಟ್‌ ಇಲ್ಲದೆ, ಆಫ್ಲೈನ್‌ನಲ್ಲಿ ಕಾರ್ಯಾಚರಿಸುವಂತಿದ್ದರೆ ಸಾಕು ಎನ್ನುವವರಿಗಾಗಿ ಡೆಲ್ಟಾ ಲರ್ನ್ ಮೆಮೊರಿ ಕಾರ್ಡ್‌ ನೀಡಲಾಗುವುದು. ಆನ್‌ಲೈನ್‌ ಆವೃತ್ತಿ ಆಗಾಗ ಅಪ್‌ಡೇಟ್‌ ಆಗುತ್ತಿರುತ್ತದೆ. ಪ್ರಶ್ನೆಪತ್ರಿಕೆಗಳು, ಹೊಸ ಹೊಸ ಕಲಿಕೆ ಸಂಬಂಧಿತ ವಿಡಿಯೊಗಳು, ಪತ್ರಿಕಾ ಅಂಕಣಗಳು ಇವೆಲ್ಲವನ್ನೂ ಬಳಕೆದಾರರಿಗೆ ಸಿಗುತ್ತಾ ಹೋಗುತ್ತದೆ. ಈ ಬೋನಸ್‌ಗಳನ್ನು ಆಫ್ಲೈನ್‌ ಆವೃತ್ತಿಯವರು ಇಂಟರ್‌ನೆಟ್‌ ಸಂಪರ್ಕ ಪಡೆದು ಯಾವಾಗ ಬೇಕಾದರೂ ಅಪ್‌ಡೇಟ್‌ ಮಾಡಿಕೊಳ್ಳಬಹುದು. 

ಶಾಲಾಪಠ್ಯಪುಸ್ತಕ ಓದಿದ ಎಂಜಿನಿಯರ್‌ಗಳು!
ಸತೀಶ್‌ ಮತ್ತವರ ತಂಡ ಈ ಆ್ಯಪ್‌ ತಯಾರಿಯ ಹಿಂದೆ ಪಟ್ಟ ಶ್ರಮಗಳ ಕುರಿತು ತಿಳಿದರೆ ಯಾರಿಗೇ ಆದರೂ ಅಚ್ಚರಿಯಾಗದೇ ಇರದು. ಸುಮಾರು 2 ವರ್ಷಗಳ ಕಾಲ ಪಠ್ಯಪುಸ್ತಕಗಳ ಅಧ್ಯಯನ ಮಾಡಿತ್ತು ಈ ತಂಡ. ಕೋಡ್‌ ಬರೆಯುವವರಿಗೆ ಕೇವಲ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌ ಬಂದರೆ ಸಾಲದು, ತಾವು ಯಾವ ವಿಷಯದ ಕುರಿತು ಕೋಡ್‌ ಬರೆಯುತ್ತಿದ್ದೇವೋ ಅದರ ಮಾಹಿತಿಯನ್ನೂ ತಿಳಿದುಕೊಂಡಿರಬೇಕು. ಹೀಗಾಗಿ, ಹದಿನೈದಿಪ್ಪತ್ತು ವರ್ಷಗಳ ಹಿಂದೆ ಓದಿದ್ದನ್ನು ಮತ್ತೆ ಓದಿದ್ದರು. ನಿಜಾರ್ಥದಲ್ಲಿ ಶಾಲೆಗೆ ಮರಳಿದ್ದರು. ಹೀಗೆ ಸುದೀರ್ಘ‌ ಅಧ್ಯಯನ, ನುರಿತ ಶಿಕ್ಷಕರ ಮಾರ್ಗದರ್ಶನ ಇವೆಲ್ಲವೂ ಆ ಆ್ಯಪ್‌ ತಯಾರಿಯ ಹಿಂದೆ ಕೆಲಸ ಮಾಡಿದೆ.

ಕಾಣದ ಕೈಗಳು…
ಒಂದು ಪ್ರಾಜೆಕ್ಟ್ ಹೇಗೆ ಇತರರ ಮನೆ ಬೆಳಗುತ್ತದೆ, ಮತ್ತೂಬ್ಬರ ಬದುಕಿನಲ್ಲಿ ಆಶಾಕಿರಣವಾಗುತ್ತದೆ ಎನ್ನುವುದಕ್ಕೆ ಡೆಲ್ಟಾ ಲರ್ನ್ ಪ್ರಾಜೆಕ್ಟ್ ಒಂದು ಉದಾಹರಣೆ. ಮಗು, ಸಂಸಾರ, ಆರೋಗ್ಯ ನಾನಾ ಕಾರಣಗಳಿಂದ ವೃತ್ತಿಯಿಂದ ದೂರವಾಗಿ, ಮನೆಯಲ್ಲೇ ಉಳಿದ ಐಟಿ ಮಹಿಳೆಯರು, ಬೋಧಕರು, ಆ್ಯನಿಮೇಟರ್‌ಗಳನ್ನು ಗುರುತಿಸಿ, ಅವಕಾಶ ನೀಡಿರುವುದು ಸತೀಶ್‌ ಸಿಂದೋಗಿಯವರ ತಂಡದ ಹೆಗ್ಗಳಿಕೆ. ಪ್ರೊಫೆಷನಲ್‌ಗ‌ಳು ಮಾತ್ರವಲ್ಲ ಬಹಳಷ್ಟು ಮಂದಿ ಡಿಗ್ರೀ ವಿದ್ಯಾರ್ಥಿಗಳೂ ಆ ಆ್ಯಪ್‌ನ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕಾಣಿಕೆಯಿತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: www.deltalearn.in
ಸಂಪರ್ಕ: 9845318512

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.